Mahindra: ಮಹೀಂದ್ರಾ ಎಕ್ಸ್‌ಯುವಿ300ಗೆ ರೂ.1.30 ಲಕ್ಷ ರಿಯಾಯಿತಿ, ಬೆಲೆ ರೂ.7.99 ಲಕ್ಷ

ದೇಶಾದ್ಯಂತ ಕೆಲವು ಆಯ್ದ ಮಹೀಂದ್ರಾ (Mahindra) ಡೀಲರ್‌ಶಿಪ್‌ಗಳು ಈ ವರ್ಷಾಂತ್ಯದ ಡಿಸೆಂಬರ್ ತಿಂಗಳು ಭಾರೀ ರಿಯಾಯಿತಿ ಪ್ರಯೋಜನವನ್ನು ಘೋಷಣೆ ಮಾಡಿವೆ. ಈ ಡಿಸ್ಕೌಂಟ್ ಆಫರ್, ನಗದು ರಿಯಾಯಿತಿ, ವಿನಿಮಯ ಬೋನಸ್‌ ಮತ್ತು ಕಾರ್ಪೊರೇಟ್ ರಿಯಾಯಿತಿಯನ್ನು ಹೊಂದಿವೆ. ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

ಮಹೀಂದ್ರಾ ಕಂಪನಿಯ 'ಎಕ್ಸ್‌ಯುವಿ300' ಭರ್ಜರಿ ರಿಯಾಯಿತಿಯನ್ನು ಪಡೆದಿದೆ. ರೂ.1 ಲಕ್ಷ ನಗದು ರಿಯಾಯಿತಿ (Cash discount), ರೂ.30,000 ವಿನಿಮಯ ಬೋನಸ್ (Exchange bonus) ಅನ್ನು ಒಳಗೊಂಡಿದೆ. ಈ ಡಿಸ್ಕೌಂಟ್ ಆಫರ್ ಡಿಸೆಂಬರ್ 31ರವರೆಗೆ ಲಭ್ಯವಿರಲಿದೆ. ಆದರೆ, ರಾಜ್ಯದಿಂದ ರಾಜ್ಯಕ್ಕೆ ಡೀಲರ್‌ಶಿಪ್‌ ಆಧರಿಸಿ, ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂ ಸಂಪರ್ಕಿಸಿರಿ.

Mahindra: ಮಹೀಂದ್ರಾ ಎಕ್ಸ್‌ಯುವಿ300ಗೆ ರೂ.1.30 ಲಕ್ಷ ರಿಯಾಯಿತಿ, ಬೆಲೆ ರೂ.7.99 ಲಕ್ಷ

ಮುಂದಿನ ತಿಂಗಳ (ಜನವರಿ 2024) ಆರಂಭದಿಂದ ಮಹೀಂದ್ರಾ ಕಂಪನಿ ಕಾರುಗಳ ದರವನ್ನು ಹೆಚ್ಚಳ ಮಾಡುವುದಾಗಿ ಹೇಳಿದ್ದು, ಅಷ್ಟರಲ್ಲಿ ಖರೀದಿಸುವುದು ಉತ್ತಮ. ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಎಕ್ಸ್‌ಯುವಿ300 ರೂ.7.99 ಲಕ್ಷದಿಂದ ರೂ.14.76 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಡಬ್ಲ್ಯೂ2, ಡಬ್ಲ್ಯೂ4, ಡಬ್ಲ್ಯೂ6 ಸೇರಿದಂತೆ 5 ರೂಪಾಂತರ, 3 - ಡುಯಲ್ ಟೋನ್, 7 - ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.

ಈ ಕಾರು, ಪೆಟ್ರೋಲ್ ಹಾಗೂ ಡೀಸೆಲ್ ಪವರ್ ಟ್ರೈನ್ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. 1.2 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 110 PS ಗರಿಷ್ಠ ಪವರ್ ಹಾಗೂ 200 Nm ಪೀಕ್ ಟಾರ್ಕ್, 1.2 - ಲೀಟರ್ TGDI ಪೆಟ್ರೋಲ್ ಎಂಜಿನ್ 130 PS ಪವರ್ ಮತ್ತು 250 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.

Mahindra: ಮಹೀಂದ್ರಾ ಎಕ್ಸ್‌ಯುವಿ300ಗೆ ರೂ.1.30 ಲಕ್ಷ ರಿಯಾಯಿತಿ, ಬೆಲೆ ರೂ.7.99 ಲಕ್ಷ

1.5 - ಲೀಟರ್ ಡಿಸೇಲ್ ಎಂಜಿನ್ 117 PS ಗರಿಷ್ಠ ಪವರ್, 300 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ 6 - ಸ್ವೀಡ್ ಮ್ಯಾನುವಲ್, 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದ್ದು, 2WD (ಟೂ ವೀಲ್ ಡ್ರೈವ್) ತಂತ್ರಜ್ಞಾವನ್ನು ಹೊಂದಿದೆ. ಜೊತೆಗೆ 20.1 kmpl ಮೈಲೇಜ್ ನೀಡುತ್ತದೆ.

ಮಹೀಂದ್ರಾ ಎಕ್ಸ್‌ಯುವಿ300 ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಈ ಕಾರು 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಸಿಂಗಲ್ ಪೇನ್ ಸನ್‌ರೂಫ್, ಕ್ರೂಸ್ ಕಂಟ್ರೋಲ್, ಆಟೋ ಎಸಿ, ರೈನ್ ಸೆನ್ಸಿಂಗ್ ವೈಪರ್ಸ್ ಕನೆಕ್ಟ್ದ್ ಕಾರ್ ಟೆಕ್ ಸೇರಿದಂತೆ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

Mahindra: ಮಹೀಂದ್ರಾ ಎಕ್ಸ್‌ಯುವಿ300ಗೆ ರೂ.1.30 ಲಕ್ಷ ರಿಯಾಯಿತಿ, ಬೆಲೆ ರೂ.7.99 ಲಕ್ಷ

ಸುರಕ್ಷತೆಯ ದೃಷ್ಟಿಯಿಂದಲ್ಲೂ ಈ ಕಾರು ಅತ್ಯುತ್ತಮವಾಗಿದ್ದು 6 ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಕಾರ್ನರ್ ಬ್ರೇಕಿಂಗ್ ಕಂಟ್ರೋಲ್, ಫ್ರಂಟ್ & ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಪಡೆದಿದೆ. ನಿಸ್ಸಾನ್ ಮ್ಯಾಗ್ನೈಟ್, ಹ್ಯುಂಡೈ ವೆನ್ಯೂ, ರೆನಾಲ್ಟ್ ಕಿಗರ್, ಟಾಟಾ ನೆಕ್ಸಾನ್, ಕಿಯಾ ಸೋನೆಟ್, ಮಾರುತಿ ಸುಜುಕಿ ಬ್ರೆಝಾ ಕಾರುಗಳು ಎಕ್ಸ್‌ಯುವಿ300ಗೆ ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, December 24, 2023, 9:00 [IST]
English summary
Mahindra xuv300 get upto rs 1 30 lakh discount in december 7 lakh price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+