Kia Sonnet Facelift: ಸದ್ಯದಲ್ಲೇ ಕಿಯಾ ಸೋನೆಟ್‌ ಫೇಸ್‌ಲಿಫ್ಟ್‌ ಮಾರುಕಟ್ಟೆಗೆ... ಹೊಸ ಕಾರುಕೊಳ್ಳುವವರು ಕೊಂಚ ಕಾಯಿರಿ

ಭಾರತದಲ್ಲಿ ಕೆಲವು ವರ್ಷಗಳ ಹಿಂದೆಯಷ್ಟೇ ಕಾಲಿಟ್ಟರೂ ಭಾರತದ ಗ್ರಾಹಕರ ನಾಡಿ ಮಿಡಿತವನ್ನು ಚೆನ್ನಾಗಿ ಅರಿತಿರುವ ಕಾರು ಕಂಪನಿಗಳಲ್ಲಿ ಕಿಯಾ ಪ್ರಮುಖವಾದುದು. ಹೌದು, ಕಿಯಾ ನಮ್ಮ ಭಾರತದಲ್ಲಿ ಕೆಲವೇ ಕೆಲವು ಕಾರುಗಳನ್ನು ಬಿಡುಗಡೆಗೊಳಿಸಿದೆಯಾದರೂ ಆ ಎಲ್ಲಾ ಮಾಡೆಲ್‌ಗಳು ಸಹ ಭಾರತೀಯರ ಮನಗೆಲ್ಲುವಲ್ಲಿ ಸಫಲವಾಗಿದೆ.

ಕಿಯಾ ಭಾರತದಲ್ಲಿ ಬಿಡುಗಡೆಗೊಳಿಸಿದ ಪ್ರಮುಖ ಕಾರುಗಳಲ್ಲಿ ಸೋನೆಟ್‌ ಸಹ ಒಂದು. ಈ ಕಾರು ಭಾರತದಲ್ಲಿ ಕಿಯಾ ಕಂಪನಿಯ ಕಾರುಗಳಲ್ಲೇ ಅತ್ಯಂತ ಕಡಿಮೆ ಬೆಲೆಯದ್ದು. ಹಾಗೆಂದ ಮಾತ್ರಕ್ಕೆ ಇದು ಈ ಸೆಗ್ಮೆಂಟ್‌ನ ಇತರ ಯಾವ ಕಾರುಗಳಿಗಿಂತಲೂ ಕಡಿಮೆಯಿಲ್ಲ. ಭರಪೂರ ಫೀಚರ್ಸ್‌ಗಳಿಂದ ಕೂಡಿರುವ ಈ ಕಾರು ಭಾರತೀಯರ ಅಫೋರ್ಡಬಲ್‌ ಸಣ್ಣ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಫೇವರೀಟ್‌ ಆಗಿದೆ.

Kia Sonnet Ready To make Facelift Debut Next Month

ಇದೀಗ ಕಿಯಾ ತನ್ನ ಸೋನೆಟ್‌ಗೆ ಫೇಸ್‌ಲಿಫ್ಟ್‌ (Kia Sonnet Facelift) ಅಪ್‌ಡೇಟ್‌ ಅನ್ನು ನೀಡಲು ತೀರ್ಮಾನ ಮಾಡಿದ್ದು ಮುಂದಿನ ತಿಂಗಳು ಈ ಕಾರು ಫೇಸ್‌ಲಿಫ್ಟ್‌ ಅಪ್‌ಡೇಟ್‌ ಅನ್ನು ಪಡೆದುಕೊಂಡು ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈಗಾಗಲೇ ಮೂರು ವರ್ಷ ಹಳೆಯದಾದ ಈ ಕಾರಿನ ಡಿಸೈನ್‌ಗೆ ಹೊಸ ಅವತಾರ ಸಿಗಲಿದ್ದು ಅಭಿಮಾನಿಗಳ ಮನದಲ್ಲಿ ಕಾತುರ ಮನೆಮಾಡಿದೆ.

ಇತ್ತೀಚೆಗೆ ಸೋರಿಕೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಫೋಟೋಗಳ ಪ್ರಕಾರ ಕಿಯಾ ಸೋನೆಟ್‌ ಫೇಸ್‌ಲಿಫ್ಟ್‌‌ ಹೊಸ ಫ್ರಂಟ್‌ ಬಂಪರ್‌ ಜೊತೆಗೆ ಬರಲಿದ್ದು ಈ ಕಾರಿನ ನೋಟ ಇನ್ನೂ ಆಕರ್ಷಕವಾಗಿರಲಿದೆ. ಜಿಟಿ ಲೈನ್‌ ಮತ್ತು ಹೆಚ್‌ಟಿ ಲೈನ್‌ ವೇರಿಯಂಟ್‌ಗಳು ಈ ಹೊಸ ಡಿಸೈನ್‌ ಪಡೆಯಲಿದೆ ಎಂದು ತಿಳಿದು ಬಂದಿದೆ.

Kia Sonnet Ready To make Facelift Debut Next Month

ಕಾರಿನ ಹಿಂಬಾಗದಲ್ಲಿ ರಾಪ್‌ಅರೌಂಡ್‌ ಟೇಲ್‌ ಲ್ಯಾಂಪ್‌ಗಳು ಇರಲಿದ್ದು ಇದರಲ್ಲಿ ಕನೆಕ್ಟೆಡ್‌ ಟೇಲ್‌ ಲೈಟ್‌ ಸಹ ಬರಲಿದೆ ಎನ್ನಲಾಗಿದೆ. ಈ ಹೊಸ ಲುಕ್‌ ಕಾರಿನ ಹಿಂಬಾಗದಿಂದಲೂ ಹೆಚ್ಚಿನ ಆಕರ್ಷಣೆಯನ್ನು ನೀಡಲಿದೆ. ಈಗಾಗಲೇ ಬಹುತೇಕ ಫೇಸ್‌ಲಿಫ್ಟ್‌ ಕಾರುಗಳಲ್ಲಿ ಈ ರೀತಿಯಾದ ಕನೆಕ್ಟೆಡ್‌ ಟೇಲ್‌ಲೈಟ್‌ ಅನ್ನು ಕಾಣಬಹುದಾಗಿದ್ದು ಕಾರುಗಳಿಗೆ ಹೊಸ ಲುಕ್‌ ನೀಡುವುದರಲ್ಲಿ ಸಹಾಯ ಮಾಡುತ್ತದೆ.

ಕಿಯಾ, 2020ರಲ್ಲಿ ಮೊದಲ ಬಾರಿಗೆ ದೇಶೀಯ ಮಾರುಕಟ್ಟೆಯಲ್ಲಿ ಸೋನೆಟ್‌ ಎಸ್‌ಯುವಿಯನ್ನು ಬಿಡುಗಡೆಗೊಳಿಸಿತು. ಇದು, ಅಂದಿನಿಂದಲೇ ಕಂಪನಿಯ ಜನಪ್ರಿಯ ಕಾರೆಂದು ದೊಡ್ಡಮಟ್ಟದಲ್ಲಿ ಖ್ಯಾತಿಗಳಿಸಿದೆ. ಕಳೆದ ಮೂರು ವರ್ಷದಲ್ಲಿ 3.3 ಲಕ್ಷ ಗ್ರಾಹಕರ ಮನೆಗೆ ಸೋನೆಟ್‌ ತಲುಪಿದೆ. ಕಂಪನಿ, ಮತ್ತಷ್ಟು ಖರೀದಿದಾರರನ್ನು ಸೆಳೆಯಲು 3 ವರ್ಷ ಉಚಿತ ನಿರ್ವಹಣೆ, 5 ವರ್ಷದ ವಾರಂಟಿ ಹಾಗೂ ಶೂನ್ಯ ಡೌನ್ ಪೇಮೆಂಟ್ ಯೋಜನೆಗಳನ್ನು ಘೋಷಣೆ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಈ ವರ್ಷದ ಮಾರ್ಚ್ ತಿಂಗಳಲ್ಲಿ ಕಿಯಾ ಕಂಪನಿ, ತನ್ನ ಸೋನೆಟ್‌ ಎಸ್‌ಯುವಿ ಲೈನ್ಅಪ್ ಅನ್ನು ಬಿಎಸ್6 ಹಂತ 2 ಹಾಗೂ ಇ20 (ಶೇಕಡ 20% ಎಥೆನಾಲ್ ಹಾಗೂ 80% ಪೆಟ್ರೋಲ್) ಇಂಧನ ಬೆಂಬಲಿಸುವಂತೆ ಮೇಲ್ದರ್ಜೆಗೇರಿಸಲಾಗಿತ್ತು. ಜೊತೆಗೆ 1.5 ಲೀಟರ್ WGT ಡೀಸೆಲ್ ಎಂಜಿನ್ ಬದಲಾಗಿ, 1.5 ಲೀಟರ್ VGT ಡಿಸೇಲ್ ಎಂಜಿನ್ ಅಳವಡಿಸಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, November 28, 2023, 12:07 [IST]
English summary
Kia sonnet facelift ready to make facelift debut next month
Read more on ಕಿಯಾ kia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+