MG Comet EV: ದೇಶದ ಟಾಪ್ 10 ನಗರಗಳಲ್ಲಿ ಪ್ರಸ್ತುತ ಆನ್‌ರೋಡ್ ಬೆಲೆಗಳು ಹೀಗಿವೆ...
ದೇಶದ ಅತ್ಯಂತ ಸಣ್ಣ ಇವಿ ಹಾಗೂ ಅತ್ಯಂತ ಕಡಿಮೆ ಬೆಲೆಯ ಇವಿ (ಭಾರತದ ಇತರ ಎಲೆಕ್ಟ್ರಿಕ್ ಕಾರುಗಳಿಗೆ ಹೋಲಿಸಿಕೊಂಡರೆ) ಎಂದು ಸದ್ದು ಮಾಡುತ್ತಿರುವ ಎಂಜಿ ಕಾಮೆಟ್ ಕೊನೆಗೂ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿದೆ. ಇದು ಎಂಜಿ ಮೋಟಾರ್ಸ್ ಅವರ ಎರಡನೇ ಎಲೆಕ್ಟ್ರಿಕ್ ಕಾರಾಗಿದ್ದು, ಇದರ ಆನ್‌ರೋಡ್ ಬೆಲೆಗಲ ಬಗ್ಗೆ ಹಲವರಿಗೆ ಗೊಂದಲಗಳಿವೆ.
ಈ ಕಾಂಪ್ಯಾಕ್ಟ್ EV ಅನ್ನು ಮೂರು ರೂಪಾಂತರಗಳಲ್ಲಿ ಮತ್ತು ಏಕೈಕ ಪವರ್‌ಟ್ರೇನ್ ಆಯ್ಕೆಯಲ್ಲಿ ನೀಡಲಾಗುತ್ತದೆ. ಒಟ್ಟಾರೆಯಾಗಿ ಈ ಇವಿ ಎಕ್ಸ್ ಶೋರೂಂ ಬೆಲೆಗಳ ಬಗ್ಗೆ ತಿಳಿವಳಿಕೆ ಇರುವವರಿಗೆ ಆನ್‌ರೋಡ್ ಬೆಲೆಗಳನ್ನು ಕೂಡ ಇಲ್ಲಿ ತಿಳಿಸುತ್ತಿದ್ದೇವೆ. ದೇಶಾದ್ಯಂತ ಟಾಪ್ 10 ನಗರಗಳಲ್ಲಿ MG Comet EV ಯ ಆನ್-ರೋಡ್ ಬೆಲೆಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ.
| MG Comet EV On-road Prices | |||
| City | Pace | Play | Plush |
| Mumbai | ₹8.41 Lakh | ₹9.79 Lakh | ₹10.51 Lakh |
| Delhi | ₹8.45 Lakh | ₹9.83 Lakh | ₹10.55 Lakh |
| Chennai | ₹8.43 Lakh | ₹9.80 Lakh | ₹10.53 Lakh |
| Kolkata | ₹8.41 Lakh | ₹9.79 Lakh | ₹10.51 Lakh |
| Bangalore | ₹8.42 Lakh | ₹9.80 Lakh | ₹10.52 Lakh |
| Hyderabad | ₹8.41 Lakh | ₹9.79 Lakh | ₹10.51 Lakh |
| Ahmedabad | ₹8.41 Lakh | ₹10.34 Lakh | ₹11.11 Lakh |
| Chandigarh | ₹8.40 Lakh | ₹10.61 Lakh | ₹11.39 Lakh |
| Pune | ₹8.41 Lakh | ₹₹9.79 Lakh | ₹10.51 Lakh |
| Kochi | ₹8.40 Lakh | ₹10.15 Lakh | ₹10.90 Lakh |
ಎಂಜಿ ಕಾಮೆಟ್ ಇವಿಯ ಬ್ಯಾಟರಿ ಪ್ಯಾಕ್ ಹಾಗೂ ರೇಂಜ್ ಬಗ್ಗೆ ಹೇಳುವುದಾದರೆ, ಇದು 17.3 KWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಫುಲ್ ಚಾರ್ಜಿನಲ್ಲಿ 230 km ರೇಂಜ್ ಕೊಡಲಿದೆ. ಇದರಲ್ಲಿ ಉಪಯೋಗ ಮಾಡಿರುವ ಸಿಂಗಲ್ PMS ಮೋಟಾರ್ 41.4 hp ಗರಿಷ್ಠ ಪವರ್ ಹಾಗೂ 110 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

MG ಕಾಮೆಟ್ EV ಬಣ್ಣಗಳ ಬಗ್ಗೆ ಹೇಳುವುದಾದರೆ, ಆಸಕ್ತ ಖರೀದಿದಾರರು ಕ್ಯಾಂಡಿ ವೈಟ್, ಸ್ಟಾರ್ರಿ ಬ್ಲ್ಯಾಕ್, ಅರೋರಾ ಸಿಲ್ವರ್, ಕ್ಯಾಂಡಿ ವೈಟ್ ವಿತ್ ಎ ಸ್ಟಾರ್ರಿ ಬ್ಲ್ಯಾಕ್ ರೂಫ್ ಮತ್ತು ಆಪಲ್ ಗ್ರೀನ್ ವಿತ್ ಸ್ಟಾರ್ರಿ ಬ್ಲ್ಯಾಕ್ ರೂಫ್ ಸೇರಿದಂತೆ ಐದು ಬಾಹ್ಯ ವರ್ಣಗಳಿಂದ ಕಾಮೆಟ್ ಇವಿಯನ್ನು ಆಯ್ಕೆ ಮಾಡಬಹುದು. ಜೊತೆಗೆ ಕಂಪನಿಯು ಕಾಮೆಟ್ EV ಯೊಂದಿಗೆ 250+ ಗ್ರಾಹಕೀಕರಣ ಪ್ಯಾಕ್‌ಗಳನ್ನು ಹೆಚ್ಚುವರಿ ವೆಚ್ಚದಲ್ಲಿ ಒದಗಿಸುತ್ತದೆ.
ಎಂಜಿ ಕಾಮೆಟ್ ಇವಿ ಸುತ್ತಳತೆ ಬಗ್ಗೆ ಹೇಳುವುದಾದರೆ, ಇದು 2,974 ಎಂಎಂ ಉದ್ದ, 1,505 ಎಂಎಂ ಅಗಲ, 1,613 ಎಂಎಂ ಎತ್ತರ ಹಾಗೂ 2,010 ಎಂಎಂ ಉದ್ದದ ವೀಲ್‌ಬೇಸ್ ಹೊಂದಿದೆ. ಈ ಹಿಂದೆ ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದ ಟಾಟಾ ನ್ಯಾನೊಗೆ ಹೋಲಿಸಿದರೆ, ಎಂಜಿ ಕಾಮೆಟ್ ಇವಿ ಉದ್ದದಲ್ಲಿ 125 ಎಂಎಂ ಚಿಕ್ಕದಾಗಿದೆ. ಅದಕ್ಕಿಂತ 220 ಎಂಎಂ ಕಡಿಮೆ ವೀಲ್‌ಬೇಸ್ ಪಡೆದಿದೆ.

ಈ ಕಾರಿನ ಚಾರ್ಜಿಂಗ್ ಆಯ್ಕೆ ಬಗ್ಗೆ ಮಾತನಾಡುವುದಾದರೆ, ಇದು 3.3kW ಎಸಿ ಚಾರ್ಜರ್ ಹೊಂದಿದ್ದು, ಇದರ ಬ್ಯಾಟರಿ 80% ಚಾರ್ಜ್ ಆಗಲು ಕೇವಲ 5 ಗಂಟೆ ಸಾಕು. ಬಣ್ಣದ ಆಯ್ಕೆ ಬಗ್ಗೆ ಹೇಳುವುದಾದರೆ, 2 ಡ್ಯುಯಲ್ ಟೋನ್ ಮತ್ತು 3 ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಆಪಲ್ ಗ್ರೀನ್ ವಿತ್ ಸ್ಟಾರ್ರಿ ಬ್ಲ್ಯಾಕ್, ಕ್ಯಾಂಡಿ ವೈಟ್ ಹಾಗೂ ಸ್ಟಾರಿ ಬ್ಲಾಕ್ ಕಲರ್ ಪ್ರಮುಖವಾಗಿವೆ.
ಈ ಕಾರು, ಮೂರು ರೂಪಾಂತರಗಳಲ್ಲಿ ಖರೀದಿಗೆ ದೊರೆಯುವುದರಿಂದ ಕೊಂಚ ಬೇರೆ, ಬೇರೆಯಾಗಿ ವೈಶಿಷ್ಟ್ಯಗಳನ್ನು ಹೊಂದಿದೆ. ಆದರೂ, ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಾಗಿ ಡುಯೆಲ್ 10.25-ಇಂಚಿನ ಸ್ಕ್ರೀನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಎಲ್ಲ ವೇರಿಯೆಂಟ್ ಗಲ್ಲಿಯೂ ಇದೆ. ಸುರಕ್ಷತೆಯ ದೃಷ್ಟಿಯಿಂದ ಫ್ರಂಟ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್)ನ್ನು ಪಡೆದಿದೆ.


Click it and Unblock the Notifications








