ಭಾರತದಲ್ಲಿ ಬಿಡುಗಡೆಯಾಗಲಿದೆ ಭಾರೀ ಕಡಿಮೆ ಬೆಲೆಯ MG ಎಲೆಕ್ಟ್ರಿಕ್ ಕಾರು: ಎಲ್ಲ ದಾಖಲೆಗಳನ್ನು ಅಳಿಸುತ್ತಾ?
ದೇಶೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳು ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಗಳಿಸುತ್ತಿವೆ. ಅದಕ್ಕೆ ತಕ್ಕಂತೆ ವಿವಿಧ ವಾಹನ ತಯಾರಕ ಕಂಪನಿಗಳು ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಹೊಂದಿರುವ ಕಾರುಗಳನ್ನು ಬಿಡುಗಡೆ ಮಾಡುತ್ತಿರುತ್ತವೆ. ಇದೀಗ ಎಂಜಿ ಮೋಟಾರ್ಸ್, ಅತ್ಯಂತ ಕಡಿಮೆ ಬೆಲೆಯ ಪುಟ್ಟ ಎಲೆಕ್ಟ್ರಿಕ್ ಕಾರನ್ನು ಶೀಘ್ರದಲ್ಲೇ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ.
ಭಾರತದಲ್ಲಿ ಬಿಡುಗಡೆ ಮಾಡಲು ರೆಡಿಯಾಗಿರುವ ಈ ಸಣ್ಣ ಎಲೆಕ್ಟ್ರಿಕ್ ಕಾರನ್ನು ಎಂಜಿ ಕಂಪನಿ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ, ಕಾರಣಾನಂತರದಿಂದ ಅದು ಸಾಧ್ಯವಾಗಲಿಲ್ಲ. ಇದಕ್ಕೆ ಎಂಜಿ ಏರ್ ಇವಿ ಎಂದು ಹೆಸರಿಡಲಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ವುಲಿಂಗ್ ಏರ್ ಇವಿ (Wulling Air EV)ಯನ್ನು ಹೋಲುತ್ತದೆ. ಎಂಜಿ ಏರ್ ಇವಿ ನೋಡಲು
ಈ ಹಿಂದೆ, ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದ ಪುಟ್ಟ ಕಾರು ರೇವಾದಂತೆ ಇದ್ದು, 2 ಡೋರ್ ಆಯ್ಕೆಯನ್ನು ಹೊಂದಿದೆ.

ಈಗಾಗಲೇ ಎಂಜಿ ಕಂಪನಿಯು ಏರ್ ಇವಿಯನ್ನು ಹಲವು ಬಾರಿ ಭಾರತದ ರಸ್ತೆಯಲ್ಲಿ ಪರೀಕ್ಷಿಸಿದೆ. ಇದೀಗ ಮತ್ತೆ ಟೆಸ್ಟ್ ನಡೆಸಿರುವ ಫೋಟೋಗಳು ಸೋರಿಕೆಯಾಗಿದ್ದು, ಈ ಕಾರಿನ ಉತ್ಪಾದನೆಯು ಮುಂದಿನ ತಿಂಗಳಿಂದ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ. ವಿನ್ಯಾಸದ ದೃಷ್ಟಿಯಿಂದಲೂ ಏರ್ ಇವಿ ಆಕರ್ಷಕವಾಗಿದೆ. ಫ್ರಂಟ್ ಎಲ್ಇಡಿ ಲೈಟ್ ಬಾರ್, ಡುಯೆಲ್ ಬ್ಯಾರೆಲ್ ಹೆಡ್ ಲೈಟ್ ಹಾಗೂ ಚಾರ್ಜಿಂಗ್ ಪಾಯಿಂಟ್ ಅನ್ನು ಹೊಂದಿದ್ದು, ಯುವ ಖರೀದಿದಾರರನ್ನು ಸೆಳೆಯುವಂತಹ ಲುಕ್ ಪಡೆದಿದೆ.
ಸದ್ಯ, ಸೋರಿಕೆಯಾಗಿರುವ ಚಿತ್ರಗಳಲ್ಲಿ ಎಂಜಿ ಏರ್ ಇವಿಯ ಒಳಭಾಗವು ಸೂಪರ್ ಲುಕ್ ಹೊಂದಿದ್ದು, ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟವಾಗುವ ವುಲಿಂಗ್ ಏರ್ ಇವಿಗೆ ಬಹುತೇಕ ಹೋಲಿಕೆಯಾಗುತ್ತದೆ ಎಂದು ಹೇಳಬಹುದು. ಇದರ ಡ್ಯಾಶ್ ಬೋರ್ಡ್ ಮೇಲೆ ಟ್ವಿನ್-ಡಿಸ್ಪ್ಲೇ ಸೆಟಪ್ ಇದೆ. ಇನ್ಫೋಟೈನ್ಮೆಂಟ್ ಯುನಿಟ್ ಕೆಳಗೆ ಎಸಿ ವೆಂಟ್ ಗಳಿವೆ. ಆದರೆ, ಬೇರೆ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆ.

ಭಾರತದ ಮಾರುಕಟ್ಟೆಯಲ್ಲಿ ಎಂಜಿ ಏರ್ ಇವಿ ಬಿಡುಗಡೆಯಾದ ಮೇಲೆ ಅದಕ್ಕೆ ನೇರ ಪ್ರತಿಸ್ಪರ್ದಿಗಳೆಂದು ಹೇಳಲು ಯಾವುದೇ ಕಾರುಗಳಿಲ್ಲ. ಆ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯಬಹುದು. ಈ ಕಾರು ಅತಿ ಕಡಿಮೆ ಬೆಲೆಯಲ್ಲಿ ದೇಶೀಯ ಗ್ರಾಹಕರಿಗೆ ಖರೀದಿಗೆ ಸಿಗಬಹುದು. ಇಷ್ಟು ಕಡಿಮೆ ದರದಲ್ಲಿ ಯಾವ ಕಾರುಗಳು ಖರೀದಿಗೆ ದೊರೆಯುವುದಿಲ್ಲ. ಇದರ ಬೆಲೆ ಎಕ್ಸ್ ಶೋರೂಂ ಪ್ರಕಾರ, ರೂ.8 ಲಕ್ಷ ಇರಬಹುದು ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ. ಎಂಜಿ ಏರ್ ಇವಿ ಅನಾವರಣಗೊಂಡ ಮೇಲೆಯೇ ಆ ವಿವರಗಳು ತಿಳಿಯಲಿದೆ.
ಎಂಜಿ ಏರ್ ಇವಿ ಕಾರ್ಯಕ್ಷಮತೆ ಬಗ್ಗೆ ಈವರೆಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಆದರೆ, ಈ ಪುಟ್ಟ ಎಲೆಕ್ಟ್ರಿಕ್ ಕಾರು, ಭಾರತದ ರಸ್ತೆಗಳಿಗೆ ಹೊಂದಿಯುವಂತೆ ಉತ್ತಮ ರೇಂಜ್ ಹೊಂದಿದೆಯಂತೆ. ಇದು ಗ್ರಾಹಕರಿಗೆ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಅವುಗಳೆಂದರೆ, 17.3kWh ಹಾಗೂ 26.7kWh. ಚಿಕ್ಕ ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು 200 km ರೇಂಜ್ ನೀಡಿದರೆ, ದೊಡ್ಡ ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು, 300 km ರೇಂಜ್ ನೀಡುವ ಸಾಮರ್ಥ್ಯ ಪಡೆದಿರಲಿದ್ದು, ಈ ಇವಿ ಸ್ಟ್ಯಾಂಡರ್ಡ್ ಮತ್ತು ಫಾಸ್ಟ್ ಚಾರ್ಜಿಂಗ್ ಆಯ್ಕೆಗಳನ್ನು ಒಳಗೊಂಡಿರಲಿದೆ.

ಇದು ಪುಟ್ಟ 2 ಡೋರ್ ಕಾರಾಗಿರುವುದರಿಂದ ಅಂತಹ ಬೇರೆ ಯಾವ ಕಾರುಗಳು ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯದಿರುವುದರಿಂದ ಎಂಜಿ ಏರ್ ಇವಿ ನೇರವಾಗಿ ಯಾವುದೇ ಪೈಪೋಟಿಯನ್ನು ಎದುರಿಸುವುದಿಲ್ಲ. ಆದರೆ, ಈಗಾಗಲೇ ಬಿಡುಗಡೆಯಾಗಿರುವ ಟಾಟಾದ ಬಹುನೀರಿಕ್ಷಿತ ಟಿಯಾಗೊ ಇವಿ ಹಾಗೂ ಸಿಟ್ರಸ್ eC3 ಕಾರುಗಳ ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ಈ ಎಂಜಿ ಏರ್ ಇವಿ ಭಾರತದ ಮಾರುಕಟ್ಟೆಯಲ್ಲಿ ಯಾವಾಗ ಲಾಂಚ್ ಆಗಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿಯಿಲ್ಲ. ಈ ವರ್ಷದ ಕೊನೆಯೊಳಗೆ ಬಿಡುಗಡೆಯಾಗಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications