Mahindra Scorpio: 20 ವರ್ಷ ಕಳೆದರೂ ಮಹೀಂದ್ರಾ ಸ್ಕಾರ್ಪಿಯೋವನ್ನು ಅದಕ್ಕೆ ಬೆಸ್ಟ್ ಅನ್ನೋದು!
ದೇಶದಲ್ಲಿ ಮಹೀಂದ್ರಾ (Mahindra) ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಅದರ ಸ್ಕಾರ್ಪಿಯೋ (Scorpio) ಎಸ್‌ಯುವಿಗೆ ಪ್ರತೇಕ ಅಭಿಮಾನಿ ಬಳಗವಿದೆ. ಸದ್ಯ, ಜುಲೈ (2023) ತಿಂಗಳಲ್ಲಿ ಕಂಪನಿಯು ಸ್ಕಾರ್ಪಿಯೋ ಮಾರಾಟದಲ್ಲಿ ಉತ್ತಮ ಸಾಧನೆ ಮಾಡಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಇತ್ತೀಚೆಗೆ, ಸ್ಕಾರ್ಪಿಯೋ ಎನ್ ಎಸ್‌ಯುವಿ ಬಿಡುಗಡೆಯ ಮೊದಲ ವಾರ್ಷಿಕೋತ್ಸವ ಸಮಾರಂಭವನ್ನು ಮಹೀಂದ್ರಾ ಆಚರಿಸಿತು. ಜೊತೆಗೆ ಸ್ಕಾರ್ಪಿಯೋ ಸರಣಿ ಎಸ್‌ಯುವಿ ಮಾರಾಟದಲ್ಲಿ 9 ಲಕ್ಷ ಯುನಿಟ್ ಮಾರಾಟ ಮೈಲಿಗಲ್ಲನ್ನು ಸಾಧಿಸಿತು. ದೇಶೀಯ ಮಾರುಕಟ್ಟೆಯಲ್ಲಿ 2002ರಲ್ಲಿ ಲಾಂಚ್ ಆದ ಸ್ಕಾರ್ಪಿಯೋ ದಶಕಗಳಿಂದ ಜನಜನಿತವಾಗಿದೆ. ಮಹೀಂದ್ರಾ, ಸ್ಕಾರ್ಪಿಯೋ ಎನ್ ಎಸ್‌ಯುವಿಯೊಂದಿಗೆ ಕಾಸ್ಮೆಟಿಕ್ ಬದಲಾವಣೆ ಪಡೆದುಕೊಂಡಿರುವ ಸ್ಕಾರ್ಪಿಯೋ ಕ್ಲಾಸಿಕ್ ಕಾರನ್ನು ಸೇಲ್ ಮಾಡುತ್ತಿದೆ.

ಕಳೆದ ಜುಲೈ ತಿಂಗಳು, ದೇಶದಲ್ಲಿ ಹೆಚ್ಚು ಮಾರಾಟವಾಗುವ 6ನೇ ಎಸ್‌ಯುವಿಯಾಗಿ, ಸ್ಕಾರ್ಪಿಯೋ ಸರಣಿ ಕಾರುಗಳು ಹೊರಹೊಮ್ಮಿವೆ. ಕಂಪನಿಯು 10,522 ಯುನಿಟ್ ಎಸ್‌ಯುವಿಗಳನ್ನು ಮಾರಾಟ ಮಾಡಿದ್ದು, ಹ್ಯುಂಡೈ ವೆನ್ಯೂ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಹ್ಯುಂಡೈ ಎಕ್ಸ್‌ಟರ್‌ಗಳಿಗಿಂತ ಮುಂದಿದೆ. ಇದಿಷ್ಟೇ ಅಲ್ಲದೆ, ದೇಶದಲ್ಲಿ ಅತಿಹೆಚ್ಚು ಸೇಲ್ ಆಗುವ ಎರಡನೇ ಮಿಡ್ ಸೈಜ್ ಎಸ್‌ಯುವಿಯು ಸ್ಕಾರ್ಪಿಯೋ ಜನಪ್ರಿಯತೆ ಗಳಿಸಿದೆ.
ಮೊದಲಿಗೆ, ಮಹೀಂದ್ರಾದ ಜನಪ್ರಿಯ ಸ್ಕಾರ್ಪಿಯೋ ಎನ್ ಎಸ್‌ಯುವಿ ಮಾತನಾಡೋಣ. ಇದು, ರೂಪಾಂತರಗಳಿಗೆ ಅನುಗುಣವಾಗಿ 18 ತಿಂಗಳವರೆಗೆ ಕಾಯುವಿಕೆ ಅವಧಿಯನ್ನು ಹೊಂದಿದ್ದು, ರೂ.13.05 ಲಕ್ಷದಿಂದ 24.52 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಝಡ್2, ಝಡ್4, ಝಡ್6 ಹಾಗೂ ಝಡ್8 ವೇರಿಯೆಂಟ್ ಹಾಗೂ ಡೀಪ್ ಫಾರೆಸ್ಟ್, ಎವರೆಸ್ಟ್ ವೈಟ್, ನಪೋಲಿ ಬ್ಲಾಕ್ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರು ಕೊಂಡುಕೊಳ್ಳಬಹುದು.

ಮಹೀಂದ್ರಾ ಸ್ಕಾರ್ಪಿಯೋ ಎನ್ ಪವರ್‌ಟ್ರೇನ್ ಬಗ್ಗೆ ತಿಳಿಯುವುದಾದರೆ, ಇದರ 2.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 200 bhp ಪವರ್ ಹಾಗೂ 380 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 6 ಸ್ವೀಡ್ ಆಟೋಮೆಟಿಕ್/ 6 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದ್ದು, 2WD (ಟೂ ವೀಲ್ ಡ್ರೈವ್), 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.
ಮತ್ತೊಂದು, 2.2 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್, 172 bhp ಪವರ್ ಮತ್ತು 370 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 ಸ್ವೀಡ್ ಅಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಸೆಮಿ ಡಿಜಿಟಲ್ ಇನ್ಸ್ರುಮೆಂಟಲ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಸುರಕ್ಷತೆಯ ದೃಷ್ಟಿಯಿಂದ ಮಹೀಂದ್ರಾ ಸ್ಕಾರ್ಪಿಯೋ ಎನ್ ಅತ್ಯುತ್ತಮವಾಗಿದ್ದು, ಗ್ಲೋಬಲ್ ಎನ್‌ಸಿಎಪಿಯಿಂದ 5 ಸ್ಟಾರ್ ರೇಟಿಂಗ್ ಪಡೆದಿದೆ. 6 ಏರ್‌ಬ್ಯಾಗ್ಸ್, ABS (ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), ಹಿಲ್ ಅಸಿಸ್ಟ್ ಕಂಟ್ರೋಲ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಸೇರಿದಂತೆ ಹತ್ತಾರು ಸೇಫ್ಟಿ ಫೀಚರ್ಸ್ ಹೊಂದಿದೆ.
ದೇಶದಲ್ಲಿ ಖರೀದಿಗೆ ಸಿಗುವ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್, ರೂ.13 ಲಕ್ಷದಿಂದ ರೂ.16.81 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಇದರ 2.2 - ಲೀಟರ್ mHawk ಡೀಸೆಲ್ ಎಂಜಿನ್, 132 PS ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.
ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಇದು, 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಎಲ್ಇಡಿ DRL, ಪ್ರೊಜೆಕ್ಟರ್ ಹೆಡ್‌ಲೈಟ್, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಕ್ಲೇಮೇಟ್ ಕಂಟ್ರೋಲ್ ಒಳಗೊಂಡಂತೆ ಹತ್ತಾರು ಫೀಚರ್ಸ್ ಹೊಂದಿದೆ. ಈ ಕಾರಿಗೆ ಹ್ಯುಂಡೈ ಕ್ರೆಟಾ, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಫೋಕ್ಸ್‌ವ್ಯಾಗನ್ ಟೈಗನ್ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications