Maruti Suzuki: ಅಕ್ಟೋಬರ್ ಒಂದೇ ತಿಂಗಳು, ಮಾರುತಿ ಸುಜುಕಿಯಿಂದ 1.99 ಲಕ್ಷ ಕಾರು ಮಾರಾಟ.. ಎದುರಾಳಿಗಳಿಗೆ ನಡುಕ!

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಗುರುತಿಸಿಕೊಂಡಿದೆ. ಪ್ರತಿ ಬಾರಿಯಂತೆ ಈ ಸಲವು ಕಾರು ಮಾರಾಟದಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದು, ನವರಾತ್ರಿ ಹಬ್ಬದ ಕಾರಣ, ಅಕ್ಟೋಬರ್ (2023) ತಿಂಗಳು ಕಂಪನಿ ಹೊಸದೊಂದು ದಾಖಲೆ ಮಾಡಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಈ ಅಕ್ಟೋಬರ್‌ನಲ್ಲಿ ಮಾರುತಿ ಸುಜುಕಿ ಒಟ್ಟಾರೆ 1,99,217 ಯುನಿಟ್ ಕಾರು ಸೇಲ್ ಮಾಡಿ, ಹೋದ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ (1,67,520 ಯುನಿಟ್) ಶೇಕಡ 19% ಅಧಿವೃದ್ಧಿ ಸಾಧಿಸಿದೆ. ದೇಶೀಯ ಮಾರುಕಟ್ಟೆಯಲ್ಲೂ ಉತ್ತಮ ಬೆಳೆವಣಿಗೆ ಕಂಡಿದ್ದು, 2022ರ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ (1,47,072 ಯುನಿಟ್) ಕಳೆದ ತಿಂಗಳು 1,77,266 ಯುನಿಟ್ ಮಾರಿ, ಶೇಕಡ 21% ಪ್ರಗತಿ ದಾಖಲಿಸಿದೆ.

Maruti Suzuki: ಅಕ್ಟೋಬರ್ ಒಂದೇ ತಿಂಗಳು, ಮಾರುತಿ ಸುಜುಕಿಯಿಂದ 1.99 ಲಕ್ಷ ಕಾರು ಮಾರಾಟ.. ಎದುರಾಳಿಗಳಿಗೆ ನಡುಕ!

ಯುಟಿಲಿಟಿ (utility) ವಾಹನ ಮಾರಾಟದಲ್ಲಿ ಮಾರುತಿ ಸುಜುಕಿಗೆ ಸರಿ ಸಾಟಿಯೇ ಇಲ್ಲ ಎಂದು ಹೇಳಬಹುದು. ಈ ವರ್ಷ 59,147 ಯುನಿಟ್ ಕಾರುಗಳನ್ನು ಭರ್ಜರಿಯಾಗಿ ಸೇಲ್ ಮಾಡಿದೆ. ಕಳೆದ ವರ್ಷ 30,971 ಯುನಿಟ್ ಮಾರಿತ್ತು. ಈ ವಿಭಾಗದಲ್ಲಿ ಕಂಪನಿಯು ಬ್ರೆಝಾ, ಎರ್ಟಿಗಾ, ಫ್ರಾಂಕ್ಸ್, ಗ್ರ್ಯಾಂಡ್ ವಿಟಾರಾ, ಜಿಮ್ನಿ, ಇನ್ವಿಕ್ಟೊ ಕಾರುಗಳನ್ನು ಮಾರಾಟ ಮಾಡುತ್ತಿದೆ.

ಸಣ್ಣ ಕಾರು (mini segment) ವಿಭಾಗದಲ್ಲಿ ಆಲ್ಟೊ (Alto) ಹಾಗೂ ಎಸ್-ಪ್ರೆಸ್ಸೊ (S-Presso) ಮಾರಾಟ ತೀವ್ರತರವಾಗಿ ಕುಸಿದಿದೆ. ಮಾರುತಿ ಸುಜುಕಿ 2022ರಲ್ಲಿ 24,936 ಯುನಿಟ್ ಕಾರನ್ನು ಸೇಲ್ ಮಾಡಿತ್ತು. ಆದರೆ, ಈ ವರ್ಷ 14,568 ಯುನಿಟ್ ಮಾರಾಟಗೊಳಿಸಲು ಮಾತ್ರ ಶಕ್ತವಾಗಿದೆ. ಕಾಂಪ್ಯಾಕ್ಟ್ ಕಾರುಗಳಾದ ಬಲೆನೊ, ಸೆಲೆರಿಯೊ, ಡಿಜೈರ್, ಇಗ್ನಿಸ್, ಸ್ವಿಫ್ಟ್, ವ್ಯಾಗನ್ ಆರ್ ಸೇಲ್ ನಲ್ಲಿ ಉತ್ತಮ ಯಶಸ್ಸು ಸಾಧಿಸಿದೆ.

Maruti Suzuki: ಅಕ್ಟೋಬರ್ ಒಂದೇ ತಿಂಗಳು, ಮಾರುತಿ ಸುಜುಕಿಯಿಂದ 1.99 ಲಕ್ಷ ಕಾರು ಮಾರಾಟ.. ಎದುರಾಳಿಗಳಿಗೆ ನಡುಕ!

ಈ ಅಕ್ಟೋಬರ್‌ನಲ್ಲಿ 80,662 ಯುನಿಟ್ ಸೇಲ್ ಮಾಡಿದೆ. ಕಳೆದ ವರ್ಷ 73,685 ಯುನಿಟ್ ಕಾಂಪ್ಯಾಕ್ಟ್ ಕಾರುಗಳನ್ನು ಮಾರಾಟ ಮಾಡಿತ್ತು. ಅದೇಕೋ ಮಿಡ್-ಸೈಜ್ ಸೆಡಾನ್ (midsize sedan) ಸಿಯಾಜ್ ಮಾರಾಟದಲ್ಲಿ ಹಿಂದುಳಿದಿದ್ದು, ಕಳೆದ ತಿಂಗಳು 695 ಯುನಿಟ್ ಸೇಲ್ ಮಾಡಿದೆ. ಆದರೆ, ಹೋದ ವರ್ಷ 1,884 ಮಾರಾಟ ಮಾಡಿತ್ತು. ಮಾರುತಿ ಸುಜುಕಿಯ ರಫ್ತು ಕೊಂಚ ಮಟ್ಟಿಗೆ ಸುಧಾರಿಸಿದ್ದು, ಅಕ್ಟೋಬರ್‌ನಲ್ಲಿ 21,951 ಯುನಿಟ್ ರಫ್ತು ಮಾಡಿದೆ.

ಮಾರುತಿ ಸುಜುಕಿಯ ಕೆಲವೊಂದು ಜನಪ್ರಿಯ ಕಾರು ಮಾದರಿಗಳ ಬಗ್ಗೆ ತಿಳಿಯೋಣ. ಮೊದಲಿಗೆ ಗ್ರ್ಯಾಂಡ್ ವಿಟಾರಾ ರೂ.10.70 ಲಕ್ಷದಿಂದ ರೂ.19.95 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್, 5-ಸ್ವೀಡ್ ಮ್ಯಾನುವಲ್, 6 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ. 19.38 - 27.97 kmpl ಮೈಲೇಜ್ ಕೊಡುತ್ತದೆ.

Maruti Suzuki: ಅಕ್ಟೋಬರ್ ಒಂದೇ ತಿಂಗಳು, ಮಾರುತಿ ಸುಜುಕಿಯಿಂದ 1.99 ಲಕ್ಷ ಕಾರು ಮಾರಾಟ.. ಎದುರಾಳಿಗಳಿಗೆ ನಡುಕ!

ಮತ್ತೊಂದು ಜನಪ್ರಿಯ ಮಾದರಿ ಸ್ವಿಫ್ಟ್ ಕುರಿತು ಮಾತನಾಡುವುದಾದರೆ, ಇದು ರೂ.5.99 ಲಕ್ಷದಿಂದ ರೂ.9.03 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಎಸಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮಾರುತಿ ಸುಜುಕಿ ಬಲೆನೊ, ರೂ.6.61 ಲಕ್ಷದಿಂದ ರೂ.9.88 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಇದು ಕೂಡ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದ್ದು, 22.35 - 22.94 kmpl ಮೈಲೇಜ್ ನೀಡುತ್ತದೆ. 9 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, November 2, 2023, 17:36 [IST]
English summary
Maruti suzuki sales in october recorded history details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+