ಬಹು ಬೇಡಿಕೆ ಸೃಷ್ಟಿ: ಮಾರುತಿ ಸುಜುಕಿ ಈ ಕಾರುಗಳ ವಿತರಣೆ ಪಡೆಯಲು 6 ತಿಂಗಳು ಕಾಯಲೇಬೇಕು
ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಮಾರುತಿ ಸುಜುಕಿ, ನೆಕ್ಸಾ (Nexa) ಡೀಲರ್ಶಿಪ್ ಮೂಲಕ ಮಾರಾಟ ಮಾಡುವ ಕೆಲವು ಪ್ರೀಮಿಯಂ ಕಾರು ಮಾದರಿಗಳ ವಿತರಣೆ ಪಡೆಯಲು ಕನಿಷ್ಠವೆಂದರೂ 4-26 ವಾರಗಳು ಬೇಕಾಗುತ್ತದೆ. ಅವುಗಳಲ್ಲಿ ಹೆಚ್ಚಿನ ಬೇಡಿಕೆಯಲ್ಲಿರುವ ಗ್ರ್ಯಾಂಡ್ ವಿಟಾರಾ ಎಸ್‌ಯುವಿಗಾಗಿ ಗ್ರಾಹಕರು ಹೆಚ್ಚಿನ ಸಮಯ ಕಾಯಲೇಬೇಕು.
ಮಾರುತಿ ಸುಜುಕಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುವ ಬಲೆನೊ ಕಾರಿನ ವಿವಿಧ ರೂಪಾಂತರಗಳನ್ನು ವಿತರಣೆ ಪಡೆಯಲು ಕನಿಷ್ಠ 4 ರಿಂದ 6 ವಾರಗಳು ಕಾಯಬೇಕು. ಈ ಕಾರು, ರೂ.6.56 ಲಕ್ಷದಿಂದ ರೂ.9.83 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯಲಿದೆ. ಇದು 1.2 ಲೀಟರ್ ಡುಯಲ್ ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 90 PS ಪವರ್ ಹಾಗೂ 113 Nm ಪೀಕ್ ಟಾರ್ಕ್, ಸಿಎನ್‌ಜಿ ಮಾದರಿ 77.49 PS ಪವರ್, 98.5 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಈ ಕಾರು, 22.35 - 22.94 kmpl ಮೈಲೇಜ್ ನೀಡಲಿದ್ದು, 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಹಾಗೂ ಕೀಲೆಸ್ ಎಂಟ್ರಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್ ಬಾಗ್ಸ್, EBD (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಪಡೆದಿದೆ.
ಮತ್ತೊಂದು ಬಹು ಬೇಡಿಕೆಯ ಕಾರಾಗಿರುವ ಮಾರುತಿ ಸುಜುಕಿಯ XL6ನ ಆಲ್ಫಾ ಮತ್ತು ಆಲ್ಫಾ ಪ್ಲಸ್ ಮ್ಯಾನುವಲ್ ರೂಪಾಂತರಗಳನ್ನು ಇವತ್ತು ಬುಕಿಂಗ್ ಮಾಡಿದರೂ 6 ರಿಂದ 8 ವಾರಗಳ ಬಳಿಕ ನೀವು ವಿತರಣೆ ಪಡೆಯಲಿದ್ದೀರಿ. ಝೀಟಾ ಸಿಎನ್‌ಜಿ ರೂಪಾಂತರಕ್ಕೆ 24 - 26 ವಾರ ಕಾಯಲೇಬೇಕು. ಝೀಟಾ ಆಲ್ಫಾ ಮತ್ತು ಆಲ್ಫಾ ಪ್ಲಸ್ ಆಟೋಮೆಟಿಕ್ ರೂಪಾಂತರಗಳು 16 ರಿಂದ 18 ವಾರಗಳ ನಂತರ, ನಿಮ್ಮ ಮನೆ ಸೇರಲಿದೆ.
ಮಾರುತಿ ಸುಜುಕಿ XL6 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 103 PS ಗರಿಷ್ಠ ಪವರ್ ಹಾಗೂ 137 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಅಥವಾ 6 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಸಿಎನ್‌ಜಿ ಮಾದರಿಯು 87.83 PS ಪವರ್ ಹಾಗೂ 121.5 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, ರೂ.11.41 ಲಕ್ಷದಿಂದ ರೂ.14.67 ಲಕ್ಷ ಬೆಲೆಯಲ್ಲಿ ದೊರೆಯಲಿದೆ. ಜೊತೆಗೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಮಾರುತಿ ಸುಜುಕಿ ಸಿಯಾಜ್ ಕಾರು, ಸಿಗ್ಮಾ, ಡೆಲ್ಟಾ, ಝೀಟಾ ಹಾಗೂ ಆಲ್ಫಾ ರೂಪಾಂತರಗಳಲ್ಲಿ ಸಿಗಲಿದ್ದು, ಕನಿಷ್ಠವೆಂದರೂ 8 ರಿಂದ 10 ವಾರಗಳು ಕಾಯುವಿಕೆ ಅವಧಿಯನ್ನು ಒಳಗೊಂಡಿದೆ. ಈ ಕಾರು, ರೂ.9.20 ಲಕ್ಷದಿಂದ ರೂ.12.19 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 20.04 - 20.65 kmpl ಮೈಲೇಜ್ ನೀಡಲಿದ್ದು, 1.5-ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯನ್ನು ಕಳೆದ ತಿಂಗಳು ಲಾಂಚ್ ಮಾಡಿತ್ತು. ಈವರೆಗೆ 9,000 ಯುನಿಟ್ ಮಾರಾಟ ಮಾಡಿದೆ. ರೂಪಾಂತರಗಳಿಗೆ ಅನುಗುಣವಾಗಿ ಗ್ರಾಹಕರು ಕನಿಷ್ಠ 6 ರಿಂದ 26 ವಾರಗಳು ಕಾಯಲೇಕಾಗಿದೆ. ಝೀಟಾ ಸಿಎನ್‌ಜಿ, ಝೀಟಾ ಮತ್ತು ಆಲ್ಫಾ ಸ್ಟ್ರಾಂಗ್ ಹೈಬ್ರಿಡ್ ಮಾದರಿಗಳಿಗೆ 4 ರಿಂದ 6 ವಾರ, ಝೀಟಾ MT ಹಾಗೂ AT ಮೈಲ್ಡ್ ಹೈಬ್ರಿಡ್ ಮಾದರಿ 6 - ಮತ್ತು 8 ವಾರ ಕಾಯಬೇಕು.
ಗ್ರ್ಯಾಂಡ್ ವಿಟಾರಾ ಡೆಲ್ಟಾ MT ಮೈಲ್ಡ್ ಹೈಬ್ರಿಡ್ ರೂಪಾಂತರಕ್ಕೆ 14 -16 ವಾರ, ಸಿಗ್ಮಾ MT ಮಾದರಿಗೆ 24 - 26 ವಾರದ ಬಳಿಕ ವಿತರಣೆಯಾಗಲಿದೆ. ಈ ಕಾರು, ರೂ.10.45 ಲಕ್ಷದಿಂದ ರೂ.19.65 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. 1.5-ಲೀಟರ್ ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ಹಾಗೂ 1.5-ಲೀಟರ್ ಪೆಟ್ರೋಲ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದ್ದು, 19.38 - 27.97 kmpl ಮೈಲೇಜ್ ನೀಡಲಿದೆ.


Click it and Unblock the Notifications