ತುಕ್ಕು ಹಿಡಿದಿದ್ದ ಮಾರುತಿ ಆಲ್ಟೋ ಮಾಡಿಫೈ ಕಂಡು ಮಾಲೀಕನೇ ಒಂದು ಕ್ಷಣ ದಂಗು!

ಕಾರುಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ನಾವು ಎಷ್ಟೋ ಮಂದಿಯನ್ನು ನೋಡಿರುತ್ತೇವೆ ಸುಮಾರು ವರ್ಷಗಳ ಹಳೆಯ ಕಾರುಗಳನ್ನು ಮಾರದೇ ಅದನ್ನೇ ಮಾಡಿಫೈಗೊಳಿಸಿ ಬಳಸುತ್ತಿರುತ್ತಾರೆ. ಹಾಗೆಯೇ ಇಲ್ಲೊಂದು ಕುಟುಂಬ ತಮ್ಮ ಹಳೆಯ ಮಾರುತಿ ಆಲ್ಟೋವನ್ನು ಮಾರಲು ಇಷ್ಟವಾಗದೇ ಮಾಡಿಫೈಗೊಳಿಸಿದ್ದು, ಯಾವುದೇ ಸ್ಪೋರ್ಟ್ ಕಾರಿಗೂ ಕಡಿಮೆಯಿಲ್ಲ ಎಂಬಂತೆ ಕಾಣುತ್ತಿದೆ.

ನಾವು ಸಾಮಾನ್ಯವಾಗಿ ಆಟೋಮೊಬೈಲ್ ಕುರಿತ ಸುದ್ದಿಗಳನ್ನು ಓದುಗರಿಗೆ ನೀಡುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಸದಾ ಇಂತಹ ಸುದ್ದಿಗಳ ಕುರಿತು ಹುಡುಕಾಟದಲ್ಲಿರುತ್ತೇವೆ. ಇದೇ ವೇಳೆ ನಮಗೆ ಶೋರೂಮ್ ಗುಣಮಟ್ಟಕ್ಕಿಂತಲೂ ಉತ್ತಮವಾಗಿ Maruti Alto modification ವಿಡಿಯೋ ಕಾಣಿಸಿಕೊಂಡಿದೆ. ಇದನ್ನು ಬ್ರೊಟೊಮಿಟ್ವಿಯು ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಂಡಿದೆ. ಈ ಮಾಡಿಫೈನಲ್ಲಿ ಅತ್ಯಂತ ವಿಶಿಷವೆಂದರೆ ಇಟಾಲಿಯನ್ ಸೂಪರ್‌ಕಾರ್ ಆದ ಲ್ಯಾಂಬೋರ್ಘಿನಿಯ ವರ್ಡೆ ಎರ್ಮೆಸ್ ಗ್ರೀನ್ ಪೇಂಟ್ ಶೇಡ್ ಅನ್ನು ಆಲ್ಟೋಗೆ ನೀಡಲಾಗಿದೆ.

The owner was shocked to see a rusty Maruti Alto modification

ವಿಷಯಕ್ಕೆ ಬಂದರೆ 2010 ರ ಮಾರುತಿ ಸುಜುಕಿ ಆಲ್ಟೊವನ್ನು ಮಾಲೀಕರು ಮಾಡಿಫೈಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಮಾರುತಿ ಸುಜುಕಿ ಬಿಡುಗಡೆ ಮಾಡಿರುವ ಹೊಸ ಮಾರುತಿ ಆಲ್ಟೋ k10 ಗಿಂತಲೂ ಮಾಡಿಫೈಗೊಂಡ ಕಾರು ಮೂರು ಪಟ್ಟು ಆಕರ್ಷಕವಾಗಿ ಕಾಣುತ್ತಿದೆ. ಮಾಡಿಫೈಗೊಳಿಸುವ ವೇಳೆ ವಿಡಿಯೋದಲ್ಲಿ ನಾವು ಸ್ಪಷ್ಟವಾಗಿ ಕಾಣಬಹುದು, ಕಾರು ಬಹತೇಕ ಜಾಗಗಳಲ್ಲಿ ತುಕ್ಕು ಹಿಡಿದಿದೆ. ಎಲ್ಲಾ ಕೆಲಸ ಪೂರ್ಣಗೊಂಡ ಬಳಿಕ ಮಾಲೀಕ ನೋಡಿ ಒಂದು ಕ್ಷಣ ದಂಗಾಗಿದ್ದಾರೆ.

ಕಾರಿನ್ನು ಸಂಪೂರ್ಣವಾಗಿ ಬಿಡಿ ಭಾಗಗಳಾಗಿ ಒಂದೊಂದನದನು ಬಿಡಿಸಿ, ಕಾರಿನ ಮುಂಭಾಗದ ಬಂಪರ್, ಡೋರ್ ಕಾರ್ಡ್‌ಗಳು, ಕಿಟಕಿಯ ಗ್ಲಾಸ್ ಗಳನ್ನು ಸಂಪೂರ್ಣ ಕಳಚಿದ್ದಾರೆ. ನಂತರ ತಂತ್ರಜ್ಞರು ಡೆಂಟ್ ತೆಗೆಯುವ ಪ್ರಕ್ರಿಯೆಯೊಂದಿಗೆ ಕಾರಿನ ಬಾನೆಟ್, ಬಾಗಿಲುಗಳು ಮತ್ತು ಇತರ ಪ್ಯಾನಲ್‌ಗಳ ಮೇಲಿನ ಎಲ್ಲಾ ಡೆಂಟ್‌ಗಳನ್ನು ಸರಿಪಡಿಸಲು ಸುತ್ತಿಗೆ ಮತ್ತು ಡೆಂಟ್ ಪುಲ್ಲಿಂಗ್ ಯಂತ್ರಗಳನ್ನು ಬಳಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲದೇ ಪ್ರತಿಯೊಂದನ್ನು ಜಾಕರೂಕರಾಗಿ ಪರಿಶೀಲಿಸಿ ಕೆಲಸ ನಿರ್ವಹಿಸಲಾಗಿದೆ.

The owner was shocked to see a rusty Maruti Alto modification

ಕಾರಿಗೆ ಖಂಡಿತವಾಗಿಯೂ ಸ್ವಲ್ಪ ತುಕ್ಕು ಇರುತ್ತದೆ ಎಂದು ಅವರು ಮೊದಲೇ ನಿರೀಕ್ಷಿಸಿದ್ದರು. ಆದರೆ ಅದು ಎಷ್ಟು ಪ್ರಮಾಣದಲ್ಲಿ ತುಕ್ಕು ಹಿಡಿದಿದೆ ಎಂದು ತಿಳಿದಿರಲಿಲ್ಲ. ತುಕ್ಕು ಹಿಡಿದ ಕಾರುಗಳೊಂದಿಗೆ ಕೆಲಸ ಮಾಡುವುದು ತುಂಬಾ ಕಷ್ಟ. ಏಕೆಂದರೆ ಬಣ್ಣ ಬಳಿಯುವಾಗ ಹಾಗೂ ಬಳಿದ ಬಳಿಕ ಬಣ್ಣದ ಗುಣಮಟ್ಟವನ್ನು ಅಡ್ಡಿಪಡಿಸಬಹುದು. ಅದೃಷ್ಟವಶಾತ್ ಕಾರಿಗೆ ಕೆಲವೆಡೆ ಅಷ್ಟೇ ತುಕ್ಕು ಹಿಡಿದಿತ್ತು. ಇದರ ಹೊರತಾಗಿ ಕಾರನ್ನು ಮುಂದಿನ ಹಂತಕ್ಕೆ ಕೊಂಡಿಯ್ದಿದ್ದಾರೆ.

ಕಾರಿನ ಇಂಟೀರಿಯರ್ ವಿಷಯಕ್ಕೆ ಬಂದರೆ ಅದೇ ಬಣ್ಣದಲ್ಲಿ ಚಿತ್ರಿಸಲು ಮಾಲೀಕ ಕೇಳಿರುವುದಾಗಿ ವಿಡಿಯೋದಲ್ಲಿ ಮಾಡಿಫೈಗೊಳಿಸಿದ ವ್ಯಕ್ತಿ ತಿಳಿಸಿದ್ದಾರೆ. ಇಂಟೀರಿಯರ್ ಪೇಂಟ್ ಅನ್ನು ಅನುಸರಿಸಿ, ಕಾರನ್ನು ನಂತರ ಬಾಂಡೋ ಮತ್ತು ಶೈನಿಂಗ್ ಹಾಕುವ ಪುಟ್ಟಿಯಿಂದ ಲೇಪಿಸಲಾಗಿದೆ. ಇದರಿಂದಾಗಿ ಬಣ್ಣವನ್ನು ಅತ್ಯಂತ ಪರಿಪೂರ್ಣತೆಯಿಂದ ಬಳಿಯಬಹುದು. ಇದಾದ ಬಳಿಕ ಕೊನೆಯ ಹಂತವಾಗಿ ಕಾರು ಪೇಂಟ್ ಬೂತ್‌ಗೆ ಪ್ರವೇಶಿಸಿ ವರ್ಡೆ ಎರ್ಮೆಸ್ ಗ್ರೀನ್ ಬಣ್ಣವನ್ನು ತನ್ನ ಮೈಮೇಲೆ ಬಳಿಸಿಕೊಂಡು ಹೊರಬಂದಿದೆ.

ಎಲ್ಲಾ ಪೇಂಟ್ ಕೆಲಸ ಮುಗಿದ ಬಳಿಕ ಕಾರನ್ನು ಸಂಪೂರ್ಣವಾಗಿ ಮರುಜೋಡಣೆ ಮಾಡಿದ್ದಾರೆ. ಬಳಿಕ ಅದರ ಹೊಳಪನ್ನು ಹೆಚ್ಚಿಸಲು ಬಫ್ ಮತ್ತು ಪಾಲಿಷ್ ಅನ್ನು ಮಾಡಿದ್ದಾರೆ. ಒಟ್ಟಾರೆ ಕೆಲದ ಮುಗಿದ ಬಳಿಕ ಕಾರಿನ ಮಾಲೀಕರು ಅವರ ಕುಟುಂಬದೊಂದಿಗೆ ಅಂಗಡಿಗೆ ಭೇಟಿ ನೀಡಿದ್ದು, ಕಾರಿನ ಒಟ್ಟಾರೆ ಬದಲಾವಣೆ ಕಂಡು ಖುಷಿಯನ್ನು ವ್ಯಕ್ತಿಪಡಿಸಿದ್ದಾರೆ. ಹೊಸ ಕಾರುಗಳನ್ನು ಡೆಲಿವರಿ ಪಡೆಯುವ ರೀತಿಯಲ್ಲಿ ಮಾಡಿಫೈಗೊಂಡ ಆಲ್ಟೋವನ್ನು ಕೂಡ ಡೆಲಿವರಿ ಪಡೆದಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Sunday, April 23, 2023, 11:30 [IST]
English summary
Maruti alto modification lamborghini verde ermes green paint
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+