ಮಾರಾಟದಲ್ಲಿ ಮುನ್ನುಗ್ಗುತ್ತಿದೆ MG ಮೋಟಾರ್... ಜೂನ್‌ ತಿಂಗಳ ಮಾರಾಟದಲ್ಲಿ ದಾಖಲೆ

MG ಮೋಟಾರ್ ಇಂಡಿಯಾ ಜೂನ್ 2023 ತಿಂಗಳ ಮಾರಾಟದ ಅಂಕಿಅಂಶಗಳನ್ನು ಪ್ರಕಟಿಸಿದೆ. ಕಳೆದ ತಿಂಗಳು (ಜೂನ್) ಬರೋಬ್ಬರಿ 5,125 ಯುನಿಟ್‌ಗಳ ಮಾರಾಟದೊಂದಿಗೆ ಕಳೆದ ವರ್ಷ ಜೂನ್ 2022 ರಲ್ಲಿ ಮಾರಾಟವಾಗಿದ್ದ 4,504 ಯುನಿಟ್‌ಗಳಿಗೆ ಹೋಲಿಸಿಕೊಂಡಿರೆ MG ಮೋಟಾರ್ ಗಣನೀಯ ಏರಿಕೆಯನ್ನು ಕಂಡಿದೆ.

AMJ (ಎಪ್ರಿಲ್, ಮೇ, ಜೂನ್) 2022 (Q2 2023 -14,682 ಯೂನಿಟ್‌ಗಳು ಮತ್ತು Q2 2022 - 10,519 ಯೂನಿಟ್‌ಗಳು) ಗಿಂತ ಶೇ 40 ರಷ್ಟು QoQ (ಒಂದು ತ್ರೈಮಾಸಿಕದಿಂದ ಮುಂದಿನವರೆಗೆ ಹೂಡಿಕೆ ಅಥವಾ ಕಂಪನಿಯ ಬೆಳವಣಿಗೆ) ಶೇ 14 ರಷ್ಟು ವಾರ್ಷಿಕ ಬೆಳವಣಿಗೆ ಕಂಡಿದೆ.

mg-motors-june-sales-report

ಎಂಜಿ ಅವರ ಇತ್ತೀಚಿನ ಕಾಮೆಟ್ ಕೂಡ ಮುಂದಿನ ತಿಂಗಳುಗಳಲ್ಲಿ ಮಾರಾಟದಲ್ಲಿನ ಹೆಚ್ಚಳಕ್ಕೆ ಹೆಚ್ಚಿನ ಕೊಡುಗೆ ನೀಡಲಿದೆ ಎಂದು ಹೇಳಬಹುದು. ಈಗಾಗಲೇ ಈ ಮಾದರಿ ಉತ್ತಮ ಬುಕಿಂಗ್‌ಗಳನ್ನು ಪಡೆದಿದೆ. ಕಂಪನಿಯೇ ಹೇಳಿರುವಂತೆ ನಗರ ಪ್ರದೇಶದ ಸಂಚಾರಿ ದಟ್ಟಣೆ ಇರುವ ರಸ್ತೆಗಳಲ್ಲಿ ಈ ಕಾರು ಅತ್ಯುತ್ತಮವಾಗಿದ್ದು, 1000 ಕಿ.ಮೀ ಓಡಿಸಲು ನೀವು ರೂ.519 ಖರ್ಚು ಮಾಡಬೇಕು ಎಂದು ಹೇಳಿಕೊಂಡಿದೆ.

ಹಾಗಾಗಿ ಈ ಎಂಜಿ ಕಾಮೆಟ್ ಹೆಚ್ಚು ಬುಕಿಂಗ್‌ಗಳನ್ನು ಪಡೆದಿದೆ. ಬಿಪರ್‌ಜೋಯ್ ಚಂಡಮಾರುತದ ಹಿನ್ನೆಲೆಯಲ್ಲಿ ಪೂರೈಕೆಯಲ್ಲಿ ಅಡಚಣೆ ಉಂಟಾಯಿತಾದರೂ, ಮಾನ್ಸೂನ್ ನಂತರ ಗ್ರಾಹಕರ ಬೇಡಿಕೆಯಲ್ಲಿ ವೇಗ ಹೆಚ್ಚಾಗಿದೆ. ಮುಂದಿನ ಮೂರು ತಿಂಗಳುಗಳಲ್ಲಿ ಎಂಜಿ ಕಾರುಗಳ ಮಾರಾಟದಲ್ಲಿ ಹಿಂದೆಂದಿಗಿಂತ ಉತ್ತಮ ಬೆಳವಣಿಗೆ ಕಾಣುವ ನಿರೀಕ್ಷೆಗಳಿವೆ ಎಂದು ಹೇಳಲಾಗುತ್ತಿದೆ.

mg-motors-june-sales-report

1924 ರಲ್ಲಿ ಯುಕೆಯಲ್ಲಿ ಸ್ಥಾಪನೆಯಾದ ಮೋರಿಸ್ ಗ್ಯಾರೇಜಸ್ ವಾಹನಗಳು ತಮ್ಮ ಸ್ಪೋರ್ಟ್ಸ್ ಕಾರುಗಳು, ರೋಡ್‌ಸ್ಟರ್‌ಗಳು ಮತ್ತು ಕ್ಯಾಬ್ರಿಯೊಲೆಟ್ ಸರಣಿಗಳಿಗೆ ವಿಶ್ವ-ಪ್ರಸಿದ್ಧವಾಗಿವೆ. ಬ್ರಿಟಿಷ್ ಪ್ರಧಾನ ಮಂತ್ರಿ ಮತ್ತು ಬ್ರಿಟಿಷ್ ರಾಜಮನೆತನದವರು, ಪ್ರಸಿದ್ಧ ವ್ಯಕ್ತಿಗಳು ತಮ್ಮ ಸ್ಟೈಲಿಂಗ್, ಪರ್ಫಾಮೆನ್ಸ್‌ಗಾಗಿ MG ವಾಹನಗಳ ಬೇಡಿಕೆಯಿಟ್ಟಿದ್ದರು.

ಗುಜರಾತ್‌ನ ಹಲೋಲ್‌ನಲ್ಲಿರುವ MG ಮೋಟಾರ್ ಭಾರತದ ಅತ್ಯಾಧುನಿಕ ಉತ್ಪಾದನಾ ಸೌಲಭ್ಯವು 1,20,000 ವಾಹನಗಳು ಮತ್ತು 3,000 ಉದ್ಯೋಗಿಗಳ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. CASE (ಸಂಪರ್ಕಿತ, ಸ್ವಾಯತ್ತ, ಹಂಚಿದ ಮತ್ತು ಎಲೆಕ್ಟ್ರಿಕ್) ಚಲನಶೀಲತೆಯ ದೃಷ್ಟಿಯಿಂದ ಪ್ರೇರೇಪಿಸಲ್ಪಟ್ಟಿದೆ ಎಂದು ಕಂಪನಿ ಹೇಳಿಕೊಂಡಿದೆ.

mg-motors-june-sales-report

ಭಾರತದ ಮೊದಲ ಇಂಟರ್ನೆಟ್ SUV ಸೇರಿದಂತೆ ಭಾರತದಲ್ಲಿ MG ಹೆಕ್ಟರ್, ಭಾರತದ ಮೊದಲ ಪ್ಯೂರ್ ಎಲೆಕ್ಟ್ರಿಕ್ ಇಂಟರ್ನೆಟ್ SUV - MG ZS EV, ಭಾರತದ ಮೊದಲ ಸ್ವಾಯತ್ತ (ಲೆವೆಲ್ 1) ಪ್ರೀಮಿಯಂ SUV - MG ಗ್ಲೋಸ್ಟರ್, ಆಸ್ಟರ್- ಮ್ಯಾನುವಲ್ ಜೊತೆಗೆ ಭಾರತದ ಮೊದಲ SUV AI ಸಹಾಯಕ ಮತ್ತು ಸ್ವಾಯತ್ತ (ಹಂತ 2) ತಂತ್ರಜ್ಞಾನ ಮತ್ತು MG ಕಾಮೆಟ್ EV - ಸ್ಮಾರ್ಟ್ ಅರ್ಬನ್ ಎಲೆಕ್ಟ್ರಿಕ್ ವೆಹಿಕಲ್ ಅನ್ನು ಹೊಂದಿದೆ.

ಎಂಜಿ ಮೋಟಾರ್ಸ್ ಸದ್ಯ MG ಮೋಟಾರ್ ಯುಕೆ ಲಿಮಿಟೆಡ್ SAIC ಮೋಟಾರ್ UK ಒಡೆತನದ ವಾಹನ ಕಂಪನಿಯಾಗಿದ್ದು, ಲಂಡನ್‌ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ, ಶಾಂಘೈ ಮೂಲದ ಚೀನೀ ಸರ್ಕಾರಿ ಸ್ವಾಮ್ಯದ ವಾಹನ ತಯಾರಕ SAIC ಮೋಟಾರ್ ಒಡೆತನದಲ್ಲಿದೆ ಎಂಬುದನ್ನು ಇಲ್ಲಿ ಗಮನಿಸಬೇಕು.

More from DriveSpark

Article Published On: Saturday, July 1, 2023, 12:45 [IST]
English summary
Mg motors june sales report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+