ಭಾರೀ ಡಿಮ್ಯಾಂಡ್ ನಡುವೆ ಹೆಕ್ಟರ್ ಗ್ರಾಹಕರಿಗೆ ಶಾಕ್ ನೀಡಿದ ಎಂಜಿ ಮೋಟಾರ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ಇಂಡಿಯಾ ತನ್ನ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಎಸ್‍ಯುವಿಗಳ ಬೆಲೆಗಳನ್ನು ಹೆಚ್ಚಿಸಿದೆ. ಇದರಿಂದ ಎಂಜಿ ಹೆಕ್ಟರ್ (MG Hector) ಮತ್ತು ಎಂಜಿ ಹೆಕ್ಟರ್ ಪ್ಲಸ್ (MG Hector Plus) ಎಸ್‍ಯುವಿಗಳು ದುಬಾರಿಯಾಗಿದೆ. ಈ ಎಂಜಿ ಎಸ್‍ಯುವಿಗಳ ಹೊಸ ಬೆಲೆಗಳ ಬಗ್ಗೆ ಮಾಹಿತಿಗಳು ಇಲ್ಲಿದೆ.

ಎಂಜಿ ಮೋಟಾರ್ ಇಂಡಿಯಾ ತನ್ನ ಎಂಜಿ ಹೆಕ್ಟರ್ ಎಸ್‍ಯುವಿಯಲ್ಲಿ 2023ರ ಜನವರಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ರೂ.14.73 ಲಕ್ಷವಾಗಿದ್ದು, ಇದು ಎಕ್ಸ್ ಶೋರೂಂ ಪ್ರಕಾರವಾಗಿದೆ. ಇನ್ನು ಹೆಕ್ಟರ್ ಪ್ಲಸ್ ಎಸ್‌ಯುವಿಯನ್ನು ರೂ.20.80 ಲಕ್ಷವಾಗಿದ್ದು. ಇದು ಎಕ್ಸ್ ಶೋರೂಂ ಪ್ರಕಾರವಾಗಿದೆ. ಎಂಜಿ ಹೆಕ್ಟರ್ ಎಸ್‍ಯುವಿಯು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆವೃತ್ತಿಗಳಲ್ಲಿ ಲಭ್ಯವಿದೆ.

MG Hector

ಈ ಎಸ್‍ಯುವಿಗಳು ಸ್ಟೈಲ್, ಶೈನ್, ಸ್ಮಾರ್ಟ್, ಸ್ಮಾರ್ಟ್ ಪ್ರೊ, ಶಾರ್ಪ್ ಪ್ರೊ ಮತ್ತು ಸ್ಯಾವಿ ಪ್ರೊ ಎಂಬ ಆರು ರೂಪಾಂತರಗಳಲ್ಲಿ ಲಭ್ಯವಿದೆ. ಎಂಜಿ ಹೆಕ್ಟರ್ ಪ್ಲಸ್ ಎಸ್‍ಯುವಿಗಳ ಬೆಲೆಯು ರೂ. 40,000 ವರೆಗೆ ಹೆಚ್ಚಾಗಿದೆ. ಎಂಜಿ ಹೆಕ್ಟರ್ ಎಸ್‍ಯುವಿಯು ಬೆಲೆ ಏರಿಕೆಯಾದ ಬಳಿಕ ಹೊಸ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.15 ಲಕ್ಷವಾಗಿದೆ. ಈ ಎಂಜಿ ಹೆಕ್ಟರ್ ಪ್ಲಸ್ ಎಸ್‍ಯುವಿ ಆರು ಮತ್ತು ಏಳು ಸೀಟ್ ಕಾನ್ಫಿಗರೇಶನ್‌ಗಳಲ್ಲಿ ನೀಡಲಾಗುತ್ತದೆ.

ಇದೀಗ ಎಂಜಿ ಹೆಕ್ಟರ್ ಪ್ಲಸ್ ಎಸ್‍ಯುವಿಯು ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.20.45 ಲಕ್ಷವಾಗಿದೆ. ಇನ್ನು ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಕಳೆದ ವರ್ಷದ ಕೊನೆಯಲ್ಲಿ ಹೆಕ್ಟರ್ ಎಸ್‍ಯುವಿಯು 1 ಲಕ್ಷ ಯುನಿಟ್ ಗಳನ್ನು ಮಾರಾಟ ಮಾಡಿ ಹೊಸ ಮೈಲಿಗಲ್ಲನ್ನು ಸಾಧಿಸಿತು. ಈ ಹೊಸ ಎಂಜಿ ಹೆಕ್ಟರ್ ಎಸ್‍ಯುವಿಯು ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಆರ್ಗೈಲ್-ಇನ್ಸ್ಪೈರ್ಡ್ ಗ್ರಿಲ್ ಸೇರಿದಂತೆ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿವೆ.

MG Hector

ಈ ಎಸ್‍ಯುವಿಯ ಗ್ರಿಲ್ ಕೊಂಚ ದೊಡ್ಡಗಿದ್ದು, ಎಲ್ಇಡಿ ಡಿಆರ್ಎಲ್ ನೊಂದಿಗೆ ಸಂಪರ್ಕಿಸುತ್ತದೆ. ಹೆಡ್‌ಲ್ಯಾಂಪ್‌ಗಳು ಮುಂಭಾಗದ ಬಂಪರ್‌ನಲ್ಲಿ ಕೆಳಗೆ ಇದೆ. ಜೊತೆಗೆ ಹೊಸ 2023ರ ಹೆಕ್ಟರ್ ಎಸ್‌ಯುವಿ ಆಕರ್ಷಕ ಫಾಗ್ ಲ್ಯಾಂಪ್‌ ಅನ್ನು ಒಳಗೊಂಡಿದ್ದು, 18-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್ ಗಳನ್ನು ಹೊಂದಿದೆ. ಈ ಹೊಸ ಎಸ್‍ಯುವಿಯು ಪ್ಲಾಸ್ಟಿಕ್ ಕವರ್ಡ್ ಹಾಗೂ ಸ್ಕ್ವೇರ್-ಆಫ್ ವೀಲರ್ಚ್‌ನೊಳಗೆ ಸುತ್ತುವರಿದಿದೆ.

ಈ ಎಸ್‍ಯುವಿಯ ವಿನ್ಯಾಸದ ವಿಷಯದಲ್ಲಿ ಇತರೆ ದೊಡ್ಡ ಬದಲಾವಣೆ ಎಂದರೆ, ಎಸ್‍ಯುವಿಯ ಹಿಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಟೈಲ್‌ಲೈಟ್‌ ಇದೆ.ಒಳಭಾಗ ಡ್ಯುಯಲ್-ಟೋನ್ ಥೀಮ್ ಅನ್ನು ಹೊಂದಿದ್ದು, ಇದು ಎಸ್‍ಯುವಿಯ ಒಳಭಾಗಕ್ಕೆ ಪ್ರೀಮಿಯಂ ಲುಕ್ ಅನ್ನು ನೀಡುತ್ತದೆ. ಡ್ಯಾಶ್‌ಬೋರ್ಡ್ ಸಹ ಅತ್ಯುನ್ನತವಾಗಿದ್ದು, ಮರುವಿನ್ಯಾಸಗೊಳಿಸಲಾದ ಏರ್‌ಕಾನ್ ವೆಂಟ್‌ಗಳನ್ನು ಒಳಗೊಂಡಿದೆ. ಈ ಎಸ್‍ಯುವಿಯ ಒಳಭಾಗದಲ್ಲಿ 14 ಇಂಚುಗಳ ಇನ್ಫೋಟೈನ್‌ಮೆಂಟ್ ಸ್ಕ್ರೀನ್, Apple CarPlay ಮತ್ತು Android Auto ಸೇರಿದಂತೆ 75ಕ್ಕೂ ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿದೆ.

ಜೊತೆಗೆ ಟ್ರಾಫಿಕ್ ಜಾಮ್ ಅಸಿಸ್ಟ್ ಸೇರಿದಂತೆ ಈ ಎಸ್‍ಯುವಿಯಲ್ಲಿ ಡ್ರೈವರ್ ಅಸಿಸ್ಟ್ ಸಿಸ್ಟಂ (ADAS), ಎಲೆಕ್ಟ್ರಿಕ್ ಪಾರ್ಕಿಂಗ್ ಬಟನ್, ಲೇನ್-ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ರಿಯರ್ ಕ್ರಾಸ್-ಟ್ರಾಫಿಕ್ ಅಲರ್ಟ್ ಮತ್ತು ಫಾರ್ವರ್ಡ್ ಡಿಕ್ಕಿಶನ್ ವಾರ್ನಿಂಗ್ ಅನ್ನು ಹೊಂದಿದೆ. ಇದರೊಂದಿಗೆ 7.0-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಿದೆ. ಜೊತೆಗೆ iSmart ಇನ್ಫೋಟೈನ್‌ಮೆಂಟ್ ಸಾಫ್ಟ್‌ವೇರ್ ಅನ್ನು ನವೀಕರಿಸಲಾಗಿದೆ. ಇನ್ನು ಈ ಎಸ್‍ಯುವಿಯಲ್ಲಿ ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ.

ಸುರಕ್ಷತೆಗಾಗಿ, 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಎಚ್‌ಡಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (ಟಿಸಿಎಸ್), ಹಿಲ್ ಅಸಿಸ್ಟ್ ಕಂಟ್ರೋಲ್ (ಎಚ್‌ಎಸಿ) ಮತ್ತು ಆಲ್ 4 ವೀಲ್ಸ್ ಡಿಸ್ಕ್ ಬ್ರೇಕ್‌ ಅನ್ನು ಒಳಗೊಂಡಿದೆ. ಇಷ್ಟೇ ಅಲ್ಲದೆ, ಎಲ್ಲಾ ಸೀಟುಗಳಿಗೆ 3-ಪಾಯಿಂಟ್ ಸೀಟ್ ಬೆಲ್ಟ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ (EPB), ಮತ್ತು ಮುಂಭಾಗ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಪಡೆದುಕೊಂಡಿವೆ.

ಈ ಎಂಜಿ ಹೆಕ್ಟರ್ ಎಸ್‍ಯುವಿಯಲ್ಲಿ ಅದೇ 1.5 ಲೀಟರ್ ಟಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 143 ಬಿಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇನ್ನು ಈ ಎಸ್‍ಯುವಿಯಲ್ಲಿ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

More from DriveSpark

Article Published On: Thursday, November 23, 2023, 11:31 [IST]
English summary
Mg hector suv price hiked heres is details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+