Kia: ಕಿಯಾ ಸೋನೆಟ್ ಫೇಸ್‌ಲಿಫ್ಟ್‌ನಲ್ಲಿ ಟೀಸರ್‌ ಬಿಡುಗಡೆ.. ಈ ಕಾರಿನಲ್ಲಿ ADAS ವೈಶಿಷ್ಟ್ಯ? ಅಪಘಾತ ದೂರದ ಮಾತು!

ಕಿಯಾ ಸೋನೆಟ್ ಫೇಸ್‌ಲಿಫ್ಟ್‌ (Kia Sonet Facelift) ಎಸ್‌ಯುವಿ, ಡಿಸೆಂಬರ್ 14 ರಂದು ಅನಾವರಣಗೊಳ್ಳಲಿದೆ. ಶುಕ್ರವಾರ ಕಿಯಾ ಇಂಡಿಯಾ (Kia India) ಈ ಕಾರಿನ ಟೀಸರ್ ಅನ್ನು ತನ್ನ ಅಧಿಕೃತ ಯುಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಗೊಳಿಸಿದೆ. ನವೀಕರಿಸಿದ ಸೋನೆಟ್ ಬೆಲೆಯು ಮುಂದಿನ ವರ್ಷ ಘೋಷಣೆಯಾಗಲಿದೆ.

20 ಸೆಕೆಂಡುಗಳ ಟೀಸರ್ ವೀಡಿಯೋದಲ್ಲಿ ಹೊಸ ಕಿಯಾ ಸೋನೆಟ್ ಫೇಸ್‌ಲಿಫ್ಟ್‌ ಕೆಂಪು ಬಣ್ಣದಲ್ಲಿದ್ದು, ಈ ಹಿಂದಿನ ಸ್ಪೈ ಚಿತ್ರಗಳಿಗೆ ಹೋಲಿಕೆಯಾಗುವಂತೆ ಮುಂಭಾಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಹೊಂದಿರುವುದನ್ನು ಗಮನಿಸಬಹುದು. ಸ್ಲಿಮ್ಮರ್ ಗ್ರಿಲ್‌ನೊಂದಿಗೆ ಮರುವಿನ್ಯಾಸಗೊಳಿಸಲಾದ ಫಾಸಿಯಾವನ್ನು ಹೊಂದಿದ್ದು, ಆಕರ್ಷಕ ಹೆಡ್‌ಲೈಟ್‌, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ ಹಾಗೂ ಬಂಪರ್‌ನಲ್ಲಿ ಫಾಗ್ ಲೈಟ್ ಪಡೆದಿರುವುದನ್ನು ಕಾಣಬಹುದು.

Kia: ಕಿಯಾ ಸೋನೆಟ್ ಫೇಸ್‌ಲಿಫ್ಟ್‌ನಲ್ಲಿ ಟೀಸರ್‌ ಬಿಡುಗಡೆ.. ಈ ಕಾರಿನಲ್ಲಿ ADAS ವೈಶಿಷ್ಟ್ಯ? ಅಪಘಾತ ದೂರದ ಮಾತು!

ಸೋನೆಟ್ ಫೇಸ್‌ಲಿಫ್ಟ್ ಹೊಸದಾದ ಅಲಾಯ್ ವೀಲ್ಸ್ ಹೊಂದಿರಲಿದೆ ಎಂದು ಹೇಳಲಾಗಿದೆ. ಆದರೆ, ಟೀಸರ್ ವಿಡಿಯೋದಲ್ಲಿ ಸೈಡ್ ಹಾಗೂ ಹಿಂಭಾಗದ (ರೇರ್) ವಿನ್ಯಾಸದ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೂ, ಹಿಂಭಾಗದ ವಿನ್ಯಾಸ ಹೆಚ್ಚು ಅತ್ಯಾಧುನಿಕವಾಗಿರಲಿದೆ. ಎಲ್ಇಡಿ ಟೈಲ್ ಲ್ಯಾಂಪ್, ಎಲ್ಇಡಿ ಲೈಟ್ ಬಾರ್ ಹಾಗೂ ನೂತನವಾದ ಬಂಪರ್ ಪಡೆದಿರುವ ಸಾಧ್ಯತೆಯಿದೆ.

ಕಿಯಾ ಸೋನೆಟ್ ಫೇಸ್‌ಲಿಫ್ಟ್‌ ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮವಾಗಿರಲಿದೆ ಎಂಬ ವಿವರಗಳು ಮೂಲಗಳಿಂದ ತಿಳಿದುಬಂದಿದೆ. ಈ ಕಾರು, ತನ್ನ ಪ್ರತಿಸ್ಪರ್ಧಿ ಹ್ಯುಂಡೈ ವೆನ್ಯೂ ರೀತಿಯಲ್ಲಿ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ತಂತ್ರಜ್ಞಾನವನ್ನು ಪಡೆದಿರಬಹುದು. ಇದು, ಫಾರ್ವರ್ಡ್ ಕಲಿಸಿಯೋನ್ ವಾರ್ನಿಂಗ್, ಲೇನ್ ಡಿಪಾರ್ಚರ್ ವಾರ್ನಿಂಗ್, ಹೈ ಬೀಮ್ ಅಸಿಸ್ಟ್, ಲೇನ್ ಕೀಪಿಂಗ್ ಅಸಿಸ್ಟ್ ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡಿರಲಿದೆ.

Kia: ಕಿಯಾ ಸೋನೆಟ್ ಫೇಸ್‌ಲಿಫ್ಟ್‌ನಲ್ಲಿ ಟೀಸರ್‌ ಬಿಡುಗಡೆ.. ಈ ಕಾರಿನಲ್ಲಿ ADAS ವೈಶಿಷ್ಟ್ಯ? ಅಪಘಾತ ದೂರದ ಮಾತು!

ಸುರಕ್ಷತೆಯ ದೃಷ್ಟಿಯಿಂದ ಕಿಯಾ ಸೋನೆಟ್ ಫೇಸ್‌ಲಿಫ್ಟ್‌ 6 ಏರ್‌ಬ್ಯಾಗ್‌ ಹೊಂದಿರಲಿದೆ. ಇದರೊಟ್ಟಿಗೆ, ರೇರ್, ಕ್ಯಾಮೆರಾ, ಕಾರ್ನರಿಂಗ್ ಲ್ಯಾಂಪ್‌, ಹಿಲ್ - ಸ್ಟಾರ್ಟ್ ಅಸಿಸ್ಟ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು TPMS (ಟೈರ್ ಒತ್ತಡದ ಮಾನಿಟರಿಂಗ್ ಸಿಸ್ಟಮ್‌) ಸೇರಿದಂತೆ ಹತ್ತಾರು ಫೀಚರ್ಸ್ ಪಡೆದಿರಲಿದೆ. ಜೊತೆಗೆ ಹೊಸದಾದ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಪಡೆದಿರುವುದನ್ನು ಟೀಸರ್ ವಿಡಿಯೋದಲ್ಲಿ ನೋಡಬಹುದು.

ಸೋನೆಟ್ ಫೇಸ್‌ಲಿಫ್ಟ್ ಕೂಡ ಹಿಂದಿನ ಮಾದರಿಯಂತೆಯೇ ಎಂಜಿನ್ ಆಯ್ಕೆಯನ್ನು ಒಳಗೊಂಡಿರಲಿದ್ದು, 1.2 - ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್, 1.0 - ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 1.5 - ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿರುವ ಸಾಧ್ಯತೆಯಿದೆ. ರೂಪಾಂತರಗಳಿಗೆ ಅನುಗುಣವಾಗಿ 5 - ಸ್ವೀಡ್ ಮ್ಯಾನುವಲ್, 6 - ಸ್ವೀಡ್/ 7 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಸಿಗಬಹುದು.

ನವೀಕರಣಗಳೊಂದಿಗೆ ಬಿಡುಗಡೆಗೆ ಸಿದ್ದವಾಗಿರುವ ಕಿಯಾ ಸೋನೆಟ್, ಕೊಂಚ ಹೆಚ್ಚಿನ ಬೆಲೆಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಸಿಗುವ ಈ ಕಾರು, ರೂ.7.79 ಲಕ್ಷದಿಂದ ರೂ.14.89 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಕಿಯಾ ಸೋನೆಟ್ ಕಾರಿಗೆ ಮಹೀಂದ್ರಾ XUV300, ಮಾರುತಿ ಸುಜುಕಿ ಬ್ರೆಝಾ, ರೆನಾಲ್ಟ್ ಕಿಗರ್, ಟಾಟಾ ನೆಕ್ಸನ್ ಕಾರುಗಳು ಪ್ರಬಲ ಪ್ರತಿಸ್ಪರ್ಧಿಯಾಗಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, December 1, 2023, 19:32 [IST]
English summary
Kia sonet facelift suv have adas safety features launched soon
Read more on ಕಿಯಾ kia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+