50ಕ್ಕೂ ಅಧಿಕ ಕ್ರ್ಯಾಶ್ ಟೆಸ್ಟ್‌ಗಳು: ಏನಿದು ಮಾರುತಿ ಸುಜುಕಿ ಇಂಟರ್ನಲ್ ಕ್ರ್ಯಾಶ್ ಟೆಸ್ಟ್?
ಭಾರತೀಯ ವಾಹನ ನಿರ್ಮಾಣ ಕ್ಷೇತ್ರದಲ್ಲಿ ಅತ್ಯಂತ ಮುಂಪಕ್ತಿಯಲ್ಲಿರುವ ಕಂಪನಿ ಯಾವುದೆಂದು ಕೇಳಿದರೆ ಎಲ್ಲರೂ ಒಕ್ಕೋರಲಿನಿಂದ ಹೇಳುವ ಹೆಸರು ಮಾರುತಿ ಸುಜುಕಿ. ಇದಕ್ಕೆ ಪ್ರಮುಖ ಕಾರಣ ಭಾರತೀಯ ಮಾರುಕಟ್ಟೆಯಲ್ಲಿ ಯಾವ ರೀತಿಯ ಕಾರುಗಳನ್ನು ನೀಡಬೇಕು ಎಂಬುದರ ಸಂಪೂರ್ಣ ಚಿತ್ರಣವನ್ನು ಮಾರುತಿ ಸುಜುಕಿ ಅರಿತಿರುವುದು.
ಇನ್ನು ಇತ್ತೀಚೆಗಷ್ಟೇ ಮಾರುತಿ ಸುಜುಕಿಯು (Maruti Suzuki) ತನ್ನ ಕಾರುಗಳ ಸುರಕ್ಷತೆಯ ಕುರಿತಾಗಿನ ಹೊಸ ರೀತಿಯ ಮಾಹಿತಿಯೊಂದನ್ನು ಹೊರಬಿಟ್ಟಿದ್ದು, ಎಲ್ಲರ ಗಮನ ಸೆಳೆದಿದೆ. ಮಾರುತಿ ಸುಜುಕಿಯು ತನ್ನ ಕಾರುಗಳ ಕ್ರಾಶ್ ಟೆಸ್ಟ್‌ಗಳ ತುಣುಕುಗಳನ್ನು ಹೊರ ಹಾಕಿದ್ದು ವಿಡಿಯೋದಲ್ಲಿ ಸಂಸ್ಥೆಯ ಹೊಸ ಕಾರಾದ ಮಾರುತಿ ಸುಜುಕಿ ಫ್ರಾಂಕ್ಸ್‌ನ ಕ್ರಾಶ್ ಟೆಸ್ಟ್‌ನ ತುಣುಕುಗಳನ್ನು ಕಾಣಬಹುದಾಗಿದೆ.

ಮಾರುತಿ ಸುಜುಕಿ ನೀಡಿರುವ ಮಾಹಿತಿಗಳ ಪ್ರಕಾರ, ಸಂಸ್ಥೆಯು ತಾವು ಹೊರತರುವ ಕಾರುಗಳು ಸುಮಾರು 50 ಕ್ಕೂ ಅಧಿಕ ಬಗೆಯ ಕ್ರ್ಯಾಶ್ ಟೆಸ್ಟ್‌ಗಳನ್ನು ಮಾಡಿಸಿ ಆ ನಂತರದಲ್ಲಿ ಮಾರುಕಟ್ಟೆಗೆ ತರಲಾಗುತ್ತಿದೆ ಎಂದು ತಿಳಿಸಲಾಗಿದೆ. ಈ ಮಾಹಿತಿ ಹೊರಬಿದ್ದ ಕೂಡಲೇ ಇದೀಗ ಹಲವರು ಮಾರುತಿ ಸುಜುಕಿ ಕಾರುಗಳ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಎಷ್ಟರ ಮಟ್ಟಿಗೆ ಸುರಕ್ಷಿತ ಆಗಿರಲಿದೆ ಎಂದು ಕಾದು ನೋಡಬೇಕಾಗಿದೆ.
ಇನ್ನು ರಸ್ತೆಗಳಲ್ಲಿ ಅಕಸ್ಮಾತ್ತಾಗಿ ಸಂಭವಿಸಲಿರುವ ಅಪಘಾತಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಈ ಹೊಸ ಕಾರ್ಯಕ್ರಮವನ್ನು ಪರಿಚಯಿಸಿದ್ದು, ಈ ಮೊದಲೇ ತಿಳಿಸಿದಂತೆ ಮಾರುತಿ ಸುಜುಕಿ ಫ್ರಾಂಕ್ಸ್ ಕಾರು ಈಗಾಗಲೇ ಈ ಪರೀಕ್ಷೆಗೆ ಒಳಪಟ್ಟಿದೆ ಎಂದು ತಿಳಿಸಲಾಗಿದೆ. ವಿಡಿಯೋವು ಮಾರುತಿ ಸುಜುಕಿ ಕಂಪನಿಯು ಸುರಕ್ಷತೆಗೆ ಎಷ್ಟರ ಮಟ್ಟಿಗೆ ಪ್ರಾಮುಖ್ಯತೆಯನ್ನು ನೀಡುತ್ತಿದೆ ಎಂಬುದು ತಿಳಿದು ಬರುತ್ತದೆ.

ಮಾರುತಿ ಸುಜುಕಿಯ ಈ ಇಂಟರ್ನಲ್ ಕ್ರ್ಯಾಶ್ ಟೆಸ್ಟ್‌ನಲ್ಲಿ ಭಾರತ ಸರ್ಕಾರ ಸುರಕ್ಷತೆಯ ಬಗ್ಗೆ ನಿಗದಿಪಡಿಸಿರುವ ಮಾನದಂಡಗಳನ್ನು ಒಳಗೊಂಡು ಅಳವಡಿಸಲಾಗಿದ್ದು, ಇದರಲ್ಲಿ ಸೈಡ್ ಇಂಪಾಕ್ಟ್, ಕ್ರಷಬಲ್ ಜೋನ್, ಕ್ರಂಪಲ್ ಝೋನ್ ಟೆಸ್ಟ್‌ಗಳನ್ನು ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಎಲ್ಲಾ ವಿಷಯಗಳಿಂದ ಮಾರುತಿ ಸುಜುಕಿಯು ಕಾರುಗಳ ಸುರಕ್ಷತೆಯನ್ನು ಗರಿಷ್ಟ ಮಟ್ಟಕ್ಕೆ ಏರಿಸುತ್ತಿದೆ.
ಇನ್ನು ವಿಡಿಯೋದಲ್ಲಿ ತೋರಿಸಿರುವ ಮಾರುತಿ ಫ್ರಾಂಕ್ಸ್ ಬಗ್ಗೆ ಹೇಳುವುದಾದರೆ ಬಿಡುಗಡೆಯಾದ ಆರು ತಿಂಗಳಿನಲ್ಲಿ 75,000 ಯುನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ದಾಟಿದೆ. ಹೆಚ್ಚುವರಿಯಾಗಿ, ಮಾರಾಟ ಸಂಖ್ಯೆಗಳ ವಿಷಯದಲ್ಲಿ ಫ್ರಾಂಕ್ಸ್ ಇತ್ತೀಚೆಗೆ ಬಲೆನೊವನ್ನು ಹಿಂದಿಕ್ಕಿದೆ .ಬಲೆನೊ ಆಧಾರಿತ ಮಾರುತಿ ಸುಜುಕಿ ಫ್ರಾಂಕ್ಸ್ ಕಾರು ಒಂಬತ್ತು ಬಣ್ಣಗಳಲ್ಲಿ ಲಭ್ಯವಿದೆ. ಇವುಗಳು ಆರ್ಕ್ಟಿಕ್ ವೈಟ್, ಗ್ರ್ಯಾಂಡ್ಯೂರ್ ಗ್ರೇ, ಅರ್ಥನ್ ಬ್ರೌನ್, ಸ್ಪ್ಲೆಂಡಿಡ್ ಸಿಲ್ವರ್ ಮತ್ತು ಒಪ್ಯುಲೆಂಟ್ ರೆಡ್ ಆಗಿದೆ.

ಇನ್ನು ಡ್ಯುಯಲ್-ಟೋನ್ ಆಯ್ಕೆಗಳಲ್ಲಿ ಅರ್ಥನ್ ಬ್ರೌನ್, ಒಪ್ಯುಲೆಂಟ್ ರೆಡ್ ಮತ್ತು ಸ್ಪ್ಲೆಂಡಿಡ್ ಸಿಲ್ವರ್ ಸೇರಿವೆ. ಇವೆಲ್ಲವೂ ನೀಲಿ ಕಪ್ಪು ರೂಫ್ ಹೊಂದಿದೆ. ಈ ಕಾರು ಸಿಗ್ಮಾ, ಡೆಲ್ಟಾ, ಡೆಲ್ಟಾ+, ಝೀಟಾ ಮತ್ತು ಆಲ್ಫಾ ಎಂಬ ರೂಪಾಂರಗಳಲ್ಲಿ ಲಭ್ಯವಿದೆ. ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯಲ್ಲಿ 1.0 ಲೀಟರ್ ಟರ್ಬೊ ಮತ್ತು 1.2 ಲೀಟರ್ ನ್ಯಾಚುರಲ್ ಆಸ್ಪೈರರ್ಡ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ.
ಇದರಲ್ಲಿ 1.2 K12C ಲೀಟರ್ ನ್ಯಾಚುರಲ್ ಆಸ್ಪೈರರ್ಡ್ ಎಂಜಿನ್ 6,000rpm ನಲ್ಲಿ 88.5bhp ಮತ್ತು 4,400rpm ನಲ್ಲಿ 113Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಜೋಡಿಸಲಾಗಿದೆ. ಬಲೆನೊ ಆರ್‌ಎಸ್‌ನೊಂದಿಗೆ ಕೊನೆಯದಾಗಿ ಕಂಡ ಟರ್ಬೋಚಾರ್ಜ್ಡ್ 1.0-ಲೀಟರ್ ಬೂಸ್ಟರ್‌ಜೆಟ್ ಎಂಜಿನ್ ಹೆಚ್ಚು ಪವರ್ ಫುಲ್ ಎಂಜಿನ್ ಆಗಿದೆ.
ಫ್ರಾಂಕ್ಸ್ ಕಾರಿನಲ್ಲಿ ಈ ಎಂಜಿನ್ 5,500rpm ನಲ್ಲಿ 98.7bhp ಮತ್ತು 2,000 ರಿಂದ 4,500rpm ವರೆಗೆ 147.6Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೂಸ್ಟರ್‌ಜೆಟ್ ಆವೃತ್ತಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಆಗಿ ನೀಡಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications