ಕಿಯಾ ಸೆಲ್ಟೋಸ್ ಮೇಲೆ ಭರ್ಜರಿ ಡಿಸ್ಕೌಂಟ್: ಈ ಜನಪ್ರಿಯ ಎಸ್‍ಯುವಿ ಖರೀದಿ ಈಗ ಸುಲಭ
ಕಿಯಾ ಇಂಡಿಯಾ (Kia India) ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಯಶಸ್ವಿಗಳಿಸಿದ ಕಂಪನಿಯಾಗಿದೆ. ಕಿಯಾ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಮಾದರಿ ಸೆಲ್ಟೋಸ್ ಎಸ್‍ಯುವಿಯಾಗಿದೆ. ಕಿಯಾ ಸೆಲ್ಟೋಸ್ (Kia Seltos) ಎಸ್‍ಯುವಿಯು ಮಾರಾಟದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು.
ಭಾರತದ ಗ್ರಾಹಕರು ಈ ಕಿಯಾ ಸೆಲ್ಟೋಸ್ ಎಸ್‍ಯುವಿಯ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಫುಲ್ ಫಿದಾ ಆಗಿದ್ದಾರೆ. ದೇಶಿಯ ಮಾರುಕಟ್ಟೆಯ ಗ್ರಾಹಕರ ಗಮನ ಸೆಳೆಯುವಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯು ಯಶ್ವಸಿಯಾಗಿದೆ. ಬಿಡುಗಡೆಯಾದಾಗಿನಿಂದ ಸೆಲ್ಟೋಸ್ ಎಸ್‍ಯುವಿ ಜನಪ್ರಿಯವಾಗುವುದರ ಜೊತೆಗೆ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ. ಇಂದಿಗೂ ಕಿಯಾ ಸೆಲ್ಟೋಸ್ ಎಸ್‍ಯುವಿಗೆ ಉತ್ತಮ ಬೇಡಿಕೆ ಇದೆ.

ಕಿಯಾ ಇಂಡಿಯಾ ಕಂಪನಿಯು ಪ್ರಸ್ತುತ ಮಾರುಕಟ್ಟ್ ಕಿಯಾ ಸೆಲ್ಟೋಸ್ ಎಸ್‍ಯುವಿ ಮೇಲೆ ರೂ.85,000 ವರೆಗೆ ರಿಯಾಯಿತಿಗಳನ್ನು ನೀಡುತ್ತಿದೆ. ಇದು ವಿನಿಮಯ ಬೋನಸ್‌ಗಳು, ವಿಮಾ ಪ್ರಯೋಜನಗಳು ಮತ್ತು ಪೂರಕ ಬಿಡಿಭಾಗಗಳಂತಹ ವಿವಿಧ ಪ್ರಯೋಜನಗಳನ್ನು ಒಳಗೊಂಡಿದೆ. ಕಿಯಾ ಸೆಲ್ಟೋಸ್ ಎಸ್‍ಯುವಿ ಮೇಲೆ ರೂ.60,000 ವಿನಿಮಯ ಬೋನಸ್ ಮತ್ತು ಕಿಯಾ ಸೆಲ್ಟೋಸ್ ಎಸ್‍ಯುವಿಯ ಆಯ್ದ ರೂಪಾಂತರಗಳ ಮೇಲೆ 25,000 ರೂಪಾಯಿ ಮೌಲ್ಯದ ಪೂರಕ ಬಿಡಿಭಾಗಗಳನ್ನು ನೀಡುತ್ತಿದೆ.
ಈ ಆಕರ್ಷಕ ಯೋಜನೆಯ ಮೇಲೆ, ಕಿಯಾ ಇಂಡಿಯಾ ಮೊದಲ ವರ್ಷಕ್ಕೆ ಉಚಿತ ವಿಮೆಯನ್ನು ಸಹ ನೀಡುತ್ತಿದೆ. ಈ ಅದ್ದೂರಿ ರಿಯಾಯಿತಿಗಳು ಮತ್ತು ಕೊಡುಗೆಗಳನ್ನು ಹೆಚ್ಚು ಗ್ರಾಹಕರನ್ನು ಆಕರ್ಷಿಸಲು ಮತ್ತು ಕಿಯಾ ಸೆಲ್ಟೋಸ್ ಎಸ್‍ಯುವಿಯ ಮುಂಬರುವ ಫೇಸ್‌ಲಿಫ್ಟ್ ಆವೃತ್ತಿಯ ಬಿಡುಗಡೆಗೆ ಮುಂಚಿತವಾಗಿ ಕಿಯಾ ಸೆಲ್ಟೋಸ್ ಪ್ರಿ-ಫೇಸ್‌ಲಿಫ್ಟ್ ಮಾದರಿಗಳ ಸ್ಟಾಕ್ ಅನ್ನು ತೆರವುಗೊಳಿಸಲು ಇರಿಸಲಾಗಿದೆ.
ಪ್ರಸ್ತುತ, ಕಿಯಾ ಸೆಲ್ಟೋಸ್ ಎಸ್‌ಯುವಿಯ ಪ್ರಾರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 10.89 ಲಕ್ಷವಾಗಿದೆ. ಹೊಸ ನವೀಕರಣಗಳೊಂದಿಗೆ ಕಿಯಾ ಇಂಡಿಯಾ ಕಂಪನಿಯು 2023ರ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ (Kia Seltos Facelift) ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತು. . ಈ ಹೊಸ ಕಿಯಾ ಸೆಲ್ಟೋಸ್ ಎಸ್‍ಯುವಿಯ ಖರೀದಿಗಾಗಿ ಪ್ರಿ-ಬುಕ್ಕಿಂಗ್ ಅನ್ನು ಜುಲೈ 14 ರಂದು ಪ್ರಾರಂಭಿಸಲಿದೆ.
2023ರ ಕಿಯಾ ಸೆಲ್ಟೋಸ್ ಮಿಡ್ ಎಸ್‍ಯುವಿಯು ಕಳೆದ ನಾಲ್ಕು ವರ್ಷಗಳಿಂದ ಕಂಪನಿಯ ಮಾರಾಟದಲ್ಲಿ ದೊಡ್ಡ ಕೊಡುಗೆಯನ್ನು ನೀಡುತ್ತಿದೆ. ಈ ಬಹುನಿರೀಕ್ಷಿತ 2023ರ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಕೆಲವು ದೊಡ್ಡ ಭರವಸೆಗಳನ್ನು ನೀಡುತ್ತಿದೆ ಮತ್ತು ಇಲ್ಲಿಯವರೆಗೆ ಬಹಿರಂಗಪಡಿಸಿದ ಹಲವಾರು ಟೀಸರ್ ಚಿತ್ರಗಳು ಹೊರಭಾಗದಲ್ಲಿ ವಿನ್ಯಾಸ ನವೀಕರಣಗಳನ್ನು ಮತ್ತು ಕ್ಯಾಬಿನ್‌ನಲ್ಲಿ ಹೊಸ ವೈಶಿಷ್ಟ್ಯಗಳನ್ನು ಪ್ರದರ್ಶಿಸಿವೆ.
2023ರ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯು LED DRL ಗಳು ಮತ್ತು LED ಹೆಡ್‌ಲೈಟ್ ವಿನ್ಯಾಸವು ಬದಲಾವಣೆಗೆ ಒಳಗಾಗಿದೆ. ಈ ಎಸ್‍ಯುವಿಯ ಬಂಪರ್ ಜೊತೆಗೆ ರೇಡಿಯೇಟರ್ ಗ್ರಿಲ್ ಅನ್ನು ಸಹ ನವೀಕರಿಸಲಾಗಿದೆ. ಹಿಂಭಾಗದಲ್ಲಿ, ಹಿಂದಿನ ಲ್ಯಾಂಪ್ ಗಳನ್ನು ಮಾರ್ಪಡಿಸಲಾಗಿದೆ ಮತ್ತು ಈಗ ಎಲ್ಇಡಿ ಲೈಟ್ ಬಾರ್ ಅನ್ನು ಸಂಯೋಜಿಸಲಾಗಿದೆ.
ಸ್ಟೈಲಿಶ್ ಎಸ್‌ಯುವಿಯ ಮಸ್ಕಲರ್ ಆಕರ್ಷಣೆಯನ್ನು ಸೇರಿಸಲು ದಪ್ಪ ಸ್ಕಿಡ್ ಪ್ಲೇಟ್ ಇದೆ. ಅಲ್ಲದೇ ಅಲಾಯ್ ವ್ಹೀಲ್ ಗಳು ಹೊಸ ವಿನ್ಯಾಸದಲ್ಲಿವೆ. ಈ ಎಸ್‌ಯುವಿಯು ಆರು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಸೇರಿದಂತೆ ಹಲವಾರು ಸುರಕ್ಷತಾ ತಂತ್ರಜ್ಞಾನವನ್ನು ಸಹ ಹೊಂದಿದೆ.
ಈ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಹೊಸ 1.5-ಲೀಟರ್ GDi ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಈ ಎಸ್‌ಯುವಿಯು ಆರು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಸೇರಿದಂತೆ ಹಲವಾರು ಸುರಕ್ಷತಾ ತಂತ್ರಜ್ಞಾನವನ್ನು ಹೊಂದಿರಲಿವೆ.


Click it and Unblock the Notifications








