Maruti 3 Cars: ಮಾರುತಿ ಸುಜುಕಿಯ ಜಬರ್ದಸ್ತ್ ಸ್ವಿಫ್ಟ್, ಗ್ರಾಂಡ್ ವಿಟಾರಾ, ಡಿಸೈರ್ ಕಾರುಗಳು ಬರಲಿವೆ.. ವಿಶೇಷತೆ ಏನು?

ದೇಶದಲ್ಲಿ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ (Maruti Suzuki India Limited - MSIL) ಗುರುತಿಸಿಕೊಂಡಿದೆ. ಮತ್ತಷ್ಟು ಹೆಚ್ಚಿನ ಗ್ರಾಹಕರನ್ನು ಸೆಳೆಯುವಲ್ಲಿ ಕಂಪನಿಯು ಕಾರ್ಯಪ್ರವೃತ್ತವಾಗಿದ್ದು, ಮುಂದಿನ ವರ್ಷ (2024) ಮೂರು ಹೊಸ ಕಾರುಗಳನ್ನು ಬಿಡುಗಡೆಗೆ ಸಿದ್ಧತೆ ನಡೆಸಿದೆ.

ಮಾರುತಿ ಸುಜುಕಿಯ ಜನಪ್ರಿಯ ಹ್ಯಾಚ್‌ಬ್ಯಾಕ್‌ಗಳಲ್ಲಿ ಸ್ವಿಫ್ಟ್ (Swift) ಪ್ರಮುಖವಾಗಿದೆ. ಕಂಪನಿಯು ಹೈಬ್ರಿಡ್ ಮಾದರಿಯನ್ನು ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದ್ದು, ಇತ್ತೀಚೆಗೆ ಟೋಕಿಯೊ ಮೊಬಿಲಿಟಿ ಶೋ (2023)ನಲ್ಲಿ ಪ್ರದರ್ಶನಗೊಳಿಸಿತ್ತು. ಈ ಕಾರು, ಭಾರತದಲ್ಲಿ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿದ್ದು, ಗ್ರಾಹಕರಿಗೆ ನೂತನ ಸ್ವಿಫ್ಟ್ ಮೇಲೆ ಸಾಕಷ್ಟು ನೀರಿಕ್ಷೆಗಳು ಹೆಚ್ಚಾಗಿವೆ.

Maruti 3 Cars: ಮಾರುತಿ ಸುಜುಕಿಯ ಜಬರ್ದಸ್ತ್ ಸ್ವಿಫ್ಟ್, ಗ್ರಾಂಡ್ ವಿಟಾರಾ, ಡಿಸೈರ್ ಕಾರುಗಳು ಬರಲಿವೆ.. ವಿಶೇಷತೆ ಏನು?

ಮುಂಬರಲಿವ ಹೊಸ ಸ್ವಿಫ್ಟ್ ಪ್ರಮುಖ ಆಕರ್ಷಣೆಯೆಂದರೆ ಅದರ ಹೈಬ್ರಿಡ್ ಪವರ್‌ಟ್ರೇನ್. ಈ ಕಾರು, 1.2 - ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹಾಗೂ ಇ-ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಸಿಗುವ ಸಾಧ್ಯತೆಯಿದ್ದು, 30 - 35 kmpl ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. ಮತ್ತೊಂದು, ನಾನ್ ಹೈಬ್ರಿಡ್ 1.2 - ಲೀಟರ್ 3 - ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಆಯ್ಕೆಯೊಂದಿಗೂ ಸಿಗಬಹದು.

ನೂತನ ಮಾರುತಿ ಸುಜುಕಿ ಸ್ವಿಫ್ಟ್ ವಿನ್ಯಾಸ ಹಾಗೂ ವೈಶಿಷ್ಟ್ಯದ ವಿಚಾರದಲ್ಲಿ ಸಾಕಷ್ಟು ಬದಲಾವಣಿಗಳನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಡಿಸೈನ್ ವಿಚಾರದಲ್ಲಿ ಮರು-ವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್, ನವೀನವಾದ ಕಪ್ಪು ಬಣ್ಣದ ಗ್ರಿಲ್, ಆಕರ್ಷಕ ಎಲ್ಇಡಿ ಹೆಡ್‌ಲ್ಯಾಂಪ್‌, ಡ್ಯುಯಲ್ - ಟೋನ್ ವೀಲ್ಸ್ ಪಡೆದಿರಲಿದೆ. ವೈಶಿಷ್ಟ್ಯದ ವಿಚಾರಕ್ಕೆ ಬರುವುದಾದರೆ, ಇನ್ಫೋಟೈನ್‌ಮೆಂಟ್ ಸಿಸ್ಟಮ್‌, ಕನೆಕ್ಟ್ ಕಾರ್ ಕಾರ್ ಟೆಕ್, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್ ಒಳಗೊಂಡಿರುವ ನೀರಿಕ್ಷೆಯಿದೆ.

Maruti 3 Cars: ಮಾರುತಿ ಸುಜುಕಿಯ ಜಬರ್ದಸ್ತ್ ಸ್ವಿಫ್ಟ್, ಗ್ರಾಂಡ್ ವಿಟಾರಾ, ಡಿಸೈರ್ ಕಾರುಗಳು ಬರಲಿವೆ.. ವಿಶೇಷತೆ ಏನು?

ಹೈಬ್ರಿಡ್ ಪವರ್‌ಟ್ರೇನ್ ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಕೂಡ ಹೊಸ ಸ್ವಿಫ್ಟ್ ಕಾರಿನ ಜೊತೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದ್ದು, 2024ರ ಸೆಪ್ಟೆಂಬರ್ ತಿಂಗಳಲ್ಲಿ ಲಾಂಚ್ ಆಗಬಹುದು. ನೂತನ ಡಿಜೈರ್ ಕೂಡ ಹೈಬ್ರಿಡ್ ಸ್ವಿಫ್ಟ್ ಕಾರಿಗೆ ಹೋಲಿಕೆಯಾಗುತ್ತದೆ. ಆದರೆ, ಮುಂಭಾಗ ಹಾಗೂ ಹಿಂಭಾಗದಲ್ಲಿ ವಿನ್ಯಾಸದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಪಡೆದಿರಲಿದೆ ಎಂದು ಹೇಳಲಾಗಿದೆ.

ಮಾರುತಿ ಸುಜುಕಿ ಡಿಜೈರ್, ಸ್ವಿಫ್ಟ್ ಕಾರಿನಂತೆ ಇದ್ದರೂ, ಅದರ ಹಿಂಭಾಗದ ಬೂಟ್ ಮೂಲಕ ಇವೆರೆಡು ಬೇರೆ-ಬೇರೆ ಮಾದರಿಗಳೆಂದು ಸುಲಭವಾಗಿ ಗುರುತಿಸಬಹುದು. ಆದರೆ, ಕಂಪನಿಯು ಡಿಜೈರ್ ಕಾರಿನ ಯಾವುದೇ ಮಾದರಿಯನ್ನು ಪ್ರದರ್ಶಿಸುವುದು ಅಥವಾ ಟೆಸ್ಟ್ ಮಾಡಿರುವುದು ಕಂಡುಬಂದಿಲ್ಲ. ಇದು ಸಹ 30 - 35 kmpl ಮೈಲೇಜ್ ಕೊಡಬಹುದು ಎಂದು ಹೇಳಲಾಗಿದೆ.

Maruti 3 Cars: ಮಾರುತಿ ಸುಜುಕಿಯ ಜಬರ್ದಸ್ತ್ ಸ್ವಿಫ್ಟ್, ಗ್ರಾಂಡ್ ವಿಟಾರಾ, ಡಿಸೈರ್ ಕಾರುಗಳು ಬರಲಿವೆ.. ವಿಶೇಷತೆ ಏನು?

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Grand Vitara)ವನ್ನು 7- ಆಸನ ಆಯ್ಕೆಯಲ್ಲಿ ಬಿಡುಗಡೆಗೊಳಿಸಲು ಸಿದ್ಧತೆಯನ್ನು ನಡೆಸಿದೆ ಎಂದು ವರದಿಯಾಗಿದೆ. ಮುಂದಿನ ವರ್ಷ ಮಾರುಕಟ್ಟೆಗೆ ಬರಬಹುದು ಎನ್ನಲಾಗಿದೆ. ಆದರೆ, ಲಾಂಚ್, ವೈಶಿಷ್ಟ್ಯ ಹಾಗೂ ವಿನ್ಯಾಸದ ಬಗ್ಗೆ ಯಾವುದೇ ಅಧಿಕೃತ ವಿವರಗಳು ಲಭ್ಯವಿಲ್ಲ. ಈ ಕಾರಿಗೆ ಎಕ್ಸ್‌ಯುವಿ 700, ಟಾಟಾ ಸಫಾರಿ, ಹ್ಯುಂಡೈ ಅಲ್ಕಾಜರ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಗ್ರ್ಯಾಂಡ್ ವಿಟಾರಾ 5 ಆಸನ ಆಯ್ಕೆಯಲ್ಲಿ ರೂ. 10.70 ಲಕ್ಷದಿಂದ ರೂ.19.99 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗಲಿದ್ದು, ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ 19.38 kmpl ರಿಂದ 27.97 kmpl ಮೈಲೇಜ್ ನೀಡುತ್ತದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, November 27, 2023, 14:36 [IST]
English summary
Maruti suzuki launching 3 cars soon 30 35 mileage swift dzire grand vitara
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+