Kia: ಬಹುನೀರಿಕ್ಷಿತ ಕಿಯಾ ಸೋನೆಟ್ ಫೇಸ್‌ಲಿಫ್ಟ್‌ ನಾಳೆ ಅನಾವರಣ, ಡಿ.20 ರಿಂದ ಬುಕ್ಕಿಂಗ್?.. ಕಾತುರ ಹೆಚ್ಚಿತು!

ಕಿಯಾ ಸೋನೆಟ್ ಫೇಸ್‌ಲಿಫ್ಟ್‌ (Kia Sonet Facelift) ಎಸ್‌ಯುವಿ, ನಾಳೆ (ಡಿಸೆಂಬರ್ 14) ಜಾಗತಿಕವಾಗಿ ಅನಾವರಣಗೊಳ್ಳಲಿದೆ. ವಿನ್ಯಾಸ ಹಾಗೂ ವೈಶಿಷ್ಟ್ಯಕ್ಕೆ ಸಬಂಧಿಸಿದಂತೆ ಹಲವು ಬದಲಾವಣೆಗಳನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಈ ಎಸ್‌ಯುವಿ, ಮುಂದಿನ ವರ್ಷ (2024) ಭಾರತದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ.

ಸದ್ಯ ಮೂಲಗಳಿಂದ ದೊರೆತ್ತಿರುವ ಮಾಹಿತಿ ಪ್ರಕಾರ, ದೇಶದಲ್ಲಿ ಕಿಯಾ ಕಂಪನಿ ಸೋನೆಟ್ ಫೇಸ್‌ಲಿಫ್ಟ್‌ ಎಸ್‌ಯುವಿ ಫ್ರಿ - ಬುಕ್ಕಿಂಗ್ ಅನ್ನು ಡಿಸೆಂಬರ್ 20 (December 20) ರಿಂದ ಆರಂಭಿಸುವ ಸಾಧ್ಯತೆಯಿದೆ. ವಿವಿಧ ಕಾಸ್ಮೆಟಿಕ್ ಬದಲಾವಣೆಯನ್ನುಪಡೆದುಕೊಂಡಿರುವ ಈ ಎಸ್‌ಯುವಿ, ಗ್ರಾಹಕರಿಗೆ ಅತ್ಯಾಧುನಿಕ 7 ರೂಪಾಂತರ ಹಾಗೂ 11 ಬಣ್ಣಗಳ ಆಯ್ಕೆಯಲ್ಲಿ ಸಿಗಬಹುದು.

Kia: ಬಹುನೀರಿಕ್ಷಿತ ಕಿಯಾ ಸೋನೆಟ್ ಫೇಸ್‌ಲಿಫ್ಟ್‌ ನಾಳೆ ಅನಾವರಣ.. ಡಿ.20 ರಿಂದ ಬುಕ್ಕಿಂಗ್?.. ಕಾತುರ ಹೆಚ್ಚಿತು!

ಕೆಲವೇ ದಿನಗಳ ಹಿಂದೆ, ಕಿಯಾ ಇಂಡಿಯಾ (Kia India) ಈ ಕಾರಿನ ಟೀಸರ್ ಅನ್ನು ತನ್ನ ಅಧಿಕೃತ ಯುಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಗೊಳಿಸಿತ್ತು. ಈ ವೀಡಿಯೋದಲ್ಲಿ ನೂತನ ಸೋನೆಟ್, ಮುಂಭಾಗದಲ್ಲಿ ಹಲವು ಪರಿಷ್ಕರಣೆ ಹೊಂದಿರುವುದನ್ನು ನೋಡಬಹುದಾಗಿತ್ತು. ಸ್ಲಿಮ್ಮರ್ ಗ್ರಿಲ್‌ನೊಂದಿಗೆ ಮರುವಿನ್ಯಾಸಗೊಳಿಸಲಾದ ಫಾಸಿಯಾವನ್ನು ಹೊಂದಿತ್ತು. ಆಕರ್ಷಕ ಹೆಡ್‌ಲೈಟ್‌, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ ಮತ್ತು ಬಂಪರ್‌ನಲ್ಲಿ ಫಾಗ್ ಲೈಟ್ ಪಡೆದಿರುವುದನ್ನು ಕಾಣಬಹುದಾಗಿತ್ತು.

ಮುಂಬರಲಿರುವ ಕಿಯಾ ಸೋನೆಟ್ ಫೇಸ್‌ಲಿಫ್ಟ್‌ ಎಸ್‌ಯುವಿ, ಅತ್ಯುತ್ತಮ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಪ್ರಮುಖವಾಗಿ, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ತಂತ್ರಜ್ಞಾನವನ್ನು ಪಡೆದಿರಬಹುದು. ಇದು, ಫಾರ್ವರ್ಡ್ ಕಲಿಸಿಯೋನ್ ವಾರ್ನಿಂಗ್, ಲೇನ್ ಡಿಪಾರ್ಚರ್ ವಾರ್ನಿಂಗ್, ಹೈ ಬೀಮ್ ಅಸಿಸ್ಟ್, ಲೇನ್ ಕೀಪಿಂಗ್ ಅಸಿಸ್ಟ್ ಸೇರಿದಂತೆ ಹಲವು ಅಂಶಗಳನ್ನು ಹೊಂದಿರಲಿದೆ.

ಇದರೊಟ್ಟಿಗೆ, ಈ ಕಾರು 6 ಏರ್‌ಬ್ಯಾಗ್‌, ರೇರ್, ಕ್ಯಾಮೆರಾ, ಕಾರ್ನರಿಂಗ್ ಲ್ಯಾಂಪ್‌, ಹಿಲ್ - ಸ್ಟಾರ್ಟ್ ಅಸಿಸ್ಟ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು TPMS (ಟೈರ್ ಒತ್ತಡದ ಮಾನಿಟರಿಂಗ್ ಸಿಸ್ಟಮ್‌), ಆಲ್ ವೀಲ್ ಡಿಸ್ಕ್ ಬ್ರೇಕ್ ನಂತಹ ಸೇಫ್ಟಿ ಫೀಚರ್ಸ್ ಪಡೆದಿರಬಹುದು ಎಂದು ಹೇಳಲಾಗಿದೆ.

ನೂತನ ಕಿಯಾ ಸೋನೆಟ್ ಫೇಸ್‌ಲಿಫ್ಟ್‌ ಎಸ್‌ಯುವಿ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿರಲಿದೆ. 10.25 - ಇಂಚಿನ ಇನ್ಸ್ಟ್ರುಮೆಂಟಲ್ ಡಿಸ್ಪ್ಲೇ, 10.25 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಲೆಕ್ಟ್ರಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಒಟಿಎ ಅಪ್‌ಡೇಟ್‌, ಯಾ ಕನೆಕ್ಟ್, ವೈರ್‌ಲೆಸ್ ಫೋನ್ ಕನೆಕ್ಟಿವಿಟಿ, 7 - ಸ್ಪೀಕರ್ ಸಿಸ್ಟಮ್ ಹೊಂದಿರುವ ಸಾಧ್ಯತೆಯಿದೆ.

ಈ ಕಾರು, ಹಿಂದಿನ ಮಾದರಿಯಂತೆ ಪವರ್‌ಟ್ರೇನ್ ಆಯ್ಕೆಯನ್ನು ಒಳಗೊಂಡಿರುವ ನೀರಿಕ್ಷೆಯಿದೆ. 1.2 - ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್, 1.0 - ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 - ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿರಬಹುದು. ಜೊತೆಗೆ ರೂಪಾಂತರಗಳ ಅನ್ವಯ, 5 - ಸ್ವೀಡ್ ಮ್ಯಾನುವಲ್, 6 - ಸ್ವೀಡ್ ಅಥವಾ 7 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಾಗಬಹುದು.

ಹೊಸ ಕಿಯಾ ಸೋನೆಟ್ ಫೇಸ್‌ಲಿಫ್ಟ್‌ ಎಸ್‌ಯುವಿಯ ಬೆಲೆಗಳು ಬಹುತೇಕ ಮುಂದಿನ ವರ್ಷ ಘೋಷಣೆಯಾಗುವ ನೀರಿಕ್ಷೆಯಿದೆ. ಹಳೆಯ ಕಾರಿಗೆ ಹೋಲಿಕೆ ಮಾಡಿದರೆ, ಇದು ತುಂಬಾ ಆಕರ್ಷಕವಾಗಿರುವ ಸಾಧ್ಯತೆಯಿರುವುದರಿಂದ ಹೆಚ್ಚಿನ ಜನರ ಆಯ್ಕೆಯ ವಾಹನವಾಗಬಹುದು. ಸೋನೆಟ್ ಫೇಸ್‌ಲಿಫ್ಟ್‌ ಎಸ್‌ಯುವಿಗೆ ಮಾರುತಿ ಸುಜುಕಿ ಬ್ರೆಝಾ, ರೆನಾಲ್ಟ್ ಕಿಗರ್ ಪ್ರಬಲ ಪ್ರತಿಸ್ಪರ್ಧಿಯಾಗಲಿದ್ದು, ಗ್ರಾಹಕರ ಕಾತುರಕ್ಕೆ ನಾಳೆ ಉತ್ತರ ಸಿಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, December 13, 2023, 18:43 [IST]
English summary
Most awaited kia sonet facelift suv unveil tomorrow expected features details
Read more on ಕಿಯಾ kia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+