MG Comet EV: 1000 ಕಿಲೋಮೀಟರ್ ಓಡಿಸಲು 500 ರೂಪಾಯಿ ಖರ್ಚು.. ಇದೇ ಹೈಲೆಟ್

ಭಾರತದ ಮಾರುಕಟ್ಟೆಯಲ್ಲಿ ಎಂಜಿ ಕಂಪನಿ ಬಹುನೀರಿಕ್ಷಿತ ಕಾಮೆಟ್ ಇವಿಯನ್ನು (MG Comet EV) ಬಿಡುಗಡೆ ಮಾಡಿದೆ. ಇದು, 2 ಡೋರ್ ಹೊಂದಿರುವ ಅತ್ಯಂತ ಕಡಿಮೆ ಬೆಲೆಗೆ ಖರೀದಿಗೆ ಸಿಗುತ್ತಿರುವ ಪುಟ್ಟ ಎಲೆಕ್ಟ್ರಿಕ್ ಕಾರಾಗಿದ್ದು, ಈಗಿನ ಯುವ ಗ್ರಾಹಕರು ಬಯಸುವ ಹತ್ತಾರು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಮೊದಲಿಗೆ ಎಂಜಿ ಕಾಮೆಟ್ ಇವಿಯ ಬೆಲೆ ಬಗ್ಗೆ ಮಾತನಾಡೋಣ. ಕಂಪನಿಯು ಈ ಕಾರನ್ನು ರೂ.7.98 ಲಕ್ಷ ಬೆಲೆಯಲ್ಲಿ ದೇಶೀಯ ಖರೀದಿದಾರರಿಗಾಗಿ ಪರಿಚಯಿಸಿದೆ. ಈ ಮೂಲಕ ಸಿಟ್ರಸ್ ಇಸಿ3, ಟಾಟಾ ಟಿಯಾಗೊ ಇವಿಗಳನ್ನು ಕಾಮೆಟ್ ಇವಿ ಹಿಂದಿಕ್ಕಿ ಅತ್ಯಂತ ಕೈಗೆಟುಕುವ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಟಿಯಾಗೊ ಇವಿ ರೂ.8.69 - 11.99 ಲಕ್ಷ ಹಾಗೂ ಸಿಟ್ರಸ್ ಇಸಿ3 ರೂ.11.50 - 12.43 ಲಕ್ಷ ಬೆಲೆಯಲ್ಲಿ ದೊರೆಯಲಿದೆ.

MG Comet EV: 1000 ಕಿಲೋಮೀಟರ್ ಓಡಿಸಲು 500 ರೂಪಾಯಿ ಖರ್ಚು.. ಇದೇ ಹೈಲೆಟ್

ಸದ್ಯ ಪೆಟ್ರೋಲ್ ಬೆಲೆ ಗಗನಕ್ಕೇರಿದ್ದು, ರಾಜ್ಯದಲ್ಲಿ ಒಂದು ಲೀಟರ್ ಪೆಟ್ರೋಲ್ ದರ ರೂ.100ರ ಅಸುಪಾಸಿನಲ್ಲಿದ್ದು, ಇಂಧನ ಚಾಲಿತ ಕಾರುಗಳು ಸರಿ ಸುಮಾರು 20 ಕಿಲೋಮೀಟರ್ ಮೈಲೇಜ್ ನೀಡುತ್ತವೆ. ಆದರೆ, ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಾಗಿದ್ದು, ಒಂದೊಮ್ಮೆ ಈ ಕಾರನ್ನು ಕೊಂಡುಕೊಂಡರೆ 1000 ಕಿಲೋಮೀಟರ್ ಓಡಿಸಲು ರೂ.519 ಖರ್ಚಾಗುತ್ತದೆ ಎಂದು ವರದಿಯಾಗಿದೆ.

ಇದನ್ನು ಗಮನಿಸಿದಾಗ ಕಾಮೆಟ್ ಇವಿ ಒಂದು ಕಿಲೋಮೀಟರ್ ಕ್ರಮಿಸಲು ಸುಮಾರು 50 ಪೈಸೆ ಅಷ್ಟೇ ಖರ್ಚಾಗುತ್ತದೆ. ನಿಮ್ಮ ಬಳಿ ಏನಾದರೂ ಇಂಧನ ಚಾಲಿತ ಕಾರಿದ್ದು, ಅದು 1 ಲೀ.ಗೆ 20 km ಮೈಲೇಜ್ ನೀಡುತ್ತಿದೆ ಅಂದುಕೊಳ್ಳಿ. ಈಗ ಪ್ರತಿ ಲೀಟರ್ ಪೆಟ್ರೋಲ್ ಗೆ ರೂ.100 ದರವಿದ್ದು, ಒಂದು ಕಿಲೋಮೀಟರ್ ಗೆ ರೂ.5 ವ್ಯಯಿಸಬೇಕು. ಇದನ್ನು ಲೆಕ್ಕಹಾಕಿದಾಗ ಎಂಜಿ ಕಾಮೆಟ್ ಇವಿಯ ನಿರ್ವಹಣಾ ವೆಚ್ಚ ತುಂಬಾ ಕಡಿಮೆ ಎಂದು ಹೇಳಬಹುದು.

MG Comet EV: 1000 ಕಿಲೋಮೀಟರ್ ಓಡಿಸಲು 500 ರೂಪಾಯಿ ಖರ್ಚು.. ಇದೇ ಹೈಲೆಟ್

ಇದಿಷ್ಟೇ ಅಲ್ಲದೆ, ಎಂಜಿ ಕಾಮೆಟ್ ಸಣ್ಣ ಕಾರಾಗಿದ್ದರೂ ನಾಲ್ಕು ಜನ ಪ್ರಯಾಣಿಕರು ಆರಾಮವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ನಗರ ಪ್ರದೇಶದ ಸಂಚಾರ ದಟ್ಟಣೆಯಿಂದ ಕೂಡಿದ ರಸ್ತೆಗಳಲ್ಲಿ ಸಂಚರಿಸಲು ಯೋಗ್ಯವಾಗಿರುವಂತೆ ವಿನ್ಯಾಸ ಮಾಡಲಾಗಿದೆ. ಜೊತೆಗೆ ಕಾಮೆಟ್ ಇವಿ ಪುಟ್ಟ ಕಾರಾಗಿರುವುದರಿಂದ ಕಡಿಮೆ ಸ್ಥಳದಲ್ಲಿಯು ಸುಲಭವಾಗಿಯೇ ಪಾರ್ಕಿಂಗ್ ಮಾಡಬಹುದು. ಈ ಅಂಶವೇ ಹೆಚ್ಚಿನ ಗ್ರಾಹಕರಿಗೆ ಇಷ್ಟವಾಗುತ್ತದೆ.

ಪ್ರಮುಖವಾಗಿ ಎಂಜಿ ಕಾಮೆಟ್ ಇವಿಯ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 17.3 KWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 230 km ರೇಂಜ್ ನೀಡಲಿದೆ. ಇದರ ಸಿಂಗಲ್ PMS ಮೋಟಾರ್ 41.4 hp ಪವರ್ ಹಾಗೂ 10 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 3.3 kW ಚಾರ್ಜರ್ ಆಯ್ಕೆಯಲ್ಲಿ ಫುಲ್ ಬ್ಯಾಟರಿ 7 ಗಂಟೆಯಲ್ಲಿ ಚಾರ್ಜ್ ಆಗುತ್ತದೆ.

ಈ ಕಾರು, ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ನೋಡುವುದಾದರೆ, ಇನ್ಫೋಟೈನ್‌ಮೆಂಟ್ ಸಿಸ್ಟಮ್‌ ಹಾಗೂ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಾಗಿ ಡುಯೆಲ್ 10.25-ಇಂಚಿನ ಸ್ಕ್ರೀನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್ ಬಾಗ್ಸ್, ABS, EBD, ರೇರ್ ಪಾರ್ಕಿಂಗ್ ಕ್ಯಾಮೆರಾ ಹಾಗೂ ಸೆನ್ಸಾರ್ಸ್ ಅನ್ನು ಪಡೆದಿದೆ.

ಈ ಕಾರಿನ ಟೆಸ್ಟ್ ಡ್ರೈವ್ ಏಪ್ರಿಲ್ 27ರಿಂದ ಆರಂಭವಾಗಲಿದ್ದು, ಬುಕಿಂಗ್ ಮೇ 15ರಿಂದ ಶುರುವಾಗಲಿದೆ. ಈ ಕಾರು ಕಡಿಮೆ ಬೆಲೆಗೆ ಬಿಡುಗಡೆಯಾಗಿರುವುದರಿಂದ ಗ್ರಾಹಕರಿಗೆ ಸಾಕಷ್ಟು ನೀರಿಕ್ಷೆಗಳು ಹೆಚ್ಚಾಗಿದ್ದು, ಬೇಡಿಕೆ ಬಗ್ಗೆ ಬುಕಿಂಗ್ ಆರಂಭವಾದ ಮೇಲೆ ಖಚಿತ ಮಾಹಿತಿ ಸಿಗಲಿದೆ. ಜೊತೆಗೆ ಕಡಿಮೆ ನಿರ್ವಹಣಾ ವೆಚ್ಚ ಹಾಗೂ ತುಂಬಾ ಆಕರ್ಷಕ ಲುಕ್ ಹೊಂದಿರುವುದರಿಂದ ಹೆಚ್ಚಿನ ಖರೀದಿದಾರರಿಗೆ ಇಷ್ಟವಾಗಬಹುದು.

Article Published On: Wednesday, April 26, 2023, 16:20 [IST]
English summary
Mg comet ev charging cost rs 519 per 1000 km details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+