500 ಕಿ.ಮೀ.ಗೂ ಹೆಚ್ಚು ರೇಂಜ್‌ನೊಂದಿಗೆ ಬರಲಿದೆ ಮಾರುತಿ ಎಲೆಕ್ಟ್ರಿಕ್ ಕಾರು: ಟಾಟಾಗೆ ನಡುಕ ಶುರು

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಹೆಚ್ಚಾಗುತ್ತಿದೆ. ಪ್ರಪಂಚದ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳ ರೀತಿಯಲ್ಲೇ ಭಾರತದಲ್ಲೂ ಐಷಾರಾಮಿ ಕಾರು ಬ್ರಾಂಡ್‌ಗಳು ತಮ್ಮ ತಮ್ಮ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಸದ್ಯ ಭಾರತೀಯ ಮಾರುಕಟ್ಟೆಯ ಎಲೆಕ್ಟ್ರಿಕ್ ವಿಭಾಗದಲ್ಲಿ ಟಾಟಾ ಮೋಟಾರ್ಸ್ ಕಂಪನಿ ಪಾರುಪತ್ಯ ಸಾಧಿಸುತ್ತಿದೆ.

ಜನಪ್ರಿಯ ಮತ್ತು ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ಪಾರುಪತ್ಯ ಸಾಧಿಸಿದೆ. ಇದೀಗ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲೂ ಕಾಲಿಡಲು ಸಜ್ಜಾಗುತ್ತಿದೆ. ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು 2023ರ ಆಟೋ ಎಕ್ಸ್‌ಪೋದಲ್ಲಿ eVX ಕಾನ್ಸೆಪ್ಟ್ ಅನ್ನು ಪ್ರದರ್ಶಿಸಿತು.

Maruti Suzuki EVX

ಸುಜುಕಿ ಮೋಟಾರ್ ಕಾರ್ಪೊರೇಶನ್ 2023ರ ಟೋಕಿಯೋ ಮೋಟಾರ್ ಶೋನಲ್ಲಿ ಈ eVX ಕಾನ್ಸೆಪ್ಟ್ ಮಾದರಿಯ ಹತ್ತಿರದ ಉತ್ಪಾದನಾ ಆವೃತ್ತಿಯನ್ನು ಪ್ರದರ್ಶಿಸಲು ಘೋಷಿಸಿದೆ. ಇದರ ಜೊತೆಗೆ, ಹೊಸ ಜನರೇಷನ್ ಸುಜುಕಿ ಸ್ವಿಫ್ಟ್ ಕಾರನ್ನು ಈವೆಂಟ್‌ನಲ್ಲಿ ಅನಾವರಣಗೊಳಿಸಲಾಗುತ್ತದೆ. ಈ ಮಾರುತಿ ಸುಜುಕಿ EVX (Maruti Suzuki EVX) ಕಾನ್ಸೆಪ್ಟ್ ಮಾದರಿಯ ಒಳಭಾಗವನ್ನು ಬಹಿರಂಗಪಡಿಸಲಿಲ್ಲ. ಈ ಸುಜುಕಿ ಎಲೆಕ್ಟ್ರಿಕ್ ಎಸ್‌ಯುವಿಯ ಭವಿಷ್ಯದ ಒಳಾಂಗಣದ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಇದು ಉತ್ಪಾದನೆಯ ಮಾದರಿಗೆ ಹತ್ತಿರವಾಗಿವೆ.

ಈ ಹೊಸ EVX ಕಾನ್ಸೆಪ್ಟ್ ಮಾದರಿಯು ಎಲೆಕ್ಟ್ರಾನಿಕ್-ಕಂಟ್ರೋಲ್ 4×4 ತಂತ್ರಜ್ಞಾನಗಳೊಂದಿಗೆ ಬರಲಿದೆ ಎಂದು ಸುಜುಕಿ ದೃಢಪಡಿಸಿದೆ. ಅನುಪಾತದಲ್ಲಿ, ಹೊಸ ಸುಜುಕಿ EVX ಉದ್ದ 4300mm, ಅಗಲ 1800mm ಮತ್ತು ಎತ್ತರ 1600mm ಆಗಿದೆ. ಈ ಎಲೆಕ್ಟ್ರಿಕ್ ಕಾರು ಸಿಂಗಲ್ ಚಾರ್ಜ್‌ನಲ್ಲಿ 500 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಹೊಸ ಸುಜುಕಿ EVX ಕೆಲವು ವಿನ್ಯಾಸ ಬದಲಾವಣೆಗಳನ್ನು ಹೊಂದಿದೆ ಎಂದು ಹೊಸ ಚಿತ್ರಗಳು ತೋರಿಸುತ್ತವೆ.

ಇದು ಹೊಸದಾಗಿ ವಿನ್ಯಾಸಗೊಳಿಸಿದ ಎಲ್ಇಡಿ ಲ್ಯಾಂಪ್ ಗಳೊಂದಿಗೆ ಬರುತ್ತದ. ಇದು ಹೆಚ್ಚು ಉತ್ಪಾದನೆಗೆ ಸಿದ್ಧವಾಗಿದೆ. ಕೆಳಗಿನ ಬಂಪರ್ ಅನ್ನು ಸಹ ನವೀಕರಿಸಲಾಗಿದೆ. ಆದರೆ ಇದು ಕಾನ್ಸೆಪೃ ಮಾದರಿಯಂತಹ ಫಾಗ್ ಲ್ಯಾಂಪ್ ಗಳು ಮತ್ತು ಕೆಳಗಿನ ಭಾಗದಲ್ಲಿ ಸಿಲ್ವಾರ್ ಟ್ರಿಟ್ ಮೆಂಟ್ ಅನ್ನು ಹೊಂದಿದೆ. ಈ ಮಾದರಿಯ ಪ್ರೊಡಕ್ಷನ್-ಸ್ಪೆಕ್ ಔಟ್ ರಿಯರ್ ವ್ಯೂ ಮಿರರ್‌ಗಳನ್ನು ಸ್ಲಿಮ್ ಎಲ್ಇಡಿ ಲೈಟ್ ಗಳೊಂದಿಗೆ ಪಡೆಯುತ್ತದೆ. ಮುಂಭಾಗದಲ್ಲಿ ಸುಜುಕಿ ಲೋಗೋ ಮೊದಲಿಗಿಂತ ಸ್ವಲ್ಪ ಎತ್ತರದಲ್ಲಿದೆ.

ಹಿಂದಿನ ಪ್ರೊಫೈಲ್ ಕಾನ್ಸೆಪ್ಟ್ ಮಾದರಿಗೆ ಹೋಲುತ್ತದೆ. ಇದು ಈಗ ಉತ್ಪಾದನೆಗೆ ಸಿದ್ಧವಾದ ಟೈಲ್-ಲೈಟ್‌ಗಳನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರಿಗೆ ಸಂಪರ್ಕಿತ ಲೈಟ್ ಬಾರ್ ಅನ್ನು ಹೊಂದಿತ್ತು. ಅದು ಹೊಸ ಚಿತ್ರಗಳಲ್ಲಿ ಕಾಣೆಯಾಗಿದೆ. ಇದು ಸುಜುಕಿ ಲೋಗೋವನ್ನು ಅಳವಡಿಸುವ ಡಾರ್ಕ್ ಕ್ರೋಮ್ ಬಾರ್ ಅನ್ನು ಹೊಂದಿದೆ. ಇದು ರೂಫ್-ಇಂಟಿಗ್ರೇಟೆಡ್ ಸ್ಪಾಯ್ಲರ್ ಮತ್ತು ಡ್ಯುಯಲ್-ಟೋನ್ ಲೋವರ್ ಬಂಪರ್ ಅನ್ನು ಉಳಿಸಿಕೊಂಡಿದೆ.

ಹೊರಭಾಗಕ್ಕಿಂತ ಭಿನ್ನವಾಗಿ, ಮಾರುತಿ ಸುಜುಕಿ EVX ಮಾದರಿಯ ಒಳಭಾಗವು ಫ್ಯೂಚರಿಸ್ಟಿಕ್ ಆಗಿ ಕಾಣುತ್ತದೆ ಮತ್ತು ಉತ್ಪಾದನಾ ಮಾದರಿಗೆ ದಾರಿ ಮಾಡಿಕೊಡುವುದಿಲ್ಲ. ಇದು ಡ್ಯುಯಲ್-ಟೋನ್ ಇಂಟೀರಿಯರ್‌ನೊಂದಿಗೆ ಬರುತ್ತದೆ ಮತ್ತು ಹೆಚ್ಚಿನ ಡ್ಯಾಶ್‌ಬೋರ್ಡ್ ಅನ್ನು ಬೀಜ್ ಸ್ಕೀಮ್‌ನಲ್ಲಿ ಪೂರ್ಣಗೊಳಿಸಲಾಗಿದೆ. ಡ್ಯಾಶ್‌ಬೋರ್ಡ್ ಸುತ್ತಲೂ ಫಿಸಿಕಲ್ ಬಟನ್‌ಗಳಿಲ್ಲ. ಇದು ಲಂಬವಾಗಿ ಜೋಡಿಸಲಾದ ಏರ್-ಕಾನ್ ವೆಂಟ್‌ಗಳನ್ನು ಹೊಂದಿದೆ. ಆದರೆ ಎರಡು-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ.

ಈ ಕಾರಿನ ಸ್ಟೀಯರಿಂಗ್ ವ್ಹೀಲ್ ಹಿಂದೆ ಬೃಹತ್ ಟಚ್‌ಸ್ಕ್ರೀನ್ ಅನ್ನು ಇರಿಸಲಾಗಿದೆ, ಇದು ಇನ್ಫೋಟೈನ್‌ಮೆಂಟ್ ಮತ್ತುಇನ್ಸ್ ಟ್ರೂಮೆಂಟ್ ಆಗಿ ಕಾರ್ಯಗಳನ್ನು ನೀಡುತ್ತದೆ. ಸೆಂಟ್ರಲ್ ಕನ್ಸೋಲ್ ಪ್ರೀಮಿಯಂ ಮತ್ತು ಫ್ಯೂಚರಿಸ್ಟಿಕ್ ಆಗಿ ಕಾಣುತ್ತದೆ, ಮತ್ತು ಅದನ್ನು ಉತ್ಪಾದನಾ ಮಾದರಿಗೆ ತರುವುದಿಲ್ಲ. ಗೇರ್ ಬಾಕ್ಸ್ ಸೆಲೆಕ್ಟರ್ ನೆಕ್ಸಾನ್ EV MAX ನಿಂದ ಸ್ಫೂರ್ತಿ ಪಡೆದಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯು ಸ್ಪೋರ್ಟಿ ಬಕೆಟ್ ಸೀಟ್‌ಗಳನ್ನು ಡ್ಯುಯಲ್-ಟೋನ್ ಕಪ್ಪು ಮತ್ತು ಬೀಜ್‌ನಲ್ಲಿ ಪೂರ್ಣಗೊಳಿಸಿದೆ.

ಈ ಎಲೆಕ್ಟ್ರಿಕ್ಕ್ ಕಾರಿನ ಮುಂಭಾಗ ಮತ್ತು ಹಿಂಭಾಗದ ಸೀಟುಗಳು ಹೊಂದಾಣಿಕೆಯ ಹೆಡ್‌ರೆಸ್ಟ್‌ಗಳೊಂದಿಗೆ ಬರುತ್ತವೆ. ಉತ್ಪಾದನೆಗೆ ಸಿದ್ಧವಾಗಿರುವ ಮಾದರಿಯು ವಿವಿಧ ಆಸನಗಳೊಂದಿಗೆ ಬರಲಿದೆ. ಹೊಸ ಮಾದರಿಯು ADAS ತಂತ್ರಜ್ಞಾನವನ್ನು ಪಡೆಯುವ ನಿರೀಕ್ಷೆಯಿದೆ. ಮಾರುತಿ ಸುಜುಕಿ EVX ಕಾನ್ಸೆಪ್ಟ್ ಮಾದರಿಯು 60kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇನ್ನು 4×4 ತಂತ್ರಜ್ಞಾನದೊಂದಿಗೆ ನವೀಕರಿಸಿದ ಕಾನ್ಸೆಪ್ಟ್ 500 ಕಿಲೋಮೀಟರ್‌ಗಳಿಗಿಂತ ಹೆಚ್ಚು ರೇಂಜ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

Article Published On: Wednesday, October 4, 2023, 11:08 [IST]
English summary
Maruti suzuki evx electric suv concept unveils refreshed exterior range details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+