ಭರ್ಜರಿ ರಿಯಾಯಿತಿ ನೀಡಿದ ಮಾರುತಿ ಸುಜುಕಿ: ಯಾವ ಕಾರಿಗೆ ಎಷ್ಟು?
ಭಾರತದ ಪ್ರಮುಖ ವಾಹನ ತಯಾರಿಕ ಕಂಪನಿ ಮಾರುತಿ ಸುಜುಕಿ, ತನ್ನ ಆಯ್ದ ಕಾರುಗಳಿಗೆ ಈ ತಿಂಗಳು (ಜನವರಿ 2023) ರೂ.38,000 ರಿಯಾಯಿತಿ ಪ್ರಯೋಜನಗಳನ್ನು ನೀಡಿದೆ. ಆಲ್ಟೊ ಕೆ10, ಆಲ್ಟೊ 800, ಸೆಲೆರಿಯೊ ಹಾಗೂ ಸ್ವಿಫ್ಟ್ ಕಾರುಗಳ ಮೇಲೆ ವಿನಿಮಯ ಬೋನಸ್, ನಗದು ರಿಯಾಯಿತಿ ಮತ್ತು ಕಾರ್ಪೊರೇಟ್ ಪ್ರಯೋಜನಗಳು ಲಭ್ಯವಿವೆ.
ಮಾರುತಿ ಸುಜುಕಿ ಆಲ್ಟೊ ಕೆ10:
ಕಳೆದ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆಯಾದ ಆಲ್ಟೊ ಕೆ10 ಪೆಟ್ರೋಲ್ ಮತ್ತು ಸಿಎನ್‌ಜಿ ಆವೃತ್ತಿಗೆ ಕ್ರಮವಾಗಿ ಒಟ್ಟು ರೂ.38,000 ರಿಯಾಯಿತಿ ಪ್ರಯೋಜನ ಲಭ್ಯವಿದೆ. ಇದರಲ್ಲಿ ರೂ.15,000 ನಗದು ರಿಯಾಯಿತಿ, ರೂ.8,000 ಮೌಲ್ಯದ ಕಾರ್ಪೊರೇಟ್ ಪ್ರಯೋಜನ ಮತ್ತು ರೂ.15,000 ಮೌಲ್ಯದ ವಿನಿಮಯ ಬೋನಸ್‌ಗಳು ಸೇರಿವೆ. ಆಲ್ಟೊ K10ನ AMT ರೂಪಾಂತರಗಳು ರೂ.23,000 ಒಟ್ಟು ರಿಯಾಯಿತಿ ಪ್ರಯೋಜನವನ್ನು ಪಡೆಯುತ್ತವೆ. ಇದರಲ್ಲಿ ರೂ.8,000 ಕಾರ್ಪೊರೇಟ್ ಪ್ರಯೋಜನ ಮತ್ತು ರೂ.15,000 ವಿನಿಮಯ ಬೋನಸ್ ಸೇರಿವೆ.

ಮಾರುತಿ ಸುಜುಕಿ ಎಸ್ ಪ್ರೆಸ್ಸೊ:
ಹೈ-ರೈಡಿಂಗ್ ಹ್ಯಾಚ್‌ಬ್ಯಾಕ್‌ನ ಮ್ಯಾನುವಲ್ ರೂಪಾಂತರಗಳ ಮೇಲೆ ಕಂಪನಿಯು ಒಟ್ಟು ರೂ.36,000 ರಿಯಾಯಿತಿಯನ್ನು ನೀಡುತ್ತಿದೆ. ಇದರಲ್ಲಿ ರೂ.15,000 ನಗದು ರಿಯಾಯಿತಿ, ರೂ.6,000 ಮೌಲ್ಯದ ಕಾರ್ಪೊರೇಟ್ ರಿಯಾಯಿತಿ ಮತ್ತು ರೂ.15,000 ವಿನಿಮಯ ಬೋನಸ್‌ಗಳು ಸೇರಿವೆ. ಅಲ್ಲದೆ, ಎಸ್ ಪ್ರೆಸ್ಸೊದ ಎಎಂಟಿ ರೂಪಾಂತರಗಳು ಒಟ್ಟು ರೂ.21,000 ರಿಯಾಯಿತಿಯನ್ನು ಪಡೆಯುತ್ತಿವೆ. ಎಸ್ ಪ್ರೆಸ್ಸೊ CNG ಒಟ್ಟು ರೂ.35,100 ರಿಯಾಯಿತಿ ಆಫರ್ ಹೊಂದಿದ್ದು, ಇದರಲ್ಲಿ ರೂ.15,000 ಮೌಲ್ಯದ ನಗದು ರಿಯಾಯಿತಿ, ರೂ.5,100 ಮೌಲ್ಯದ ಕಾರ್ಪೊರೇಟ್ ಪ್ರಯೋಜನ ಮತ್ತು ರೂ.15,000 ಮೌಲ್ಯದ ವಿನಿಮಯ ಬೋನಸ್ ಸೇರಿವೆ.
ಮಾರುತಿ ಸುಜುಕಿ ವ್ಯಾಗನ್ ಆರ್:
ವ್ಯಾಗನ್ ಆರ್ ಕಾರಿನ ಎಲ್ಲಾ ಪೆಟ್ರೋಲ್ ಮ್ಯಾನುವಲ್ ರೂಪಾಂತರಗಳು ಈ ತಿಂಗಳು ಒಟ್ಟು ರೂ.33,000 ರಿಯಾಯಿತಿಯನ್ನು ಪಡೆಯುತ್ತಿವೆ. ಇದರಲ್ಲಿ ರೂ.10,000 ನಗದು ರಿಯಾಯಿತಿ, ರೂ 8,000 ಕಾರ್ಪೊರೇಟ್ ರಿಯಾಯಿತಿ ಸೇರಿದೆ. ಗ್ರಾಹಕರು, ವ್ಯಾಗನ್ ಆರ್‌ನ ಪೆಟ್ರೋಲ್ ಆಟೋಮೆಟಿಕ್ ಮತ್ತು ಸಿಎನ್‌ಜಿ ರೂಪಾಂತರಗಳಿಗೆ ಕ್ರಮವಾಗಿ ರೂ.30,100 ಮತ್ತು ರೂ.23,000 ಒಟ್ಟು ರಿಯಾಯಿತಿಯನ್ನು ಪಡೆಯಬಹುದು. ಮಾರುತಿ ಫೆಬ್ರವರಿ 2022ರಲ್ಲಿ ವ್ಯಾಗನ್ ಆರ್ ಅನ್ನು ನವೀಕರಿಸಿದ್ದು, ಡ್ಯುಯಲ್‌ಜೆಟ್ ತಂತ್ರಜ್ಞಾನದೊಂದಿಗೆ 1.0, 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ.
ಮಾರುತಿ ಸುಜುಕಿ ಸೆಲೆರಿಯೊ:
ಮಾರುತಿ ಸುಜುಕಿ ಸೆಲೆರಿಯೊದ ಎಲ್ಲಾ ಮ್ಯಾನುವಲ್ ರೂಪಾಂತರಗಳ ಮೇಲೆ ರೂ.31,000 ಒಟ್ಟು ರಿಯಾಯಿತಿಯನ್ನು ನೀಡುತ್ತಿದೆ. ಇದರಲ್ಲಿ ರೂ.10,000 ನಗದು ರಿಯಾಯಿತಿ, ರೂ.6,000 ಕಾರ್ಪೊರೇಟ್ ರಿಯಾಯಿತಿ ನೀಡುತ್ತಿದೆ. ಹ್ಯಾಚ್‌ಬ್ಯಾಕ್‌ನ AMT ಆವೃತ್ತಿ ಒಟ್ಟು ರೂ.21,000 ರೂ.ಗಳ ರಿಯಾಯಿತಿಯನ್ನು ಹೊಂದಿದೆ. ಆದರೆ, ಅದರ CNG ಆವೃತ್ತಿಯು ಒಟ್ಟು 30,100 ರೂ. ರಿಯಾಯತಿ ಆಫರ್ ಒಳಗೊಂಡಿದೆ. ಸೆಲೆರಿಯೊ 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಿದ್ದು, 67hp ಪವರ್ ಉತ್ಪಾದಿಸುವ 1.0-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಲಿದೆ.
ಮಾರುತಿ ಸುಜುಕಿ ಆಲ್ಟೊ 800:
ಮಾರುತಿ ಸುಜುಕಿಯ ಅತ್ಯಂತ ಕೈಗೆಟುಕುವ ಹ್ಯಾಚ್‌ಬ್ಯಾಕ್ ಆಲ್ಟೊ 800 ಆಗಿದೆ. 796ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದ್ದು, ಆಲ್ಟೊ 800 ಮೇಲೆ ರೂ.31,000 ವರೆಗಿನ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಇದರಲ್ಲಿ ರೂ.10,000 ನಗದು ರಿಯಾಯಿತಿ, ರೂ.6,000 ಕಾರ್ಪೊರೇಟ್ ಪ್ರಯೋಜನ ಮತ್ತು ರೂ.15,000 ವಿನಿಮಯ ಬೋನಸ್‌ಗಳು ಸೇರಿವೆ. ಈ ಹ್ಯಾಚ್‌ಬ್ಯಾಕ್‌ನ CNG ಆವೃತ್ತಿಯು ಒಟ್ಟು 30,100 ರೂಪಾಯಿಗಳ ರಿಯಾಯಿತಿಯನ್ನು ಹೊಂದಿದೆ.
ಮಾರುತಿ ಸುಜುಕಿ ಸ್ವಿಫ್ಟ್:
ಮಾರುತಿ ಸುಜುಕಿ ಸ್ವಿಫ್ಟ್ 90hp ಪವರ್ ಉತ್ಪಾದಿಸುವ 1.2-ಲೀಟರ್ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಅದು 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಿದೆ. ಈ ಹ್ಯಾಚ್‌ಬ್ಯಾಕ್ ರೂ.27,000 ರಿಯಾಯತಿ ಪ್ರಯೋಜನಳನ್ನು ಹೊಂದಿದೆ. ಇದರಲ್ಲಿ ರೂ.5,000 ನಗದು ರಿಯಾಯಿತಿ, ರೂ.7,000 ಕಾರ್ಪೊರೇಟ್ ಪ್ರಯೋಜನ ಮತ್ತು ರೂ.15,000 ವಿನಿಮಯ ಬೋನಸ್ ಒಳಗೊಂಡಿದೆ. ಮಾರುತಿ ಸ್ವಿಫ್ಟ್ ಸಿಎನ್‌ಜಿ ಆವೃತ್ತಿಯು ಒಟ್ಟು ರೂ.10,100 ರಿಯಾಯಿತಿಯನ್ನು ಹೊಂದಿದೆ.
ಮಾರುತಿ ಸುಜುಕಿ Eeco:
ಹೊಸ 1.2-ಲೀಟರ್ K-ಸರಣಿ ಎಂಜಿನ್ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳನ್ನು ಇತ್ತೀಚೆಗೆ ನವೀಕರಿಸಿದ Eeco ಕಾರು ಹೊಂದಿದ್ದು, ಈ ತಿಂಗಳು ಒಟ್ಟು ರೂ.25,100 ರಿಯಾಯಿತಿಯನ್ನು ಹೊಂದಿದ್ದು, ಇದು 10,000 ರೂಪಾಯಿ ನಗದು ರಿಯಾಯಿತಿ, 5,100 ರೂಪಾಯಿಗಳ ಕಾರ್ಪೊರೇಟ್ ರಿಯಾಯಿತಿ ಮತ್ತು 10,000 ರೂಪಾಯಿ ವಿನಿಮಯ ಬೋನಸ್ ಅನ್ನು ಒಳಗೊಂಡಿದೆ. ಗ್ರಾಹಕರು, CNG ರೂಪಾಂತರಗಳ ಮೇಲೆ ಒಟ್ಟು 15,100 ರೂಪಾಯಿ ರಿಯಾಯಿತಿಯನ್ನು ಪಡೆಯಬಹುದು.
ಮಾರುತಿ ಸುಜುಕಿ ಡಿಜೈರ್:
ಸ್ವಿಫ್ಟ್‌ನ ಕಾಂಪ್ಯಾಕ್ಟ್ ಸೆಡಾನ್ ಪ್ರತಿರೂಪವಾಗಿ, ಡಿಜೈರ್ ಮಾರುಕಟ್ಟೆಯಲ್ಲಿ ಹುಂಡೈ ಔರಾ, ಹೋಂಡಾ ಅಮೇಜ್ ಮತ್ತು ಟಾಟಾ ಟಿಗೋರ್‌ಗಳಿಗೆ ಭಾರೀ ಪೈಪೋಟಿ ನೀಡುತ್ತಿದೆ. ಇದು 90hp ಪವರ್ 1.2-ಲೀಟರ್ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಅಥವಾ AMT ಗೇರ್‌ಬಾಕ್ಸ್‌ನೊಂದಿಗೆ ಖರೀದಿಗೆ ಲಭ್ಯವಿದೆ. ಈ ತಿಂಗಳು, ಡಿಜೈರ್‌ನ AMT ಮತ್ತು MT ಎರಡೂ ರೂಪಾಂತರಗಳು ಒಟ್ಟು ರೂ.17,000 ರಿಯಾಯಿತಿಯನ್ನು ಹೊಂದಿವೆ. ಇದರಲ್ಲಿ ರೂ.7,000 ಮೌಲ್ಯದ ಕಾರ್ಪೊರೇಟ್ ಪ್ರಯೋಜನ ಮತ್ತು ರೂ.10,000 ವಿನಿಮಯ ಬೋನಸ್ ಸೇರಿವೆ.


Click it and Unblock the Notifications