ಒಂದೇ ದಿನದಲ್ಲಿ 108 ಹೆಕ್ಟರ್ ಎಸ್‍ಯುವಿಗಳನ್ನು ವಿತರಿಸಿದ MG Motor

ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ಇಂಡಿಯಾ ಭಾನುವಾರ ORIX ಇಂಡಿಯಾ ಕಂಪನಿಯ ರೆಂಟ್-ಎ-ಕಾರ್ ವಿಭಾಗಕ್ಕೆ ಒಂದೇ ದಿನದಲ್ಲಿ ಒಟ್ಟು 108 ಹೆಕ್ಟರ್ ಎಸ್‍ಯುವಿಗಳನ್ನು ವಿತರಿಸಿದೆ. ಎಂಜಿ ಕಂಪನಿಯ ಜನಪ್ರಿಯ ಎಸ್‍ಯುವಿ ಹೆಕ್ಟರ್ ಆಗಿದ್ದು, ಈ ಎಸ್‍ಯುವಿಯು ಭಾರತದಲ್ಲಿ ಎಂಜಿ ಕಂಪನಿಗೆ ಉತ್ತಮ ಅಡಿಪಾಯ ಹಾಕಿ ಕೊಟ್ಟಿದೆ,

ಎಂಜಿ ಮೋಟಾರ್ ಕಂಪನಿಯು ಎಸ್‍ಯುವಿ ಮಾದರಿಗಳ ಫ್ಲೀಟ್ ಅನ್ನು ORIX ಇಂಡಿಯಾದ MD ಮತ್ತು CEO ಸಂದೀಪ್ ಗಂಭೀರ್ ಅವರಿಗೆ ನವದೆಹಲಿಯ ಮೋತಿ ನಗರದಲ್ಲಿ, ಎಂಜಿ ಮೋಟಾರ್ ಇಂಡಿಯಾ ಕಂಪನಿಯ CCO ಗೌರವ್ ಗುಪ್ತಾ ಅವರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು. ORIX ಇಂಡಿಯಾ, ಭಾರತದಲ್ಲಿನ ಅತಿ ದೊಡ್ಡ ಕಾರು ಲೀಸ್ ಮತ್ತು ಬಾಡಿಗೆಗೆ ನೀಡುವ ಕಂಪನಿಗಳಲ್ಲಿ ಒಂದಾಗಿದೆ, ಇದು ಜಪಾನ್‌ನ ORIX ಕಾರ್ಪೊರೇಶನ್‌ನ ಒಂದು ಭಾಗವಾಗಿದೆ.

ಒಂದೇ ದಿನದಲ್ಲಿ 108 ಹೆಕ್ಟರ್ ಎಸ್‍ಯುವಿಗಳನ್ನು ವಿತರಿಸಿದ MG Motor

ಇನ್ನು ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಕಳೆದ ವರ್ಷದ ಕೊನೆಯಲ್ಲಿ ಹೆಕ್ಟರ್ ಎಸ್‍ಯುವಿಯು 1 ಲಕ್ಷ ಯುನಿಟ್ ಗಳನ್ನು ಮಾರಾಟ ಮಾಡಿ ಹೊಸ ಮೈಲಿಗಲ್ಲನ್ನು ಸಾಧಿಸಿತು. ಈ ಹೊಸ ಎಂಜಿ ಹೆಕ್ಟರ್ ಎಸ್‍ಯುವಿಯು ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಆರ್ಗೈಲ್-ಇನ್ಸ್ಪೈರ್ಡ್ ಗ್ರಿಲ್ ಸೇರಿದಂತೆ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿವೆ. ಗ್ರಿಲ್ ಕೊಂಚ ದೊಡ್ಡಗಿದ್ದು, ಎಲ್ಇಡಿ ಡಿಆರ್ಎಲ್ ನೊಂದಿಗೆ ಸಂಪರ್ಕಿಸುತ್ತದೆ. ಹೆಡ್‌ಲ್ಯಾಂಪ್‌ಗಳು ಮುಂಭಾಗದ ಬಂಪರ್‌ನಲ್ಲಿ ಕೆಳಗೆ ಇದೆ.

ಜೊತೆಗೆ ಹೊಸ 2023ರ ಹೆಕ್ಟರ್ ಎಸ್‌ಯುವಿ ಆಕರ್ಷಕ ಫಾಗ್ ಲ್ಯಾಂಪ್‌ ಅನ್ನು ಒಳಗೊಂಡಿದ್ದು, 18-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್ ಗಳನ್ನು ಹೊಂದಿದೆ. ಈ ಹೊಸ ಎಸ್‍ಯುವಿಯು ಪ್ಲಾಸ್ಟಿಕ್ ಕವರ್ಡ್ ಹಾಗೂ ಸ್ಕ್ವೇರ್-ಆಫ್ ವೀಲರ್ಚ್‌ನೊಳಗೆ ಸುತ್ತುವರಿದಿದೆ. ವಿನ್ಯಾಸದ ವಿಷಯದಲ್ಲಿ ಇತರೆ ದೊಡ್ಡ ಬದಲಾವಣೆ ಎಂದರೆ, ಎಸ್‍ಯುವಿಯ ಹಿಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಟೈಲ್‌ಲೈಟ್‌ ಇದೆ.ಒಳಭಾಗ ಡ್ಯುಯಲ್-ಟೋನ್ ಥೀಮ್ ಅನ್ನು ಹೊಂದಿದ್ದು, ಇದು ಎಸ್‍ಯುವಿಯ ಒಳಭಾಗಕ್ಕೆ ಪ್ರೀಮಿಯಂ ಲುಕ್ ಅನ್ನು ನೀಡುತ್ತದೆ.

ಡ್ಯಾಶ್‌ಬೋರ್ಡ್ ಸಹ ಅತ್ಯುನ್ನತವಾಗಿದ್ದು, ಮರುವಿನ್ಯಾಸಗೊಳಿಸಲಾದ ಏರ್‌ಕಾನ್ ವೆಂಟ್‌ಗಳನ್ನು ಒಳಗೊಂಡಿದೆ. ಈ ಎಸ್‍ಯುವಿಯ ಒಳಭಾಗದಲ್ಲಿ 14 ಇಂಚುಗಳ ಇನ್ಫೋಟೈನ್‌ಮೆಂಟ್ ಸ್ಕ್ರೀನ್, Apple CarPlay ಮತ್ತು Android Auto ಸೇರಿದಂತೆ 75ಕ್ಕೂ ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಟ್ರಾಫಿಕ್ ಜಾಮ್ ಅಸಿಸ್ಟ್ ಸೇರಿದಂತೆ ಈ ಎಸ್‍ಯುವಿಯಲ್ಲಿ ಡ್ರೈವರ್ ಅಸಿಸ್ಟ್ ಸಿಸ್ಟಂ (ADAS), ಎಲೆಕ್ಟ್ರಿಕ್ ಪಾರ್ಕಿಂಗ್ ಬಟನ್, ಲೇನ್-ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ರಿಯರ್ ಕ್ರಾಸ್-ಟ್ರಾಫಿಕ್ ಅಲರ್ಟ್ ಮತ್ತು ಫಾರ್ವರ್ಡ್ ಡಿಕ್ಕಿಶನ್ ವಾರ್ನಿಂಗ್ ಅನ್ನು ಹೊಂದಿದೆ.

ಇದರೊಂದಿಗೆ 7.0-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಿದೆ. ಜೊತೆಗೆ iSmart ಇನ್ಫೋಟೈನ್‌ಮೆಂಟ್ ಸಾಫ್ಟ್‌ವೇರ್ ಅನ್ನು ನವೀಕರಿಸಲಾಗಿದೆ. ಇನ್ನು ಈ ಎಸ್‍ಯುವಿಯಲ್ಲಿ ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ. ಸುರಕ್ಷತೆಗಾಗಿ, 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಎಚ್‌ಡಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (ಟಿಸಿಎಸ್), ಹಿಲ್ ಅಸಿಸ್ಟ್ ಕಂಟ್ರೋಲ್ (ಎಚ್‌ಎಸಿ) ಮತ್ತು ಆಲ್ 4 ವೀಲ್ಸ್ ಡಿಸ್ಕ್ ಬ್ರೇಕ್‌ ಅನ್ನು ಒಳಗೊಂಡಿದೆ.

ಇಷ್ಟೇ ಅಲ್ಲದೆ, ಎಲ್ಲಾ ಸೀಟುಗಳಿಗೆ 3-ಪಾಯಿಂಟ್ ಸೀಟ್ ಬೆಲ್ಟ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ (EPB), ಮತ್ತು ಮುಂಭಾಗ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಪಡೆದುಕೊಂಡಿವೆ. ಈ ಎಂಜಿ ಹೆಕ್ಟರ್ ಎಸ್‍ಯುವಿಯಲ್ಲಿ ಅದೇ 1.5 ಲೀಟರ್ ಟಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 143 ಬಿಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಇನ್ನು ಈ ಎಸ್‍ಯುವಿಯಲ್ಲಿ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 143 ಬಿಹೆಚ್‍‍ಪಿ ಪವರ್ ಮತ್ತು 350 ಎನ್‍ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿ ಹೆಕ್ಟರ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಹ್ಯಾರಿಯರ್ ಮತ್ತು ಮಹೀಂದ್ರಾ XUV700 ಎಸ್‍ಯುವಿಗೆ ಪೈಪೋಟಿ ನೀಡುತ್ತದೆ. ಎಂಜಿ ಮೋಟಾರ್ ಕಂಪನಿಯು ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನಲ್ಲಿ ಕೆಲಸ ಮಾಡುತ್ತಿದೆ. ವರದಿಯ ಪ್ರಕಾರ, ಎಂಜಿ ಏರ್ ಎಂಬ ಹೆಸರಿನ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ.

Article Published On: Tuesday, February 21, 2023, 8:30 [IST]
English summary
Mg motor india delivers 108 hector suvs to orix details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+