MG Comet EV: ನಾಳೆ ಎಲ್ಲರ ಆಕರ್ಷಣೆಯ ಎಂಜಿ ಕಾಮೆಟ್ ಇವಿ ಬಿಡುಗಡೆ, ಬೆಲೆ ಕಡಿಮೆಯೇ?.. ಪ್ರಮುಖ ಮಾಹಿತಿ

ಭಾರತದಲ್ಲಿ 4 ಡೋರ್ ಎಲೆಕ್ಟ್ರಿಕ್ ಕಾರುಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿವೆ. ಆದರೆ, 2 ಡೋರ್ ಕಾರುಗಳ ಕೊರತೆ ತುಂಬಾ ಇತ್ತು. ಇದನ್ನು ನೀಗಿಸಲು ಪ್ರಮುಖ ಬ್ರಿಟಿಷ್ ವಾಹನ ತಯಾರಕ ಎಂಜಿ ಮೋಟಾರ್ಸ್, ತನ್ನ ಬಹುನೀರಿಕ್ಷಿತ 'ಕಾಮೆಟ್ ಇವಿ'ಯನ್ನು ನಾಳೆ ಬಿಡುಗಡೆ ಮಾಡಲಿದೆ. ಈಗಾಗಲೇ ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿದೆ.

ಎಂಜಿ, ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡುತ್ತಿರುವ ಪುಟ್ಟ ಎಲೆಕ್ಟ್ರಿಕ್ ಕಾರಾಗಿರುವ ಕಾಮೆಟ್ ಇವಿ, ನೋಡಲು ಈ ಹಿಂದೆ, ಖರೀದಿಗೆ ದೊರೆಯುತ್ತಿದ್ದ ರೇವಾ ಎಲೆಕ್ಟ್ರಿಕ್ ಕಾರಿನಂತೆ ಕಾಣುತ್ತದೆ. ಅದಕ್ಕೂ ಈ ಕಾಮೆಟ್ ಇವಿಗೂ ಯಾವುದೇ ಸಂಬಂಧವಿಲ್ಲ. ಇದು ಬಿಡುಗಡೆಯಾದ ಮೇಲೆ ಟಾಟಾದ ಜನಪ್ರಿಯ ಟಿಯಾಗೊ ಇವಿ ಹಾಗೂ ಸಿಟ್ರಸ್ ಕಂಪನಿಯ ಇಸಿ3 ಎಲೆಕ್ಟ್ರಿಕ್ ಕಾರಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ.

MG Comet EV: ನಾಳೆ ಎಲ್ಲರ ಆಕರ್ಷಣೆಯ ಎಂಜಿ ಕಾಮೆಟ್ ಇವಿ ಬಿಡುಗಡೆ, ಬೆಲೆ ಕಡಿಮೆಯೇ?.. ಪ್ರಮುಖ ಮಾಹಿತಿ

ಸದ್ಯ, ಪ್ರತಿಯೊಬ್ಬರಿಗೂ ಕಾಮೆಟ್ ಇವಿಯ ಬೆಲೆ ಸಂಬಂಧಿಸಿದಂತೆ ತೀವ್ರ ಕುತೂಹಲವಿದೆ. ಈ ಕಾರು, ಸರಿ ಸುಮಾರು ರೂ.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಹಲವು ಮಂದಿ, ಇದೊಂದು 2 ಡೋರ್ ಹೊಂದಿರುವ ಸಣ್ಣ ಕಾರಾಗಿರುವುದರಿಂದ ಅದಕ್ಕಿಂತಲೂ ಕಡಿಮೆ ಬೆಲೆಗೆ ಸಿಗಬಹುದು ಎಂದು ಹೇಳುತ್ತಿದ್ದಾರೆ.

ಇದಕ್ಕೂ ಸೂಕ್ತ ಕಾರಣವಿದ್ದು, ಕಾಮೆಟ್ ಇವಿಯ ತಯಾರಿಕೆಗೆ ಬಳಕೆ ಮಾಡಿರುವ ಬ್ಯಾಟರಿ ಪ್ಯಾಕ್ ಅನ್ನು ಸ್ಥಳೀಯವಾಗಿ ಟಾಟಾ ಆಟೋಕಾಂಪ್‌ನಿಂದ ಪಡೆಯಲಾಗಿದೆ ಎಂದು ವರದಿಯಾಗಿದೆ. ಇದರಿಂದಾಗಿ ಈ ಕಾರಿನ ದರ ಸ್ಪರ್ಧಾತ್ಮಕವಾಗಿರಬಹುದು. ಜೊತೆಗೆ ಕಾಮೆಟ್ ಇವಿ ಪುಟ್ಟ ಕಾರಾಗಿದ್ದು, ನಗರ ಪ್ರದೇಶದಲ್ಲಿ ಸುಲಭವಾಗಿ ಓಡಾಡುವಂತೆ ವಿನ್ಯಾಸ ಮಾಡಲಾಗಿದೆ. ಅಲ್ಲದೆ, ಸ್ವಲ್ಪ ಜಾಗದಲ್ಲಿಯೇ ಪಾರ್ಕಿಂಗ್ ಮಾಡಬಹುದು.

MG Comet EV: ನಾಳೆ ಎಲ್ಲರ ಆಕರ್ಷಣೆಯ ಎಂಜಿ ಕಾಮೆಟ್ ಇವಿ ಬಿಡುಗಡೆ, ಬೆಲೆ ಕಡಿಮೆಯೇ?.. ಪ್ರಮುಖ ಮಾಹಿತಿ

ಈ ಎಂಜಿ ಕಾಮೆಟ್ ಇವಿ 3 ಮೀಟರ್‌ಗಿಂತ ಕಡಿಮೆ ಉದ್ದ ಹಾಗೂ 1.5-ಮೀಟರ್ ಅಗಲವಿದ್ದು, ಸದ್ಯ ದೊರೆತ್ತಿರುವ ಮೂಲಗಳ ಮಾಹಿತಿ ಪ್ರಕಾರ, ಇದು 17.3 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, 41.4 hp ಗರಿಷ್ಠ ಪವರ್ ಹಾಗೂ 110 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 230 km ರೇಂಜ್ ನೀಡಲಿದೆ ಎಂದು ಅಂದಾಜಿಸಲಾಗಿದೆ.

ಪ್ರತಿಯೊಂದು ಎಲೆಕ್ಟ್ರಿಕ್ ಕಾರಿಗೂ ಚಾರ್ಜಿಂಗ್ ಆಯ್ಕೆ ತುಂಬಾ ಮುಖ್ಯವಾಗುತ್ತದೆ. ಈ ಕಾಮೆಟ್ ಇವಿ 3.3 kW ಚಾರ್ಜರ್ ಆಯ್ಕೆಯನ್ನು ಪಡೆದಿರಬಹುದು. 0 - 100% ಬ್ಯಾಟರಿ ಚಾರ್ಜ್ ಆಗಲು 7 ಗಂಟೆ, ಜೊತೆಗೆ 10 - 80% ಬ್ಯಾಟರಿ ಚಾರ್ಜ್ ಆಗಲು 5 ಗಂಟೆಬೇಕಾಗಬಹುದು. ಬಹುತೇಕ ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ ಸಿಗುವುದಿಲ್ಲವಂತೆ. ಕೆಲದಿನಗಳ ಹಿಂದೆ, ಕಂಡು ಬಂದ ಇದರ ಚಿತ್ರ ನೋಡಿದಾಗ ಆಕರ್ಷಕ ವಿನ್ಯಾಸ ಹೊಂದಿದೆ ಎಂದು ಸುಲಭವಾಗಿ ಹೇಳಬಹುದು.

ಈ ನೂತನ ಎಂಜಿ ಕಾಮೆಟ್ ಇವಿ ಯಾವೆಲ್ಲ ವೈಶಿಷ್ಟ್ಯವನ್ನು ಪಡೆದಿರಬಹುದು ಎಂದು ಹೇಳುವುದಾದರೆ, ಇದು ಇನ್ಫೋಟೈನ್‌ಮೆಂಟ್ ಸಿಸ್ಟಂ ಹಾಗೂ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಾಗಿ ಎರಡು 10.25 ಇಂಚಿನ ಸ್ಕ್ರೀನ್, ಪವರ್ ಫೋಲ್ಡಿಂಗ್ ORVMಗಳು, ಎಲ್‌ಇಡಿ ಹೆಡ್‌ಲೈಟ್ಸ್, ಆಂಬಿಯೆಂಟ್ ಲೈಟಿಂಗ್, ಕನೆಕ್ಟ್ ಕಾರ್ ಟೆಕ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಆಟೋಮೆಟಿಕ್ ಕ್ಲೈಮೆಂಟ್ ಕಂಟ್ರೋಲ್, ರೇರ್ ಪಾರ್ಕಿಂಗ್ ಸೆನ್ಸೆರ್ಸ್, ಡ್ಯುಯಲ್ ಏರ್‌ಬ್ಯಾಗ್ಸ್ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಹೊಂದಿರಬಹುದು.

ಒಟ್ಟಾರೆ, ನಾಳೆ (ಏಪ್ರಿಲ್ 26) ಬಿಡುಗಡೆಯಾಗಲಿರುವ ಎಂಜಿ ಕಾಮೆಟ್ ಇವಿ ದೊಡ್ಡ ಮಟ್ಟದಲ್ಲಿ ನೀರಿಕ್ಷೆ ಹುಟ್ಟಿಸಿರುವುದು ಸುಳ್ಳಲ್ಲ. ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಭಾರತದ ಮಾರುಕಟ್ಟೆಗೆ ಬರುತ್ತಿರುವುದರಿಂದ ಹೆಚ್ಚಿನ ಗ್ರಾಹಕರಿಗೆ ಇಷ್ಟವಾಗಬಹುದು. ಬೆಲೆ ಹಾಗೂ ಬುಕಿಂಗ್ ಬಗ್ಗೆಯು ಅಧಿಕೃತ ಮಾಹಿತಿ ಸಿಗಲಿದೆ. ಬಿಡುಗಡೆಯಾದ ಮೇಲೆ ದೇಶೀಯ ಖರೀದಿದಾರರು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Tuesday, April 25, 2023, 17:57 [IST]
English summary
Mg comet ev launch tomorrow details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+