ಮೋಜುಗಾರ ಥಾರ್‌ ಮತ್ತು ಸೊಗಸುಗಾರ ಜಿಮ್ನಿ: ಇವರಲ್ಲಿ ಯಾರು ಹಿತವರು? ವಿಡಿಯೋ ನೋಡಿ

2023 ಆಟೋ ಎಕ್ಸ್‌ಪೋನಲ್ಲಿ ಮಾರುತಿ ಸುಜುಕಿಯ ಬಹುನಿರೀಕ್ಷಿತ ಜಿಮ್ನಿಯನ್ನು (Maruti Suzuki Jimny) ಅನಾವರಣ ಗೊಳಿಸಿದಾಗಿನಿಂದ ಭಾರತೀಯ ಆಟೋ ಮೊಬೈಲ್‌ ಕ್ಷೇತ್ರದಲ್ಲಂತೂ ಇದರದ್ದೇ ಹವಾ. ಆಗಿನಿಂದಲೂ ಕಾರು ಬಿಡುಗಡೆಯಾದ ಮೇಲೆ ಇದರ ನೇರಾ ನೇರ ಸ್ಫರ್ಧಿಯಾದಂತಹ ಮಹೀಂದ್ರಾ ಥಾರ್‌ ಜೊತೆ ಹೇಗೆ ಪೈಪೋಟಿ ನೀಡುತ್ತದೆ ಎಂಬ ಕುತೂಹಲ ಎಲ್ಲರಿಗೂ ಇತ್ತು.

ಮಹೀಂದ್ರಾ ಥಾರ್ ಮತ್ತು ಮಾರುತಿ ಸುಜುಕಿ ಎರಡೂ ಸಹ ಆಫರ್‌ ರೋಡ್‌ ಕಾರುಗಳಾಗಿದ್ದರಿಂದ ಗ್ರಾಹಕರಲ್ಲಿ ಇವೆರಡರಲ್ಲಿ ಯಾರು ಉತ್ತಮರು ಎಂದು ತಿಳಿಯುವ ಕುತೂಹಲ ಇದ್ದೇ ಇತ್ತು. ಇತ್ತೀಚೆಗೆ ಇವೆರಡೂ ಕಾರುಗಳ ಆಫ್‌ರೋಡ್‌ ಪರ್ಫಾಮೆನ್ಸ್‌ ಅನ್ನು ಹೋಲಿಕೆ ಮಾಡಿರುವ ವಿಡಿಯೋ ಯ್ಯೂಟ್ಯೂಬ್‌ನಲ್ಲಿ ಹರಿಬಿಡಲಾಗಿದೆ.

Mahindra Thar and Maruti Suzuki Jimny

ವಿಡಿಯೋದಲ್ಲಿ ಥಾರ್‌ ಮತ್ತು ಜಿಮ್ನಿಯನ್ನು ವೈವಿಧ್ಯಮಯ ಸ್ಥಳಗಳಲ್ಲಿ ಇದರ ಆಫರ್‌ರೋಡಿಂಗ್‌ ಸಾಮರ್ಥ್ಯವನ್ನು ಪರೀಕ್ಷಿಸಿದ್ದು, ಎರಡೂ ಕಾರುಗಳು ಸಹ ಅತ್ಯುತ್ತಮವಾದ ಪ್ರದರ್ಶನ ನೀಡಿದೆ ಎಂದೇ ಹೇಳಬಹುದು. BRH ಎಕ್ಸ್ಪಿಡೀಷನ್ ಎಂಬ ಯ್ಯೂಟ್ಯೂಬ್‌ನಲ್ಲಿ ಜಿಮ್ನಿ ಮತ್ತು ಥಾರ್‌ನ ವಿಡಿಯೋವನ್ನು ಹರಿಬಿಟ್ಟಿದ್ದು ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

ಮಾರುತಿ ಜಿಮ್ನಿ ಮತ್ತು ಮಹೀಂದ್ರಾ ಥಾರ್‌ ಎರಡೂ ಕಾರುಗಳು ಸಹ ಆಫ್‌ರೋಡ್‌ ಪರೀಕ್ಷೆಯಲ್ಲಿ ತಮ್ಮೆದುರು ಬಂದಂತಹ ಎಲ್ಲಾ ಕಠಿಣವಾದ ಅಡೆತಡೆಗಳನ್ನು ಸವಾಲಾಗಿ ಸ್ವೀಕರಿಸಿ ಅದರಲ್ಲಿ ಒಳ್ಳೆಯ ಪ್ರದರ್ಶನ ನೀಡಿ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾಗಿದೆ ಎಂಬುದು ಹಗಲಿನಷ್ಟೇ ಸತ್ಯವಾದ ಮಾತು.

ವಿಡಿಯೋದಲ್ಲಿ ಕಾಣುವಂತೆ ಮಾರುತಿ ಸುಜುಕಿ ಜಿಮ್ನಿಯು ಕಠಿಣವಾದ ಇಳಿಜಾರುಗಳು ಮತ್ತು ಮರಳಿನಿಂದ ಕೂಡಿದ ನೆಲಗಳಲ್ಲಿ ಉತ್ತಮ ರೀತಿಯಲ್ಲಿ ಮುನ್ನುಗ್ಗುತ್ತಿದ್ದು, ಇದು ಜಿಮ್ನಿ ಪ್ರೀಯರ ಮುಖದಲ್ಲಿ ಗುವನ್ನು ತರುವಂತೆ ಮಾಡಿದೆ. ಎರಡೂ ಕಾರುಗಳು ತಮ್ಮ ಮುಂದೆ ಬಂದ ಸವಾಲುಗಳನ್ನು ಉತ್ತಮ ರೀತಿಯಲ್ಲೇ ಎದುರಿಸಿದೆ.

ಮಾರುತಿ ಸುಜುಕಿ ಜಿಮ್ನಿಯು, ಮಹೀಂದ್ರಾ ಥಾರ್‌ಗೆ ಹೋಲಿಸಿದರೆ ತೂಕದಲ್ಲಿ ಕೊಂಚ ಕಮ್ಮಿ ತೂಗುತ್ತದೆ. ಇದರಿಂದ ಜಿಮ್ನಿಯ ಪವರ್‌ ಟು ವೈಟ್‌ ರೇಶಿಯೋ ವು ಥಾರ್‌ಗಿಂತ ಉತ್ತಮವಾಗಿದೆ. ಇದರಿಂದ ಡ್ರೈವ್‌ ಮಾಡುವ ಸಂಧರ್ಭದಲ್ಲಿ ಥಾರ್‌ಗಿಂತ ಉತ್ತಮ ಪ್ರದರ್ಶನವನ್ನು ನೀಡಲು ಸಾಧ್ಯವಾಗುತ್ತದೆ ಎಂಬುದು ನಿಜ.

ವಿಡಿಯೋದಲ್ಲಿ ಆ್ಯಂಕರ್‌ ಹೇಳುವ ಪ್ರಕಾರ ಮಾರುಜಿ ಸುಜುಕಿ ಜಿಮ್ನಿಯಲ್ಲಿ ಫ್ಯಾಕ್ಟರಿ ಫಿಟ್‌ ಸಾಫ್ಟ್‌ ಟಾರ್‌ಮ್ಯಾಕ್‌ ಟೈರ್‌ ಬರುತ್ತಿದ್ದು, ಮಹೀಂದ್ರಾ ಥಾರ್‌ನಲ್ಲಿ ಆಲ್‌ ಟೆರೈನ್‌ ಟೈರ್‌ಗಳಿವೆ. ಇನ್ನು ಆಲ್‌ ಟೆರೈನ್‌ ಟೈರ್‌ಗಳು ಆಫ್‌ರೊಡಿಂಗ್‌ ಸಂಧರ್ಭದಲ್ಲಿ ಕಾರಿಗೆ ಉತ್ತಮ ಗ್ರಿಪ್‌ ನೀಡಲು ಸಹಾಯ ಮಾಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, June 16, 2023, 19:18 [IST]
English summary
Mahindra thar and maruti suzuki jimny off road test
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+