Electric Car: 8 ಲಕ್ಷ ರೂ.ಗೆ ಎಲೆಕ್ಟ್ರಿಕ್ ಕಾರು... ಸಿಂಗಲ್ ಚಾರ್ಜ್‌ಗೆ 230 ಕಿ.ಮೀ, ಭರ್ಜರಿ ಮಾರಾಟ!
ಭಾರತದಲ್ಲಿ ಕೆಲವು ಕಂಪನಿಗಳು ಅಗ್ಗದ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ನೀಡುತ್ತಿರುವ ಕಾರಣ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರುಗಳ ಮಾರಾಟವು ತ್ವರಿತ ಹೆಚ್ಚಳಕ್ಕೆ ಕಾರಣವಾಗಿದೆ. ಪ್ರಸ್ತುತ, ದೇಶದಲ್ಲಿ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರು MG ಕಾಮೆಟ್ EV, ಇದರ ಬೆಲೆ 8 ಲಕ್ಷಕ್ಕಿಂತ ಕಡಿಮೆಯಿದೆ.
ಅಗ್ಗದ ಬೆಲೆಯ ಕಾರುಗಳಿಗೆ ಜನಪ್ರಿಯತೆ ಪಡೆದಿರುವ ಮಾರುತಿ ಸುಜುಕಿ ಕೂಡ ಇಷ್ಟು ಅಗ್ಗದ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಈ ಮೊದಲು ಭಾರತದ ಅತ್ಯಂತ ಅಗ್ಗದ ಇವಿಯನ್ನು ನೀಡುತ್ತಿದ್ದ ಬ್ರಾಂಡ್ ಆಗಿ ಟಾಟಾ ಮೋಟಾರ್ಸ್ ಜನಪ್ರಿಯತೆ ಪಡೆದಿತ್ತು. ಟಾಟಾದ ಕೈಗೆಟುಕುವ ಎಲೆಕ್ಟ್ರಿಕ್ ಕಾರಾಗಿ ಟಿಯಾಗೊ EV ಇತ್ತು. ಇದರ ಬೆಲೆ 8.69 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ.

ಆದ್ದರಿಂದ ಸದ್ಯ ಎಂಜಿ ಕಾಮೆಟ್ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ದೇಶದ ಎಲೆಕ್ಟ್ರಿಕ್ ಕಾರಾಗಿದೆ. ಇದೇ ಕಾರಣದಿಂದ ದೇಶದಲ್ಲಿ ವೇಗವಾಗಿ ಮಾರಾಟವಾಗುತ್ತಿದೆ. ಅಂಕಿಅಂಶಗಳನ್ನು ನೋಡಿದ್ರೆ, ಈ ಎಲೆಕ್ಟ್ರಿಕ್ ಕಾರು ಜೂನ್‌ನಲ್ಲಿ 1,184 ಯುನಿಟ್‌ಗಳು, ಜುಲೈನಲ್ಲಿ 1,117 ಯುನಿಟ್‌ಗಳು, ಆಗಸ್ಟ್‌ನಲ್ಲಿ 651 ಯುನಿಟ್‌ಗಳು, ಸೆಪ್ಟೆಂಬರ್‌ನಲ್ಲಿ 1,020 ಯುನಿಟ್‌ಗಳು, ಅಕ್ಟೋಬರ್‌ನಲ್ಲಿ 1,036 ಯುನಿಟ್ ಮತ್ತು ನವೆಂಬರ್‌ನಲ್ಲಿ 698 ಯುನಿಟ್‌ಗಳು ಮಾರಾಟವಾಗಿವೆ.
ಕಂಪನಿಯು ಡಿಸೆಂಬರ್‌ನಲ್ಲಿ ಕಾಮೆಟ್ ಇವಿ ಖರೀದಿಯ ಮೇಲೆ 65,000 ರೂ. ರಿಯಾಯಿತಿಯನ್ನು ಘೋಷಿಸಿದೆ. ನೀವು ಈ ತಿಂಗಳು ಈ ಎಲೆಕ್ಟ್ರಿಕ್ ಕಾರನ್ನು ಖರೀದಿಸಲು ಬಯಸಿದರೆ, ಕಾಮೆಟ್ ಇವಿ ಖರೀದಿಸುವ ಮೂಲಕ ನೀವು ದೊಡ್ಡ ಮೊತ್ತವನ್ನು ಉಳಿಸಬಹುದು. ಕಾಮೆಟ್ ಇವಿ ಬೆಲೆ ರೂ. 7.98 ಲಕ್ಷದಿಂದ ಆರಂಭವಾಗಿ ರೂ. 10.63 ಲಕ್ಷದವರೆಗೆ ಹೋಗುತ್ತದೆ. ಬೆಲೆ ಹೆಚ್ಚಾದಂತೆ ಹೆಚ್ಚುವರಿ ವೈಶಿಷ್ಟ್ಯಗಳು ಬರುತ್ತವೆ.

ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದ್ರೆ, ಇದು 10.25-ಇಂಚಿನ ಟಚ್ ಸ್ಕ್ರೀನ್, ಮ್ಯಾನುಯಲ್ ಎಸಿ, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ನ್ಯಾವಿಗೇಷನ್‌ಗಾಗಿ ಸಂಪರ್ಕಿತ ಕಾರ್ ತಂತ್ರಜ್ಞಾನವನ್ನು ಹೊಂದಿದೆ. ಸುರಕ್ಷತೆಯ ವಿಷಯದಲ್ಲಿ, ಕಾರು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಡೈನಾಮಿಕ್ ಮಾರ್ಗದರ್ಶನದೊಂದಿಗೆ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಎಲೆಕ್ಟ್ರಿಕ್ ಕಾರಿನ ವ್ಯವಸ್ಥೆಯು 3.3kW AC ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಬ್ಯಾಟರಿಯನ್ನು ಶೇ 100 ರಷ್ಟು ಚಾರ್ಜ್ ಮಾಡಲು 7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದನ್ನು ಶೇ10 ರಿಂದ ಶೇ80 ರಷ್ಟು ಚಾರ್ಜ್ ಮಾಡಲು ಕೇವಲ 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಒಂದು ತಿಂಗಳ ಕಾಲ ಇದರ ನಿರ್ವಹಣೆಗೆ ತಗಲುವ ವೆಚ್ಚ ಕೇವಲ 500 ರೂ. ಎಂದು ಕಂಪನಿ ತಿಳಿಸಿದೆ.

ಕಾಮೆಟ್ ಇವಿ ಚೀನಾದ ವುಲಿಂಗ್ ಇವಿ ಆಧಾರಿತ ಎಲೆಕ್ಟ್ರಿಕ್ ಕಾರ್ ಆಗಿದ್ದು, ಇದು ಅನೇಕ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಕಾಮೆಟ್ EV 17.3kWh ಬ್ಯಾಟರಿ ಪ್ಯಾಕ್‌ನೊಂದಿಗೆ ಒಮ್ಮೆ ಚಾರ್ಜ್ ಮಾಡಿದ್ರೆ 230 ಕಿ.ಮೀಗಳ ಡ್ರೈವ್ ಶ್ರೇಣಿಯನ್ನು ನೀಡುತ್ತದೆ. ಕಂಪನಿಯು ಹಿಂಬದಿ-ಆಕ್ಸಲ್-ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಇದರಲ್ಲಿ ಬಳಸಿದೆ. ಇದು 42 bhp ಗರಿಷ್ಠ ಪವರ್ ಮತ್ತು 110 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MG ಯ ಈ ಪ್ರವೇಶ ಮಟ್ಟದ ಎಲೆಕ್ಟ್ರಿಕ್ ಕಾರು ನಗರ ರಸ್ತೆಗಳಿಗಾಗಿ ನಿರ್ಮಿಸಲಾಗಿದ್ದು, ಗಾತ್ರದಲ್ಲಿ ತುಂಬಾ ಸಣ್ಣದಾಗಿದ್ದರೂ ಇದು ನಾಲ್ಕು ಆಸನಗಳನ್ನು ಹೊಂದಿದೆ. ಕಾರಿನ ಉದ್ದವು 3 ಮೀಟರ್‌ಗಿಂತ ಕಡಿಮೆಯಿರುತ್ತದೆ. ಅದರ ಟರ್ನಿಂಗ್ ತ್ರಿಜ್ಯವು ಕೇವಲ 4.2 ಮೀಟರ್ ಆಗಿದೆ. ಕಂಪನಿಯು ಇದನ್ನು 4 ಆಕರ್ಷಕ ಬಣ್ಣಗಳಲ್ಲಿ ನೀಡುತ್ತಿದೆ. ಕಾಮೆಟ್ EV ಭಾರತೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಟಾಟಾ ಟಿಯಾಗೊ EV ಯೊಂದಿಗೆ ಸ್ಪರ್ಧಿಸುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








