ಸಿಂಗಲ್ ಚಾರ್ಜ್‌ನಲ್ಲಿ 521 ಕಿ.ಮೀ ರೇಂಜ್: ಭಾರತದಲ್ಲಿ Mercedes-Benz EQE 500 ಬಿಡುಗಡೆ
ಮರ್ಸಿಡಿಸ್ ಬೆಂಝ್ (Mercedes-Benz) ಭಾರತದಲ್ಲಿ EQB SUV ಮತ್ತು EQS ಸೆಡಾನ್ ಬಿಡುಗಡೆಯ ನಂತರ ಹೊಸ EQE 500 4ಮ್ಯಾಟಿಕ್ SUV ಅನ್ನು 1.39 ಕೋಟಿ ರೂ.ಗಳಿಗೆ (ಎಕ್ಸ್ ಶೋ ರೂಂ) ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ SUV ಭಾರತದಲ್ಲಿ ಜರ್ಮನ್ ವಾಹನ ತಯಾರಕರ ಮೂರನೇ ಎಲೆಕ್ಟ್ರಿಕ್ ಮಾದರಿಯಾಗಿದೆ.
ಹೊಸ Mercedes-Benz EQE ಎಲೆಕ್ಟ್ರಿಕ್ SUV ಅನ್ನು Mercedes-Benz EQE 500 ಸೆಡಾನ್‌ನಂತೆಯೇ ಅದೇ EVA (ಎಲೆಕ್ಟ್ರಿಕ್ ವೆಹಿಕಲ್ ಆರ್ಕಿಟೆಕ್ಚರ್) ಪ್ಲಾಟ್‌ಫಾರ್ಮ್‌ನಿಂದ ನಿರ್ಮಿಸಲಾಗಿದ್ದು, ಕೇವಲ 1 ರೂಪಾಂತರದಲ್ಲಿ ಮಾತ್ರ ಲಭ್ಯವಿದೆ (EQE 500 4ಮ್ಯಾಟಿಕ್). ಈ ರೂಪಾಂತರವು ಇತರ ಪ್ರೀಮಿಯಂ ಎಲೆಕ್ಟ್ರಿಕ್ SUVಗಳಾದ Audi Q8 e-Tron, ಮತ್ತು BMW iX ಗಳಿಗೆ ಪೈಪೋಟಿ ನೀಡಲಿದೆ.

ವಿನ್ಯಾಸ: ಹೊಸ ಎಲೆಕ್ಟ್ರಿಕ್ SUV 'EQ' ಶ್ರೇಣಿಯ ಸಿಗ್ನೇಚರ್ ಸ್ವೂಪಿಂಗ್ ಹೊರಭಾಗದೊಂದಿಗೆ ಅತ್ಯಂತ ಏರೋಡೈನಮಿಕ್ ಡಿಸೈನ್‌ನಲ್ಲಿ ನಿರ್ಮಿಸಲಾಗಿದ್ದು, ಆಕರ್ಷಕ ಲೈನ್‌ಗಳನ್ನು ಹೊಂದಿದೆ. ಏರೋ-ಆಪ್ಟಿಮೈಸ್ಡ್ 20 ಇಂಚಿನ ವೀಲ್‌ಗಳು ಮತ್ತು ಸೀಲ್ಡ್ ಆಫ್ ಗ್ರಿಲ್‌ನ ಬಳಕೆಯಿಂದಾಗಿ ಹೊಸ ಎಸ್‌ಯುವಿ ಡಿಸೈನ್ ಮತ್ತಷ್ಟು ಎದ್ದುಕಾಣುತ್ತದೆ.
ಹೊಸ EQE ಅನ್ನು 9 ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತಿದ್ದು, ಗ್ರಾಹಕರು ಎರಡು ಇಂಟೀರಿಯರ್ ಬಣ್ಣದ ಆಯ್ಕೆಗಳ ನಡುವೆ ಆಯ್ಕೆ ಮಾಡಬಹುದು. ಇದಲ್ಲದೆ, ಮಾದರಿಯು 25-ಇಂಚಿನ ಹೆಡ್-ಅಪ್ ಡಿಸ್ಪ್ಲೇ, ಮಸಾಜ್ ಸೀಟ್‌ಗಳು, 15 ಸ್ಪೀಕರ್‌ಗಳೊಂದಿಗೆ ಬರ್ಮೆಸ್ಟರ್ 3D ಸೌಂಡ್ ಸಿಸ್ಟಮ್, HEPA ಫಿಲ್ಟರ್, 4-ಝೋನ್ ಕ್ಲೈಮೇಟ್ ಕಂಟ್ರೋಲ್, ಪನಾರಮಿಕ್ ಸನ್‌ರೂಫ್, ಆಕ್ಟೀವ್ ಆಂಬಿಯೆಂಟ್ ಟಾಪ್-ಶೆಲ್ಫ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಹೊಸ ಎಲೆಕ್ಟ್ರಿಕ್ SUV ಯಲ್ಲಿನ ಕೆಲವು ಪ್ರಮುಖ ಸುರಕ್ಷತಾ ವೈಶಿಷ್ಟ್ಯಗಳೆಂದರೆ 9 ಏರ್‌ಬ್ಯಾಗ್‌ಗಳು, ಟ್ರಾಕ್ಷನ್ ಕಂಟ್ರೋಲ್, ESC, EBD ಜೊತೆಗೆ ABS, 360-ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾ, ಲೇನ್ ಕೀಪ್ ಅಸಿಸ್ಟ್, ಡಿಜಿಟಲ್ LED ಹೆಡ್‌ಲೈಟ್‌ಗಳು, ಅಟೊನಮಸ್ ಎಮರ್ಜನ್ಸಿ ಬ್ರೇಕಿಂಗ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಪಾರ್ಕ್ ಅಸಿಸ್ಟ್‌ನಂತಹ ಆಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ.
ಪವರ್‌ಟ್ರೇನ್: ಹೊಸ SUV ಪ್ರತಿ ಆಕ್ಸಲ್‌ನ ಮೇಲೆ ಇರಿಸಲಾದ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳಿಂದ ಚಾಲಿತವಾಗಿದೆ. ಈ ಎಲೆಕ್ಟ್ರಿಕ್ ಮೋಟಾರ್‌ಗಳು 408bhp ಪವರ್ ಮತ್ತು 858Nm ಟಾರ್ಕ್ ಅನ್ನು ಹೊರಹಾಕುತ್ತದೆ. ಈ ಎಲೆಕ್ಟ್ರಿಕ್ ಮೋಟರ್‌ಗಳಿಗೆ ದೊಡ್ಡ 90.6kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ನೀಡಲಾಗಿದೆ. ಕಂಪನಿಯು ಈ ಬ್ಯಾಟರಿ ಪ್ಯಾಕ್ ಮೇಲೆ 10 ವರ್ಷಗಳ ವಾರಂಟಿಯನ್ನು ನೀಡುತ್ತಿದೆ. WLTP 521 ಕಿ.ಮೀ ರೇಂಜ್ ಅನ್ನು ಖಚಿತಪಡಿಸಿದೆ.

ಅಂತಾರಾಷ್ಟ್ರೀಯವಾಗಿ Mercedes-Benz EQE ಎಲೆಕ್ಟ್ರಿಕ್ SUV ಬಹು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ. ಇದು EQE 350+, EQE 350 4ಮ್ಯಾಟಿಕ್ ಮತ್ತು ಹೊಸದಾಗಿ ಬಿಡುಗಡೆಯಾದ EQE 500 4ಮ್ಯಾಟಿಕ್ ಅನ್ನು ಒಳಗೊಂಡಿದೆ. EQE 43 4Matic, ಮತ್ತು EQE 53 4Matic+ ನಂತಹ AMG-ನಿರ್ದಿಷ್ಟ ಮಾದರಿಗಳೂ ಇವೆ.
EQE 350+ ಮಾದರಿಯು 292bhp ಮತ್ತು 565Nm ಟಾರ್ಕ್‌ನೊಂದಿಗೆ ಒಂದೇ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದೆ. ಈ ರೂಪಾಂತರದ WLTP ಶ್ರೇಣಿಯು ಪ್ರಭಾವಶಾಲಿ 590 ಕಿ.ಮೀ ರೇಂಜ್ ಇದೆ. ಇನ್ನು EQE 350 4ಮ್ಯಾಟಿಕ್ ಆಗಿದೆ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಪ್ರತಿ ಆಕ್ಸಲ್‌ನ ಮೇಲೆ ಇರಿಸಲಾಗಿದ್ದು, EQE 350+ ನಂತೆಯೇ ಅದೇ ಪವರನ್ನು ಹೊರಹಾಕುತ್ತದೆ. 350 4ಮ್ಯಾಟಿಕ್‌ನ WLTP ಶ್ರೇಣಿಯು 538 ಕಿ.ಮೀಟರ್‌ಗಳಷ್ಟಿದೆ.

AMG ರೂಪಾಂತರಗಳಿಗೆ ಬರುವುದಾದರೆ, EQE 43 4ಮ್ಯಾಟಿಕ್ ರೂಪಾಂತರವು ಎರಡು ಎಲೆಕ್ಟ್ರಿಕ್ ಮೋಟಾರ್‌ಗಳಿಂದ ಚಾಲಿತವಾಗಿದ್ದು 476bhp ಪವರ್ ಮತ್ತು 858Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ವಾಹನವು 488 ಕಿ.ಮೀ WLTP ಶ್ರೇಣಿಯನ್ನು ಖಚಿತಪಡಿಸಿಕೊಂಡಿದೆ. ಅಗ್ರಸ್ಥಾನದಲ್ಲಿರುವ EQE 53 4Matic+ ಬರೋಬ್ಬರಿ 617bhp ಪವರ್ ಮತ್ತು 950Nm ಟಾರ್ಕ್‌ನೊಂದಿಗೆ ಡ್ಯುಯಲ್ ಮೋಟಾರ್ ಸೆಟಪ್ ಹೊಂದಿದೆ.
ಈ ಮಾದರಿಯು ಕೇವಲ 3.7 ಸೆಕೆಂಡ್‌ಗಳಲ್ಲಿ 100 ಕಿ.ಮೀ ವೇಗವನ್ನು ಪಡೆಯುತ್ತದೆ. ಸಂಪೂರ್ಣ ಚಾರ್ಜ್ ಮಾಡಿದ್ರೆ (WLTP) 490 ಕಿ.ಮೀ ದೂರವನ್ನು ಕ್ರಮಿಸಬಲ್ಲದು. ಭಾರತದಲ್ಲಿ ಈಗ ಬಿಡುಗಡೆಯಾಗಿರುವ ಹೊಸ ಎಸ್‌ಯುವಿ ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿ ವಿಭಾಗದಲ್ಲಿ ತೀವ್ರ ಪೈಪೋಟಿ ನೀಡಲಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications