Train accidents: ಭಾರತದ ಇತಿಹಾಸದಲ್ಲೇ ಇಂದಿಗೂ ನಡುಕ ಹುಟ್ಟಿಸುವ ರೈಲು ಅಪಘಾತಗಳಿವು!
ರೈಲು ಅಪಘಾತಗಳು (Train accidents) ಸಂಭವಿಸಿದಾಗ, ಭಾರತದ ರೈಲ್ವೆ ಇಲಾಖೆಯು ಮಹತ್ವದ ಸವಾಲುಗಳನ್ನು ಎದುರಿಸಬೆಕಾಗುತ್ತದೆ. ಏಕೆಂದರೆ ಅತಿದೊಡ್ಡ ರೈಲ್ವೇ ಜಾಲವನ್ನು ಹೊಂದಿರುವ ಭಾರತವು ಒಂದು ಅಪಘಾತವಾದ್ರೆ ಇಡೀ ರೈಲುಗಳ ವೇಳಾಪಟ್ಟಿ ಏರುಪೇರಾಗುತ್ತದೆ. ಇಂತಹ ಸನ್ನಿವೇಶಗಳನ್ನು ಎದುರಿಸಿದ ಭಾರತದ ಭಯಾನಕ ರೈಲು ಅಪಘಾತಗಳನ್ನು ಇಲ್ಲಿ ನೋಡೋಣ.
ಬಿಹಾರ ರೈಲು ಅಪಘಾತ: ಜೂನ್ 6, 1981 ರಂದು, ಬಿಹಾರದ ಸಹರ್ಸಾ ಬಳಿ ನಡೆದ ರೈಲು ಅಪಘಾತದಲ್ಲಿ 500-800 ನಡುವಿನ ಸಾವುಗಳು ಸಂಭವಿಸಿದ್ದವು. ಪ್ರಯಾಣಿಕ ರೈಲು ಹಳಿತಪ್ಪಿ ಬಗ್ಮತಿ ನದಿಯಲ್ಲಿ ಮುಳುಗಿತ್ತು. ಒಟ್ಟು 800 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು. ಇದು ಭಾರತದ ಮತ್ತು ವಿಶ್ವದ ಅತ್ಯಂತ ಭಯಾನಕ ರೈಲು ಅಪಘಾತಗಳಲ್ಲಿ ಒಂದಾಗಿದೆ.

ಕೆಲವು ಸುದ್ದಿವಾಹಿನಿಗಳ ಪ್ರಕಾರ, ಚಂಡಮಾರುತವು ದುರಂತಕ್ಕೆ ಕಾರಣ ಎಂದು ವರದಿ ಮಾಡಿದ್ದವು. ಆದರೆ ಇತರರು ಹೇಳುವ ಕಾರಣವೆಂದರೆ ಹಠಾತ್ ಪ್ರವಾಹ, ಭಾರೀ ಮಳೆಯಿಂದಾಗಿ ಸೇತುವೆಯ ಬಳಿಗೆ ಬಂದಾಗ ರೈಲು ತ್ವರಿತ ಬ್ರೇಕ್ ಹಾಕಿದ್ದ ಕಾರಣ ರೈಲು ನದಿಗೆ ಧುಮುಕಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತದೆ.
ಕಾಳಿಂದಿ-ಪುರುಷೋತ್ತಮ್ ಎಕ್ಸ್‌ಪ್ರೆಸ್: ಆಗಸ್ಟ್ 20, 1995 ರಂದು, ದೆಹಲಿ ಮತ್ತು ಕಾನ್ಪುರ ನಡುವೆ ಚಲಿಸುವ ಪುರುಷೋತ್ತಮ್ ಎಕ್ಸ್‌ಪ್ರೆಸ್ ಉತ್ತರ ಪ್ರದೇಶದ ಫಿರೋಜಾಬಾದ್ ಬಳಿ ನಿಂತಿದ್ದ ಕಾಳಿಂದಿ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದು ಎರಡೂ ರೈಲುಗಳಲ್ಲಿದ್ದ ಸುಮಾರು 360 ಪ್ರಯಾಣಿಕರು ಸಾವನ್ನಪ್ಪಿದರು. ಪುರುಷೋತ್ತಮ್ ಎಕ್ಸ್ ಪ್ರೆಸ್ ಕಾಳಿಂದಿ ಎಕ್ಸ್ ಪ್ರೆಸ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ಅನಾಹುತ ಸಂಭವಿಸಿತ್ತು.

ಆಗಿನ ಮಾಧ್ಯಮ ವರದಿ ಪ್ರಕಾರ, ಮಾನವ ದೋಷದಿಂದ ಘಟನೆ ಸಂಭವಿಸಿದೆ. ಪ್ರಾಣಿಯೊಂದು ಸತ್ತ ಕಾರಣ ಕಾಳಿಂದಿ ಎಕ್ಸ್‌ಪ್ರೆಸ್ ರೈಲು ಹಳಿಯಲ್ಲಿ ನಿಂತಿತ್ತು. ಇದೇ ವೇಳೆ ಪುರುಷೋತ್ತಮ್ ಎಕ್ಸ್‌ಪ್ರೆಸ್‌ಗೆ ಅದೇ ಟ್ರ್ಯಾಕ್ ಬಳಸಲು ಅನುಮತಿ ಸಿಕ್ಕಿದ್ದು, ಪುರುಷೋತ್ತಮ್ ಎಕ್ಸ್ ಪ್ರೆಸ್ ಕಾಳಿಂದಿ ಎಕ್ಸ್ ಪ್ರೆಸ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ಅನಾಹುತ ಸಂಭವಿಸಿತ್ತು.
ಅವಧ್-ಅಸ್ಸಾಂ ಎಕ್ಸ್‌ಪ್ರೆಸ್ ಮತ್ತು ಬ್ರಹ್ಮಪುತ್ರ ಮೇಲ್: ಅವಧ್-ಅಸ್ಸಾಂ ಎಕ್ಸ್‌ಪ್ರೆಸ್ ಮತ್ತು ಬ್ರಹ್ಮಪುತ್ರ ಮೇಲ್ ಅವಧ್, ನಾರ್ತ್ ಫ್ರಾಂಟಿಯರ್ ರೈಲ್ವೆಯ ಕತಿಹಾರ್ ವಿಭಾಗದಲ್ಲಿ ಡಿಕ್ಕಿ ಹೊಡೆದು 268 ಜನರು ಸಾವನ್ನಪ್ಪಿದರು. ಜೊತೆಗೆ 359 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸಿಗ್ನಲ್ ವೈಫಲ್ಯದಿಂದಾಗಿ, ಬ್ರಹ್ಮಪುತ್ರ ಮೇಲ್ ಅದೇ ಟ್ರ್ಯಾಕ್‌ನಲ್ಲಿ ಮುಂದುವರಿಯಲು ಹಸಿರು ನಿಶಾನೆ ಸಿಕ್ಕ ಪರಿಣಾಮ ದುರಂತ ಸಂಭವಿಸಿತ್ತು.

ಬ್ರಹ್ಮಪುತ್ರ ಮೇಲ್ ರೈಲು ಭಾರತೀಯ ಸೈನಿಕರನ್ನು ಅಸ್ಸಾಂನಿಂದ ಗಡಿಗೆ ಸಾಗಿಸುತ್ತಿದ್ದ ಸಮಯದಲ್ಲಿ, ಅವಧ್ ಅಸ್ಸಾಂ ಎಕ್ಸ್‌ಪ್ರೆಸ್ ಗುವಾಹಟಿಗೆ ಹೊರಡಲು ಗುಸ್ಲಾರ್ ಬಳಿ ನಿಂತಿತ್ತು. ಸಿಗ್ನಲ್ ವೈಫಲ್ಯದಿಂದಾಗಿ, ಬ್ರಹ್ಮಪುತ್ರ ಮೇಲ್ ಅದೇ ಟ್ರ್ಯಾಕ್‌ನಲ್ಲಿ ಮುಂದುವರಿಯಲು ಹಸಿರು ನಿಶಾನೆ ಸಿಕ್ಕಿದೆ. ಇದರ ಪರಿಣಾಮವಾಗಿ, ಅವಧ್ ಅಸ್ಸಾಂ ಎಕ್ಸ್‌ಪ್ರೆಸ್‌ಗೆ ಮುಂಭಾಗದಿಂದ ಡಿಕ್ಕಿ ಹೊಡೆದು ದುರಂತ ಸಂಭವಿಸಿತ್ತು.
ಇತರ ರೈಲು ಅಪಘಾತಗಳು: ಉನ್ನತ ಮಟ್ಟದ ಸುರಕ್ಷತಾ ಪರಿಶೀಲನಾ ಸಮಿತಿಯ 2012 ರ ವರದಿಯ ಪ್ರಕಾರ, 2007-08 ಮತ್ತು ಅಕ್ಟೋಬರ್ 2011 ರ ನಡುವೆ ಭಾರತದಲ್ಲಿ ರೈಲ್ವೆ ಅಪಘಾತಗಳಲ್ಲಿ 1,019 ಜನರು ಸಾವನ್ನಪ್ಪಿದ್ದಾರೆ. 2,118 ಜನರು ಗಾಯಗೊಂಡಿದ್ದಾರೆ. ಇದಲ್ಲದೆ, 1,600 ರೈಲ್ವೆ ನೌಕರರು ಪ್ರಾಣ ಕಳೆದುಕೊಂಡಿದ್ದು, 8,700 ಜನರು ಗಾಯಗೊಂಡಿದ್ದಾರೆ.


Click it and Unblock the Notifications