ಎರಡೂ ಕಾಲು ಕಳೆದುಕೊಂಡ ಅನಾಥ ನಾಯಿಮರಿಗೆ ಮರ್ಸಿಡಿಸ್‌ ಬೆಂಝ್‌ನ ಉಡುಗೊರೆ: ಕಣ್ಣಲ್ಲಿ ನೀರು ಬರುತ್ತೆ

ಜರ್ಮನ್‌ ಆಟೋಮೊಬೈಲ್‌ ನಿರ್ಮಾಣ ಕಂಪನಿ ಮರ್ಸಿಡಿಸ್‌ ಬೆಂಝ್ ಮತ್ತೊಮ್ಮೆ ಜನರ ಮನ ಗೆದ್ದಿದೆ. ಮರ್ಸಿಡಿಸ್‌ ಬೆಂಝ್ ಲಕ್ಷುರಿ ಕಾರು ನಿರ್ಮಿಸುವುದರಲ್ಲಿ ಎತ್ತಿದ ಕೈ. ಆದರೆ ಈ ಬಾರಿ ಜನಮನ ಗೆದ್ದಿರುವುದು ಅತ್ಯಾಕರ್ಷಕ ಕಾರು ನಿರ್ಮಾಣದಿಂದ ಅಲ್ಲ. ಬದಲಾಗಿ ವ್ಹೀಲ್‌ ಚೇರ್‌ ನಿರ್ಮಾಣದಿಂದ ಎಂದರೆ ನೀವು ನಂಬಲೇ ಬೇಕು.

ಹೌದು, ಜರ್ಮನ್‌ ಕಾರು ನಿರ್ಮಾಣ ಕಂಪನಿ ಮರ್ಸಿಡಿಸ್‌ ಬೆಂಝ್ (Mercedes Benz) ಅಪಘಾತದಲ್ಲಿ ತನ್ನ ಹಿಂಭಾಗದ ಎರಡೂ ಕಾಲನ್ನು ಕಳೆದುಕೊಂಡಿದ್ದ ನಾಯಿಗೆ ವ್ಹೀಲ್‌ ಚೇರ್ ನಿರ್ಮಿಸಿ ಕೊಡುವುದರ ಮೂಲಕ ಎಲ್ಲರ ಗಮನ ಸೆಳೆದಿದೆ. ಈ ಕುರಿತಾದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

Mercedes Benz Makes Custom-Made Wheelchair

ಬನ್ನಿ ಎಂಬ ನಾಯಿಮರಿಯೊಂದು ಅಪಘಾತದಲ್ಲಿ ಕಾಲು ಕಳೆದುಕೊಂಡ ನಂತರ ಅದರ ಪೋಷಕರು ಆ ನಾಯಿಮರಿಯನ್ನು ದೂರ ಮಾಡಿದ್ದರು. ಈ ಕುರಿತಾಗಿ ಹೆನ್ರಿ ಫ್ರೈಡ್ಮನ್‌ ಎಂಬಾತ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ ಒಂದನ್ನು ಹರಿ ಬಿಟ್ಟಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಸಹ ಆಗಿತ್ತು.

ಈ ವಿಡಿಯೋ ಕೆಳಗೆ ವ್ಯಕ್ತಿಯೊಬ್ಬ ಈ ನಾಯಿ ಮರಿಗೆ ಮರ್ಸಿಡಿಸ್‌ ಬೆಂಝ್‌ ಕಂಪನಿಯು ಒಂದು ಕಸ್ಟಮ್ ಮೇಡ್ ವ್ಹೀಲ್ ಚೇರ್ ಅನ್ನು ತಯಾರಿಸಿ ಕೊಟ್ಟರೆ ಅದು ಸುಲಭವಾಗಿ ಮತ್ತೆ ನಡೆಯಬಲ್ಲದು ಎಂದು ಕಾಮೆಂಟ್‌ ಮಾಡಿದ್ದ. ವಿಡಿಯೋ ಜೊತೆ ಈ ಕಾಮೆಂಟ್‌ ಸಹ ಭಾರೀ ವೈರಲ್‌ ಆಗಿತ್ತು ಎಂದು ತಿಳಿದು ಬಂದಿದೆ.

ಮಾಹಿತಿಗಳ ಪ್ರಕಾರ ವಿಡಿಯೋ ಪೋಸ್ಟ್‌ ಮಾಡಿದ್ದ ಫ್ರೈಡ್‌ಮನ್‌ ಮರ್ಸಿಡಿಸ್‌ ಕಂಪನಿಯನ್ನು ಸಂಪರ್ಕಿಸಿ ಈ ಕುರಿತಾಗಿ ವಿವರಿಸಿದ್ದ ಎನ್ನಲಾಗಿದೆ. ನಂತರದ ಕೆಲವೇ ದಿನಗಳಲ್ಲಿ ಮರ್ಸಿಡಿಸ್‌ ಬೆಂಝ್‌ ಕಂಪನಿಯು ಈ ಬನ್ನಿ ಎಂಬ ನಾಯಿ ಮರಿಗಾಗಿಯೇ ಒಂದು ಸ್ಪೆಷಲ್‌ ವ್ಹೀಲ್‌ ಚೇರ್‌ ಅನ್ನು ನಿರ್ಮಿಸಿದೆ.

ಇದರ ಬಗ್ಗೆ ಫ್ರೈಡ್‌ಮನ್‌ ಮತ್ತೊಂದು ಇನ್ಸ್ಟಾಗ್ರಾಂ ಪೋಸ್ಟ್‌ ಹಾಕಿದ್ದು ಇದರಲ್ಲಿ ಬನ್ನಿ ನಾಯಿ ಮರಿಯು ತನ್ನ ವ್ಹೀಲ್‌ ಚೇರ್‌ನ ಡೆಲಿವರಿ ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಮರ್ಸಿಡಿಸ್‌ ಬೆಂಝ್‌ನ ಈ ವ್ಹೀಲ್ ಚೇರನ್ನು ಬನ್ನಿಯ ಸೊಂಟಕ್ಕೆ ಕಟ್ಟಿ ನಂತರ ಅದು ಸುಲಭವಾಗಿ ಅದರ ಸಹಾಯದಿಂದ ಓಡುತ್ತಿರುವುದನ್ನು ಕಾಣಬಹುದಾಗಿದೆ.

ಇನ್ನು ಈ ಪೋಸ್ಟ್‌ನ ತಲೆಬರಹದಲ್ಲಿ ಹೆನ್ರಿ ಫ್ರೈಡ್‌ಮನ್‌ ಮೆರ್ಸಿಡಿಸ್‌ ಬೆಂಝ್‌ನ ಸಂಪೂರ್ಣ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾನೆ. ನಿಮ್ಮ ಈ ಹೊಸ ವ್ಹೀಲ್‌ ಚೇರ್‌ನ ಸಹಾಯದಿಂದ ಬನ್ನಿ ಮತ್ತೊಮ್ಮೆ ಓಡಾಡಲು ಒಂದು ಹೊಸ ಚೈತನ್ಯ ದೊರಕಿದಂತೆ ಆಗಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು ಎಂದು ಬರೆದಿದ್ದಾನೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, July 24, 2023, 19:34 [IST]
English summary
Mercedes benz makes custom made wheelchair for henry friedman dog bunny
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+