ಕಾರು ಮಾರಾಟದಲ್ಲಿ ಸರಿಸಾಟಿ ಇಲ್ಲದೇ ಮುನ್ನುಗುತ್ತಿರುವ ಮಾರುತಿ ಸುಜುಕಿ: 1.72 ಲಕ್ಷ ಕಾರುಗಳ ಮಾರಾಟ
ಜನಪ್ರಿಯ ಮತ್ತು ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) 2023ರ ಫೆಬ್ರವರಿ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ, ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು ಒಟ್ಟು 1,72,321 ಯುನಿಟ್‌ಗಳನ್ನು ಮಾರಾಟ ಮಾಡಿದೆ.
2023ರ ಫೆಬ್ರವರಿ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು 150,823 ಯುನಿಟ್‌ಗಳ ಸ್ಥಳೀಯ ಮಾರಾಟ, ಇತರ 4,291 ಯುನಿಟ್‌ಗಳನ್ನು ರಫ್ತು ಮಾಡಿದೆ. ಎಲೆಕ್ಟ್ರಾನಿಕ್ ಯುನಿಟ್ ಗಳ ಕೊರತೆಯು ವಾಹನ ಉತ್ಪಾದನೆಯ ಮೇಲೆ ಸ್ವಲ್ಪ ಪರಿಣಾಮ ಬೀರಿದೆ ಎಂದು ದೇಶದ ಅತಿದೊಡ್ಡ ಕಾರು ಉತ್ಪಾದಕರು ಹೇಳಿದ್ದಾರೆ. ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ 1,50,823 ಯೂನಿಟ್‌ಗಳು ಮಾರಾಟವಾಗಿವೆ. ಇನ್ನು 2023ರ ಫೆಬ್ರವರಿ ತಿಂಗಳಿನಲ್ಲಿ 1,37,607 ಯುನಿಟ್ ಗಳು ಮಾರಾಟವಾಗಿವೆ.

ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.9.60 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ತಿಂಗಳು ಮಾರುತಿ ಸುಜುಕಿಯ S-Presso ಮತ್ತು Alto ಅನ್ನು ಒಳಗೊಂಡಿರುವ ಮಿನಿ ವಿಭಾಗದ 21,875 ಯುನಿಟ್‌ಗಳು ಮಾರಾಟವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 19,691 ಯುನಿಟ್‌ಗಳು ಮಾರಾಟವಾಗಿತ್ತು. ಇದು ಶೇ.11.09 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಸಿಯಾಜ್ 1,912 ಯುನಿಟ್‌ಗಳ ವಿರುದ್ಧ 792 ಯುನಿಟ್‌ಗಳು ಮಾರಾಟವಾಗಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇ.58.57 ರಷ್ಟು ಕುಸಿತವನ್ನು ಕಂಡಿದೆ.
ಇನ್ನು ಮಾರುತಿ ಸುಜುಕಿ ಕಂಪನಿಯು ಕಾಂಪ್ಯಾಕ್ಟ್ ವಾಹನಗಳಾದ ಬಲೆನೊ, ಸೆಲೆರಿಯೊ, ಡಿಜೈರ್, ಇಗ್ನಿಸ್, ಸ್ವಿಫ್ಟ್, ಟೂರ್ ಎಸ್ ಮತ್ತು ವ್ಯಾಗನ್‌ಆರ್ ಕಳೆದ ತಿಂಗಳು ಒಟ್ಟು 79,898 ಯುನಿಟ್‌ಗಳನ್ನು ನೋಂದಾಯಿಸಿವೆ, ಇದು 77,795 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 2.70 ರಷ್ಟು ಹೆಚ್ಚಳವಾಗಿದೆ. ಬ್ರೆಝಾ, ಎರ್ಟಿಗಾ, ಎಕ್ಸ್‌ಎಲ್ 6 ಮತ್ತು ಗ್ರ್ಯಾಂಡ್ ವಿಟಾರಾವನ್ನು ಸಂಯೋಜಿಸುವ ಯುವಿ ಶ್ರೇಣಿಯು 2023ರ ಫೆಬ್ರವರಿ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಒಟ್ಟು 33,550 ಯುನಿಟ್ ಗಳು ಮಾರಾಟವಾಗಿವೆ.
ಇದು 2022ರ ಅದೇ ಅವಧಿಯಲ್ಲಿ 25,360 ಯುನಿಟ್‌ಗಳು ಮಾರಾಟವಾಗಿತ್ತು. ಇದು ವರ್ಷದಿಂದ ವರ್ಷಕ್ಕೆ 32.29 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇನ್ನು ಹೊಸ ತಲೆಮಾರಿನ ಬ್ರೆಝಾ ಮತ್ತು ಹೊಸ ಗ್ರ್ಯಾಂಡ್ ವಿಟಾರಾ ಆಗಮನವು ಎಸ್‍ಯುವಿ ವಿಭಾಗದಲ್ಲಿ ಹೆಚ್ಚಿನ ಮಾರುಕಟ್ಟೆ ಪಾಲನ್ನು ಹೆಚ್ಚಿಸುವಲ್ಲಿ ನಿಸ್ಸಂಶಯವಾಗಿ ಸಹಾಯ ಮಾಡಿದೆ. ಮಾರುತಿ ಸುಜುಕಿ ಇಕೋ ಮಾದರಿಯ 9,190 ಯುನಿಟ್‌ಗಳ ವಿರುದ್ಧ 11,352 ಯುನಿಟ್ ಮಾರಾಟವಾಗಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇ.23.52 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.
ಇನ್ನು ಸೂಪರ್ ಕ್ಯಾರಿ LCV 3,659 ಯುನಿಟ್‌ಗಳ ವಿರುದ್ಧ 3,356 ಯುನಿಟ್‌ಗಳು ಮಾರಾಟವಾಗಿದ್ದು, ಇದು ಶೇ. 8.28 ರಷ್ಟು ಕುಸಿತವನ್ನು ಕಂಡಿದೆ. 1,50,823 ಯೂನಿಟ್‌ಗಳ ಒಟ್ಟು ದೇಶೀಯ ಮಾರಾಟವು ಫೆಬ್ರವರಿ 2022 ರಲ್ಲಿ 1,37,607 ಯುನಿಟ್ ಮಾರಾಟಕ್ಕೆ ಹೋಲಿಸಿದರೆ 9.60 ಪ್ರತಿಶತದಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇನ್ನ್ ಇತ್ತೀಚೆಗೆ 2010ರಿಂದ ಮಾರಾಟವಾಗುತ್ತಿರುವ Eeco ವ್ಯಾನ್ ಈವರೆಗೆ ಬರೋಬ್ಬರಿ 10 ಲಕ್ಷ ಯುನಿಟ್ ಮಾರಾಟವಾಗಿ ಹೊಸ ಮೈಲಿಗಲ್ಲು ಸಾಧಿಸಿದೆ.
ಇನ್ನು ಮಾರುತಿ ಸುಜುಕಿ ಕಂಪನಿಯು ತನ್ನ ಕಾಂಪ್ಯಾಕ್ಟ್ ಅರ್ಬನ್ ಕಾರ್ ಇಗ್ನಿಸ್‌ನ ಬೆಲೆಯನ್ನು ರೂ,27,000 ವರೆಗೆ ಹೆಚ್ಚಿಸಿದೆ. ಈ ಹೊಸ ಮಾರುತಿ ಸುಜುಕಿ ಇಗ್ನಿಸ್ ಕಾರು ಇದೀಗ ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ) ಯನ್ನು ಕೂಡ ಪಡೆದುಕೊಂಡಿದೆ. ಈ ಸುರಕ್ಷತಾ ಫೀಚರ್ಸ್ ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ. ಈ ಮೂಲಕ ಸುರಕ್ಷತಾ ವಿಷಯದಲ್ಲಿ ಈ ಕಾರು ಸುಧಾರಣೆಯನ್ನು ಕಂಡಿದೆ.
ಇನ್ನು ಮಾರುತಿ ಸುಜುಕಿ ತನ್ನ 2023ರ ಆಟೋ ಎಕ್ಸ್‌ಪೋದಲ್ಲಿ ಬಲೆನೊ ಆಧಾರಿತ ಹೊಸ ಫ್ರಾಂಕ್ಸ್ ಎಸ್‍ಯುವಿಯನ್ನು ಅನಾವರಣಗೊಳಿಸಿತು. ಮಾರುತಿ ಸುಜುಕಿ ಬಲೆನೊ ಹ್ಯಾಚ್‌ಬ್ಯಾಕ್ ಅನ್ನು ಆಧರಿಸಿರುವ ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ ಮಾದರಿಯು ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೆ ಸಜ್ಜಾಗುತ್ತಿರುವ ಈ ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿಯು ಇತ್ತೀಚೆಗೆ ರಸ್ತೆಯಲ್ಲಿ ಕಾಣಿಸಿಕೊಂಡಿದ್ದು, ಇದು ಬಿಳಿ ಬಣ್ಣವನ್ನು ಹೊಂದಿದೆ.


Click it and Unblock the Notifications