Maruti Suzuki: ಭಾರತದಲ್ಲಿ ಮಾರುತಿ ಸುಜುಕಿಯೇ ಅಗ್ರಗಣ್ಯ, ಅದರ ಕಾರುಗಳೇ ಬೆಸ್ಟ್ ಅಂತೇ.. ಮತ್ತೆ ಸಾಬೀತು!

ಭಾರತದಲ್ಲಿ ಮಾರುತಿ ಸುಜುಕಿ (Maruti Suzuki) ಪ್ರಮುಖ ವಾಹನ ತಯಾರಕ ಕಂಪನಿಯಾಗಿದೆ. ಅದರ ಕಾರುಗಳು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಸದ್ಯ, ಜೂನ್ ತಿಂಗಳ (2023) ಮಾರಾಟ ವರದಿ ಪ್ರಕಟಗೊಂಡಿದ್ದು, ಕಂಪನಿಯು ಸ್ಪರ್ಧಾತ್ಮಕ ಪ್ರಗತಿಯನ್ನು ಕಂಡಿದೆ.

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL), ಕಳೆದ ಜೂನ್ ತಿಂಗಳ ಮಾರಾಟ ವರದಿಯಲ್ಲಿ ಸಕಾರಾತ್ಮಕ ಬೆಳವಣಿಗೆ ಸಾಧಿಸಿದೆ. ಒಟ್ಟು 1,59,418 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ (2022) ಇದೇ ಅವಧಿಗೆ ಹೋಲಿಸಿದರೆ, (1,55,857 ಯುನಿಟ್) ವರ್ಷದಿಂದ ವರ್ಷಕ್ಕೆ (YoY) ಶೇಕಡ 2% ಪ್ರಗತಿ ಕಂಡಿದೆ. ಈ ಮೂಲಕ ಮತ್ತೆ ದೇಶದಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

Maruti Suzuki: ಭಾರತದಲ್ಲಿ ಮಾರುತಿ ಸುಜುಕಿಯೇ ಅಗ್ರಗಣ್ಯ, ಅದರ ಕಾರುಗಳೇ ಬೆಸ್ಟ್ ಅಂತೇ.. ಮತ್ತೆ ಸಾಬೀತು!

ದೇಶೀಯ ಪ್ರಯಾಣಿಕ ವಾಹನ ಮಾರಾಟದದಲ್ಲೂ ಕಂಪನಿ ಉತ್ತಮ ಸಾಧನೆಯನ್ನು ಮಾಡಿದೆ. ಕಳೆದ ತಿಂಗಳಲ್ಲಿ 1,33,027 ಯುನಿಟ್ ವಾಹನಗಳನ್ನು ಸೇಲ್ ಮಾಡಿ, 2022ರ ಜೂನ್ ತಿಂಗಳಿಗೆ ಹೋಲಿಸಿದರೆ (1,22,687 ಯುನಿಟ್) ವರ್ಷದಿಂದ ವರ್ಷದಿಂದ ಶೇಕಡ 8% ಬೆಳವಣಿಗೆ ಸಾಧಿಸಿದೆ. ಅದೇಕೋ ಮಿನಿ ಕಾರ್ ಸೆಗ್ಮೆಂಟ್ ನಲ್ಲಿ ಕೊಂಚ ಹಿನ್ನೆಡೆ ಅನುಭವಿಸಿದೆ.

ಕಳೆದ ಜೂನ್ ತಿಂಗಳು ಆಲ್ಟೊ ಮತ್ತು ಎಸ್-ಪ್ರೆಸ್ಸೊ ಕಾರುಗಳ 14,054 ಯುನಿಟ್ ಮಾರಾಟ ಮಾಡಿ, 2022ರ ಇದೇ ಅವಧಿಗೆ ಹೋಲಿಸಿದರೆ (14,442 ಯುನಿಟ್) ವರ್ಷದಿಂದ ವರ್ಷಕ್ಕೆ ಶೇಕಡ 2.68% ಕುಸಿತ ದಾಖಲಿಸಿದೆ. ಹಬ್ಬಗಳ ಸೀಸನ್ ಇಲ್ಲದ ಹಿನ್ನೆಲೆ, ಕಾಂಪೆಕ್ಟ್ ಕಾರುಗಳಾದ ಸ್ವಿಫ್ಟ್, ಸೆಲೆರಿಯೊ, ಇಗ್ನಿಸ್, ಬಲೆನೊ ಮತ್ತು ಡಿಜೈರ್ ಮಾರಾಟದಲ್ಲೂ ಇಳಿಕೆ ಕಂಡಿದೆ.

Maruti Suzuki: ಭಾರತದಲ್ಲಿ ಮಾರುತಿ ಸುಜುಕಿಯೇ ಅಗ್ರಗಣ್ಯ, ಅದರ ಕಾರುಗಳೇ ಬೆಸ್ಟ್ ಅಂತೇ.. ಮತ್ತೆ ಸಾಬೀತು!

ಜೂನ್ ತಿಂಗಳಲ್ಲಿ (2023) 64,471 ಯುನಿಟ್ ಕಾರುಳನ್ನು ಮಾರಾಟ ಮಾಡಿದೆ. ವರ್ಷದಿಂದ ವರ್ಷದಿಂದ ವರ್ಷಕ್ಕೆ ಶೇಕಡ 17.07% ಕುಸಿತ ಕಂಡಿದೆ. ಆದರೆ, ಕಳೆದ ವರ್ಷದ ಇದೇ ಅವಧಿಯಲ್ಲಿ 77,746 ಯುನಿಟ್ ಕಾರುಗಳನ್ನು ಸೇಲ್ ಮಾಡಿತ್ತು. ಮಿಡ್ ಸೈಜ್ ಸೆಡಾನ್ ಸಿಯಾಜ್ ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಕಂಡಿದೆ.

ಜೂನ್ ತಿಂಗಳಲ್ಲಿ 1,744 ಯುನಿಟ್ ಸಿಯಾಜ್ ಕಾರುಗಳನ್ನು ಸೇಲ್ ಮಾಡಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (1,507 ಯುನಿಟ್) ಶೇಕಡ 15.72% ಪ್ರಗತಿ ಸಾಧಿಸಿದೆ. ಕಂಪನಿಯು ಎಸ್‌ಯುವಿ ಹಾಗೂ ಎಂಪಿವಿ ಮಾರಾಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಒಟ್ಟು 43,404 ಯುನಿಟ್‌ ಎಸ್‌ಯುವಿ, ಎಂಪಿವಿಗಳನ್ನು ಕಳೆದ ತಿಂಗಳು ಸೇಲ್ ಮಾಡಿದೆ.

ಹೋದ ವರ್ಷದ ಇದೇ ಅವಧಿಗೆ ಹೋಲಿಸಿದರೆ (18,860 ಯುನಿಟ್) ವರ್ಷದಿಂದ ವರ್ಷಕ್ಕೆ 130.13% ಬೆಳವಣಿಗೆ ಕಂಡಿದೆ. ಇದಕ್ಕೆ ಕಾರಣ, ಗ್ರ್ಯಾಂಡ್ ವಿಟಾರಾ, ನ್ಯೂ ಜನರೇಷನ್ ಬ್ರೆಝಾ, ಫ್ರಾಂಕ್ಸ್ ಕಾರುಗಳು. ಆದರೆ, ಇತ್ತಿಚೆಗೆ ಬಿಡುಗಡೆಯಾದ ಆಫ್-ರೋಡ್ ಎಸ್‌ಯುವಿ 5 ಡೋರ್ ಜಿಮ್ನಿ ಮಾರಾಟದಲ್ಲಿ ಯಾವ ರೀತಿ ಪ್ರಗತಿ ಕಂಡಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ವಿದೇಶಗಳಿಗೆ ರಫ್ತು ಮಾಡುವ ವಿಚಾರದಲ್ಲಿ ಮಾರುತಿ ಸುಜುಕಿ, ಹಿಂದೆ ಬಿದ್ದಂತೆ ಕಾಣುತ್ತಿದೆ. ಕಳೆದ ಜೂನ್ ತಿಂಗಳಲ್ಲಿ 19,770 ಯುನಿಟ್ ಎಕ್ಸ್ಪೋರ್ಟ್ ಮಾಡಿ, 2022ರ ಇದೇ ಅವಧಿಗೆ ಹೋಲಿಸಿದರೆ (23,833 ಯುನಿಟ್) ವರ್ಷದಿಂದ ವರ್ಷಕ್ಕೆ ಶೇಕಡ 17% ಕುಸಿತ ಕಂಡಿದೆ. ಇನ್ನು, ಟೊಯೊಟಾ ಇನ್ನೋವಾ ಹೈಕ್ರಾಸ್‌ ಆಧಾರಿತ 'ಇನ್ವಿಕ್ಟೋ' ಪ್ರೀಮಿಯಂ ಎಂಪಿವಿಯನ್ನು ಕಂಪನಿಯು ಜುಲೈ 5ರಂದು ಪರಿಚಯಿಸಲಿದೆ.

Article Published On: Sunday, July 2, 2023, 9:00 [IST]
English summary
Maruti suzuki sales up 2 percentage june details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+