MG Comet EV: ಕುತೂಹಲಕ್ಕೆ ತೆರೆ.. ಬಹುನೀರಿಕ್ಷಿತ ಎಂಜಿ ಕಾಮೆಟ್ ರೂಪಾಂತರಗಳ ಬೆಲೆ ಘೋಷಣೆ

ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳು ನಿಧಾನವಾಗಿ ಜನಪ್ರಿಯತೆಗಳಿಸುತ್ತಿದ್ದು, ಅದಕ್ಕೆ ಹೊಸ ಸೇರ್ಪಡೆ ಎಂಬಂತೆ ಎಂಜಿ (MG) ಕಂಪನಿ ತನ್ನ ಪುಟ್ಟ 2 ಡೋರ್ ಕಾಮೆಟ್ ಇವಿ (Comet EV) ಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿ, ಆರಂಭಿಕ ಬೆಲೆಯನ್ನು ಬಹಿರಂಗಪಡಿಸಿತ್ತು. ಸದ್ಯ, ಈ ಕಾರಿನ ವಿವಿಧ ರೂಪಾಂತರಗಳ ಬೆಲೆ, ಬುಕಿಂಗ್ ಹಾಗೂ ವಿತರಣೆ ದಿನಾಂಕದ ಬಗ್ಗೆ ಮಾಹಿತಿ ನೀಡಿದೆ.

ಭಾರತದ ಗ್ರಾಹಕರಿಗೆ ಎಂಜಿ ಕಾಮೆಟ್ ಇವಿ ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಪೇಸ್ (Pace), ಪ್ಲೇ (Play) ಮತ್ತು ಪ್ಲಶ್ (Plush). ಇವುಗಳ ಬೆಲೆಯನ್ನು ನೋಡುವುದಾದರೆ, ಪೇಸ್ ವೇರಿಯೆಂಟ್ ರೂ.7.98 ಲಕ್ಷ, ಪ್ಲೇ ವೇರಿಯೆಂಟ್ ರೂ.9.28 ಲಕ್ಷ ಹಾಗೂ ಪ್ಲಶ್ ವೇರಿಯೆಂಟ್ ರೂ. 9.98 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ದರ ಮೊದಲ 5,000 ಕಾರುಗಳಿಗೆ ಅನ್ವಯವಾಗಲಿದೆ.

MG Comet EV: ಕುತೂಹಲಕ್ಕೆ ತೆರೆ.. ಬಹುನೀರಿಕ್ಷಿತ ಎಂಜಿ ಕಾಮೆಟ್ ರೂಪಾಂತರಗಳ ಬೆಲೆ ಘೋಷಣೆ

ಈ ಎಂಜಿ ಕಾಮೆಟ್ ಇವಿಗಾಗಿ ಆಸಕ್ತ ಗ್ರಾಹಕರು ಮೇ.12ರಿಂದ ಆನ್ ಲೈನ್ ಅಥವಾ ಅಧಿಕೃತ ಡೀಲರ್ ಶಿಪ್ ಗೆ ಭೇಟಿ ನೀಡುವ ಮೂಲಕ ಬುಕಿಂಗ್ ಮಾಡಬಹುದು. ಈಗಾಗಲೇ ಕಂಪನಿ ಉತ್ಪಾದನೆಯನ್ನು ಆರಂಭಿಸಿರುವುದರಿಂದ ಮೇ.22ರಿಂದಲೇ ವಿತರಣೆಗಳು ಶುರುವಾಗಲಿದೆ. ಈ ಕಾರು, ಎಂಜಿ ಇ-ಶೀಲ್ಡ್ ಓನರ್ಶಿಪ್ ಪ್ಯಾಕೇಜ್‌ನೊಂದಿಗೆ ಬರುತ್ತಿದ್ದು, ಇದು ರಿಪೇರಿ ಹಾಗೂ ಸರ್ವಿಸ್ ಕಾಸ್ಟ್ ಅನ್ನು ಹೊಂದಿರುತ್ತದೆ.

ಪ್ರಮುಖವಾಗಿ ಕಾಮೆಟ್ ಇವಿ ಖರೀದಿದಾರರಿಗೆ 3 ವರ್ಷ ಅಥವಾ 1,00,000 km ವಾರಂಟಿ, 3 ವರ್ಷ ರೋಡ್ ಸೈಡ್ ಅಸಿಸ್ಟೆನ್ಸ್, 3 ಫ್ರೀ ಲೇಬರ್ ಸರ್ವಿಸ್ (ಮೊದಲ ಮೂರು ಸರ್ವಿಸ್ ಮಾತ್ರ), 8 ವರ್ಷ ಅಥವಾ 1,20,000 km ಬ್ಯಾಟರಿ ವಾರಂಟಿ ಸೌಲಭ್ಯಗಳು ಲಭ್ಯವಾಗಲಿವೆ. ಇದಿಷ್ಟೇ ಅಲ್ಲದೆ, 80+ ಎಕ್ಸ್ಟೆಂಡೆಡ್ ವಾರಂಟಿ ಹಾಗೂ ಸರ್ವಿಸ್ ಪ್ಯಾಕೇಜ್ ಪಡೆಯಬಹುದು. ಅದರ ಶುಲ್ಕ ರೂ.5,000 ದಿಂದ ಪ್ರಾರಂಭವಾಗುತ್ತದೆ.

MG Comet EV: ಕುತೂಹಲಕ್ಕೆ ತೆರೆ.. ಬಹುನೀರಿಕ್ಷಿತ ಎಂಜಿ ಕಾಮೆಟ್ ರೂಪಾಂತರಗಳ ಬೆಲೆ ಘೋಷಣೆ

ಎಂಜಿ ಕಂಪನಿಯೇ ಹೇಳಿಕೊಂಡಿರುವಂತೆ ಈ ಕಾಮೆಟ್ ಇವಿ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದ್ದು, 1,000 km ಕ್ರಮಿಸಲು ಕೇವಲ ರೂ.519 ವ್ಯಯಿಸಬೇಕು. ಇದರ ಬ್ಯಾಟರಿ ಪ್ಯಾಕ್ ಹಾಗೂ ರೇಂಜ್ ಬಗ್ಗೆ ಮಾತನಾಡುವುದಾದರೆ, 17.3 KWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಫುಲ್ ಚಾರ್ಜಿನಲ್ಲಿ 230 km ರೇಂಜ್ ನೀಡಲಿದೆ. ಇದರ ಬಳಸಿರುವ ಸಿಂಗಲ್ PMS ಮೋಟಾರ್ 41.4 hp ಪವರ್, 110 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಎಂಜಿ ಕಾಮೆಟ್ ಇವಿಯ ರೂಪಾಂತರಗಳು ಯಾವೆಲ್ಲ ವೈಶಿಷ್ಟ್ಯವನ್ನು ಹೊಂದಿದೆ ಎಂಬುದನ್ನು ನೋಡುವುದಾದರೆ, ಎಂಟ್ರಿ ಲೆವೆಲ್ 'ಪೇಸ್' ವೇರಿಯೆಂಟ್ ಸ್ಟಾರ್‌ಲೈಟ್ ಬ್ಲಾಕ್ ಇಂಟೀರಿಯರ್, ಫುಲ್ ಡಿಜಿಟಲ್ ಕ್ಲಸ್ಟರ್ ಜೊತೆಗೆ 10.25 ಇಂಚಿನ ಎಂಬೆಡೆಡ್ LED ಸ್ಕ್ರೀನ್, ರಿವರ್ಸ್ ಪಾರ್ಕಿಂಗ್ ಸೆನ್ಸರ್ಸ್, ಪವರ್ ಅಡ್ಜಸ್ಟ್ಏಬಲ್ ORVMs ಹೊಂದಿದೆ. 'ಪ್ಲೇ' ರೂಪಾಂತರ ಐ-ಸ್ಮಾರ್ಟ್ ವಿತ್ 55+ ಕನೆಕ್ಟೆಡ್ ಕಾರ್ ಫೀಚರ್ಸ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪೇಯನ್ನು ಹೊಂದಿದೆ.

ಟಾಪ್ ಎಂಡ್ 'ಪ್ಲಶ್' ರೂಪಾಂತರ ಗ್ರೇ ಕ್ಯಾಬಿನ್ ಥೀಮ್, ಇನ್ಫೋಟೈನ್‌ಮೆಂಟ್ ಸಿಸ್ಟಮ್‌ ಹಾಗೂ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಾಗಿ ಡುಯೆಲ್ 10.25-ಇಂಚಿನ ಸ್ಕ್ರೀನ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಈ ಕಾರು ಸಣ್ಣದಿರುವುದರಿಂದ ನಗರ ಪದೇಶದ ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ ಸುಲಭವಾಗಿ ಓಡಾಡಬಹುದು. ಜೊತೆಗೆ ಕಡಿಮೆ ಸ್ಥಳದಲ್ಲಿ ಪಾರ್ಕಿಂಗ್ ಮಾಡಬಹುದು.

ಇನ್ನು, ಎಂಜಿ ಕಾಮೆಟ್ ಇವಿಗೆ ಭಾರತದ ಮಾರುಕಟ್ಟೆಯಲ್ಲಿ 2 ಡೋರ್ ವಿಭಾಗದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿ ಹೊಂದಿಲ್ಲ. ಆದರೂ, ಈಗಾಗಲೇ ಅಗ್ಗದ ಬೆಲೆಗೆ ಖರೀದಿಗೆ ದೊರೆಯುವ ಟಾಟಾ ಟಿಯಾಗೊ ಇವಿ ಹಾಗೂ ಸಿಟ್ರಸ್ ಇಸಿ3 ಎಲೆಕ್ಟ್ರಿಕ್ ಕಾರುಗಳಿಂದ ಪೈಪೋಟಿ ಎದುರಿಸಬೇಕಾಗಿದೆ. ಜೊತೆಗೆ ಇದು ಪುಟ್ಟ ಕಾರಾಗಿದ್ದರೂ ನಾಲ್ಕು ಮಂದಿ ಆರಾಮವಾಗಿ ಕುಳಿತುಕೊಂಡು ಪ್ರಯಾಣಿಸಬಹುದಾಗಿದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರಿಂದ ಯಾವ ರೀತಿಯಲ್ಲಿ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Friday, May 5, 2023, 15:06 [IST]
English summary
Mg comet ev variants prices revealed details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+