MG Comet EV ಬಿಡುಗಡೆಗೆ ಸಕಲ ಸಿದ್ಧತೆ: ಮೊದಲ ಇಂಟೀರಿಯರ್ ಟೀಸರ್ ಹೇಗಿದೆ ನೋಡಿ...
MG ಮೋಟಾರ್ ಅವರ ಪುಟ್ಟ ಎಲೆಕ್ಟ್ರಿಕ್ ಕಾರಾದ ಕಾಮೆಟ್ EV ಕಳೆದ ಹಲವು ದಿನಗಳಿಂದ ಭಾರತೀಯ ಆಟೋ ವಲಯದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದರ ಬಿಡುಗಡೆಗೆ ಕಾರುದಿಂದ ಕಾಯುತ್ತಿರುವ ಜನರಿಗೆ, ಆ ಸಮಯ ತುಂಬಾ ಹತ್ತಿರವಿದೆ ಎಂದು MG ಮೋಟಾರ್ ಈಗ ಸಣ್ಣ ಟೀಸರ್ ಮೂಲಕ ಸುಳಿವು ನೀಡಿದೆ.
ಕಳೆದ ತಿಂಗಳು MG ಮೋಟಾರ್ ಕಾಮೆಟ್ EV ಡಿಸೈನ್ ಕುರಿತು ಹೊರಾಂಗಣದ ಮೊದಲ ನೋಟವನ್ನು ಬಹಿರಂಗಪಡಿಸಿತ್ತು. ಇದೀಗ MG ಮೋಟಾರ್ ಇಂಡಿಯಾ ಇಂದು (ಶುಕ್ರವಾರ) ಹೊಸ ಕಾಮೆಟ್ EV ಯ ಒಳಭಾಗದ ಕುರಿತು ಅಧಿಕೃತ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಈ ಕಾಮೆಟ್ ಇವಿ ಇಂಡೋನೇಷ್ಯಾದಲ್ಲಿ ಮಾರಾಟವಾಗುವ ವುಲಿಂಗ್ ಏರ್ ಇವಿಯನ್ನು ಆಧರಿಸಿದೆ. ಭಾರತದಲ್ಲಿ ಇದೇ ತಿಂಗಳು ಅಥವಾ ಮುಂದಿನ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ.

ಮುಂಬರುವ ಕಾಮೆಟ್ ಇವಿ ಒಳಭಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹಲವು ವೈಶಿಷ್ಟ್ಯಗಳೊಂದಿಗೆ ತುಂಬಿರುತ್ತದೆ ಎಂದು ವಾಹನ ತಯಾರಕರು ಹೇಳಿದ್ದಾರೆ. ಮುಖ್ಯವಾಗಿ ಕಂಪನಿ ಬಿಡುಗಡೆ ಮಾಡಿರುವ ಟೀಸರ್‌ನಲ್ಲಿ ಮೌಂಟೆಡ್ ಕಂಟ್ರೋಲ್ಸ್‌ನೊಂದಿಗೆ ಅತ್ಯಾಕರ್ಷಕ ಸ್ಟೀರಿಂಗ್ ಅನ್ನು ನೋಡಬಹುದು. ವಿಡಿಯೋದಲ್ಲಿ ನೋಡಿದಂತೆ, ಕಾಮೆಟ್ EV ಎರಡು-ಸ್ಪೋಕ್ ಸ್ಟೀರಿಂಗ್ ವೀಲ್‌ನೊಂದಿಗೆ ಪ್ರತಿ ಬದಿಯಲ್ಲಿ ಎರಡು ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ ಕಾಣಿಸಿಕೊಂಡಿದೆ. ಈ ಮಲ್ಟಿ ಫಂಕ್ಷನ್ ಬಟನ್‌ಗಳು ಆಪಲ್‌ನ ಐಪಾಡ್‌ನಿಂದ ಸ್ಫೂರ್ತಿ ಪಡೆದಿರುವಂತೆ ಕಾಣುತ್ತಿದೆ.
ಈ ಪಾಡ್ ನಿಯಂತ್ರಣಗಳು 'ಹೆಚ್ಚು ಗ್ಯಾಜೆಟ್ ಅನುಭವವನ್ನು' ನೀಡುವ ಗುರಿಯನ್ನು ಹೊಂದಿದ್ದು, ಸಂಪರ್ಕಿತ ತಂತ್ರಜ್ಞಾನಗಳೊಂದಿಗೆ ಬರಲಿದೆ. ಜೊತೆಗೆ 10.25-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಎರಡೂ ಸಮತಲ ಶೈಲಿಯಲ್ಲಿ ಜೋಡಿಸಲ್ಪಟ್ಟಿದ್ದು ಆಕರ್ಷಕವಾಗಿ ಕಾಣುತ್ತವೆ. ಹಾಗೆಯೇ ಕ್ಯಾಬಿನ್ ಪ್ರೀಮಿಯಂ ಮೆಟಾಲಿಕ್ ಆಕ್ಸೆಂಟ್‌ಗಳನ್ನು ಹೊಂದಿವೆ. AC ವೆಂಟ್‌ಗಳನ್ನು ಸ್ಕ್ರೀನ್ ಕೆಳಗೆ ಇರಿಸಲಾಗಿದ್ದು, ಅದರ ಕೆಳಗೆ ಕ್ರೋಮ್ ಮುಖ್ಯಾಂಶಗಳೊಂದಿಗೆ ರೋಟರಿ ಏರ್ ಕಂಡಿಷನಿಂಗ್ ಇದೆ.

ಸ್ಟೀರಿಂಗ್ ವೀಲ್, ಟಚ್‌ಸ್ಕ್ರೀನ್ ಮತ್ತು ಕನ್ಸೋಲ್ ಕಾಮೆಟ್ ಇವಿ ಆಧಾರಿತ ವುಲಿಂಗ್ ಏರ್ ಇವಿಯಲ್ಲಿ ಕಂಡುಬರುವಂತೆಯೇ ಇದೆ. ಆದರೆ ಇಂಟೀರಿಯರ್ ಬಣ್ಣದಲ್ಲಿ Air EV ಯಲ್ಲಿ ಕಂಡುಬರುವ ಡ್ಯುಯಲ್-ಟೋನ್ ಬ್ಲಾಕ್ ಮತ್ತು ಸಿಲ್ವರ್ ಥೀಮ್‌ಗೆ ಹೋಲಿಸಿದರೆ ಆಂತರಿಕ ಥೀಮ್ ಮಾತ್ರ ಸ್ವಲ್ಪ ಗಾಢವಾದ ಛಾಯೆಯೊಂದಿಗೆ ಭಿನ್ನವಾಗಿದೆ. MG ಇನ್ನೂ ವಿವರವಾದ ಸಲಕರಣೆಗಳ ಪಟ್ಟಿಯನ್ನು ಬಹಿರಂಗಪಡಿಸದಿದ್ದರೂ, ಖಂಡಿತವಾಗಿಯೂ ವೈಶಿಷ್ಟ್ಯಗಳನ್ನು ಕಡಿಮೆ ಮಾಡುವುದಿಲ್ಲ ಎಂದೇ ಹೇಳಬಹುದು.
ಇದು ಸಂಪರ್ಕಿತ ಕಾರ್ ವೈಶಿಷ್ಟ್ಯಗಳು, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಹಿಲ್-ಸ್ಟಾರ್ಟ್ ಅಸಿಸ್ಟ್, ಕೀಲೆಸ್ ಎಂಟ್ರಿ ಮತ್ತು ಗೋ, ಡ್ರೈವ್ ಮೋಡ್‌ಗಳು, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಮತ್ತು ವಾಯ್ಸ್ ಕಮಾಂಡ್‌ಗಳೊಂದಿಗೆ ಸಜ್ಜುಗೊಳ್ಳುವ ನಿರೀಕ್ಷೆಯಿದೆ. ಎಲ್ಇಡಿ ಲೈಟಿಂಗ್ ಅಂಶಗಳೊಂದಿಗೆ ಡ್ಯುಯಲ್-ಟೋನ್ ಫಿನಿಶ್ ಹೊಂದಿರುವ ಈ ಕಾಮೆಟ್ ಬೆಲೆಯಲ್ಲಿ ಮಾತ್ರ ಅಗ್ಗವಾಗಿರುವುದಿಲ್ಲ. ಏಕೆಂದರೆ ಕ್ಯಾಬಿನ್ ಒಳಗೆ ನೀಡಲಾದ ದುಬಾರಿ ವೈಶಿಷ್ಟ್ಯಗಳಿಂದಾಗಿ ಸುಮಾರು 10 ಲಕ್ಷ ರೂ. (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯನ್ನು ಹೊಂದಿರುತ್ತದೆ.
ಪರ್ಫಾಮೆನ್ಸ್‌ಗೆ ಸಂಬಂಧಿಸಿದಂತೆ, ಇದು 20-25 kWh ಸಾಮರ್ಥ್ಯವಿರುವ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿರಲಿದೆ. ಇದನ್ನು ಟಾಟಾ ಆಟೋಕಾಂಪ್‌ನಿಂದ ಪಡೆಯಲಾಗುವುದು ಮತ್ತು ಮುಂಭಾಗದ ಆಕ್ಸಲ್‌ನಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಮೋಟಾರ್ ಸುಮಾರು 68 ಎಚ್‌ಪಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಕ್ಲೈಮ್ ಮಾಡಲಾದ ಡ್ರೈವಿಂಗ್ ಶ್ರೇಣಿಯು ಒಂದೇ ಚಾರ್ಜ್‌ನಲ್ಲಿ ಸುಮಾರು 300 ಕಿ.ಮೀ ಚಲಿಸಬಲ್ಲದು. ಇದು Citroen eC3 ಮತ್ತು Tata Tiago EV ಅನ್ನು ಪ್ರತಿಸ್ಪರ್ಧಿಗಳಾಗಿ ತೆಗೆದುಕೊಳ್ಳುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications