ಕನ್ನಡದ ಮಣ್ಣಿನಲ್ಲಿ ತಯಾರಾಗುವ ಟೊಯೊಟಾ ಇನೋವಾ ಆಧರಿತ ಮಾರುತಿ ಕಾರಿನ ವಿಶೇಷತೆಗಳು
ಜನಪ್ರಿಯ ಮತ್ತು ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಭಾರತೀಯ ಮಾರುಕಟ್ಟೆಯಲ್ಲಿ ದಶಕಗಳಿಂದ ಪಾರುಪತ್ಯ ಸಾಧಿಸುತ್ತಿದೆ. ಮಾರುತಿ ಸುಜುಕಿ ತನ್ನ ಪಾರುಪತ್ಯಯವನ್ನು ಮುಂದುವರೆಸಲು ಹೊಸ ಕಾರುಗಳನ್ನು ಪರಿಚಯಿಸುತ್ತಿವೆ. ಇಂದು ಮಾರುತಿ ಸುಜುಕಿ ತನ್ನ ಬಹುನಿರೀಷಿತ ಮಾರುತಿ ಸುಜುಕಿ ಇನ್ವಿಕ್ಟೋ (Maruti Suzuki Invicto) ಕಾರನ್ನು ಬಿಡುಗಡೆಗೊಳಿಸಿದೆ.
ಟೊಯೊಟಾ ಇನೋವಾ ಹೈಕ್ರಾಸ್ ಆಧಾರಿತ ಹೊಸ ಮಾರುತಿ ಸುಜುಕಿ ಇನ್ವಿಕ್ಟೋ ಕಾರನ್ನು ಟೊಯೊಟಾದ ಬಿಡದಿ ಸ್ಥಾವರದಲ್ಲಿ ತಯಾರಿಸಲಾಗುತ್ತದೆ. ಟೊಯೊಟಾ ಇನೋವಾ ಕಾರಿನ ಆಧರಿತ ಮಾರುತಿ ಸುಜುಕಿ ಇನ್ವಿಕ್ಟೋ ಕೂಡ ಇನೋವಾ ರೀತಿಯಲ್ಲೇ ಹೊಸ ಸಂಚಲನ ಸೃಷ್ಟಿಸುವ ಸಾಧ್ಯತೆಗಳಿದೆ. ಇನ್ವಿಕ್ಟೋ ಮಾರುತಿ ಸುಜುಕಿಯ ನೆಕ್ಸಾ ಡೀಲರ್‌ಶಿಪ್‌ನಲ್ಲಿ ಎಂಟನೇ ಕಾರು ಮಾದರಿಯಾಗಿದೆ. ಈ ಮಾರುತಿ ಸುಜುಕಿ ಇನ್ವಿಕ್ಟೋ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ರೂಪಾಂತರಗಳು ಮತ್ತು ಬೆಲೆ: ಮಾರುತಿ ಸುಜುಕಿ ಇನ್ವಿಕ್ಟೋ ಕಾರು ಮೂರು ರೂಪಾಂತರಗಳ ಹಂತಗಳಲ್ಲಿ ನೀಡಲಾಗುತ್ತದೆ. ಈ ಕಾರಿನ ಮೂಲ ರೂಪಾಂತರ ಝೀಟಾ+ (7-ಸೀಟರ್) ಬೆಲೆಯು ರೂ.24.79 ಲಕ್ಷವಾದರೆ, ಝೀಟಾ + (8-ಸೀಟರ್) ರೂಪಾಂತರದ ಬೆಲೆಯು ರೂ.24.84 ಲಕ್ಷವಾಗಿದೆ. ಇನ್ನು ಮಾರುತಿ ಸುಜುಕಿ ಇನ್ವಿಕ್ಟೋ ಟಾಪ್-ಸ್ಪೆಕ್ ಬೆಲೆಯು ರೂ.28.42 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.
ಬಣ್ಣಗಳ ಆಯ್ಕೆ: ಮಾರುತಿ ಸುಜುಕಿ ಇನ್ವಿಕ್ಟೋ ಕಾರು ನೆಕ್ಸಾ ಬ್ಲೂ, ಮಿಸ್ಟಿಕ್ ವೈಟ್, ಮೆಜೆಸ್ಟಿಕ್ ಸಿಲ್ವರ್ ಮತ್ತು ಸ್ಟಿಲರ್ ಬ್ರೌನ್ಸ್ ಎಂಬ ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಮಾರುತಿ ಇನ್ವಿಕ್ಟೋ ಭಾರತದಲ್ಲಿ ಟೊಯೊಟಾ ಮತ್ತು ಮಾರುತಿ ಸುಜುಕಿ ನಡುವೆ ಪ್ರಸ್ತುತ ಇರುವ ಬ್ಯಾಡ್ಜ್-ಸ್ವಾಪಿಂಗ್ ಒಪ್ಪಂದದ ಇತ್ತೀಚಿನ ಪುನರಾವರ್ತನೆಯಾಗಿದೆ. ಮಾರುತಿ ಸುಜುಕಿಯ ಹೊಸ ಇನ್ವಿಕ್ಟೊ ಕಾರು ಕೂಡ ರಿಬ್ಯಾಡ್ಜ್ ಮಾಡಲಾದ ಟೊಯೊಟಾ ಇನೋವಾ ಹೈಕ್ರಾಸ್ ಆಗಿದೆ.

ಎಂಜಿನ್: ಇನೋವಾ ಹೈಕ್ರಾಸ್‌ಗಿಂತ ಭಿನ್ನವಾಗಿ, ಹೊಸ ಮಾರುತಿ ಸುಜುಕಿ ಇನ್ವಿಕ್ಟೋ ಕೇವಲ ಒಂದು ಪವರ್‌ಟ್ರೇನ್ ಆಯ್ಕೆಯೊಂದಿಗೆ, ಸ್ಟ್ರಾಂಗ್ ಹೈಬ್ರಿಡ್‌ನೊಂದಿಗೆ ನೀಡಲಾಗಿದೆ. ಮಾರುತಿ ಸುಜುಕಿಯ ಹೈಬ್ರಿಡ್ ಸೆಟಪ್ ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್ ನೊಂದಿಗೆ e-CVT ಗೇರ್‌ಬಾಕ್ಸ್‌ಗೆ ಜೋಡಿಸಲಾದ NIMH ಬ್ಯಾಟರಿ ಪ್ಯಾಕ್‌ನೊಂದಿಗೆ ಎಲೆಕ್ಟ್ರಿಕ್ ಮೋಟರ್ ಅನ್ನು ಒಳಗೊಂಡಿದೆ.
ಪರ್ಫಾಮೆನ್ಸ್: ಈ ಕಾರಿನಲ್ಲಿ ಸಂಯೋಜಿತ ಹೈಬ್ರಿಡ್ ಸಿಸ್ಟಂ 184 bhp ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಕಾರು 9.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಮಾರುತಿ ಸುಜುಕಿ ಇನ್ವಿಕ್ಟೋ ಕಾರು ಬರೊಬ್ಬರಿ 23.24 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇದರಿಂದ ಹೆಚ್ಚಿನ ಗ್ರಾಹರನ್ನು ಸೆಳೆಯಬಹುದು.

ವಿನ್ಯಾಸ:ಮಾರುತಿ ಸುಜುಕಿ ಇನ್ವಿಕ್ಟೋ ಕಾರಿಗೆ ಸಂಸ್ಥೆಯ ನೆಕ್ಸಾ ಸರಣಿಯ ವಿಶಿಷ್ಟ ಲುಕ್ ಅನ್ನು ನೀಡಲಾಗಿದೆ. ಇದಕ್ಕಾಗಿ ಈ ಕಾರಿನಲ್ಲಿ ಹೊಚ್ಚಹೊಸ ಗ್ರಿಲ್ ಅನ್ನು ನೀಡಿದೆ. ಇದು ಸುಜುಕಿ ಬ್ಯಾಡ್ಜ್‌ಗೆ LED ಹೆಡ್‌ಲೈಟ್‌ಗಳನ್ನು ಸಂಪರ್ಕಿಸುವ ಕ್ರೋಮ್ ಸ್ಲ್ಯಾಟ್‌ಗಳನ್ನು ಹೊಂದಿದೆ. ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳಂತೆ ಹೆಡ್‌ಲ್ಯಾಂಪ್‌ಗಳು ಮತ್ತು ಡಿಆರ್‌ಎಲ್‌ಗಳನ್ನು ಸಹ ಮರು ನವೀಕರಿಸಲಾಗಿದೆ.
ಫೀಚರ್ಸ್: ಕಾರಿನ ಒಳಭಾಗಲ್ಲಿ ಐಷಾರಾಮಿ ಅಂಶಗಳನ್ನು ಹೊಂದಿದ್ದು, ಪ್ಲಶ್ ಅಪ್ಹೋಲ್ಸ್ಟರಿಯನ್ನು ಹೊಂದಿದೆ. ಇದರೊಂದಿಗೆ ಡ್ಯಾಶ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಗೆ ಬೆಂಬಲದೊಂದಿಗೆ 10.1-ಇಂಚಿನ ಇನ್ಫೋಟೈನ್‌ಮೆಂಟ್ ಯುನಿಟ್ ಹೊಂದಿದೆ. ಇನ್ನು ಈ ಕಾರಿನಲ್ಲಿ ಡ್ರೈವರ್ ಸೀಟ್ 8-ವೇ ಎಲೆಕ್ಟ್ರಿಕಲ್ ಹೊಂದಾಣಿಕೆ ಮತ್ತು ಎರಡನೇ ಸಾಲು ಕ್ಯಾಪ್ಟನ್ ಸೀಟ್‌ಗಳನ್ನು ಹೊಂದಿದೆ. ಇನ್ನು ದೊಡ್ಡ ಪನೋರಮಿಕ್ ಸನ್‌ರೂಫ್, ಪ್ರೀಮಿಯಂ ಆಡಿಯೊ ಸಿಸ್ಟಮ್, ಮತ್ತು ಸುಜುಕಿ ಕನೆಕ್ಟ್ ಸೂಟ್‌ನೊಂದಿಗೆ ಹಲವು ಫಿಚರ್ಸ್ ಗಳಿವೆ.


Click it and Unblock the Notifications