ಅತಿ ಹೆಚ್ಚು ಮೈಲೇಜ್‌ನೊಂದಿಗೆ ಬರಲಿವೆ ಹೊಸ ಮಾರುತಿ ಹೈಬ್ರಿಡ್ ಕಾರುಗಳಿವು...
ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಾರು ತಯಾರಕ ಕಂಪನಿಗಳಾದ ಮಾರುತಿ ಸುಜುಕಿ ಮತ್ತು ಟೊಯೊಟಾ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಸ್ಟ್ರಾಂಗ್ ಹೈಬ್ರಿಡ್ ಕಾರುಗಳನ್ನು ಪರಿಚಯಿಸಲು ಯೋಜಿಸುತ್ತಿವೆ. ಈ ಇಂಡೋ-ಜಪಾನೀಸ್ ದೈತ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಹೈಬ್ರಿಡ್ ಕಾರುಗಳನ್ನು ಬಿಡುಗಡೆಗೊಳಿಸಿ ಪಾರುಪತ್ಯ ಸಾಧಿಸಲು ಪ್ರಯತ್ನ ಮಾಡುತ್ತಿದೆ.
ಹೊಸ ಸ್ವಿಫ್ಟ್ ಮತ್ತು ಡಿಜೈರ್: ಮಾರುತಿ ಸುಜುಕಿ ಕಂಪನಿಯು ನ್ಯೂ ಜನರೇಷನ್ ಸ್ವಿಫ್ಟ್ ಮತ್ತು ಡಿಜೈರ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ. ಈ ಹೊಸ ಕಾರುಗಳು ಮುಂದಿನ ಹಣಕಾಸು ವರ್ಷದ ಅಂತ್ಯದ ಮೊದಲು ಅಥವಾ 2024ರ ಮಾರ್ಚ್ ತಿಂಗಳ ಅವಧಿಯಲ್ಲಿ ಬಿಡುಗಡೆಯಾಗಲಿವೆ ಹೊಸ ಸುಜುಕಿ ಸ್ವಿಫ್ಟ್‌ನ ಟೆಸ್ಟ್ ಈಗಾಗಲೇ ವಿದೇಶದಲ್ಲಿ ಪ್ರಾರಂಭವಾಗಲಿದೆ. ಈ ಹೊಸ ಮಾದರಿಗಳು ಸ್ಟೈಲಿಂಗ್, ಫೀಚರ್ಸ್ ಗಳು ಮತ್ತು ಪವರ್‌ಟ್ರೇನ್ ವಿಷಯದಲ್ಲಿ ಸಮಗ್ರ ಬದಲಾವಣೆಗಳನ್ನು ಪಡೆಯುತ್ತವೆ.

ಈ ಹೊಸ ಮಾದರಿಗಳು ಮಾದರಿಗಳು ಸ್ಟೈಲಿಂಗ್, ವೈಶಿಷ್ಟ್ಯಗಳು ಮತ್ತು ಪವರ್‌ಟ್ರೇನ್ ವಿಷಯದಲ್ಲಿ ಸಮಗ್ರ ಬದಲಾವಣೆಗಳನ್ನು ಪಡೆಯುತ್ತವೆ. ಇದು ಹೊಸ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯಲ್ಲಿ ನೀಡಲಾಗಿರುವಂತೆ ಇರುತ್ತದೆ. ನ್ಯೂ ಜನರೇಷನ್ ಸ್ವಿಫ್ಟ್ ಮತ್ತು ಡಿಜೈರ್ ಕಾರುಗಳಲ್ಲಿ 1.2-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಟೊಯೊಟಾದ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನವನ್ನು ನೀಡಲಾಗುತ್ತದೆ. ಹೊಸ ವರದಿಗಳ ಪ್ರಕಾರ, ಈ ಹೊಸ ಸ್ವಿಫ್ಟ್ ಮತ್ತು ಡಿಜೈರ್ ಕಾರುಗಳು ದೇಶದಲ್ಲಿ ಹೆಚ್ಚು ಮೈಕೇಜ್ ನೀಡುವ ಕಾರುಗಳಾಗಿವೆ.
ಈ ಕಾರುಗಳು ಸುಮಾರು 35-40 ಕಿ.ಮೀ ಮೈಲೇಜ್ ಅನ್ನು ನೀಡಲಿದೆ ಎಂದು ವರದಿಗಳಾಗಿವೆ. ಈ ಸ್ವಿಫ್ಟ್ ಮತ್ತು ಡಿಜೈರ್‌ನ ಹೊಸ ಸ್ಟ್ರಾಂಗ್ ಹೈಬ್ರಿಡ್ ಆವೃತ್ತಿಗಳು ಮುಂಬರುವ CAFE II ಮಾನದಂಡಗಳನ್ನು ಸಹ ಪೂರೈಸುತ್ತವೆ. ಈ ಕಾರುಗಳ ಲೋ ರೂಪಾಂತರಗಳಲ್ಲಿ 1.2 ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ನೊಂದಿಗೆ ಮ್ಯಾನ್ಯುವಲ್ ಮತ್ತು AMT ಗೇರ್ ಬಾಕ್ಸ್ ಅನ್ನು ಕೂಡ ಜೊಡಿಸಲಾಗಿದೆ.
ಟೊಯೊಟಾ-ಸುಜುಕಿ ಕಂಪನಿಗಳ ನಡುವೆ ಪಾಲುದಾರಿಕೆಯ ಭಾಗವಾಗಿ ಪರಸ್ಪರ ಮಾಡೆಲ್ ಹಂಚಿಕೆಯು ನಡೆಯುತ್ತಿದೆ. ಟೊಯೊಟಾ ಇನೋವಾ ಹೈಕ್ರಾಸ್ ಅನ್ನು ಮಾರುತಿ ಸುಜುಕಿಗೆ ಹಂಚಿಕೊಳ್ಳುತ್ತದೆ. ಇಂಡೋ-ಜಪಾನೀಸ್ ಬ್ರ್ಯಾಂಡ್ ನಮ್ಮ ಮಾರುಕಟ್ಟೆಯಲ್ಲಿ ಹೊಸ ಎಂಪಿವಿಯನ್ನು ಬಿಡುಗಡೆಗೊಳಿಸಲಿದೆ. ಇದು 2023ರ ಆಗಸ್ಟ್ ತಿಂಗಳಿನಲ್ಲಿ ಭಾರತದಲ್ಲಿ ಪರಿಚಯಿಸಲಾಗುವುದು ಎಂದು ವರದಿಯಾಗಿದೆ. ಈ ಹೊಸ ಎಂಪಿವಿಯನ್ನು ಮಾರುತಿ ಸುಜುಕಿ ಕಂಪನಿಯು ತನ್ನ NEXA ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ.
ಹೊಸ ಟೊಯೊಟಾ ಇನೋವಾ ಹೈಕ್ರಾಸ್ ಆಧಾರಿತ ಮಾರುತಿ ಎಂಪಿವಿ ದೇಶದಲ್ಲಿ ಬ್ರ್ಯಾಂಡ್‌ನ ಅತ್ಯಂತ ದುಬಾರಿ ಮಾದರಿಯಾಗಿದೆ. ಈ ಹೊಸ ಮೂರು ಸಾಲು ಎಂಪಿವಿ ಟೊಯೊಟಾದ TNGA-C ಮಾಡ್ಯುಲರ್ ಪ್ಲಾಟ್‌ಫಾರ್ಮ್ ಅನ್ನು ಫ್ರಂಟ್-ವೀಲ್-ಡ್ರೈವ್ ಲೇಔಟ್‌ನೊಂದಿಗೆ ಆಧರಿಸಿದೆ. ಈ ಹೊಸ ಮಾದರಿಯು ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ನೀಡಲಾಗುತ್ತದೆ. ಇದು ಟೊಯೊಟಾದ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 2.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ನೀಡಬಹುದು.
ಈ ಸಂಯೋಜಿತವಾಗಿ ಈ ಕಾರು 186 ಬಿಹೆಚ್‍ಪಿ ಪವರ್ ಮತ್ತು 206 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಇ-ಸಿವಿಟಿ ಆಟೋಮ್ಯಾಟಿಕ್ ಯುನಿಟ್ ನೊಂದಿಗೆ ಜೋಡಿಸಲಾಗಿದೆ. ಈ ಕಾರು 21.1 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ. ಈ ಹೊಸ ಎಂಪಿವಿಯು 2.0 ಲೀಟರ್ NA ಪೆಟ್ರೋಲ್ ಎಂಜಿನ್ 174 ಬಿಹೆಚ್‍ಪಿ ಪವರ್ ಮತ್ತು 205 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ನಲ್ಲಿ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications