Kia Sonet: ಕಿಯಾ ಸೋನೆಟ್ ಫೇಸ್‌ಲಿಫ್ಟ್ ಬುಕ್ಕಿಂಗ್ ಮಧ್ಯರಾತ್ರಿಯಿಂದ ಆರಂಭ.. ರೂ.25,000 ಪಾವತಿಸಿದರೆ ಸಾಕು!
ಭಾರತದ ಕಾರು ಮಾರುಕಟ್ಟೆಯನ್ನು ಕೆಲವೇ ವರ್ಷಗಳ ಹಿಂದೆ ದಕ್ಷಿಣ ಕೊರಿಯಾ ಮೂಲದ ಕಿಯಾ (Kia) ಕಂಪನಿ ಪ್ರವೇಶಿಸಿತ್ತು. ತನ್ನ ನವೀನ ವಿನ್ಯಾಸ ಹಾಗೂ ವೈಶಿಷ್ಟ್ಯದ ಎಸ್‌ಯುವಿಗಳಿಂದ ಬಹುಬೇಗನೇ ಜನಪ್ರಿಯತೆ ಗಳಿಸಿ, ಹೆಚ್ಚಿನ ಗ್ರಾಹಕರನ್ನು ಸೆಳೆಯುವಲ್ಲಿ ಸಫಲತೆಯನ್ನು ಸಾಧಿಸಿತು. ಇತ್ತೀಚೆಗೆ ಹೊಚ್ಚ ಹೊಸ 'ಸೋನೆಟ್ ಫೇಸ್‌ಲಿಫ್ಟ್' ಮಾದರಿಯನ್ನು ಅನಾವರಣಗೊಳಿಸಿತ್ತು.
ಸದ್ಯ, ಕಿಯಾ ಇಂಡಿಯಾ (Kia India) ನೂತನ ಸೋನೆಟ್ ಫೇಸ್‌ಲಿಫ್ಟ್ ಎಸ್‌ಯುವಿ (Sonet facelift SUV) ಬುಕ್ಕಿಂಗ್ ಅನ್ನು ಡಿಸೆಂಬರ್ 20ರ (December 20) ಮಧ್ಯರಾತ್ರಿಯಿಂದ ಪ್ರಾರಂಭಿಸಲಿದ್ದು, ಆಸಕ್ತ ಗ್ರಾಹಕರು, ರೂ.25,000 ಮುಂಗಡ ಹಣ ಪಾವತಿಸುವ ಮೂಲಕ ಕಿಯಾದ ಅಧಿಕೃತ ವೆಬ್‌ಸೈಟ್ ಅಥವಾ ದೇಶದಾದ್ಯಂತವಿರುವ ಕಂಪನಿಯ ಡೀಲರ್‌ಶಿಪ್‌ಗೆ ಭೇಟಿ ನೀಡಿ, ಆರ್ಡರ್ ಮಾಡಬಹುದು.

ಕಿಯಾ ಸೋನೆಟ್ ಫೇಸ್‌ಲಿಫ್ಟ್ (Kia Sonet facelift), ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ ಪ್ಲಸ್, ಜಿಟಿಎಕ್ಸ್ ಸೇರಿದಂತೆ 7 ರೂಪಾಂತರಗಳು, ಗ್ಲೇಸಿಯರ್ ವೈಟ್ ಪರ್ಲ್, ಸ್ಪಾರ್ಕ್ಲಿಂಗ್ ಸಿಲ್ವರ್, ಗ್ರಾವಿಟಿ ಗ್ರೇ, ಅರೋರಾ ಬ್ಲ್ಯಾಕ್ ಪರ್ಲ್, ಇಂಟೆನ್ಸ್ ರೆಡ್, ಇಂಪೀರಿಯಲ್ ಬ್ಲೂ, ಕ್ಲಿಯರ್ ವೈಟ್, ಪ್ಯೂಟರ್ ಆಲಿವ್ ಒಳಗೊಂಡಂತೆ 11 ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.
ಈ ಕಿಯಾ ಸೋನೆಟ್ ಫೇಸ್‌ಲಿಫ್ಟ್ ಪವರ್‌ಟ್ರೇನ್ ಬಗ್ಗೆ ಮಾತನಾಡುವುದಾದರೆ, ಇದು 1.5 - ಲೀಟರ್ ಡಿಸೇಲ್, 1.2 - ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 1.0 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಸಿಗುತ್ತದೆ. ಜೊತೆಗೆ 5-ಸ್ವೀಡ್ ಮ್ಯಾನುವಲ್, 6-ಸ್ವೀಡ್ ಮ್ಯಾನುವಲ್, 6-ಸ್ವೀಡ್ ಆಟೋಮೆಟಿಕ್, 7-ಸ್ವೀಡ್ ಡಿಸಿಟಿ ಗೇರ್ ಬಾಕ್ಸ್ ನೊಂದಿಗೂ ದೊರೆಯುತ್ತದೆ.

ಕಿಯಾ ಸೋನೆಟ್ ಫೇಸ್‌ಲಿಫ್ಟ್ ಪ್ರಮುಖವಾಗಿ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಯನ್ನು ಹೊಂದಿದೆ. ನವೀನ ಎಲ್ಇಡಿ ಹೆಡ್‌ಲ್ಯಾಂಪ್, ಟೈಲ್‌ಲೈಟ್, ಆಕರ್ಷಕ ಎಲ್ಇಡಿ ಫಾಗ್ ಲೈಟ್ಸ್, ಆಲ್ - ವೀಲ್ ಡಿಸ್ಕ್ ಬ್ರೇಕ್ಸ್ (disc brakes) ಹಾಗೂ ಹೊಸದಾದ 16 - ಇಂಚಿನ ಅಲಾಯ್ ವೀಲ್ಸ್ ಅನ್ನು ಪಡೆದಿದೆ. ಹಿಂಭಾಗದ ವಿನ್ಯಾಸ ಕೂಡ ಹೆಚ್ಚು ಅತ್ಯಾಧುನಿಕವಾಗಿದೆ.
ಈ ಕಾರು, ಒಳಭಾಗದಲ್ಲಿಯೂ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಮುಖ್ಯವಾಗಿ, ಹೊಸದಾದ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, 360 - ಡಿಗ್ರಿ ಕ್ಯಾಮೆರಾ, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಎಲೆಕ್ಟ್ರಿಕ್ ಸನ್‌ರೂಫ್, ಡ್ರೈವ್ ಮೋಡ್ಸ್, ಕ್ರೂಸ್ ಕಂಟ್ರೋಲ್, ಕ್ಲೈಮೇಟ್ ಕಂಟ್ರೋಲ್, ಒಟಿಎ ಅಪ್‌ಡೇಟ್, 7 - ಸ್ಪೀಕರ್ ಬೋಸ್-ಸೋರ್ಸ್ಡ್ ಮ್ಯೂಸಿಕ್ ಸಿಸ್ಟಂ ಅನ್ನು ಹೊಂದಿದೆ.

ಸುರಕ್ಷತೆ ವಿಚಾರದಲ್ಲೂ ಕಿಯಾ ಸೋನೆಟ್ ಫೇಸ್‌ಲಿಫ್ಟ್ ಅತ್ಯುತ್ತಮವಾಗಿದ್ದು, ಲೆವೆಲ್ 1 ADAS (ಸುಧಾರಿತ ಚಾಲಕ ಸಹಾಯಕ ವ್ಯವಸ್ಥೆ), 6 ಏರ್‌ಬ್ಯಾಗ್‌ಗಳನ್ನು ಪಡೆದಿದೆ. ಈ ಕಾರಿನ ಬೆಲೆ ಕೆಲವೇ ದಿನಗಳಲ್ಲಿ ಘೋಷಣೆಯಾಗಲಿದ್ದು, ಜನವರಿ (2024) ಯಿಂದ ವಿತರಣೆಗಳು ಶುರುವಾಗಲಿದೆ. ಟಾಟಾ ನೆಕ್ಸನ್, ಹುಂಡೈ ವೆನ್ಯೂ, ನಿಸ್ಸಾನ್ ಮ್ಯಾಗ್ನೈಟ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








