ಅತ್ಯಾಧುನಿಕ Gloster BLACKSTORM ಅನ್ನು ಮಾರುಕಟ್ಟೆಗಿಳಿಸಿದ MG ಮೋಟಾರ್ ಇಂಡಿಯಾ

ಜನಪ್ರಿಯ ವಾಹನ ತಯಾರಕ ಕಂಪನಿಯಾದ MG ಗ್ಲೋಸ್ಟರ್, ಭಾರತದ ಮೊದಲ ಆಟೋನಮಸ್ ಲೆವಲ್-1 ಪ್ರೀಮಿಯಂ SUV ನ ಸುಧಾರಿತ ಬ್ಲ್ಯಾಕ್‌ಸ್ಟಾರ್ಮ್ ಆವೃತ್ತಿಯನ್ನು ಇಂದು ಪರಿಚಯಿಸಿದೆ. ಈ ವಿಶೇಷ ಆವೃತ್ತಿಯು ಡೀಪ್ ಬ್ಲಾಕ್ ಬಣ್ಣದಲ್ಲಿ ಬರುವ ಮೂಲಕ ತನ್ನ ಇತರ ಮಾದರಿಗಳಿಗಿಂತ ವಿಭಿನ್ನವಾಗಿ ಕಾಣುತ್ತದೆ.

ಸುಧಾರಿತ Gloster BLACKSTORM ದೇಶಾದ್ಯಂತ ಎಕ್ಸ್ ಶೋ ರೂಂ (ದೆಹಲಿ) ಬೆಲೆ ರೂ. 40,29,800/- ಕ್ಕೆ ಈಗ ಲಭ್ಯವಿದೆ. ಸುಧಾರಿತ ಗ್ಲೋಸ್ಟರ್ ಬ್ಲ್ಯಾಕ್‌ಸ್ಟಾರ್ಮ್ ಒಳಗೆ ಬ್ಲಾಕ್ ಸ್ಟೀರಿಂಗ್ ವೀಲ್, ಹೆಡ್‌ಲ್ಯಾಂಪ್‌ಗಳು, ಕ್ಯಾಲಿಪರ್‌ಗಳು ಮತ್ತು ಮುಂಭಾಗ, ಹಿಂಭಾಗದ ಬಂಪರ್‌ನಲ್ಲಿ ಕೆಂಪು ಅಕ್ಸೆಂಟ್‌ಗಳಿಂದ ಸಜ್ಜುಗೊಂಡಿದೆ. ಡಾರ್ಕ್-ಥೀಮ್ ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿ, ರೆಡ್ ಸ್ಟಿಚಸ್ ಇಡೀ ಒಳಾಂಗಣಕ್ಕೆ ಸ್ಪೋರ್ಟಿ ಟಚ್ ಅನ್ನು ನೀಡಿದೆ.

Gloster BLACKSTORM

ಮುಂದಿನ-ಪೀಳಿಗೆಯ 'ಆನ್ ಡಿಮ್ಯಾಂಡ್' ಅಥವಾ 'ರಿಯಲ್ ಟೈಮ್ ಇಂಟೆಲಿಜೆಂಟ್' 4 ವ್ಹೀಲ್ ಡ್ರೈವ್ ಟ್ರೈನ್‌ನಲ್ಲಿ ಬೋರ್ಗ್‌ವಾರ್ನರ್ ವರ್ಗಾವಣೆ ಕೇಸ್‌ನೊಂದಿಗೆ ನಿರ್ಮಿಸಲಾಗಿದೆ. ಈ ಮೂಲಕ ಇದು ಅತ್ಯಾಧುನಿಕ ಎಲೆಕ್ಟ್ರಾನಿಕ್ ಶಿಫ್ಟ್-ಆನ್-ಫ್ಲೈ ತಂತ್ರಜ್ಞಾನ ಹೊಂದಿದೆ. ಅಪ್ರತಿಮ ಟಾರ್ಕ್ ನಿಯಂತ್ರಣ ಮತ್ತು ವಿತರಣೆಯೊಂದಿಗೆ ಉತ್ತಮ ಶಕ್ತಿ, ಎಲ್ಲಾ ಭೂಪ್ರದೇಶಗಳಲ್ಲಿ ಅಪ್ರತಿಮ ಪರ್ಫಾಮೆನ್ಸ್ ನೀಡುತ್ತದೆ ಎಂದು ಕಂಪನಿ ಹೇಳಿದೆ.

ಅಡ್ವಾನ್ಸ್‌ಡ್ ಗ್ಲೋಸ್ಟರ್ ಬ್ಲ್ಯಾಕ್‌ ಸ್ಟಾರ್ಮ್ ಮೊದಲ-ಇನ್-ಸೆಗ್ಮೆಂಟ್ ಲೆವೆಲ್ -1, ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಸೇರಿದಂತೆ 30 ವಿನ್ಯಾಸಗೊಳಿಸಿದ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (ACC), ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (AEB), ಅಟೋ ಮ್ಯಾಟಿಕ್ ಪಾರ್ಕಿಂಗ್ ಅಸಿಸ್ಟ್, ಫಾರ್ವರ್ಡ್ ಕೊಲಿಷನ್ ಎಚ್ಚರಿಕೆ (FCW) ಕೂಡ ಇವೆ.

Gloster BLACKSTORM ನಲ್ಲಿ ಇವಿಷ್ಟೇ ಅಲ್ಲದೇ ಲೇನ್ ನಿರ್ಗಮನ ಎಚ್ಚರಿಕೆ (LDW), ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ (BSD), ಬಾಗಿಲು ತೆರೆದಾಗ ಎಚ್ಚರಿಕೆ (DOW), ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ (RCTA), ಲೇನ್ ಚೇಂಜ್ ಅಸಿಸ್ಟ್ (LCA) ಸೇರಿದಂತೆ ಚಾಲಕ ಆಯಾಸ ಜ್ಞಾಪನೆ ವ್ಯವಸ್ಥೆಯಂತಹ ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿರುವುದು ವಿಶೇಷ.

ಅದರ ಗಮನಾರ್ಹ ವೈಶಿಷ್ಟ್ಯಗಳ ಜೊತೆಗೆ, ಡ್ಯುಯಲ್ ಪನೋರಮಿಕ್ ಎಲೆಕ್ಟ್ರಿಕ್ ಸನ್‌ರೂಫ್, 12-ವೇ ಪವರ್-ಅಡ್ಜಸ್ಟಬಲ್ ಡ್ರೈವರ್ ಸೀಟ್, ಡ್ರೈವರ್ ಸೀಟ್ ಮಸಾಜ್ ಮತ್ತು ವೆಂಟಿಲೇಶನ್ ವೈಶಿಷ್ಟ್ಯಗಳ ಜೊತೆಗೆ ಸುಧಾರಿತ MG ಗ್ಲೋಸ್ಟರ್ ಬ್ಲ್ಯಾಕ್‌ಸ್ಟಾರ್ಮ್ ಏಳು ವಿಧಾನಗಳೊಂದಿಗೆ ಎಲ್ಲಾ-ಭೂಪ್ರದೇಶ ವ್ಯವಸ್ಥೆಯನ್ನು ಹೊಂದಿದೆ. ಅವುಗಳೆಂದರೆ 'ಸ್ನೋ', 'ಮಡ್ ', 'ಸ್ಯಾಂಡ್', 'ಇಕೋ', 'ಸ್ಪೋರ್ಟ್', 'ನಾರ್ಮಲ್' ಮತ್ತು 'ರಾಕ್'.

ಈ ಐಷಾರಾಮಿ ಆಫ್-ರೋಡರ್ ಆರು ಅಥವಾ ಏಳು ಪ್ರಯಾಣಿಕರಿಗೆ ಆಸನ ಆಯ್ಕೆಗಳನ್ನು ನೀಡುತ್ತದೆ. ಇದು ಪ್ರೀಮಿಯಂ ಐಷಾರಾಮಿ ಆಂತರಿಕ ಜಾಗವನ್ನು ನೀಡುತ್ತದೆ. ಶಕ್ತಿಶಾಲಿ 2.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಗ್ಲೋಸ್ಟರ್ ಬ್ಲ್ಯಾಕ್‌ಸ್ಟಾರ್ಮ್‌ ಪಡೆದಿದೆ. ಇದರಲ್ಲಿ ಮೊದಲ ಇನ್ ಸೆಗ್ಮೆಂಟ್ ಟ್ವಿನ್ ಟರ್ಬೊ ಡೀಸೆಲ್ ಎಂಜಿನ್ ಪ್ರಭಾವಶಾಲಿ 158.5 kW ಪವರ್ ನೀಡುತ್ತದೆ.

ಕಂಪನಿ ಹೇಳಿಕೆಯಂತೆ MG Gloster BLACKSTORM ಗ್ರಾಹಕರು ವೈಯಕ್ತೀಕರಿಸಿದ ಕಾರು ಮಾಲೀಕತ್ವದ ಪ್ರೋಗ್ರಾಂ "MY MG SHIELD" ನ ವಿಶೇಷ ಪ್ರಯೋಜನಗಳನ್ನು ಆನಂದಿಸಬಹುದು. ಹೆಚ್ಚುವರಿಯಾಗಿ, ಗ್ರಾಹಕರು ಪ್ರಮಾಣಿತ 3+3+3 ಪ್ಯಾಕೇಜ್‌ನಿಂದ ಪ್ರಯೋಜನ ಪಡೆಯಬಹುದು, ಇದು ಅನಿಯಮಿತ ಕಿ.ಮೀಗಳೊಂದಿಗೆ ಮೂರು ವರ್ಷಗಳ ವಾರೆಂಟಿ, ಮೂರು ವರ್ಷಗಳ ರೋಡ್‌ಸೈಡ್ ಅಸಿಸ್ಟ್ ಮತ್ತು ಮೂರು ಲೇಬರ್ ಫ್ರೀ ಸೇವೆಗಳನ್ನು ಒಳಗೊಂಡಿರುತ್ತದೆ ಎಂದು ಕಂಪನಿ ತಿಳಿಸಿದೆ.

More from DriveSpark

Article Published On: Monday, May 29, 2023, 16:48 [IST]
English summary
Mg motor india introduces the advanced gloster blackstorm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+