Maruti Suzuki: ಧೂಳೆಬ್ಬಿಸುತ್ತಿದೆ ಕರ್ನಾಟಕದಲ್ಲಿ ತಯಾರಾಗುವ ಮಾರುತಿ ಸುಜುಕಿಯ ಈ ಕಾರು

ಮಾರುತಿ ಸುಜುಕಿ (Maruti Suzuki) ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಅದರ ಕಾರುಗಳ ವೈಶಿಷ್ಟ್ಯ, ವಿನ್ಯಾಸ ಹಾಗೂ ಕಾರ್ಯಕ್ಷಮತೆ ಪ್ರತಿಯೊಬ್ಬ ಗ್ರಾಹಕರನ್ನು ಸೆಳೆಯುತ್ತದೆ. ಅದರಲ್ಲೂ ಕಂಪನಿಯ ಗ್ರ್ಯಾಂಡ್ ವಿಟಾರಾ ದೊಡ್ಡ ಮಟ್ಟದಲ್ಲಿ ಬೇಡಿಕೆ ಹೊಂದಿದ್ದು, ಹೆಚ್ಚಿನ ಕಾಯುವಿಕೆ ಅವಧಿಯನ್ನು ಹೊಂದಿದೆ.

ಮಾರುತಿ ಸುಜುಕಿ, 5 ಆಸನಗಳ ಆಯ್ಕೆಯೊಂದಿರುವ ಮಿಡ್-ಸೈಜ್ ಎಸ್‌ಯುವಿ ಗ್ರ್ಯಾಂಡ್ ವಿಟಾರಾವನ್ನು ಸೆಪ್ಟೆಂಬರ್ 2022ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ರೂ.10.70 - ರೂ.19.95 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಅಂದಿನಿಂದಲೇ ದೊಡ್ಡಮಟ್ಟದ ಬೇಡಿಕೆ ಪಡೆದುಕೊಂಡಿದ್ದ ಈ ಕಾರಿಗೆ ಹೆಚ್ಚಿನ ಖರೀದಿದಾರರು ಬುಕಿಂಗ್ ಮಾಡಿದರು. ನಿಮಗೆ ಗೊತ್ತಿರಲಿ.. ಟೊಯೊಟಾ, ಮಾರುತಿ ಸುಜುಕಿ ಕಂಪನಿಗಳು ಪಾಲುದಾರಿಕೆ ಹೊಂದಿರುವುದರಿಂದ ವಿಟಾರಾವನ್ನು ಬಿಡದಿಯ ಟೊಯೊಟಾ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತಿದೆ.

Maruti Suzuki: ಧೂಳೆಬ್ಬಿಸುತ್ತಿದೆ ಕರ್ನಾಟಕದಲ್ಲಿ ತಯಾರಾಗುವ ಮಾರುತಿ ಸುಜುಕಿಯ ಈ ಕಾರು

ಈ ಕಾರಿಗೆ ಡಿಮ್ಯಾಂಡ್ ಎಷ್ಟಿದೆ ಅಂದರೆ, ಕೆಲವೊಂದು ರೂಪಾಂತರಗಳು ಇವತ್ತು ಬುಕಿಂಗ್ ಮಾಡಿದರೂ ವಿತರಣೆ ಪಡೆಯಲು ಕನಿಷ್ಠವೆಂದರೂ 26 ವಾರ ಕಾಯಬೇಕು. ಬಹುಬೇಡಿಕೆ ಇರುವ ಸ್ಮಾರ್ಟ್ ಹೈಬ್ರಿಡ್ ಸಿಗ್ಮಾ ಎಂಟಿ ರೂಪಾಂತರ 24-26 ವಾರ, ಸ್ಮಾರ್ಟ್ ಹೈಬ್ರಿಡ್ ಡೆಲ್ಟಾ ಎಂಟಿ 16-18 ವಾರ, ಸ್ಮಾರ್ಟ್ ಹೈಬ್ರಿಡ್ ಝೀಟಾ ಎಂಟಿ 6-8 ವಾರ, ಸ್ಮಾರ್ಟ್ ಹೈಬ್ರಿಡ್ ಆಲ್ಫಾ ಎಂಟಿ 4-6 ವಾರಗಳ ಬಳಿಕ ವಿತರಣೆಯಾಗಲಿದೆ.

ಗ್ರ್ಯಾಂಡ್ ವಿಟಾರಾದ ಸ್ಮಾರ್ಟ್ ಹೈಬ್ರಿಡ್ ಡೆಲ್ಟಾ ಎಟಿ 16 ರಿಂದ 18 ವಾರ, ಸ್ಮಾರ್ಟ್ ಹೈಬ್ರಿಡ್ ಝೀಟಾ ಎಟಿ 14 ರಿಂದ 16 ವಾರ, ಸ್ಮಾರ್ಟ್ ಹೈಬ್ರಿಡ್ ಆಲ್ಫಾ ಎಟಿ 10-12 ವಾರ, ಡೆಲ್ಟಾ CNG 8-10 ವಾರ, ಝೀಟಾ CNG 8-10 ವಾರ, ಸ್ಟ್ರಾಂಗ್ ಹೈಬ್ರಿಡ್ ಝೀಟಾ ಪ್ಲಸ್ ಹಾಗೂ ಸ್ಟ್ರಾಂಗ್ ಹೈಬ್ರಿಡ್ ಆಲ್ಫಾ ಪ್ಲಸ್ ರೂಪಾಂತರಗಳು ಕೂಡ 8-10 ವಾರ ಕಾಯುವಿಕೆ ಅವಧಿಯನ್ನು ಹೊಂದಿವೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾದ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಈ ಕಾರು, ಎರಡು ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾವಿದೆ. ಅವುಗಳೆಂದರೆ, 1.5 ಲೀಟರ್ ಪೆಟ್ರೋಲ್ ಮೈಲ್ಡ್ ಹೈಬ್ರಿಡ್, 1.5 ಲೀಟರ್ ಪೆಟ್ರೋಲ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್. ಜೊತೆಗೆ CNG ಆಯ್ಕೆಯಲ್ಲಿಯೂ ಸಿಗಲಿದೆ. 5 ಸ್ವೀಡ್ ಮ್ಯಾನುವಲ್ ಅಥವಾ e-CVT ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

ಈ ಕಾರಿನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಕರ್ಷಕ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದ್ದು, 19.38 - 27.97 kmpl ಮೈಲೇಜ್ ನೀಡಲಿದೆ. ಜೊತೆಗೆ 2WD (ಟೂ ವೀಲ್ ಡ್ರೈವ್) AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ. ಈ ಕಾರಿಗೆ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್ ಸೇರಿದಂತೆ ವಿವಿಧ ಕಂಪನಿ ಕಾರುಗಳು ನೇರ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.

Article Published On: Friday, May 19, 2023, 17:35 [IST]
English summary
Maruti suzuki grand vitara waiting period may details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+