ಮಹೀಂದ್ರಾ ಥಾರ್ ಸಿಲುಕಿ ಒದ್ದಾಡಿದ ರಸ್ತೆಯಲ್ಲಿ ಮುನ್ನುಗ್ಗಿದ ಜಿಮ್ನಿ: ಜಿಮ್ನಿ ಅಸಲಿ ರಣಭೇಟೆಗಾರನಾ?
ಮಾರುತಿ ಸುಜುಕಿಯ ಜಿಮ್ನಿಯ ಆಗಮನದೊಂದಿಗೆ ಭಾರತದಲ್ಲಿ ಲೈಫ್‌ಸ್ಟೈಲ್ ಆಫ್ ರೋಡ್ ಎಸ್‌ಯುವಿಗಳ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಮಾತ್ರವಲ್ಲದೇ ಭಾರತೀಯ ಮಾರುಕಟ್ಟೆಯಲ್ಲಿ ಈ ಸೆಗ್ಮೆಂಟ್‌ನ ವಾಹನಗಳ ಸ್ಪರ್ಧೆಯು ಸಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಲ್ಲಿ ಥಾರ್ ಮತ್ತು ಮಾರುತಿ ಜಿಮ್ನಿ ಪ್ರಮುಖವಾದವು.
ಭಾರತದಲ್ಲಿ ಮಾರುತಿ ಸುಜುಕಿ ಜಿಮ್ನಿ ಲಾಂಚ್ ಆದಾಗಿನಿಂದ ಎರಡೂ ವಾಹನಗಳು ಅಂದರೆ ಮಹೀಂದ್ರಾ ಥಾರ್ (Mahindra Thar) ಮತ್ತು ಮಾರುತಿ ಸುಜುಜಿ ಜಿಮ್ನಿಯ ನಡುವೆ ಯಾರು ದೊಡ್ಡವರು, ಯಾರು ಪರಾಕ್ರಮಶಾಲಿ ಎಂಬ ವಾದ ನಡೆಯುತ್ತಲೇ ಇದೆ. ಇದಕ್ಕಾಗಿ ಹಲವಾರು ಯ್ಯೂಟ್ಯೂಬರ್‌ಗಳು ಮತ್ತು ಮಾಧ್ಯಮ ಸಂಸ್ಥೆಗಳು ಅನೌಪಚಾರಿಕವಾದ ಸ್ಪರ್ಧೆಗಳನ್ನು ನಡೆಸಿದೆ.

ಇವೆರಡರಲ್ಲಿ ಯಾರು ಬಲಶಾಲಿ ಎಂಬ ಸ್ಪರ್ಧೆಯನ್ನು ನಡೆಸಿದ್ದು, ಇದರ ಹಲವಾರು ವಿಡಿಯೋಗಳು ಲಭ್ಯವಿದೆ. ಇದೀಗ ಇದೇ ರೀತಿಯ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಮಹೀಂದ್ರಾ ಥಾರ್ ಆಫ್‌ರೋಡ್ ಟೆಸ್ಟ್‌ನಲ್ಲಿ ಸಿಕ್ಕಿ ಹಾಕಿಕೊಂಡ ಅದೇ ಜಾಗದಲ್ಲಿ ಮಾರುತಿ ಸುಜುಕಿ ಜಿಮ್ನಿಯು ನಿರಾಯಾಸವಾಗಿ ದಾಟಿ ಎಲ್ಲರ ಹುಬ್ಬೇರಿಸಿದೆ.
ಈ ಕುರಿತಾದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಹೌದು, ಆರ್‌ಟಿ ಆಟೋ ಕ್ಯಾಟಲಿಸ್ಟ್ ಎನ್ನುವ ಇನ್ಸ್ಟಾಗ್ರಾಂ ಚಾನಲ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಇದರಲ್ಲಿ 2020 ರ ಮಹೀಂದ್ರಾ ಥಾರ್ ಮತ್ತು ಸುಜುಕಿ ಜಿಮ್ನಿ ನಡುವೆ ಈ ಸ್ಪರ್ಧೆ ಏರ್ಪಟ್ಟಿದೆ.
ಕೆಸರು ತುಂಬಿದ ರೋಡ್‌ನಲ್ಲಿ ಥಾರ್‌ನ ಟೈರುಗಳು ಕೆಸರಿನಲ್ಲಿ ಹುದುಗಿಕೊಂಡು ಆ ತಡೆಯನ್ನು ದಾಟುವಲ್ಲಿ ವಿಫಲವಾಗಿದೆ. ಆದರೆ ಇದೇ ಸಂಧರ್ಭದಲ್ಲಿ ಹೊಸ ಜಿಮ್ನಿಯು ಆ ತಡೆಯನ್ನು ನಿರಾಯಾಸವಾಗಿ ಭೇಧಿಸಿ ಮುನ್ನುಗ್ಗುತ್ತಿರುವುದು ಜಿಮ್ನಿ ಪ್ರೀಯರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಈ ಕುರಿತಾಗಿ ಹಲವು ಕಾಮೆಂಟ್‌ಗಳು ವಿಡಿಯೋ ಕೆಳಗೆ ಹರಿದಾಡುತ್ತಿದೆ.
ಥಾರ್ ಕಾರು ಮಾದರಿಯಲ್ಲಿ ಬಿಎಸ್-6 ಎಂಜಿನ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಎರಡು ಎಂಜಿನ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.
ರೂ.12.74 ಲಕ್ಷದ ಆರಂಭಿಕ ಬೆಲೆಯಲ್ಲಿಯೂ ಸಹ, ಜಿಮ್ನಿಯು ಮಹೀಂದ್ರ ಥಾರ್ 4X4 ಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದೆ. ಇದು ರೂ.13.87 ಲಕ್ಷದಿಂದ ಪ್ರಾರಂಭವಾಗುತ್ತದೆ ಎಂದು ಶ್ರೀವಾಸ್ತವ ಹೇಳಿದರು.ಜಿಮ್ನಿ ಎಲ್ಲಾ ರೂಪಾಂತರಗಳಲ್ಲಿ 4WD ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ ಮತ್ತು ಇದು ಪ್ರಸ್ತುತ ಥಾರ್‌ನಲ್ಲಿರುವ ಮೂರು ಡೋರುಗಳಿಗೆ ಬದಲಿಗೆ ಐದು-ಡೋರುಗಳಿಗೆ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications