60 ಲೀಟರ್ ಸಾಮರ್ಥ್ಯದ ಬಸ್‌ಗೆ 61 ಲೀ. ಡೀಸಲ್... ಬಂಕ್ ಸಿಬ್ಬಂದಿಗೆ ದೆವ್ವ ಬಿಡಿಸಿದ ಚಾಲಕ

ಪೆಟ್ರೋಲ್ ಬಂಕ್‌ಗಳಲ್ಲಿ ನಡೆಯುವ ಮೋಸದ ಬಗ್ಗೆ ಆಗ್ಗಾಗೆ ಕೇಳುತ್ತಲೇ ಇರುತ್ತೇವೆ. ನಮ್ಮಲ್ಲಿ ಬಹುತೇಕರು ಇದರ ಬಗ್ಗೆ ಅಷ್ಟಾಗಿ ಯೋಚಿಸದೆ ವಾಹನಗಳಿಗೆ ಇಂಧನ ತುಂಬಿಸಿಕೊಂಡು ಹೋಗಿಬಿಡುತ್ತಾರೆ. ಆದ್ರೆ ಕೆಲವೊಮ್ಮೆ ಫುಲ್‌ಟ್ಯಾಂಕ್‌ ಮಾಡಿಸಿದಾಗ ಬಂಕ್ ಸಿಬ್ಬಂದಿಯ ಮೋಸ ಬಯಾಲಾಗುತ್ತದೆ. ಅಂತಹದ್ದೆ ಘಟನೆ ಈಗ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.

ಯಾರೇ ಆಗಲಿ ಫುಲ್‌ಟ್ಯಾಂಕ್ ಮಾಡಿಸುವಾಗ ವಾಹನವನ್ನು ಸಂಪೂರ್ಣ ನಿಲ್ಲುವ ತನಕ ಕಾದು ನಂತರ ಬಂಕ್‌ಗೆ ತಳ್ಳಿಕೊಂಡು ಹೋಗಿ ಇಂಧನ ತುಂಬುವುದಿಲ್ಲ. ಅಂತಹ ಮೂರ್ಖತನವೂ ಯಾರಿಗೂ ಇರೋದಿಲ್ಲ. ಕೆಲವೊಮ್ಮೆ ಅಚಾನಕ್ಕಾಗಿ ವಾಹನ ನಿಂತರೆ ಬಾಟಲಿಯಲ್ಲಿ ತುಂಬಿಸುವುದೋ ಅಥವಾ ಬಂಕ್ ಪಕ್ಕದಲ್ಲೇ ಇದ್ದರೇ ತಳ್ಳಿಕೊಂಡು ಹೋಗುವುದನ್ನು ಮಾಡುತ್ತಾರೆ.

malfunction-refueling-bus-tamil-nadu-dindigul

ಹೇಗೇ ಆಗಲಿ ಬಂಕ್‌ಗೆ ಹೋಗುವ ಮುನ್ನ ವಾಹನದಲ್ಲಿ ಕನಿಷ್ಟ ಅರ್ಧ ಟ್ಯಾಂಕಿನಷ್ಟು ಇಂಧನ ಇದ್ದೇ ಇರುತ್ತದೆ. ಹೀಗಿರುವಾಗ ವಾಹನಕ್ಕೆ ನೀಡಿದ ಟ್ಯಾಂಕ್ ಕೆಪಾಸಿಟಿಗಿಂತಲೂ ಹೆಚ್ಚಾಗಿ ಇಂಧನ ತುಂಬಿದ್ರೆ ಏನಂತೀರಿ? ಹೌದು ಇಂತಹ ಘಟನೆ ತಮಿಳುನಾಡಿನ ದಿಂಡಿಗಲ್‌ನಲ್ಲಿನ ಪೆಟ್ರೋಲ್ ಬಂಕ್ ವೊಂದರಲ್ಲಿ ನಡೆದಿದೆ. ಡೀಸೆಲ್ ತುಂಬಿಸುವಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ವಾಹನ ಮಾಲೀಕ ಬಂಕ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದರು.

ಪಾಂಡಿ ಎಂಬಾತ ತಮ್ಮ ಮಿನಿ ಬಸ್‌ಗೆ ಡೀಸೆಲ್ ತುಂಬಿಸಲು ದಿಂಡುಗಲ್ ಬಳಿಯ ಪಳನಿ ಚತುಷ್ಪಥ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‌ಗೆ ಹೋಗಿದ್ದರು. ಈ ವೇಳೆ 60 ಲೀಟರ್ 970 ಎಂಎಲ್ ಡಿಸೇಲ್ ಹಾಕಲಾಗಿತ್ತು ಎನ್ನಲಾಗಿದೆ. ಆದ್ರೆ ಡೀಸೆಲ್ ಟ್ಯಾಂಕ್ ಸಾಮರ್ಥ್ಯ 60 ಲೀಟರ್ ಇದ್ದು, 60 ಲೀಟರ್ ಗಿಂತ ಹೆಚ್ಚು ಡೀಸೆಲ್ ಹಾಕಿದ್ದು ಹೇಗೆ ಎಂದು ವಾಗ್ವಾದಕ್ಕಿಳಿದಿದ್ದಾರೆ.

malfunction-refueling-bus-tamil-nadu-dindigul

ಪಟ್ಟು ಬಿಡಿದ ಚಾಲಕ ತನ್ನ ಇಂಧನ ಟ್ಯಾಂಕ್‌ ಅನ್ನು ಬಿಚ್ಚಿಸಿ ಪರಿಶೀಲಿಸಲು ಬಂಕ್ ಸಿಬ್ಬಂದಿಗೆ ತಾಕೀತು ಮಾಡಿದ್ದಾನೆ. ಅದರಂತೆ ಡೀಸೆಲ್ ಟ್ಯಾಂಕ್ ಕಳಚಿ ಬಂಕ್ ಸಿಬ್ಬಂದಿ ಡೀಸೆಲ್ ಅಳತೆ ಮಾಡಿದ್ದಾರೆ. ಆಗ ವಾಹನದಲ್ಲಿ 60 ಲೀಟರ್ ಡೀಸೆಲ್ ಇತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಡೀಸೆಲ್ ತುಂಬಿಸುವಲ್ಲಿ ಅವ್ಯವಹಾರ ನಡೆದಿದೆ ಎಂದು ವಾಹನ ಮಾಲೀಕ ಆರೋಪಿಸಿದ್ದಾನೆ.

ಆದರೆ ಇಲ್ಲಿ ಬಂಕ್ ಸಿಬ್ಬಂದಿಯ ತಪ್ಪಿಲ್ಲ ಎನ್ನಲಾಗಿದೆ. ಒಂದು ಲೀಟರ್ ಬಾಟಲಿಗೆ ಸಮನಾಗಿ ಡೀಸಲ್ ತುಂಬಿದ್ರೆ ಮೀಟರ್‌ನಲ್ಲಿ ಸರಿಯಾಗಿ ತೋರುತ್ತಿದೆ. ಆದ್ರೆ ಬಸ್‌ ಟ್ಯಾಂಕ್‌ಗೆ ಮಾತ್ರ ಹೀಗೆಕೆ ಆಗಿದೆ ಎಂಬುದು ಅವರಿಗೆ ಗೊತ್ತಾಗಿಲ್ಲ. ವಾಹನ ಚಾಲಕರೆ ಯಾವಾಗಲು ವಾಹನಗಳ ಹೊರಾಂಗಣ ಮಾತ್ರವಲ್ಲ, ಅದರ ಒಳ ಭಾಗಗಳ ಬಗ್ಗೆಯು ತಿಳಿದಿರಲಿ.

malfunction-refueling-bus-tamil-nadu-dindigul

ಸಾಮಾನ್ಯವಾಗಿ ಬಂಕ್‌ಗಳು ಅಷ್ಟು ಸುಲಭವಾಗಿ ಮೋಸ ಮಾಡೋದಿಲ್ಲ. ಪ್ರತಿ ಬಂಕ್‌ನ ಮೇಲೆ ಅಧಿಕಾರಿಗಳ ಹದ್ದಿನ ಕಣ್ಣಿರುತ್ತದೆ. ನಮ್ಮ ವಾಹನಗಳ ಇಂಧನ ಟ್ಯಾಂಕ್‌ಗಳು ಡ್ರೈ ಆದಾಗ ಇಂತಹ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಇಲ್ಲಿ ಕೂಡ ಬಸ್‌ನ ಇಂಧನ ಟ್ಯಾಂಕ್ ಡ್ರೈ ಆಗಿರಬಹುದು, ಮುಖ್ಯವಾಗಿ ವಾಹನಗಳ ಎಂಜಿನ್‌ಗೆ ಪಂಪ್ ಆಗುವ ಪ್ರಕ್ರಿಯೆ ಕುರಿತು ನಿಮಗೆ ತಿಳಿದಿರಲಿ.

ವಾಹನದ ಟ್ಯಾಂಕ್ ಫುಲ್ ಡ್ರೈ ಆದಾಗ ಟ್ಯಾಂಕ್‌ನಿಂದ ಎಂಜಿನ್‌ ವೆರೆಗೆ ಸಂಪರ್ಕಿಸುವ ಟ್ಯೂಬ್‌ಗಳು ಹಾಗೂ ಎಂಜಿನ್ ಕಂಬಷನ್‌ವರೆಗೆ ಬೇಕಾದ ಇಂಧನವೇ ಕೆಲವೊಮ್ಮೆ ಅರ್ಧದಿಂದ ಒಂದು ಲೀ.ವರೆಗೆ ಹಿಡಿಯುತ್ತದೆ. ಕೆಲವೊಮ್ಮೆ ಇಂಧನ ಟ್ಯಾಂಕ್ ಅನ್ನು ಫುಲ್‌ ಮಾಡಿಸಿದಾಗ ಆ ಒತ್ತಡಕ್ಕೆ ಇಂಧನವು ಟ್ಯೂಬ್‌ಗಳ ಒಳನುಗ್ಗಿ ಹೆಚ್ಚುವರಿ ಡೀಸಲ್ ತುಂಬಿರುವಂತೆ ಅನ್ನಿಸುತ್ತದೆ.

ಹಾಗಾಗಿ ದೊಡ್ಡ ವಾಹನಗಳನ್ನು ಫುಲ್‌ಟ್ಯಾಂಕ್ ಮಾಡಿಸಿದಾಗ ಅರ್ಧ ಅಥವಾ ಒಂದು ಲೀ. ವ್ಯತ್ಯಯ ಬರುತ್ತದೆ. ಇದಕ್ಕೆ ನಾವು ಚಿಂತಿಸುವ ಅಗತ್ಯವಿಲ್ಲ. ಆದ್ರೆ ಕೆಲವೊಮ್ಮೆ ಎರಡು, ಮೂರು ಲೀ.ಗಳಷ್ಟು ವ್ಯತ್ಯಯ ಬಂದರೆ ಕಂಡಿತ ಅಲ್ಲಿ ಮೋಸವಾಗಿದೆ ಎಂದರ್ಧ. ಈ ಸುದ್ದಿಯ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ. ಇನ್ನೂ ಹೆಚ್ಚಿನ ಆಟೋ ಸುದ್ದಿಗಳಿಗಾಗಿ ಡ್ರೈವ್‌ಸ್ಪಾರ್ಕ್ ಅನ್ನು ಫಾಲೋ ಮಾಡಿ.

Article Published On: Friday, July 14, 2023, 8:30 [IST]
English summary
Malfunction refueling bus tamil nadu dindigul
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+