10 ಲಕ್ಷದೊಳಗಿನ ಪವರ್ ಫುಲ್ ಕಾರು.. ರಾಜಿಯಿಲ್ಲದ ಫೀಚರ್ಸ್.. ಅದಕ್ಕೇ ಜನ ಮುಗಿಬಿದ್ದು ಖರೀದಿಸುತ್ತಾರೆ!
ಮಾರುತಿ ಸುಜುಕಿ ಸದ್ಯ ದೇಶದ ಕಾರು ಮಾರಾಟದಲ್ಲಿ ನಂ.1 ಸ್ಥಾನದಲ್ಲಿದೆ. ಇವರ ಕಾರುಗಳ ನಿರ್ಮಾಣ ಗುಣಮಟ್ಟವನ್ನು ಹಲವರು ಒಪ್ಪೋದಿಲ್ಲವಾದ್ರೂ ಬಜೆಟ್ ಕಾರುಗಳು ಎಂದಾಕ್ಷಣ ಮಧ್ಯಮ ವರ್ಗದ ಜನರಿಗೆ ಮಾರುತಿ ಕಾರುಗಳೇ ಮೊದಲ ಆಯ್ಕೆಯಾಗಿಬಿಟ್ಟಿದೆ. ನಿರ್ಮಾಣ ಗುಣಮಟ್ಟವನ್ನು ಹೊರತುಪಡಿಸಿ ಮಿಕ್ಕೆಲ್ಲಾ ವಿಷಯಗಳಲ್ಲೂ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡುತ್ತಿದೆ.
ವಿಷಯಕ್ಕೆ ಬಂದರೆ ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಉದ್ಯೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಹೆಚ್ಚುತ್ತಿರುವ ಖರೀದಿ ಸಾಮರ್ಥ್ಯದಿಂದ ಮಧ್ಯಮ ವರ್ಗದ ಜನರು ಕಾರುಗಳತ್ತ ಮುಖ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ದೇಶದಲ್ಲಿ ಬಜೆಟ್ ಕಾಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಈ ಬದಲಾವಣೆಯನ್ನು ಕಂಡ ಕಾರು ಕಂಪನಿಗಳು ರೂ.10 ಲಕ್ಷಕ್ಕಿಂತ ಕಡಿಮೆ ಬಜೆಟ್ ಕಾರುಗಳನ್ನು ಮಾರುಕಟ್ಟೆಗೆ ತಂದಿವೆ.

ನಿಮ್ಮ ಬಜೆಟ್ 10 ಲಕ್ಷಕ್ಕಿಂತ ಕಡಿಮೆಯಿದ್ದರೆ, ಗುಣಮಟ್ಟವೊಂದನ್ನು ಹೊರತುಪಡಿಸಿ ಉತ್ತಮ ಎಂಜಿನ್, ಪವರ್, ಫೀಚರ್ಸ್ ಒಳಗೊಂಡಿರುವ ಬಜೆಟ್ ಕಾರಿನ ಬಗ್ಗೆ ಇಲ್ಲಿ ಹೇಳಲೇಬೇಕು. ಅದೇ 'ಮಾರುತಿ ಸುಜುಕಿ ಬ್ರೆಝಾ' ದುಡಿಯುವ ಜನರಿಗೆ ಇದು ಪರಿಪೂರ್ಣ SUV ಆಗಿದೆ. ದೇಶದ ಅತ್ಯಧಿಕ ಮಾರಾಟ ಕಾಣುವ ಎಸ್‌ಯುವಿ ಕೂಡ ಹೌದು.
ಮಾರುತಿ ಬ್ರೆಝಾ ಬೆಲೆ ರೂ. 8.29 ಲಕ್ಷ ರೂ. ನಿಂದ ಆರಂಭವಾಗಿ ಇದರ ಟಾಪ್ ಎಂಡ್ ಮಾಡೆಲ್ ಬೆಲೆ 13.98 ಲಕ್ಷ (ಎಕ್ಸ್ ಶೋ ರೂಂ) ವರೆಗೆ ಹೋಗುತ್ತದೆ. ಇನ್ನು ಮಾರುಕಟ್ಟೆಯಲ್ಲಿ ಈ ಬ್ರೆಝಾಗೆ ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಮಹೀಂದ್ರಾ XUV300, ಟಾಟಾ ನೆಕ್ಸನ್, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್‌ನಂತಹ ಕಾರುಗಳೊಂದಿಗೆ ಸ್ಪರ್ಧಿಸುತ್ತಿದೆ.

1.5-ಲೀಟರ್ ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಈ ಮಾರುತಿ ಬ್ರೆಝಾ 103 bhp ಪವರ್ ಮತ್ತು 137 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಕಂಪನಿಯು ಮ್ಯಾನುವಲ್ ಟ್ರಾನ್ಸ್‌ಮಿಷನ್‌ನಲ್ಲಿ ಸಿಎನ್‌ಜಿಯೊಂದಿಗೆ ಸಹ ನೀಡುತ್ತದೆ.
ಮೈಲೇಜ್ ವಿಚಾರದಲ್ಲೂ ಬ್ರೆಝಾ ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ. ಕಂಪನಿಯ ಪ್ರಕಾರ, ಬ್ರೆಝಾದ ಆಟೋಮ್ಯಾಟಿಕ್ ರೂಪಾಂತರವು 19.8kmpl ಮೈಲೇಜ್ ಅನ್ನು ನೀಡುತ್ತದೆ. ಮಾರುತಿ ಬ್ರೆಝಾ CNG ಆವೃತ್ತಿಯಲ್ಲಿ 25.51km/kg ಮೈಲೇಜ್ ಪಡೆಯಬಹುದು. ಇನ್ನು ವೈಶಿಷ್ಡ್ಯಗಳ ವಿಷಯದಲ್ಲೂ ಕಮ್ಮಿಯಿಲ್ಲ, ಇತ್ತೀಚಿನ ಆಧುನಿಕ ಫೀಚರ್‌ಗಳನ್ನು ನೀಡಲಾಗುತ್ತಿದೆ.

ಮಾರುತಿ ಬ್ರೆಝಾ ತನ್ನ ವಿಭಾಗದಲ್ಲಿ ಹೆಚ್ಚು ನವೀಕರಿಸಿದ ವೈಶಿಷ್ಟ್ಯಗಳನ್ನು ಪಡಡೆಯುತ್ತಿದೆ. 9-ಇಂಚಿನ ಸ್ಮಾರ್ಟ್-ಪ್ರೊ ಪ್ಲಸ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ಪ್ಲೇ ಸಂಪರ್ಕ, 4 ಸ್ಪೀಕರ್ ಸೌಂಡ್ ಸಿಸ್ಟಮ್, 360 ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಫೋನ್ ಚಾರ್ಜರ್, ಸಿಂಗಲ್-ಪೇನ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್ ಮುಂತಾದ ಹಲವು ವೈಶಿಷ್ಟ್ಯಗಳು ಸಹ ಲಭ್ಯವಿದೆ.
ಹಿಂಬದಿಯ ಆಸನಕ್ಕೂ ಎಸಿ ವೆಂಟ್‌ಗಳನ್ನು ನೀಡುವ ಮೂಲಕ ಪ್ರೀಮಿಯಂ ಅನ್ನು ಹೆಚ್ಚಿಸಿದೆ. ಕಂಪನಿಯು ಸುಜುಕಿ ಕನೆಕ್ಟ್ ವೈಶಿಷ್ಟ್ಯಗಳ ಸೂಟ್ ಅನ್ನು ಸಹ ನೀಡುತ್ತದೆ. ಪ್ಯಾಡಲ್ ಶಿಫ್ಟರ್‌ಗಳು (ಆಟೋಮ್ಯಾಟಿಕ್ ಟ್ರಿಮ್), ಹೆಡ್-ಅಪ್ ಡಿಸ್ಪ್ಲೇಯಂತಹ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲಾದ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಇದು ಮೊದಲ SUV ಆಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications