ಮಾರುತಿ ಸುಜುಕಿ ಬ್ರೆಝಾಗೆ ಪ್ರತಿಸ್ಪರ್ಧಿಯಾಗಿ ಅಬ್ಬರಿಸಲು ಬರುತ್ತಿದೆ Kia ಸೊನೆಟ್ CNG ಕಾರು

ಪ್ರಮುಖ ಕೊರಿಯನ್ ಕಾರು ತಯಾರಕ ಕಂಪನಿ 'ಕಿಯಾ' ಈ ವರ್ಷದ (2023) ದ್ವಿತೀಯಾರ್ಧದಲ್ಲಿ ಬಹುನಿರೀಕ್ಷಿತ ಸೊನೆಟ್ ಸಿಎನ್‌ಜಿ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಈ ಕಾರನ್ನು ಮುಂಬರಲಿರುವ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸುತ್ತಿದೆ.

ಕಿಯಾ ಸೊನೆಟ್ ಎಕ್ಸ್ ಲೈನ್ ಸಿಎನ್‌ಜಿ ರೂಪಾಂತರವು ಪುಣೆಯ ರಸ್ತೆಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದೆ. ಈ ಎಸ್‌ಯುವಿ ಹಿಂಭಾಗದಲ್ಲಿ 'On Test By ARAI' ಎಂಬ ಸ್ಟಿಕ್ಕರ್ ಆಂಟಿಸಲಾಗಿತ್ತು. ಜೊತೆಗೆ ಎಮಿಷನ್ ಪರೀಕ್ಷಾ ಸಾಧನವನ್ನು ಅಳವಡಿಸಲಾಗಿತ್ತು. ಸೊನೆಟ್ ಸಿಎನ್‌ಜಿ ಬಹುತೇಕ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಬಹುದು. ಕೇವಲ ಈ ಕಾರು ಮಾತ್ರವಲ್ಲದೆ, ಕ್ಯಾರೆನ್ಸ್ ಎಂಪಿವಿ ಹಾಗೂ ಸೆಲ್ಟೋಸ್ ಎಸ್‌ಯುವಿಯನ್ನು ಕಿಯಾ ಕಂಪನಿ ಪರೀಕ್ಷಿಸಿದೆ.

ಮಾರುತಿ ಸುಜುಕಿ ಬ್ರೆಝಾಗೆ ಪ್ರತಿಸ್ಪರ್ಧಿಯಾಗಿ ಅಬ್ಬರಿಸಲು ಬರುತ್ತಿದೆ Kia ಸೊನೆಟ್ CNG ಕಾರು

ಭಾರತದ ಮಾರುಕಟ್ಟೆಯಲ್ಲಿ ಕಿಯಾ ಸೊನೆಟ್ ಸಿಎನ್‌ಜಿ ಕಾಂಪ್ಯಾಕ್ಟ್ ಎಸ್‌ಯುವಿ, ಪ್ರಮುಖವಾಗಿ ಮಾರುತಿ ಸುಜುಕಿ ಬ್ರೆಝಾ ಹಾಗೂ ಟಾಟಾ ನೆಕ್ಸನ್ ಸಿಎನ್‌ಜಿ ಕಾರುಗಳಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ. ಬಹುನೀರಿಕ್ಷಿತ ಬ್ರೆಝಾ ಎಸ್‌ಯುವಿಯನ್ನು ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಲಾಗಿತ್ತು. ನೆಕ್ಸನ್ ಸಿಎನ್‌ಜಿ ಕಾರು ಕೂಡ ಹಲವಾರು ಬಾರಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿತ್ತು. ಅಲ್ಲದೆ, ಪಂಚ್, ಆಲ್ಟ್ರೋಜ್ ಸಿಎನ್‌ಜಿ ಕಾರುಗಳನ್ನು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಕಿಯಾ ಸೊನೆಟ್ ಪೆಟ್ರೋಲ್ ಮಾದರಿಗೆ ಹೋಲಿಸಿದರೆ, ಸಿಎನ್‌ಜಿ ಮಾದರಿ ರೂ.1 ಲಕ್ಷ ಅಧಿಕ ಬೆಲೆಯನ್ನು ಹೊಂದಿರಬಹುದು. ಕಿಯಾ ಸೊನೆಟ್ ಎಕ್ಸ್ ಲೈನ್ ಆವೃತ್ತಿಯು 1.0-ಲೀಟರ್ 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 118 bhp ಪವರ್, 172 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಹೆಚ್ಚಿನ ಇಂಧನ ದಕ್ಷತೆ ಹೊಂದಿರಲಿರುವ ಈ ಸಿಎನ್‌ಜಿ ಕಾರು, ಕಡಿಮೆ ಪವರ್ ಉತ್ಪಾದಿಸಬಹುದು.

ಮಾರುತಿ ಸುಜುಕಿ ಬ್ರೆಝಾಗೆ ಪ್ರತಿಸ್ಪರ್ಧಿಯಾಗಿ ಅಬ್ಬರಿಸಲು ಬರುತ್ತಿದೆ Kia ಸೊನೆಟ್ CNG ಕಾರು

ಪ್ರಸ್ತುತ ಖರೀದಿಗೆ ದೊರೆಯುವ ಕಿಯಾ ಸೊನೆಟ್, HTE, HTK ಸೇರಿದಂತೆ ಆರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದ್ದು, ರೂ.7.69 ಲಕ್ಷದಿಂದ ರೂ.14.39 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಇದು ಮೂರು ಎಂಜಿನ್ ಆಯ್ಕೆಯನ್ನು ಹೊಂದಿದೆ. ಅವುಗಳೆಂದರೆ, 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಡೀಸೆಲ್ ಎಂಜಿನ್. ಪೆಟ್ರೋಲ್ ಆವೃತ್ತಿ ಸರಾಸರಿ 18.2kmpl ಹಾಗೂ ಡಿಸೇಲ್ ಆವೃತ್ತಿಯು 24.1kmpl ಮೈಲೇಜ್ ನೀಡಲಿದೆ

ಕಿಯಾ ಸೊನೆಟ್ ಕಾರು, ಗ್ರಾಹಕರ ಅಭಿರುಚಿಗೆ ತಕ್ಕಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಆಕರ್ಷಕ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, ಏರ್ ಪ್ಯೂರಿಫೈಯರ್‌ಯನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಆರು ಏರ್ ಬಾಗ್ಸ್, EBD (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ TPMS (ಟೈರ್ ಪ್ರೆಜರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಪಡೆದಿದೆ.

ಒಟ್ಟಾರೆಯಾಗಿ 'ಕಿಯಾ' ಶೀಘ್ರದಲ್ಲೇ ಭಾರತದ ಮಾರುಕಟ್ಟೆಯಲ್ಲಿ ಸೊನೆಟ್ ಸಿಎನ್‌ಜಿ ಆವೃತ್ತಿಯನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಈ ಕಾರುಗಳು ಹೆಚ್ಚಿನ ಇಂಧನ ದಕ್ಷತೆಯನ್ನು ಹೊಂದಿದ್ದು, ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸಲು ಮನಸ್ಸು ಮಾಡಬಹುದು. ಮುಂಬರಲಿರುವ ಈ ಕಾರು, ಹತ್ತಾರು ನವೀನ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Thursday, March 9, 2023, 14:53 [IST]
English summary
Kia sonet cng launching soon india details in kannada
Read more on ಕಿಯಾ kia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+