ಮಾರುತಿ ಸುಜುಕಿ ಫ್ರಾಂಕ್ಸ್, ಜಿಮ್ನಿ ಎಸ್‍ಯುವಿಗಳಿಗೆ ದೊಡ್ಡ ಬೇಡಿಕೆ: ಅತ್ಯಧಿಕ ಬುಕಿಂಗ್ ಸ್ವೀಕಾರ

ಮಾರುತಿ ಸುಜುಕಿ ಭಾರತದಲ್ಲಿ ಅಗ್ರಗಣ್ಯ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಅದರ ಜಿಮ್ನಿ ಹಾಗೂ ಫ್ರಾಂಕ್ಸ್ ಎಸ್‍ಯುವಿಗಳು ಭಾರೀ ಬೇಡಿಕೆಯನ್ನು ಗಳಿಸಿದ್ದು, ಅತ್ಯಧಿಕ ಬುಕಿಂಗ್ ಪಡೆದುಕೊಂಡಿವೆ ಎಂದು ವರದಿಯಾಗಿದೆ. ಇವುಗಳು ಯಾವಾಗ ಮಾರುಕಟ್ಟೆಗೆ ಬರಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ ಕಂಪನಿ ಆಫ್-ರೋಡ್ ಎಸ್‍ಯುವಿ 5-ಡೋರ್ ಜಿಮ್ನಿ ಹಾಗೂ ಕಾಂಪ್ಯಾಕ್ಟ್ ಎಸ್‍ಯುವಿ ಫ್ರಾಂಕ್ಸ್ ಅನ್ನು ಪ್ರದರ್ಶನ ಮಾಡಿತ್ತು. ಬುಕಿಂಗ್ ಕೂಡ ಆಗಿನಿಂದಲೇ ಪ್ರಾರಂಭಿಸಿದ್ದು, ಸದ್ಯ, ಆಸಕ್ತ ಗ್ರಾಹಕರು, ಜಿಮ್ನಿಗಾಗಿ ರೂ.25,000 ಹಾಗೂ ಫ್ರಾಂಕ್ಸ್ ಎಸ್‍ಯುವಿಗಾಗಿ ರೂ.11,000 ಪಾವತಿಸಿ, ಬುಕ್ ಮಾಡಬಹುದು. ಅಧಿಕೃತ ಮಾಹಿತಿ ಪ್ರಕಾರ, ಜಿಮ್ನಿ 23,500, ಫ್ರಾಂಕ್ಸ್ 15,500 ಬುಕಿಂಗ್‌ ಪಡೆದುಕೊಂಡಿದೆ.

ಮಾರುತಿ ಸುಜುಕಿ ಜಿಮ್ನಿ, ಫ್ರಾಂಕ್ಸ್ ಎಸ್‍ಯುವಿಗಳಿಗೆ ದೊಡ್ಡ ಬೇಡಿಕೆ: ಅತ್ಯಧಿಕ ಬುಕಿಂಗ್ ಸ್ವೀಕಾರ

ಫ್ರಾಂಕ್ಸ್ ಎಸ್‍ಯುವಿಯ 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 98.6 bhp ಗರಿಷ್ಠ ಪವರ್ ಹಾಗೂ 147.6 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್, ಸಿಕ್ಸ್ ಸ್ವೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 88.5 bhp ಪವರ್, 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5-ಸ್ವೀಡ್ MT/AMT ಗೇರ್ ಬಾಕ್ಸ್ ಪಡೆದಿದೆ.

ಬಹುನೀರಿಕ್ಷಿತ ಎಸ್‍ಯುವಿ ಜಿಮ್ನಿ 5-ಡೋರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದರೆ, ಇದು 1.5-ಲೀಟರ್ ಪೆಟ್ರೋಲ್ ಎಂಜಿನ್, 103 bhp ಗರಿಷ್ಠ ಪವರ್ ಹಾಗೂ 134 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5-ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದುಕೊಂಡಿದೆ. ಪವರ್ ಫುಲ್ ಎಂಜಿನ್ ಹೊಂದಿರುವುದರಿಂದ ಆಫ್ ರೋಡ್ ಚಾಲನೆಗೆ ಅತ್ಯುತ್ತಮವಾಗಿದೆ.

ಮಾರುತಿ ಸುಜುಕಿ ಜಿಮ್ನಿ, ಫ್ರಾಂಕ್ಸ್ ಎಸ್‍ಯುವಿಗಳಿಗೆ ದೊಡ್ಡ ಬೇಡಿಕೆ: ಅತ್ಯಧಿಕ ಬುಕಿಂಗ್ ಸ್ವೀಕಾರ

ಫ್ರಾಂಕ್ಸ್ ಹಾಗೂ ಜಿಮ್ನಿ 5-ಡೋರ್ ಎಸ್‍ಯುವಿಗಳು ಒಂದೇ ರೀತಿಯ ವೈಶಿಷ್ಟ್ಯವನ್ನು ಹೊಂದಿವೆ. 9.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಆರ್ಕಮಿಸ್ ಟ್ಯೂನ್ಡ್ ಸೌಂಡ್ ಸಿಸ್ಟಮ್, ಆಟೋಮೆಟಿಕ್ ಎಸಿ, 360-ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಚಾರ್ಜಿಂಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಸೇರಿದಂತೆ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ.

ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿ ಸೈಜ್ ಬಗ್ಗೆ ಹೇಳುವುದಾದರೆ, ಇದು 3995ಎಂಎಂ ಉದ್ದ, 1765ಎಂಎಂ ಅಗಲ, 1550ಎಂಎಂ ಎತ್ತರ ಹಾಗೂ 2520ಎಂಎಂ ಅಳತೆಯ ವೀಲ್ ಬೇಸ್ ಪಡೆದುಕೊಂಡಿದೆ. ಹೆಡ್‌ಲೈಟ್‌ನೊಂದಿಗಿನ ಸ್ಪ್ಲಿಟ್ ಗ್ರಿಲ್ ವಿನ್ಯಾಸ ನೋಡಲು ಆಕರ್ಷಕವಾಗಿದೆ. ಮಾರುತಿ ಸುಜುಕಿ ಜಿಮ್ನಿ 5-ಡೋರ್ ಎಸ್‍ಯುವಿ, ಬಹುತೇಕ 3-ಡೋರ್ ಜಿಮ್ನಿಗೆ ಹೋಲಿಕೆಯಾಗುತ್ತದೆ. ಇದು 3,985ಎಂಎಂ ಉದ್ದ, 1,645ಎಂಎಂ ಅಗಲ, 1,720ಎಂಎಂ ಎತ್ತರ ಹಾಗೂ 210ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿ, ರೂ.7.50 ಲಕ್ಷ ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋರೂಂ) ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಸಾಧ್ಯತೆ ಇದ್ದು, ಏಪ್ರಿಲ್ ಎರಡನೇ ವಾರದಲ್ಲಿ ಬಿಡುಗಡೆಯಾಗಲಿದೆ. ಇನ್ನು, ಜಿಮ್ನಿ 5-ಡೋರ್ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ರೂ.10 ಲಕ್ಷ ಪ್ರಾರಂಭಿಕ ಬೆಲೆಯಲ್ಲಿ ಮೇ ತಿಂಗಳಲ್ಲಿ ಲಾಂಚ್ ಆಗಬಹುದು. ಮುಂಬರುವ ದಿನಗಳಲ್ಲಿ ಇವು ಅತಿಹೆಚ್ಚು ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Thursday, March 23, 2023, 18:45 [IST]
English summary
Maruti suzuki fronx jimny getting more booking details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+