ಬೈಕಿನಂತೆ ಮೈಲೇಜ್ ನೀಡುವ ಮಾರುತಿ ಫ್ರಾಂಕ್ಸ್ ಸಿಎನ್‌ಜಿ ಎಸ್‍ಯುವಿಯ ವಿಶೇಷತೆಗಳು
ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಭಾರತೀಯ ಮಾರುಕಟ್ಟೆಯಲ್ಲಿ ದಶಕಗಳಿಂದ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸುತ್ತಿದೆ. ಮಾರುತಿ ಸುಜುಕಿ ತನ್ನ ಪಾರುಪತ್ಯಯವನ್ನು ಮುಂದುವರೆಸಲು ಹೊಸ ಕಾರುಗಳನ್ನು ಪರಿಚಯಿಸುವುದರ ಜೊತೆಗೆ ತನ್ನ ಸಿಎನ್‌ಜಿ ಕಾರುಗಳ ವಿಭಾಗವನ್ನು ಮತ್ತಷ್ಟು ವಿಸ್ತರಿಸುತ್ತಿದೆ.
ಸದ್ಯ ಭಾರತದಲ್ಲಿ ಮಾರುತಿ ಸುಜುಕಿ ಸಿಎನ್‌ಜಿ ವಾಹನಗಳ ಅತಿದೊಡ್ಡ ಪೋರ್ಟ್‌ಫೋಲಿಯೊವನ್ನು ಹೊಂದಿದೆ. ಇದೀಗ ಮಾರುತಿ ಸುಜುಕಿ ತನ್ನ ಫ್ರಾಂಕ್ಸ್ ಎಸ್‍ಯುವಿಯನ್ನು S-CNG ಆವೃತ್ತಿಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ S-CNG (Maruti Suzuki Fronx CNG) ಎಸ್‍ಯುವಿಯ ಬೆಲೆಯು ರೂ.8.41 ಲಕ್ಷವಾಗಿದೆ. ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ ಸಿಎನ್‌ಜಿ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ರೂಪಾಂತರಗಳು ಮತ್ತು ಬೆಲೆ: ಈ ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯು ಸಿಗ್ಮಾ ಮತ್ತು ಡೆಲ್ಟಾ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ. ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯ ಸಿಗ್ಮಾ ರೂಪಾಂತರದ ಬೆಲೆಯು ರೂ.8.41 ಲಕ್ಷವಾದರೆ, ಡೆಲ್ಟಾ ರೂಪಾಂತರದ ಬೆಲೆಯು ರೂ.9.27 ಲಕ್ಷವಾಗಿದೆ.
ಎಂಜಿನ್: ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯಲ್ಲಿ 1.2-ಲೀಟರ್, ನಾಲ್ಕು ಸಿಲಿಂಡರ್, ನ್ಯಾಚುರಲ್ ಆಸ್ಪರ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6,000 rpm ನಲ್ಲಿ 88.50 bhp ಪವರ್ ಮತ್ತು 4,400 rpm ನಲ್ಲಿ 113 Nm ಟಾರ್ಕ್ ಅನ್ನು ಉತ್ಪಾದಿಸಿದರೆ, ಹೊಸ CNG ಆವೃತ್ತಿಯಲ್ಲಿ 6,000 rpm ನಲ್ಲಿ 76 bhp ಪವರ್ ಮತ್ತು 4,300 rpm ನಲ್ಲಿ 98.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಮಾತ್ರ ಜೋಡಿಸಲಾಗಿದೆ. ಪೆಟ್ರೋಲ್-ಮಾತ್ರ ಫ್ರಾಂಕ್ಸ್ ಮಾದರಿಯಲ್ಲಿ 1.2-ಲೀಟರ್ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ ಹೊರತಾಗಿ 5-ಸ್ಪೀಡ್ AMT ಅನ್ನು ಸಹ ಪಡೆಯುತ್ತದೆ. ಈ ಮಾರುತಿ ಸುಜುಕಿ ಫ್ರಾಂಕ್ಸ್ S-CNG ಎಸ್‍ಯುವಿಯ 28.51 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.
ಫೀಚರ್ಸ್: ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ S-CNG ಎಸ್‍ಯುವಿಯಲ್ಲಿ 7-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕ, ಕೀಲೆಸ್ ಎಂಟ್ರಿ, ಎಲೆಕ್ಟ್ರಿಕಲ್ ಫೋಲ್ಡಬಲ್ ORVM ಗಳು, ಡ್ಯುಯಲ್ ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು, ರಿಯರ್ ಡಿಫೊಗರ್, ISOFIX ಅನ್ನು ಹೊಂದಿದೆ.
ಸಬ್ಸ್ಕ್ರೈಬರ್ಸ್: ಹೊಸದಾಗಿ ಬಿಡುಗಡೆಯಾದ ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ S-CNG ಎ ಸಬ್-4m ಎಸ್‍ಯುವಿಯನ್ನು ಸಬ್ಸ್ಕ್ರೈಬರ್ಸ್ ಯೋಜನೆಯ ಮೂಲಕ ಸಹ ಹೊಂದಬಹುದು. ಇನ್ನು ಮಾರುತಿ ಸುಜುಕಿ ಫ್ರಾಂಕ್ಸ್ S-CNG ಗಾಗಿ ಅಲ್-ಸಬ್ಸ್ಕ್ರೈಬರ್ಸ್ ಶುಲ್ಕವು ರೂ 23,248 ರಿಂದ ಪ್ರಾರಂಭವಾಗುತ್ತದೆ. ಈ ಹೊಸ ಮಾದರಿಯು ಅತ್ಯುತ್ತಮ ಸಿಎನ್‌ಜಿ ಮಾದರಿಯಾಗಿದೆ.
ಇನ್ನು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ 1.4 ಮಿಲಿಯನ್‌ಗಿಂತಲೂ ಹೆಚ್ಚು S-CNG ವಾಹನಗಳನ್ನು ಮಾರಾಟ ಮಾಡಿದ್ದಾರೆ. ಸದ್ಯಕ್ಕೆ, ಅವರು 15 ಸಿಎನ್‌ಜಿ ಮಾದರಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಡೀಸೆಲ್ ಎಂಜಿನ್‌ಗಳನ್ನು ಕೈಬಿಟ್ಟು CNG ಪವರ್‌ಟ್ರೇನ್ ಅನ್ನು ವಿಸ್ತರಿಸಲು ನಿರ್ಧರಿಸಿದರು. ಮಾರುತಿ ಸುಜುಕಿ ಫ್ರಾಂಕ್ಸ್ ಸಿಎನ್‌ಜಿ ಹೊಸ ಎಸ್‍ಯುವಿಯು ಭಾರತದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿದೆ.


Click it and Unblock the Notifications