MG Cyberster: 570 km ರೇಂಜ್ ನೀಡುವ ಎಂಜಿ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳು ಬಹಿರಂಗ!
ಬ್ರಿಟಿಷ್ ವಾಹನ ತಯಾರಕ ಎಂಜಿ ಮೋಟಾರ್ (MG Motor), ಹಲವು ಎಲೆಕ್ಟ್ರಿಕ್ ಕಾರುಗಳನ್ನು ವಿವಿಧ ದೇಶಗಳ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿದೆ. ಸದ್ಯ, ಮುಂಬರಲಿರುವ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳ ಬಗ್ಗೆ ಕಂಪನಿಯು ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸಿದೆ. ಬರುವ ವರ್ಷ ಈ ಕಾರಿನ ಮಾರಾಟ ಶುರುವಾಗಲಿದೆ.
ಎಂಜಿ ಕಂಪನಿಯ ಈ ನೂತನ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಕಾರು, ಎರಡು ಆಸನ ಆಯ್ಕೆ ವ್ಯವಸ್ಥೆಯಲ್ಲಿ ಖರೀದಿಗೆ ಸಿಗಲಿದೆ. ಡುಯಲ್ ಎಲೆಕ್ಟ್ರಿಕ್ ಮೋಟಾರ್ ಸಹಾಯದಿಂದ ಕಾರ್ಯನಿರ್ವಹಿಸಲಿದ್ದು, ಆಲ್ ವೀಲ್ ಡ್ರೈವ್ ತಂತ್ರಜ್ಞಾನವನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ. ಜೊತೆಗೆ 528 bhp ಗರಿಷ್ಠ ಪವರ್ ಹಾಗೂ 725 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ ಎಂದು ಹೇಳಿದೆ.

ಹೊಚ್ಚ ಹೊಸ ಎಂಜಿ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಕಾರಿನಲ್ಲಿ 77 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಸಂಪೂರ್ಣ ಚಾರ್ಜಿನಲ್ಲಿ 570 km ರೇಂಜ್ ನೀಡುತ್ತದೆ. ಕೇವಲ 3.2 ಸೆಕೆಂಡುಗಳಲ್ಲಿ ರೋಡ್‌ಸ್ಟರ್ ಎಲೆಕ್ಟ್ರಿಕ್ ಕಾರು, 100 kmph ವೇಗವನ್ನು ಪಡೆಯಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಓಪನ್ - ಟಾಪ್ ಹಾಗೂ ಆಕರ್ಷಕ ಡೋರ್ ಒಳಗೊಂಡಿರುವ ಎಂಜಿ ಸೈಬರ್‌ಸ್ಟರ್ (ಸ್ಪೋರ್ಟ್ಸ್) ಎಲೆಕ್ಟ್ರಿಕ್ ಕಾರು, ಸರಿ ಸುಮಾರು 1,984 ಕೆಜಿ ತೂಕವಿದೆ. ಸುತ್ತಳತೆ ಬಗ್ಗೆ ಹೇಳುವುದಾದರೆ, 4,533 ಎಂಎಂ ಉದ್ದ, 1,912 ಎಂಎಂ ಅಗಲ ಮತ್ತು 1,328 ಎಂಎಂ ಎತ್ತರವಿದೆ. ಅಲ್ಲದೆ, 2,689 ಎಂಎಂ ಅಳತೆಯ ವ್ಹೀಲ್‌ಬೇಸ್ ಹೊಂದಿದೆ.

ಎಂಜಿ ಕಂಪನಿ, ಸೈಬರ್‌ಸ್ಟರ್ ಎಲೆಕ್ಟ್ರಿಕ್ ಕಾರಿನ ಹಗುರ (lightweight)ವಾಗಿರುವ ಆವೃತ್ತಿಯನ್ನು ಪರಿಚಯಿಸುವ ಸಾಧ್ಯತೆಯಿದೆ. ಇದು, ರೇರ್ ವೀಲ್ ಡ್ರೈವ್ ಹಾಗೂ ಸಿಂಗಲ್ ಮೋಟಾರ್ ಪಡೆದಿರುವ ನೀರಿಕ್ಷೆಯಿದ್ದು, 295 bhp ಗರಿಷ್ಠ ಪವರ್ ಉತ್ಪಾದಿಸಬಹುದು. ಇದರಲ್ಲಿ 64 kWh ಬ್ಯಾಟರಿ ಪ್ಯಾಕ್ ಬಳಕೆ ಮಾಡುವ ನೀರಿಕ್ಷೆಯಿದ್ದು, ಫುಲ್ ಚಾರ್ಜಿನಲ್ಲಿ km ರೇಂಜ್ ಕೊಡಬಹುದು ಎಂದು ಅಂದಾಜಿಸಲಾಗಿದೆ.
ಎಂಜಿ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಕಾರಿನ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಇದು 4 ಪಿಸ್ಟನ್ ಫಿಕ್ಸೆಡ್ ಕ್ಯಾಲಿಪರ್‌ಗಳೊಂದಿಗೆ ಬ್ರೆಂಬೊ ಬ್ರೇಕ್ ಅನ್ನು ಪಡೆದಿರಲಿದ್ದು, ಬೋಸ್ ಆಡಿಯೊ ಸಿಸ್ಟಮ್, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8155 ಚಿಪ್ ಪವಾರ್ಡ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಯುವ ಗ್ರಾಹಕರನ್ನು ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.
ಈ ಎಲೆಕ್ಟ್ರಿಕ್ ಕಾರಿನ ಬೆಲೆ, ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತದೆಯೋ, ಇಲ್ಲವೋ ಎಂಬುದರ ಕುರಿತ ಯಾವುದೇ ಖಚಿತ ಮಾಹಿತಿ ಇಲ್ಲ. ಸದ್ಯ, ಎಂಜಿ ಕಂಪನಿ ದೇಶದಲ್ಲಿ ಮಾರಾಟ ಮಾಡುವ ಕಾಮೆಟ್ ಇವಿ ಬಗ್ಗೆ ಹೇಳುವುದಾದರೆ, ಇದು, ನಾಲ್ಕು ಆಸನ ಆಯ್ಕೆಯಲ್ಲಿ ಪೇಸ್, ಪ್ಲೇ ಮತ್ತು ಪ್ಲಶ್ ಎಂಬ ಮೂರು ರೂಪಾಂತರ ಆಯ್ಕೆಯಲ್ಲಿ ಸಿಗುತ್ತದೆ. ಅದಕ್ಕೆ ಅನುಗುಣವಾಗಿ ರೂ.7.98 ಲಕ್ಷದಿಂದ ರೂ.9.98 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ.
ಈ ಎಂಜಿ ಕಾಮೆಟ್ ಇವಿಯಲ್ಲಿ ಉಪಯೋಗಿಸಲಾಗಿರುವ 17.3 KWh ಬ್ಯಾಟರಿ ಪ್ಯಾಕ್, ಸಂಪೂರ್ಣ ಚಾರ್ಜಿನಲ್ಲಿ 230 km ರೇಂಜ್ ಕೊಡುತ್ತದೆ. ಇದರ ಸಿಂಗಲ್ PMS ಮೋಟಾರ್, 41.4 hp ಗರಿಷ್ಠ ಪವರ್ ಹಾಗೂ 110 Nm ಪೀಕ್ ಟಾರ್ಕ್ ಹೊರಹಾಕುತ್ತದೆ. ಆಪಲ್ ಗ್ರೀನ್ ವಿತ್ ಸ್ಟಾರ್ರಿ ಬ್ಲ್ಯಾಕ್, ಕ್ಯಾಂಡಿ ವೈಟ್ ಹಾಗೂ ಸ್ಟಾರಿ ಬ್ಲಾಕ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಈ ಕಾರಿನ ಬ್ಯಾಟರಿ ಪ್ಯಾಕ್, ಮನೆಯ ವಿದ್ಯುತ್ ಬಳಕೆಯಲ್ಲಿ 80% ಚಾರ್ಜ್ ಆಗಲು ಕೇವಲ 5 ಗಂಟೆ ತೆಗೆದುಕೊಳ್ಳುತ್ತದೆ. ವೈಶಿಷ್ಟ್ಯದ ವಿಚಾರವಾಗಿ ಹೇಳುವುದಾದರೆ, ಎಂಜಿ ಕಾಮೆಟ್ ಇವಿ, 10.25-ಇಂಚಿನ ಸ್ಕ್ರೀನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಒಳಗೊಂಡಂತೆ ವಿವಿಧ ಫೀಚರ್ಸ್ ಹೊಂದಿದೆ. ಸುರಕ್ಷತೆಯ ವಿಚಾರದಲ್ಲೂ ಅತ್ಯುತ್ತಮವಾಗಿದ್ದು, ಎಲ್ಲ ರೂಪಾಂತರಗಳು ಡ್ಯೂಯಲ್ ಏರ್ ಬಾಗ್ಸ್ ಅನ್ನು ಹೊಂದಿವೆ.


Click it and Unblock the Notifications








