ಭಾರತದಲ್ಲಿ ಹೊಸ ಕ್ರಾಂತಿ ಮಾಡುತ್ತಿದೆ ಈ ಪುಟ್ಟ ಎಲೆಕ್ಟ್ರಿಕ್ ಕಾರು:1 ಕಿ.ಮೀ ಓಡಿಸಲು 50 ಪೈಸೆ ಖರ್ಚು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ತನ್ನ ಬಹುನಿರೀಕ್ಷಿತ ಹೊಸ ಎಂಜಿ ಕಾಮೆಟ್ ಎಂಬ ಹೊಸ ಪುಟ್ಟ ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನ ಪ್ರಾರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.98 ಲಕ್ಷವಾಗಿದೆ,

ಎಂಜಿ ಕಾಮೆಟ್ ಇವಿ ಖಂಡಿತವಾಗಿಯೂ ಭಾರತದಲ್ಲಿ ಇತ್ತೀಚೆಗೆ ಮಾರಾಟವಾದ ಅನನ್ಯ ಎಲೆಕ್ಟ್ರಿಕ್ ಕೊಡುಗೆಗಳಲ್ಲಿ ಒಂದಾಗಿದೆ. ಈ ಪುಟ್ಟ ಎಲೆಕ್ಟ್ರಿಕ್ ಕಾರು ಪೇಸ್, ​​ಪ್ಲೇ ಮತ್ತು ಪ್ಲಶ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಎಂಟ್ರಿ ಲೆವೆಲ್ ಪೇಸ್ ರೂಪಾಂತರವು 7.78 ಲಕ್ಷ ರೂಪಾಯಿಗಳಾಗಿದ್ದರೆ, ಮಿಡ್-ಸ್ಪೆಕ್ ಪ್ಲೇ ಮತ್ತು ಫುಲ್ ಲೋಡ್ ಪ್ಲಶ್ ರೂಪಾಂತರಗಳು ಕ್ರಮವಾಗಿ 9.28 ಲಕ್ಷ ಮತ್ತು 9.98 ಲಕ್ಷ ಬೆಲೆಗಳೊಂದಿಗೆ ಬರುತ್ತವೆ. ಇವುಗಳು ಪರಿಚಯಾತ್ಮಕ ಬೆಲೆಗಳಾಗಿವೆ.

MG Comet EV

ಹೊಸ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನ ಎಂಟ್ರಿ ಲೆವೆಲ್ ಪೇಸ್ ರೂಪಾಂತರದಲ್ಲಿ 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕೀಲೆಸ್ ಎಂಟ್ರಿ, ಬ್ಲೂಟೂತ್ ಕನೆಕ್ಟಿವಿಟಿ ಸಿಸ್ಟಂ,ಮ್ಯಾನುಯಲ್ ಎಸಿ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, 2 ಸ್ಪೀಕರ್‌ಗಳು, 3 ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳು, ಸ್ಪ್ಲಿಟ್ ಫೋಲ್ಡಿಂಗ್ ರಿಯರ್ ಸೀಟ್‌ಗಳು, ಪವರ್ ಹೊಂದಾಣಿಕೆಯಂತಹ ಫೀಚರ್ಸ್ ಗಳನ್ನು ನೀಡುತ್ತದೆ.

ಇದರೊಂದಿಗೆ . ORVM ಗಳು, ಬ್ಲ್ಯಾಕ್ ಆಂತರಿಕ ಥೀಮ್, ಫ್ಯಾಬ್ರಿಕ್ ಅಪ್ಹೋಲ್ಸ್ಟರಿ, ಎಲೆಕ್ಟ್ರಿಕ್ ಅಡ್ಜೆಸ್ಟ್ ಮಾಡಬಹುದಾದ ವಿಂಗ್ ಮಿರರ್‌ಗಳು, ರಿಮೋಟ್ ಸೆಂಟ್ರಲ್ ಲಾಕಿಂಗ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, EBD ಜೊತೆಗೆ ABS, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ರಿವರ್ಸ್ ಪಾರ್ಕಿಂಗ್ ಸೀಟ್‌ಗಳು ಮತ್ತು Isofix ಚೈಲ್ಡ್ ಸೀಟ್ ಆಂಕರ್‌ಗಳು, ವಿಂಗ್ ಮಿರರ್-ಮೌಂಟೆಡ್ LED ಟರ್ನ್ ಸೂಚಕಗಳು ಮತ್ತು ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಲ್ಯಾಂಪ್‌ಗಳನ್ನು ಹೊಂದಿವೆ.

ಮಿಡ್-ಸ್ಪೆಕ್ ಪ್ಲೇ ರೂಪಾಂತರವು ಬೇಸ್ ಪೇಸ್ ರೂಪಾಂತರದ ಮೇಲೆ ಕೆಲವು ಹೆಚ್ಚುವರಿ ಫೀಚರ್ಸ್ ಗಳನ್ನು ಪಡೆಯುತ್ತದೆ. ಇನ್ನು ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಲ್ಯಾಂಪ್‌ಗಳು , ಕನಕ್ಟಿವಿಟಿ ಮುಂಭಾಗ ಮತ್ತು ಹಿಂಭಾಗದ ಲ್ಯಾಂಪ್ ಗಳು, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಲೆದರ್ ಸುತ್ತಿದ ಸ್ಟೀರಿಂಗ್ ವೀಲ್, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋವನ್ನು ಹೊಂದಿದೆ,

ಇದರೊಂದಿಗೆ ವಾಯ್ಸ್ ಕಾಮೆಂಡ್, ಫಾಸ್ಟ್ ಚಾರ್ಜಿಂಗ್ ಮತ್ತು ಸಂಪರ್ಕಿತ ಕಾರ್ ತಂತ್ರಜ್ಞಾನದೊಂದಿಗೆ 3 USB ಚಾರ್ಜಿಂಗ್ ಪೋರ್ಟ್‌ಗಳನ್ನು ಹೊಂದಿವೆ. ರೇಂಜ್-ಟಾಪ್ ಪ್ಲಶ್ ಡ್ರೈವರ್ ವಿಂಡೋಗೆ ಆಟೋ ಅಪ್ ಫಂಕ್ಷನ್, ಟಿಲ್ಟ್ ಅಡ್ಜಸ್ಟಬಲ್ (ಅಪ್-ಡೌನ್) ಸ್ಟೀರಿಂಗ್ ವೀಲ್, ಸ್ಮಾರ್ಟ್ ಸ್ಟಾರ್ಟ್ ಸಿಸ್ಟಮ್, ಬ್ಲೂಟೂತ್ ಜೊತೆ ಡಿಜಿಟಲ್ ಕೀ, ಅಪ್ರೋಚ್ ಅನ್‌ಲಾಕ್ ಫಂಕ್ಷನ್ ಮತ್ತು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ 6 ವಿಶೇಷ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಕಂಪನಿಯು ನಾಲ್ಕು ಸ್ಟೈಲಿಂಗ್ ಪ್ಯಾಕೇಜ್‌ಗಳನ್ನು ಎಲ್ಲಾ ರೂಪಾಂತರಗಳನ್ನು ನೀಡುತ್ತಿದೆ. ಇದು ಸೆರಿನಿಟಿ, ಬೀಚ್ ಬೇ, ಫ್ಲೆಕ್ಸ್ ಮತ್ತು ಸನ್‌ಡೌನರ್. ಖರೀದಿದಾರರು ಲೊರೆಸ್ಟಾ, ಬ್ಲಾಸಮ್, ಡೇ ಆಫ್ ಡೆಡ್, ಸ್ಪೇಸ್ ಮತ್ತು ನೈಟ್ ಕೆಫೆಯಂತಹ ಬಹು ಸ್ಟಿಕ್ಕರ್ ಶೈಲಿಗಳಿಂದ ಆಯ್ಕೆ ಮಾಡಬಹುದು. ಈ ಕಾರಿನ ಹೆಸರು ಇಂಗ್ಲೆಂಡ್-ಆಸ್ಟ್ರೇಲಿಯಾ ಮ್ಯಾಕ್‌ರಾಬರ್ಟ್‌ಸನ್ ಏರ್ ರೇಸ್‌ನಲ್ಲಿ ಭಾಗವಹಿಸಿದ 1934 ರ ಸಾಂಪ್ರದಾಯಿಕ ಬ್ರಿಟಿಷ್ ವಿಮಾನದಿಂದ ಸ್ಫೂರ್ತಿ ಪಡೆದಿದೆ.

ವುಲಿಂಗ್ ಏರ್ ಇವಿ ಮಾದರಿಯನ್ನು ಆಧರಿಸಿರುವ, ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು ಪೂರ್ಣ-ಅಗಲ LED ಲೈಟ್ ಬಾರ್‌ನಂತಹ ಆಸಕ್ತಿದಾಯವಾದ ಬಾಕ್ಸ್ ವಿನ್ಯಾಸ ಭಾಷೆಯನ್ನು ಹೊಂದಿದೆ, ಜೊತೆಗೆ, ಎರಡೂ ವಿಂಗ್ ಮೀರರ್ಸ್ ಕ್ರೋಮ್ ಮತ್ತು ಪಿಯಾನೋ ಬ್ಲ್ಯಾಕ್ ಪಟ್ಟಿ ಇದೆ. ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನಲ್ಲಿ 17.3kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP67-ರೇಟ್ ಮಾಡಲ್ಪಟ್ಟಿದೆ ಮತ್ತು ರೇಂಜ್ 230 ಕಿ.ಮೀ ಆಗಿದೆ.

More from DriveSpark

Article Published On: Sunday, May 7, 2023, 13:30 [IST]
English summary
Mg comet ev variant wise feature list and more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+