ಕೊಳ್ಳುವಾಗ ನಾನಾ ಕಥೆ ಹೇಳ್ತಾರೆ, ಬಳಿಕ ನನ್ನ ಪರಿಸ್ಥಿತಿ ಇದು... ಶೋರೂಂ ಎದುರು ಪ್ರತಿಭಟನೆ

ಇತ್ತೀಚೆಗೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ದೇಶೀಯ ಬ್ರಾಂಡ್‌ಗಳನ್ನು ನಂಬಿ ಇವಿಗಳನ್ನು ಖರೀದಿಸುವ ಗ್ರಾಹಕರಿಗೆ ಯಾವುದೋ ಒಂದು ಸಮಸ್ಯೆ ಕಾಡುತ್ತಿದೆ. ಈಗಲೂ ಕಾರಣ ತಿಳಿಯದ ಹೊಸ ಎಲೆಕ್ಟ್ರಿಕ್ ಕಾರಿನ ಸಮಸ್ಯೆಗೆ ಹತಾಶೆಗೊಂಡ ಮಾಲೀಕ ಶೋರೂಂ ಎದುರಿನ ರಸ್ತೆಯಲ್ಲಿ ಪ್ರತಿಭಟನೆ ಮಾಡಿದ್ದಾರೆ.

ಶೋರೂಂನಲ್ಲಿ ವಾಹನದ ಬಗ್ಗೆ ಹುಬ್ಬೇರಿಸುವಂತಹ ಮಾತುಗಳನ್ನಾಡಿ ಈಗ ಕಾರು ರಿಪೇರಿಗೆ ಬಂದರೆ ಸರಿಯಾಗಿ ಪ್ರತಿಕ್ರಿಯಿಸಲ್ಲ ಎಂದು ಮಾಲೀಕ ಆರೋಪಿಸಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ಮಹೀಂದ್ರಾ XUV 400 ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ ರಾಮರಾಜೇಶ್ ಎಂಬಾತ ತಿಂಗಳಲ್ಲಿ ಮೂರು ಬಾರಿ ನಡುರಸ್ತೆಯಲ್ಲಿ ಕಾರು ನಿಂತಿದ್ದರಿಂದ ಹತಾಶೆಗೊಂಡು ನಡು ರಸ್ತೆಯಲ್ಲಿ ಪ್ರತಿಭಟನೆ ಮಾಡಿದ್ದಾರೆ.

mahindra-xuv-400-ev-trouble-owner-protest

ರಾಮರಾಜೇಶ್ ಚೆನ್ನೈನ ಚಿಟ್ಲಪಾಕ್ಕಂ ಪ್ರದೇಶದವರಾಗಿದ್ದು ಕ್ರೋಂಪೆಟ್ಟೈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇತ್ತಿಚೆಗೆ ಬಿಡುಗಡೆಯಾಗಿ ಇವಿ ವಾಹನ ವಿಭಾಗದಲ್ಲಿ ನಿರೀಕ್ಷೆಗಳನ್ನು ಹೆಚ್ಚಿಸಿದ್ದ ಮಹೀಂದ್ರಾ XUV 400 EV ಕಾರನ್ನು ಖರೀದಿಸಿದ್ದರು. ಕೆಲ ತಿಂಗಳ ಹಿಂದೆ 21 ಲಕ್ಷ ರೂ. ಕೊಟ್ಟು ಈ ಎಲೆಕ್ಟ್ರಿಕ್ ಕಾರನ್ನು ಮನೆಗೆ ತಂದಿದ್ದರು.

ಸದ್ಯ ಕಾರು ಖರೀದಿಸಿ ಮೂರು ತಿಂಗಳಾಗಿದೆ, ತಿಂಗಳಿಗೊಮ್ಮೆಯಾದ್ರು ಕಾರು ರಸ್ತೆ ಮಧ್ಯೆ ನಿಲ್ಲುತ್ತದೆ. ಇಲ್ಲಿಯವರೆಗೆ ಕಾರು ಮೂರು ಬಾರಿ ನಡುರಸ್ತೆಯಲ್ಲಿ ಕೈಕೊಟ್ಟಿದೆ ಎಂದು ಮಾಲೀಕ ಆರೋಪಿಸಿದ್ದಾರೆ. ಮೊದಲೆರಡು ಬಾರಿ ಅವರೇ ಕಾರನ್ನು ಸರ್ವೀಸ್ ಸೆಂಟರ್‌ಗೆ ತೆಗೆದುಕೊಂಡು ಹೋಗಿ ರಿಪೇರಿ ಮಾಡಿಸಿದ್ದಾರೆ. ಮೂರನೇ ಬಾರಿಗೆ ತೀವ್ರ ಆಕ್ರೋಶಗೊಂಡ ಅವರು, ಶೋರೂಂ ಅವರನ್ನು ಸಂಪರ್ಕಿಸಿದ್ದಾರೆ.

mahindra-xuv-400-ev-trouble-owner-protest

ಈ ವೇಳೆ ಕಾರ್ ಷೋರೂಂ ಸಿಬ್ಬಂದಿ ಕಾರನ್ನು ತರಲು ಜನರನ್ನು ಕಳುಹಿಸುವುದಾಗಿ ಹೇಳಿದ್ದಾರೆ. ಆದ್ರೆ ದೂರು ನೀಡಿ ಆರು ಗಂಟೆ ಕಳೆದ್ರೂ ಶೋ ರೂಂನಿಂದ ಕಾರನ್ನು ಸಂಗ್ರಹಿಸಲು ಯಾರೂ ಬಂದಿಲ್ಲ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಅವರು, ಶೋರೂಂ ಸಿಬ್ಬಂದಿ ಬರುವವರೆಗು ಕಾದು ಕಾರನ್ನು ಶೋರೂಂ ಕೊಂಡೊಯ್ದಾಗ ಬಾಗಿಲಲ್ಲೇ ತಡೆದು ರಸ್ತೆ ಮಧ್ಯೆ ಹಾಕಿ ಪ್ರತಿಭಟನೆ ಮಾಡಿದ್ದಾರೆ.

ಇದರಿಂದಾಗಿ ಆ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಆಗಿ ಸಂಚಾರಕ್ಕೆ ಅಡ್ಡಿಯಾಗಿತ್ತು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಘಟನೆಯ ಬಗ್ಗೆ ವಿಚಾರಣೆ ನಡೆಸಿದ್ದು, ಮಾಲೀಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕಾರು ಖರೀದಿಸಲು ಲಕ್ಷಾಂತರ ರೂ. ಖರ್ಚು ಮಾಡಿದ್ದಾನೆ. ತಿಂಗಳಿಗೆ 33,000 ರೂ. ಇಎಂಐ ಪಾವತಿಸುತ್ತಿದ್ದೇನೆ. ಆದ್ರೆ ಕಂಪನಿಯವರು ಇಂತಹ ಕೆಲಸಕ್ಕೆ ಬಾರದ ಕಾರನ್ನು ನನಗೆ ನೀಡಿದ್ದಾರೆ ಎಂದು ದೂರಿದರು.

ಕಾರು ಖರೀದಿಸುವಾಗ ಶೋರೂಂ ಸಿಬ್ಬಂದಿ ನಾನಾ ಕಥೆಗಳು ಹೇಳುತ್ತಾರೆ. ರಿಪೇರಿಗೆ ಬಂದಾಗ ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ, ಸಮಸ್ಯೆ ಏನೆಂದು ನನಗೂ ತಿಳಿದಿಲ್ಲ, ಅವರೂ ತಿಳಿಸಿಲ್ಲ ಎಂದು ಮಾಲೀಕ ಆರೋಪಿಸಿದ್ದಾರೆ. ಕೊನೆಗೂ ಮಾಲೀಕನ ಮನವೊಲಿಸಿ ಪೊಲೀಸರು ಪ್ರತಿಭಟನೆಯನ್ನು ತಡೆದರು. ಸದ್ಯ ಕಾರನ್ನು ರಿಪೇರಿಗೆ ಕೊಂಡೊಯ್ದಿದ್ದು, ಸಮಸ್ಯೆ ಮರುಕಳಿಸುವುದಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಎಲೆಕ್ಟ್ರಿಕ್ ವಾಹನಗಳ ಖರೀದಿಗೂ ಮುನ್ನ ಅವುಗಳ ಬಳಕೆಯ ಬಗ್ಗೆ ಮಾಲೀಕರು ತಿಳಿದುಕೊಳ್ಳಬೇಕು. ಎಲ್ಲಾ ಇವಿ ವಾಹನಗಳು ಸಮಸ್ಯೆ ಹೊಂದಿಲ್ಲ, ಬದಲಿಗೆ ನೂರಕ್ಕೆ ನಾಲ್ಕರಿಂದ ಐದು ವಾಹಗಳು ಈ ರೀತಿ ತೊಂದರೆ ಕೊಡುತ್ತಿವೆ. ಈ ಬಗ್ಗೆ ಕಂಪನಿಗಳು ಕೂಡ ಗಮನಹರಿಸಬೇಕಿದೆ. ಲಕ್ಷಾಂತರ ರೂ. ವೆಚ್ಚಿಸಿ ವಾಹನ ಖರೀದಿಸಿದವರಿಗೆ ಸಮಾಧಾನ ಹೇಳಲೇಬೇಕಾಗುತ್ತದೆ. ಈ ಬಗ್ಗೆ ನಿಮ್ಮ ಅನ್ನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

Article Published On: Thursday, July 6, 2023, 18:35 [IST]
English summary
Mahindra xuv 400 ev trouble owner protest
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+