Maruti Suzuki Cars: ಗ್ರಾಹಕರೇ ಗಮನಿಸಿ.. ಮಾರುತಿ ಸುಜುಕಿಯಿಂದ ಬಿಗ್ ಅನೌನ್ಸ್‌ಮೆಂಟ್

ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಮಾರುತಿ ಸುಜುಕಿ (Maruti Suzuki) ಕಾರುಗಳನ್ನು ಪ್ರತಿಯೊಬ್ಬ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಅವುಗಳ ಕೈಗೆಟುಕುವ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳು ಎಲ್ಲರನ್ನು ಸೆಳೆಯುತ್ತವೆ. ಸದ್ಯ, ಕಂಪನಿ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ತನ್ನ ಸಂಪೂರ್ಣ ಕಾರುಗಳ ಪೋರ್ಟ್‌ಫೋಲಿಯೊವನ್ನು ದೇಶಾದ್ಯಂತ ಏಪ್ರಿಲ್ 1 ರಿಂದ ಜಾರಿಗೆ ಬಂದಿರುವ BS6 ಹಂತ II RDE (ರಿಯಲ್ ಡ್ರೈವಿಂಗ್ ಎಮಿಷನ್ಸ್) ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಘೋಷಿಸಿದೆ. ಜೊತೆಗೆ ತನ್ನೆಲ್ಲ ಎಂಜಿನ್ ಗಳನ್ನು E20 (ಎಥನಾಲ್) ಇಂಧನಕ್ಕೂ ಸಹ ಹೊಂದಿಕೊಳ್ಳುವಂತೆ ನವೀಕರಿಸಲಾಗಿದೆ ಎಂದು ಮಾಹಿತಿ ನೀಡಿದೆ.

Maruti Suzuki Cars: ಗ್ರಾಹಕರೇ ಗಮನಿಸಿ.. ಮಾರುತಿ ಸುಜುಕಿಯಿಂದ ಬಿಗ್ ಅನೌನ್ಸ್‌ಮೆಂಟ್

ಪ್ರಸ್ತುತ, ವಾಹನ ಮಾರುಕಟ್ಟೆಯಲ್ಲಿ ಹೊಸ ಕಾರು ಕೊಳ್ಳುವ ಖರೀದಿದಾರರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಇದೀಗ, ಕಂಪನಿ ತನ್ನ ಎಲ್ಲಾ ಕಾರುಗಳು ಮತ್ತು ಎಸ್‌ಯುವಿಗಳಲ್ಲಿ ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್)ಯನ್ನು ಪರಿಚಯಿಸಿದೆ. ಇದು ಮುಖ್ಯವಾಗಿ ತಿರುವುಗಳಲ್ಲಿ ಹಠಾತ್ತನೇ ಕಾರುಗಳು ಸ್ಕಿಡ್ ಆಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಈ ವೈಶಿಷ್ಟ್ಯವು ಹೆಚ್ಚಿನ ಗ್ರಾಹಕರನ್ನು ಮಾರುತಿ ಸುಜುಕಿ ಕಾರುಗಳನ್ನು ಖರೀದಿಸುವಂತೆ ಪ್ರೇರೇಪಿಸಬಹುದು.

ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಅರೆನಾ ಹಾಗೂ ನೆಕ್ಸಾ ಡೀಲರ್ ಶಿಪ್ ಮೂಲಕ ಸೇಲ್ ಮಾಡುವ ಆಲ್ಟೊ ಕೆ10, ಸೆಲರಿಯೊ, ವ್ಯಾಗನ್ ಆರ್, ಗ್ರ್ಯಾಂಡ್ ವಿಟಾರಾ ಸೇರಿದಂತೆ ಎಲ್ಲ ಕಾರುಗಳಿಗೆ ESC ಸುರಕ್ಷತಾ ವೈಶಿಷ್ಟ್ಯ ನೀಡಿದರೂ ಬೆಲೆಯನ್ನು ಏರಿಕೆ ಮಾಡಿಲ್ಲ. ಮಾರುತಿ ಸುಜುಕಿಯ ಎಂಟ್ರಿ ಲೆವೆಲ್ ಆಲ್ಟೊ ಕೆ10 ರೂ.3.99 ಲಕ್ಷ ಹಾಗೂ ಗ್ರ್ಯಾಂಡ್ ವಿಟಾರಾ ಆಲ್ಫಾ ಪ್ಲಸ್ ಎಸ್‌ಯುವಿ ರೂ.19.95 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಇನ್ನು, ಮಾರುತಿ ಸುಜುಕಿ ಕಂಪನಿ ಕೆಲದಿನಗಳ ಹಿಂದೆ, ಭಾರತದಲ್ಲಿ ಬಹುನೀರಿಕ್ಷಿತ 'ಫ್ರಾಂಕ್ಸ್' ಎಸ್‌ಯುವಿಯನ್ನು ಬಿಡುಗಡೆ ಮಾಡಿತ್ತು. ಇದು, ರೂ.7.46 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ರೂಪಾಂತರಗಳಿಗೆ ಅನುಗುಣವಾಗಿ 20.01 kml ನಿಂದ 22.89 kml ಮೈಲೇಜ್ ನೀಡಲಿದೆ. ಮುಂಭಾಗ ಅತ್ಯಾಧುನಿಕ ಗ್ರೀಲ್, ಸ್ಪ್ಲಿಟ್ ಹೆಡ್‌ಲ್ಯಾಂಪ್ಸ್, ಎಲ್ಇಡಿ DRLಗಳನ್ನು ಪಡೆದಿದ್ದು, ಹಿಂಭಾಗವು ಆಕರ್ಷಕ ಲುಕ್ ಹೊಂದಿದೆ.

ಈ ಕಾರು, ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, 1.0 ಲೀಟರ್ ಕೆ ಸೀರಿಯಸ್ ಟರ್ಬೋ ಬೂಸ್ಟರ್ ಜೆಟ್ ಪೆಟ್ರೋಲ್, 1.2 ಲೀಟರ್ ಕೆ ಸೀರಿಯಸ್ ಡುಯೆಲ್ ಜೆಟ್ ಪೆಟ್ರೋಲ್ ಎಂಜಿನ್ ಪಡೆದಿದೆ. 9.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಅರ್ಕಾಮಿಸ್ ಸೌಂಡ್ ಸಿಸ್ಟಮ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ABS, ಹಿಲ್ ಹೋಲ್ಡ್ ಅಸಿಸ್ಟ್ ಸೇರಿದಂತೆ ಹಲವು ಫೀಚರ್ಸ್ ಪಡೆದಿದೆ.

ಹೊಸ ಕಾರು ಬಿಡುಗಡೆ ಹಾಗೂ ಎಲ್ಲ ಮಾದರಿಗಳಿಗೆ ಸುರಕ್ಷತಾ ವೈಶಿಷ್ಟ್ಯದ ಪರಿಚಯವನ್ನು ಗಮನಿಸಿದಾಗ, 'ಮಾರುತಿ ಸುಜುಕಿ' ತನ್ನ ಮಾರಾಟ ಪ್ರಮಾಣವನ್ನು ವೃದ್ಧಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಸುಲಭವಾಗಿ ಹೇಳಬಹುದು. ಆದರೂ ಕಾರುಗಳಿಗೆ ಯಾವುದೇ ರೀತಿಯಲ್ಲಿ ಬೆಲೆ ಏರಿಕೆ ಮಾಡದೇ ಕಂಪನಿ ನೀಡುತ್ತಿರುವ ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಫೀಚರ್ಸ್, ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, April 26, 2023, 10:42 [IST]
English summary
Maruti suzuki cars suvs now get esc details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+