Maruti Suzuki: ಮಾರುತಿಯ ಈ ಕಾರಿನಲ್ಲಿ ಏಕಾಏಕಿ ಮೈಲೇಜ್ ಡ್ರಾಪ್: ಕಾರಣ ತಿಳಿದು ಶಾಕ್ ಆದ ಗ್ರಾಹಕರು!
ಭಾರತದಲ್ಲಿ ಜನರ ನಾಡಿ ಮಿಡಿತವನ್ನು ಅರಿತಿರುವ ಒಂದೇ ಒಂದು ಕಾರು ತಯಾರಿಕಾ ಕಂಪನಿ ಇದೆ ಎಂದರೆ ಅದು ಮಾರುತಿ ಸುಜುಕಿ ಎಂದು ಕಣ್ಣು ಮುಚ್ಚಿಕೊಂಡು ಹೇಳಬಹುದು. ಇದಕ್ಕೆ ಕಾರಣ ಹಲವಿದೆ, ಅದರಲ್ಲಿ ಪ್ರಮುಖವಾದುದು ಯಾವುದೆಂದರೆ ಜನರಿಗೆ ಕಡಿಮೆ ಬಜೆಟ್‌ನಲ್ಲಿ ಅಗತ್ಯವಿರುವ ಫೀಚರ್‌ಗಳೊಂದಿಗೆ ಕಾರನ್ನು ಒದಗಿಸುವುದು.
ಭಾರತೀಯರ ಮಧ್ಯಮ ಕುಟುಂಬದ ನೆಚ್ಚಿನ ಮಾರುತಿ ಸುಜುಕಿಯ ಕಾರು ಯಾವುದೆಂದು ಕೇಳಿದರೆ ಅದರ ಲಿಸ್ಟ್ ಉದ್ದವಾಗುತ್ತಲೇ ಹೋಗುತ್ತದೆ. ಅದರಲ್ಲಿ ಒಂದು ಕಾರು ಮಾರುತಿ ಸುಜುಕಿ ಬ್ರೆಝಾ. ಮಾರುತಿ ಸುಜುಕಿಯು ಇತ್ತೀಚೆಗೆ ಮಾರುಕಟ್ಟೆಗೆ ಬಿಡುತ್ತಿರುವ ಕಾರುಗಳಲ್ಲಿ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ಸಿಸ್ಟಂ ಅನ್ನು ಸಹ ನೀಡುತ್ತಿದೆ.

ಇದರಿಂದ ವಾಹನದ ಇಂಧನ ಕ್ಷಮತೆ ಮತ್ತು ಪರ್ಫಾಮೆನ್ಸ್ ಎರಡೂ ಸಹ ಅಧಿಕವಾಗಿತ್ತು. ಆದರೆ ಇದೀಗ ಮಾರುತಿಯು ಕೆಲ ದಿನಗಳ ಹಿಂದಷ್ಟೇ ಮಾರುತಿ ಸುಜುಕಿಯ ಪ್ರಸಿದ್ದ ಎಸ್‌ಯುವಿಯಾದ ಮಾರುತಿ ಬ್ರೆಝಾ ಕಾರಿನಿಂದ ಈ ಟೆಕ್ನಾಲಜಿಯನ್ನು ತೆಗೆದು ಹಾಕಿದ್ದು, ಬ್ರೆಝಾ ಅಭಿಮಾನಿಗಳಲ್ಲಿ ಭಾರೀ ನಿರಾಸೆಯನ್ನು ಉಂಟು ಮಾಡಿದೆ.
ಇನ್ನು ಇದರ ಪರಿಣಾಮವಾಗಿ ಮಾರುತಿ ಸುಜುಕಿ ಬ್ರೆಝಾದಲ್ಲಿ (Maruti Suzuki Breza) ARAI ಸರ್ಟಿಫೈಡ್ ಮೈಲೇಜ್‌ಗೆ ಹೊಡೆತ ಬಿದ್ದಿದ್ದು ಇದೀಗ ಈ ಕಾರಿನಲ್ಲಿ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ಸಿಸ್ಟಂ ಇಲ್ಲದೆ ಗಮನಾರ್ಹ ಮಟ್ಟದಲ್ಲಿ ಮೈಲೇಜ್ ಡ್ರಾಪ್ ಆಗಿದೆ ಎಂದು ವರದಿಗಳು ತಿಳಿಸಿದೆ. ಇದೀಗ ಹೊಸ ಬ್ರೆಝಾ ಕಾರು ಕೊಳ್ಳುವವರನ್ನು ಆತಂಕಕ್ಕೆ ದೂಡಿದೆ.

ಮಾಹಿತಿಗಳ ಪ್ರಕಾರ ಲೀಟರಿಗೆ ಸುಮಾರು 2.77 ಕಿಲೋ ಮೀಟರ್ನಷ್ಟು ಮೈಲೇಜ್ ಡ್ರಾಪ್ ಆಗಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಬ್ರೆಝಾ LXi ಮತ್ತು VXi ಸುಮಾರು 20.15 kmpl ಮತ್ತು ZXi and ZXi Plus ವೇರಿಯೆಂಟ್ 19.89 kmpl ಮೈಲೇಜನ್ನು ಈ ಮೊದಲು ನೀಡುತ್ತಿತ್ತು.
ಆದರೆ ಇದೀಗ ಮಾರುತಿ ಸುಜುಕಿಯು ಬ್ರೆಝಾ ಕಾರಿನಿಂದ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ಸಿಸ್ಟಂ ತೆಗೆದು ಹಾಕಿದಾಗಿನಿಂದ ಇದೀಗ ದಾಖಲೆಗೆಳ ಪ್ರಕಾರ ಹೊಸ ಮೈಲೇಜ್ 17.38 kmpl ಎಂದು ತಿಳಿದು ಬಂದಿದೆ. ಈ ಮೂಲಕ ಸುಮಾರು 2.77 ಕಿಲೋ ಮೀಟರ್ನಷ್ಟು ಮೈಲೇಜ್ ಕಮ್ಮಿ ಆದಂತೆ ಆಗಿದೆ.
ಮಾರುತಿ ಸುಜುಕಿ ಬ್ರೆಝಾ ಸುಮಾರು ಎಕ್ಸ್ ಶೋ ರೂಮ್ 8.29 ಲಕ್ಷ ರೂ. ನಿಂದ ಆರಂಭವಾಗುತ್ತವೆ. ಭಾಋತೀಯರ ನೆಚ್ಚಿನ ಕಾರುಗಳಲ್ಲಿ ಒಂದಾಗಿರುವ ಮಾರುತಿ ಬ್ರೆಝಾ ಕಾರು ಇದೀಗ ಅದರ ಕಾರು ಮತ್ತು ವೇರಿಯಂಟ್‌ಗಳಿಗೆ ಅನುಗುಣವಾಗಿ ಸುಮಾರು 24 ರಿಂದ 42 ವಾರಗಳ ವರೆಗೆ ಕಾಯಬೇಕಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications