ಸೊನೆಟ್ ಆನಿವರ್ಸರಿ ಎಡಿಷನ್ ಹೆಸರನ್ನು ವೆಬ್‌ಸೈಟ್‌ನಿಂದ ಕೈಬಿಟ್ಟ ಕಿಯಾ ಇಂಡಿಯಾ

ಜನಪ್ರಿಯ ಕಾರು ತಯಾರಕ ಕಿಯಾ ಇಂಡಿಯಾದ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಬಳಿಕ ಕಿಯಾ ಸೊನೆಟ್ ಎಸ್‍ಯುವಿಯು ಆನಿವರ್ಸರಿ ಎಡಿಷನ್ ಮಾದರಿಯನ್ನು ಬಿಡುಗಡೆಗೊಳಿಸಿತು. ಇದೀಗ ಸೊನೆಟ್ ಆನಿವರ್ಸರಿ ಎಡಿಷನ್ ಹೆಸರನ್ನು ಕಿಯಾ ಇಂಡಿಯಾದ ವೆಬ್‌ಸೈಟ್‌ನಿಂದ ಸದ್ದಿಲ್ಲದೆ ತೆಗೆದುಹಾಕಲಾಗಿದೆ.

ಜನಪ್ರಿಯ ಕಿಯಾ ಸೊನೆಟ್ ಎಸ್‍ಯುವಿಯ ಆನಿವರ್ಸರಿ ಎಡಿಷನ್ ಮಾದರಿಯನ್ನು 2021ರ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿದ್ದರು. ಇದರ ಆರಂಭಿಕ ಬೆಲೆಯು ಎಕ್ಸ್ ಶೋರೂ ಪ್ರಕಾರ ರೂ.10.79 ಲಕ್ಷವಾಗಿದೆ. ಈ ಕಿಯಾ ಸೊನೆಟ್ ದೇಶದಲ್ಲಿ 1 ಲಕ್ಷ ಮಾರಾಟದ ಮೈಲಿಗಲ್ಲನ್ನು ಈಗಾಗಲೇ ದಾಖಲಿಸಿದೆ. ಈ ಹೊಸ ಕಿಯಾ ಸೊನೆಟ್ ಆನಿವರ್ಸರಿ ಎಡಿಷನ್ ಟರ್ಬೊ ಐಎಂಟಿ, ಟರ್ಬೊ ಡಿಸಿಟಿ, ಡೀಸೆಲ್ ಎಂಟಿ ಮತ್ತು ಡೀಸೆಲ್ ಎಟಿ ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿತ್ತು.

ಸೊನೆಟ್ ಆನಿವರ್ಸರಿ ಎಡಿಷನ್ ಹೆಸರನ್ನು ವೆಬ್‌ಸೈಟ್‌ನಿಂದ ಕೈಬಿಟ್ಟ ಕಿಯಾ

ಸೊನೆಟ್ ಆನಿವರ್ಸರಿ ಎಡಿಷನ್ ಮಿಡ್-ಲೆವೆಲ್ HTX ಟ್ರಿಮ್ ಅನ್ನು ಆಧರಿಸಿದೆ. ಕಿಯಾ ಸೊನೆಟ್ ಆನಿವರ್ಸರಿ ಎಡಿಷನ್ ಮಾದರಿಯು ಅರೋರಾ ಬ್ಲಾಕ್ ಪರ್ಲ್, ಗ್ರಾವಿಟಿ ಗ್ರೇ, ಸಿಲ್ವರ್ ಸ್ಟೀಲ್ ಮತ್ತು ಗ್ಲೇಸಿಯರ್ ವೈಟ್ ಪರ್ಲ್ ಎಂಬ ನಾಲ್ಕು ಬಣ್ಣಗಳ ಆಯ್ಕೆಯನ್ನು ಹೊಂದಿವೆ. ಈ ಕಿಯಾ ಸೊನೆಟ್ ಆನಿವರ್ಸರಿ ಎಡಿಷನ್ ಮಾದರಿಯನ್ನು ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ಕಾಸ್ಮೆಟಿಕ್ ನವೀಕರಣಗಳು ಹೊಂದಿದೆ. ಇದು ಟ್ರಾಂಚರಿನ್ ಆಕ್ಸೆಂಟ್ಸ್‌ನೊಂದಿಗೆ ಅರೋಚ್ಸ್ ಫ್ರಂಟ್ ಮತ್ತು ರಿಯರ್ ಸ್ಕಿಡ್ ಪ್ಲೇಟ್‌ಗಳನ್ನು ಪಡೆಯುತ್ತದೆ.

ಇದರೊಂದಿಗೆ ಅರೋಚ್ಸ್ ಸೈಡ್ ಸ್ಕಿಡ್ ಪ್ಲೇಟ್‌ಗಳು, ಕಿಯಾ ಸಿಗ್ನೇಚರ್ ಟೈಗರ್ ಗ್ರಿಲ್ ಹೀಟ್ ಸ್ಟ್ಯಾಂಪ್ಡ್ ಟ್ಯಾಂಗರಿನ್ ಅಸ್ಸೆಂಟ್ ಗಳು, ಹಾರ್ಟ್ ಬೀಟ್ ಎಲ್ಇಡಿ ಟೈಲ್-ಲ್ಯಾಂಪ್‌ಗಳು, ಕ್ರೌನ್ ಜೊವವ್ ಲ್‌ಇಡಿ ಹೆಡ್‌ಲ್ಯಾಂಪ್‌ಗಳು ಎಲ್‌ಇಡಿ ಡಿಆರ್‌ಎಲ್ ಮತ್ತು ಸೆಮಿ ಲೆಥೆರೆಟ್ ಸೀಟ್‌ಗಳನ್ನು ಒಳಗೊಂಡಿದೆ. ಈ ಆನಿವರ್ಸರಿ ಎಡಿಷನ್ HTX ರೂಪಾಂತರಗಳಲ್ಲಿ ಪ್ರವೇಶಿಸಬಹುದಾದ ಎಲ್ಲಾ ಫೀಚರ್ಸ್ ಗಳನ್ನು ಹೊಂದಿದೆ. ಇದರೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಆಟೋಮ್ಯಾಟಿಕ್ ಎಸಿ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಕೀಲೆಸ್ ಎಂಟ್ರಿ ಅನ್ನು ಹೊಂದಿದೆ.

ಇನ್ನು ಚಾಲಿತ ಒಆರ್‌ವಿಎಂಗಳು, ಕ್ರೂಸ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಸಿಸ್ಟಂ ಮತ್ತು ಇತರವುಗಳೊಂದಿಗೆ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಎಸ್‌ಯುವಿ ಪಡೆಯುತ್ತದೆ. ಈ ಕಿಯಾ ಸೊನೆಟ್ ಆನಿವರ್ಸರಿ ಎಡಿಷನ್ ಎಸ್‍ಯುವಿಯಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಮತ್ತು ಬ್ರೇಕ್ ಅಸಿಸ್ಟ್ ನಂತಹ ಸುರಕ್ಷತಾ ಫೀಚರ್ಸ್ ಗಳನ್ನು ಒಳಗೊಂಡಿವೆ.

ಈ ಕಿಯಾ ಸೊನೆಟ್ ಆನಿವರ್ಸರಿ ಎಡಿಷನ್ ಸಬ್ ಕಾಂಪ್ಯಾಕ್ಟ್ ಮಾದರಿಯಲ್ಲಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗಿದೆ. ಇದು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಮತ್ತು 1.0-ಲೀಟರ್ ಜಿಡಿಐ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳಾಗಿದೆ. ಇದರಲ್ಲಿ 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಅನ್ನು ಎರಡು ರೀತಿಯಲ್ಲಿ ಟ್ಯೂನ್ ಮಾಡಲಾಗಿದೆ. ಇದರಲ್ಲಿ 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಮ್ಯಾನುವಲ್ ಮಾದರಿಯು 99 ಬಿಹೆಚ್‍ಪಿ ಪವರ್ ಮತ್ತು 220 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮಾದರಿಯು 113 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಇದರೊಂದಿಗೆ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 118 ಬಿಹೆಚ್‍ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಕ್ಲಚ್-ಲೋ ಐಎಂಟಿ ಮತ್ತು 7-ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಕಿಯಾ ಇಂಡಿಯಾ ಕಂಪನಿಯು 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಸೊನೆಟ್( ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಸೆಲ್ಟೋಸ್ ಬಳಿಕ ಕಿಯಾ ಮೋಟಾರ್ಸ್ ಮೂರನೇ ಮಾದರಿಯಾಗಿ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು.

ಕಿಯಾ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‍ಯುವಿ 1 ಲಕ್ಷ ಯುನಿಟ್ ಗಳ ಮಾರಾಟ ಮೈಲಿಗಲ್ಲು ಸಾಧಿಸಿದೆ. ಕಳೆದ ವರ್ಷ ಬಿಡುಗಡೆಯಾದ ಎಸ್‌ಯುವಿ ಅದರ ಬೆಲೆ ಮತ್ತು ವೈಶಿಷ್ಟ್ಯಗಳ ಕಾರಣದಿಂದಾಗಿ ಸಾಕಷ್ಟು ಗಮನ ಸೆಳೆಯಿತು. ಈ ಎಸ್‍ಯುವಿಯು ಬಿಡುಗಡೆಯಾದ ಒಂದು ವರ್ಷದೊಳಗೆ ಈ ಹೆಗ್ಗುರುತನ್ನು ಸಾಧಿಸಿತು. ಕಡಿಮೆ ಅವಧಿಯಲ್ಲಿ ಕಿಯಾ ಸೊನೆಟ್ ಹೆಚ್ಚು ಮಾರಾಟವಾದ ವಾಹನಗಳಲ್ಲಿ ಒಂದಾಗಿದೆ. ರಿಫ್ರೆಶ್ ಮಾಡಿದ ಕಿಯಾ ಸೊನೆಟ್ ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಬ್ರಾಂಡ್‌ನ ಹೊಸ ಲೋಗೋ ಮತ್ತು ವೈಶಿಷ್ಟ್ಯಗಳ ವಿಸ್ತಾರವಾದ ಪಟ್ಟಿ ಮತ್ತು ಹಲವಾರು ಸೆಗ್ಮೆಂಟ್-ಫಸ್ಟ್‌ಗಳೊಂದಿಗೆ ಮಾರಾಟಕ್ಕೆ ಬಂದಿತು.

More from DriveSpark

Article Published On: Friday, January 6, 2023, 12:14 [IST]
English summary
Kia sonet anniversary edition name removed from website
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+