ಭಾರತದಲ್ಲಿ ಸೇಲ್ ಆಯ್ತು ಲ್ಯಾಂಬೋರ್ಗಿನಿಯ 150ನೇ ಈ ಕಾರು: ಈ ಮಾಡೆಲ್ ಯಾಕೆ ಭಾರತೀಯರಿಗೆ ಅಚ್ಚುಮೆಚ್ಚು
ಭಾರತದಲ್ಲೊ ಲ್ಯಾಂಬೋರ್ಗಿನಿ ಸೂಪರ್ ಕಾರುಗಳ ಕ್ರೇಝ್‌ಗೆ ಯಾವ ಕಮ್ಮಿಯೂ ಇಲ್ಲ. ಲ್ಯಾಂಬೋರ್ಗಿನಿಯ ಯಾವ ಕಾರಾದರೂ ಸರಿ, ಅದು ಭಾರತದ ಹೆದ್ದಾರಿಗಳಲ್ಲಿ ಹೋದರೇ ಎಂತವರೂ ಸಹ ಒಮ್ಮೆ ನಿಂತು ತಿರುಗಿ ನೋಡುತ್ತಾರೆ. ಇದೀಗ ಲ್ಯಾಂಬೋರ್ಗಿನಿಯ ಸೂಪರ್ ಕಾರೊಂದು ನಮ್ಮಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದೆ.
ಲ್ಯಾಂಬೋರ್ಗಿನಿಯ ಹುರಾಕಾನ್ (Lamborghini Huracan) ಕಾರು ಭಾರತದಲ್ಲಿ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಸುಮಾರು 150 ಕಾರುಗಳನ್ನು ಮಾರಾಟ ಮಾಡುವ ಮೂಲಕ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಭಾರತದಲ್ಲಿ ಲ್ಯಾಂಬೋರ್ಗಿನಿಯ ಅತೀ ಯಶಸ್ವಿ ಕಾರು ಮಾಡೆಲ್ ಎಂದರೆ ಅದು ಲ್ಯಾಂಬೋರ್ಗಿನಿ ಉರುಸ್ ಎಸ್‌ಯುವಿ. ಅದರ ನಂತರದ ಸ್ಥಾನ ಇದೀಗ ಹುರಾಕಾನ್ ಪಾಲಾಗಿದೆ.

ಇತ್ತೀಚೆಗಷ್ಟೇ ಲ್ಯಾಂಬೋರ್ಗಿನಿಯು ೧೫೦ ನೇ ಹುರಾಕಾನ್ ಕಾರಿನ ಡೆಲಿವರಿಯನ್ನು ಪೂರ್ಣಗೊಳಿಸಿ ಈ ಸಂತಸದ ವಿಚಾರವನ್ನು ಹಂಚಿಕೊಂಡಿದೆ. 2014 ರಲ್ಲಿ ಲ್ಯಾಂಬೋರ್ಗಿನಿ ಹುರಾಕಾನ್ ಜಾಗತಿಕವಾಗಿ ಲಾಂಚ್ ಆದ ಬಳಿಕ ಭಾರತದಲ್ಲಿ ತನ್ನ ಮಾರಾಟವನ್ನು ಆರಭಿಸಿತ್ತು. ಆರಂಭದಲ್ಲಿ ಭಾರತಕ್ಕೆ ಹುರಾಕಾನ್ ಕೂಪೆ ಮಾಡೆಲ್ ಕಾಲಿಟ್ಟಿತ್ತು.
ಲ್ಯಾಂಬೋರ್ಗಿನಿ ಹುರಾಕಾನ್ ಕೂಪೆ ಮಾಡೆಲ್ ಕಾಲಿಟ್ಟ ಬಳಿಕ, ಇದರ ಸ್ಪೈಡರ್ ಸಹ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ರೇರ್ ವ್ಹೀಲ್ ಡ್ರೈವ್ ಆದ ಹುರಾಕಾನ್ ಪರ್ಫಾಮಂತೆ 2014 ರಲ್ಲಿ ಮತ್ತು ಹುರಾಕಾನ್ ಪರ್ಫಾಮನ್ಸ್ ಸ್ಪೈಡರ್ 2018 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮಾರಾಟವನ್ನು ಆರಂಭಿಸಿತ್ತು.

ಇನ್ನು ಈ ಮೈಲುಗಲ್ಲಿನ ಕುರಿತಾಗಿ ಮಾತನಾಡಿದ ಲ್ಯಾಂಬೋರ್ಗಿನಿ ಇಂಡಿಯಾದ ಮುಖ್ಯಸ್ಥ ಶರದ್ ಅಗರ್ವಾಲ್, ದಿನಂಪ್ರತಿ ಡ್ರೈವ್ ನಿಂದ ಹಿಡಿದು ರೇಸ್ ಟ್ರ್ಯಾಕ್ ನಲ್ಲಿ ಅದ್ಭುತ ಪ್ರದರ್ಶನವನ್ನೂ ನೀಡುತ್ತದೆ. ಭಾರತದಲ್ಲಿ ಹುರಾಕಾನ್ ನ 150 ನೇ ಕಾರನ್ನು ಡೆಲಿವರಿ ನೀಡುತ್ತಿರುವುದಕ್ಕೆ ನಮಗೂ ಹೆಮ್ಮೆಯಾಗುತ್ತಿದೆ ಎಂದು ಅವರು ಇದೇ ಸಂಧರ್ಭದಲ್ಲಿ ತಿಳಿಸಿದ್ದಾರೆ.
ಕಳೆದ 9 ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಲ್ಯಾಂಬೋರ್ಗಿನಿ ಹುರಾಕಾನ್ ಯಾಶಸ್ವಿಯಾಗಿ ಮುನ್ನುಗ್ಗುತ್ತಿದೆ. ಭಾರತದ ವೇಗ ಪ್ರೀಯರಿಗೆ ಹುರಾಕಾನ್ ಕಾರು ಒಂದು ವರದಾನವಾಗಿ ಗೋಚರವಾಗುತ್ತಿದೆ. ಕಳೆದ ೯ ವರ್ಷಗಳಲ್ಲಿ ಲ್ಯಾಂಬೋರ್ಗಿನಿ ಹುರಾಕಾನ್‌ನ ಹಲವಾರು ವೇರಿಯಂಟ್‌ಗಳು ಬಂದಿದ್ದು, ಭಾರತೀಯರ ಅಚ್ಚುಮೆಚ್ಚಿನ ಸೂಪರ್ ಕಾರುಗಳಲ್ಲಿ ಒಂದಾಗಿದೆ.
ಲ್ಯಾಂಬೋರ್ಗಿನಿ ಹುರಾಕಾನ್‌ನಲ್ಲಿ ಹಲವಾರು ವೇರಿಯೆಂಟ್ ಗಳು ಇದ್ದು ಇದರ ಏರೋಡೈನಾಮಿಕ್ ಡಿಸೈನ್ ಶೈಲಿಯಿಂದಲೇ ಹೆಚ್ಚು ಆಕರ್ಷಕವಾಗಿದೆ. 5.2 ಲೀಟರ್ 10 ಸಿಲಿಂಡರ್ ಎಂಜಿನ್ ನೊಂದಿಗೆ ಬರುವ ಈ ಕಾರು 572 ಬಿಹೆಚ್‌ಪಿ ಪವರ್ ಮತ್ತು 540 ಎನ್‌ಎಮ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








