Chat GPT ಬಳಸಿ ವಾಯ್ಸ್‌ ಕಂಟ್ರೋಲ್‌ ತಂದ ಮರ್ಸಿಡಿಸ್‌ ಬೆಂಝ್‌: ಬರಲಿದೆ ನಿರೀಕ್ಷೆಗೂ ಮೀರಿದ ಫೀಚರ್ಸ್‌

ಪ್ರಸಿದ್ದ ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್‌ ಬೆಂಝ್ (Mercedes Benz)‌ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇಂದು ಕಂಪನಿಯ ಲೆಕ್ಕವಿಲ್ಲದಷ್ಟು ಕಾರುಗಳು ನಮ್ಮ ಹೆದ್ದಾರಿಗಳಲ್ಲಿ ಓಡಾಡುತ್ತಿದೆ.ಮರ್ಸಿಡಿಸ್‌ ಬೆಂಝ್‌ ಕಾರು ಕೊಳ್ಳುವವರೆಲ್ಲಾ ಶ್ರೀಮಂತರು ಎನ್ನುವಷ್ಟರ ಮಟ್ಟಿಗೆ ಶ್ರೀಮಂತರ ಕಂಪನಿ ಎನ್ನುವಷ್ಟರ ಮಟ್ಟಿಗೆ ಸಂಸ್ಥೆ ಬೆಳೆದಿದೆ.

ಪ್ರತಿಯೊಂದು ಬಾರಿಯೂ ಮಾರುಕಟ್ಟೆಗೆ ಹೊಸ ಕಾರಿನ ಜೊತೆಗೆ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇದೆ. ಇದೀಗ ಕಂಪನಿ ಹೊಸ ಫೀಚರ್‌ನೊಂದಿಗೆ ಬಂದಿದ್ದು, ಇದು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಇಂದು ಫೀಚರ್‌ನ ಬಗ್ಗೆ ನಾವಿಂದು ಮಾತನಾಡುತ್ತಿದ್ದೇವೆ.

Mercedes Benz Uses Chat GPT For Voice Control

ಮರ್ಸಿಡಿಸ್‌ ಬೆಂಝ್ ಇತ್ತೀಚೆಗಷ್ಟೇ MBUX ಸಿಸ್ಟಂ ಅನ್ನು ಪರಿಚಯಿಸಿ ದೊಡ್ಡ ಸುದ್ದಿ ಮಾಡಿತ್ತು. ಇದರಲ್ಲಿ ದೊಡ್ಡ ಇನ್‌ಫೋಟೈನ್‌ಮೆಂಟ್‌ ಯೂನಿಟ್‌ ಇದ್ದದ್ದು ಮಾತ್ರವಲ್ಲದೇ ಹಲವಾರು ಮಿತಿಯಿಲ್ಲದಷ್ಟು ಫೀಚರ್‌ಗಳು ಸಹ ಇತ್ತು. ಇದೀಗ ಮರ್ಸಿಡಿಸ್‌ ಬೆಂಝ್ MBUX ಸಿಸ್ಟಂ ಅನ್ನು ಮತ್ತೊಂದು ಘಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಮರ್ಸಿಡಿಸ್‌ ಬೆಂಝ್ ಇತ್ತೀಚೆಗಷ್ಟೇ MBUX ಸಿಸ್ಟಂಗೆ ಸದ್ಯಕ್ಕೆ ಮಾರುಕಟ್ಟೆಯಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಚಾಟ್‌ ಜಿಪಿಟಿಯನ್ನು ಸೇರಿಸಿದೆ. ಚಾಟ್‌ ಜಿಪಿಟಿಯನ್ನು ವಾಯ್ಸ್‌ ಕಂಟ್ರೋಲ್‌ ಫೀಚರ್‌ ಆಗಿ ಸೇರಿಸಲಾಗಿದ್ದು, ಇದರ ಸಹಾಯದಿಂದ ಹೇಯ್‌ ಮರ್ಸಿಡಿಸ್‌ ಎಂಬ ವಾಯ್ಸ್‌ ಅಸಿಸ್ಟೆಂಟ್‌ ಗೆ ರೂಪ ನೀಡಲಾಗಿದೆ.

Mercedes Benz Uses Chat GPT For Voice Control

ಚಾಟ್‌ ಜಿಪಿಟಿಯನ್ನು ಸೇರಿಸಿಸುವ ಹೊಸ MBUX ಸಿಸ್ಟಂ ಬಿಟಾ ವರ್ಷನ್‌ನಲ್ಲಿ ಇದ್ದು ಇದಿನ್ನೂ ಮಾರುಕಟ್ಟೆಗೆ ಪರಿಚಯಿಸಿಲ್ಲ. ಆದರೂ ಈಗಾಗಲೇ MBUX ಸಿಸ್ಟಂ ಇರುವ ಮರ್ಸಿಡಿಸ್‌ ಬೆಂಝ್ ಗ್ರಾಹಕರು ಮರ್ಸಿಡಿಸ್ ಮಿ ಆ್ಯಪ್‌ ಮೂಲಕ ಬೀಟಾ ಪ್ರೋಗ್ರಾಂ ಅನ್ನು ಸೇರಿಕೊಳ್ಳಬಹುದಾಗಿದೆ.

ಹೇಯ್‌ ಮೆರ್ಸಿಡಿಸ್‌, ವಾಂಟು ಜೋಯ್ನ್‌ ದಿ ಬೀಟಾ ಪ್ರೋಗ್ರಾಮ್‌ ಎಂದು ನೀವು ವಾಯ್ಸ್‌ ಕಮ್ಯಾಂಡ್‌ ನೀಡುವುದರ ಮೂಲಕ ಇದನ್ನು ಸೇರಿಕೊಳ್ಳಬಹುದಾಗಿದೆ. ಇನ್ನು ಬೀಟಾ ಪ್ರೋಗ್ರಾಂ ಮುಂದೆ ಅಪ್‌ಡೇಟ್‌ ಆಗಿ ಸಂಪೂರ್ಣ ಆವೃತ್ತಿಯಲ್ಲಿ ಬಿಡುಗಡೆಯಾಗಲೂಬಹುದು ಎಂಬುದು ಕಾರು ಪಂಡಿತರ ಲೆಕ್ಕಾಚಾರ.

ಚಾಟ್‌ ಜಿಪಿಟಿಯನ್ನು MBUX ಗೆ ಸೇರಿಸಲು ಮರ್ಸಿಡಿಸ್‌ ಬೆಂಝ್, ಸಝ್ಯೂರ್‌ ಏಂಬ ಓಪನ್‌ ಎಐ ಸೇವೆಯನ್ನು ಬಳಸುತ್ತಿದ್ದು ಇದರ ಸಹಾಯದಿಂದ ಬೀಟಾ ಪ್ರೋಗ್ರಾಂ ಅನ್ನು ಹೊರ ತರಲಾಗಿದೆ ಎಂದು ವರದಿಗಳು ತಿಳಿಸಿವೆ.

ಚಾಟ್‌ ಜಿಪಿಟಿಯೇನಾದರೂ ಕಾರೊಳಗೆ ಬಂದರೆ, ನಾವು ಊಹಿಸುವುದಕ್ಕೂ ಸಾಧ್ಯವಾಗದ ಫೀಚರ್‌ಗಳು ಕಾರುಗಲಲ್ಲಿ ಬರುವ ಕಾಲ ದೂರವಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, June 17, 2023, 16:31 [IST]
English summary
Mercedes benz uses chat gpt for voice control
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+