ಹಳ್ಳಿ ಪ್ರತಿಭೆ: ಮಂಚಕ್ಕೆ ಮೋಟಾರ್, ಸ್ಟೀರಿಂಗ್ ಜೋಡಿಸಿ ವಾಹನ ತಯಾರಿ: ಬಂಕ್ ಸಿಬ್ಬಂದಿ ಅಚ್ಚರಿ!

ಬೈಕುಗಳು ಮತ್ತು ಕಾರುಗಳನ್ನು ಮಾಡಿಫೈಗೊಳಿಸುವ ಹಲವಾರು ವಿಡಿಯೋಗಳನ್ನು ನಾವೆಲ್ಲಾ ನೋಡಿರುತ್ತೇವೆ. ಆದ್ರೆ ತಮಗೆ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ವಿಚಿತ್ರ ವಾಹನಗಳನ್ನು ನಿರ್ಮಿಸುವವರು ತುಂಬಾ ವಿರಳ. ಇಂತಹದ್ದೇ ಮಂಚದ ವಾಹನ ನಿರ್ಮಿಸಿದ ವ್ಯಕ್ತಿಯೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾನೆ. ಪೆಟ್ರೋಲ್ ಬಂಕ್‌ಗೆ ಮೋಟಾರ್ ಅಳವಡಿಸಿದ ಮಂಚವನ್ನು ತಂದಿದ್ದಾನೆ.

ಲೈಫ್ ಗ್ಲೋರಿಯಸ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಯಾಂತ್ರಿಕೃತ ಹಾಸಿಗೆಯನ್ನು ಹೇಗೆ ತಯಾರಿಸಲಾಯಿತು ಎಂಬುದನ್ನು ವಿಡಿಯೋದಲ್ಲಿ ತೋರಿಸಿಲ್ಲ, ಆದ್ರೆ ಈ ಚಲಿಸುವ ಮಂಚದ ಮೇಲೆ ಕುಳಿತಿರುವ ಇಬ್ಬರು ಹುಡುಗರನ್ನು ನೋಡಬಹುದು. ಒಬ್ಬ ಸ್ಟೀರಿಂಗ್ ವೀಲ್‌ನೊಂದಿಗೆ ಮುಂಭಾಗದಲ್ಲಿ ಕುಳಿತಿದ್ದರೆ ಇನ್ನೊಬ್ಬ ಅವನ ಹಿಂದೆ ಕುಳಿತಿದ್ದಾನೆ.

motorized-bed-steering-wheel-pedals-attached-to-couch-viral-video

ಇದು ಕೇವಲ ನಾಲ್ಕು ಚಕ್ರಗಳು ಮತ್ತು ಸ್ಟೀರಿಂಗ್ ಹೊಂದಿರುವ ಮಂಚವಾಗಿದೆ. ಮಂಚದ ಹಿಂಭಾಗದ ಬಲಗಾಲಿನ ಬಳಿ ಮೋಟರ್ ಅನ್ನು ಸ್ಥಾಪಿಸಿ ಚಕ್ರಕ್ಕೆ ಸಂಪರ್ಕಿಸಲಾಗಿದೆ. ನಾಲ್ಕು ಚಕ್ರಗಳನ್ನು ಮಂಚದ ಕಾಲುಗಳಿಗೆ ಜೋಡಿಸಲಾಗಿದೆ. ನೋಡಲು ವಿಚಿತ್ರವಾಗಿ ಕಂಡರು ಕಾರಿನಂತೆ ಸ್ಟೀರಿಂಗ್ ಹೊಂದಿರುವುದು ಇಲ್ಲಿ ವಿಶೇಷ, ಹಾಗೆಯೇ ಆಕ್ಸಿಲೇಟರ್ ಹಾಗೂ ಬ್ರೇಕ್ ಪೆಡಲ್‌ಗಳನ್ನು ಚಾಲಕನ ಕಾಲುಗಳ ಬಳಿ ನೋಡಬಹುದು.

ಈ ಮೋಟಾರೀಕೃತ ಮಂಚವನ್ನು ಪೆಟ್ರೋಲ್ ಪಂಪ್ ಗೆ ಓಡಿಸುತ್ತಿದ್ದಂತೆ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಅಚ್ಚರಿ ಮೂಡಿಸಿದೆ. ಫಿಲ್ಲಿಂಗ್ ಸ್ಟೇಷನ್‌ನಲ್ಲಿ, ಈಗಾಗಲೇ ಇರುವ ಒಬ್ಬ ಬೈಕರ್ ಈ ಸೃಷ್ಟಿಯನ್ನು ನೋಡಿ ನಗುವುದನ್ನು ವಿಡಿಯೋದಲ್ಲಿ ನಾವು ಕಾಣಬಹುದು, ಆದರೆ ಹುಡುಗರು ತಲೆ ಕೆಡಿಸಿಕೊಳ್ಳದೆ ಪೆಟ್ರೋಲ್ ತುಂಬುವ ನಿಲ್ದಾಣದ ಮುಂದೆ ಮಂಚವನ್ನು ನಿಲ್ಲಿಸಿ, ಇಂಧನ ಟ್ಯಾಂಕ್ ಅನ್ನು ತೆರೆದು ಇಂಧನ ತುಂಬಿಸಿಕೊಂಡಿದ್ದಾರೆ.

motorized-bed-steering-wheel-pedals-attached-to-couch-viral-video

ಬಹುಶಃ ಹಾಸಿಗೆಯ ಕೆಳಗೆ ವಾಹನದ ಇಂಧನ ಟ್ಯಾಂಕ್ ಅನ್ನು ಇರಿಸಲಾಗಿದೆ ಎಂದು ತೋರುತ್ತಿದೆ. ಮಂಚವು ಎಡ ಮತ್ತು ಬಲಕ್ಕೆ ಮುಕ್ತ ಚಲನೆಯನ್ನು ಅನುಮತಿಸುತ್ತದೆ, ಬಹುಶಃ ಮುಂಭಾಗದಲ್ಲಿ ಜೋಡಿಸಲಾದ ಸ್ಟೀರಿಂಗ್ ಚಕ್ರಕ್ಕೆ ಸಂಪರ್ಕ ಹೊಂದಿರಬಹು. ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಮಂಚದ ಮೇಲೆ ಸವಾರಿ ಮಾಡುವ ವ್ಯಕ್ತಿಯು ತನ್ನ ಪಾದಗಳನ್ನು ಇರಿಸಲು ಮಂಚದ ಬಟ್ಟೆಯಲ್ಲಿ ರಂಧ್ರವನ್ನು ಮಾಡಿ ಅಲ್ಲಿ ಆಕ್ಸಿಲೇಟರ್ ಪೆಡಲ್ ಅನ್ನು ಸ್ಥಾಪಿಸಲಾಗಿದೆ.

ಈ ವಿಚಿತ್ರ ಮಂಚದ ವಾಹನಕ್ಕೆ ಮೋಟಾರ್ ಅನ್ನು ಸ್ಥಾಪಿಸಿ ಅದನ್ನು ಓಡಿಸುತ್ತಾ ಕಾಣಿಸಿಕೊಂಡಿರುವುದು ಇದೇ ಮೊದಲು ಅನಿಸುತ್ತದೆ. ನಾವು ಕೂಡ ಇಂತಹ ವಾಹನಗಳನ್ನು ಇಲ್ಲಿಯವರೆಗೆ ಕಂಡಿಲ್ಲ. ಇದಕ್ಕೆ ನೋಂದಣಿ ಅಥವಾ ಯಾವುದೇ ಫಿಟ್‌ನೆಸ್ ಪ್ರಮಾಣಪತ್ರವಿಲ್ಲದೆ ರಸ್ತೆಯಲ್ಲಿ ಚಾಲನೆ ಮಾಡುವುದು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ ಎಂಬುದನ್ನು ಗಮನಿಸಬೇಕಾದ ಸಂಗತಿ.

motorized-bed-steering-wheel-pedals-attached-to-couch-viral-video

ಇದು ಉತ್ಸಾಹದ ಯೋಜನೆಯಾಗಿದ್ದರೂ, ಪ್ರಾಯೋಗಿಕತೆಯ ಪ್ರಕಾರ ಇದು ತುಂಬಾ ಚಿಕ್ಕದಾಗಿದೆ. ಇನ್‌ಸ್ಟಾಗ್ರಾಮ್ ಪುಟದಿಂದ ಪೋಸ್ಟ್ ಮಾಡಲಾದ ವೀಡಿಯೊ ಈಗಾಗಲೇ ಸಖತ್ ವೈರಲ್ ಆಗಿದೆ. ವೀಡಿಯೊ ನೋಡಿ ಅಪಹಾಸ್ಯ ಮಾಡಿದವರೇ ಹಚ್ಚಾಗಿದ್ದಾರೆ. ಇನ್ನೂ ಕೆಲವರು ದೇಸಿ ವಿಜ್ಞಾನಿಗಳು ಎಂದು ಕರೆದಿದ್ದಾರೆ. ಆದ್ರೂ ಸಹ ಈ ವಾಹನವನ್ನು ತಮ್ಮ ಖಾಸಗಿ ಸ್ಥಳಗಳಲ್ಲಿ ಓಡಿಸುವುದು ಉತ್ತಮ, ಯಾವುದೇ ಕಾರಣಕ್ಕೂ ಸಾರ್ವಜನಿಕ ರಸ್ತೆಗಳಿಗೆ ತರಬಾರದು ಎಂಬುದು ನಮ್ಮ ಅಭಿಪ್ರಾಯ.

ನಮ್ಮಲ್ಲಿ ಇಂತಹ ಮೇಧಾವಿಗಳು ದೇಶದ ಮೂಲೆ ಮೂಲೆಗಳಲ್ಲಿ ಇದ್ದಾರೆ, ಆದ್ರೆ ಅವರಿಗೆ ಸರಿಯಾದ ಗುರ್ತಿಸುವಿಕೆ ಸಿಗದೆ ಅಲ್ಲಿನ ಪ್ರದೇಶಗಳಿಗೆ ಸೀಮಿತವಾಗುತ್ತಿದ್ದಾರೆ. ದೇಶದಲ್ಲಿ ಇಂತಹ ಜಾಣ್ಮೆಯಿಂದಾಗಿಯೇ ನಾವು ಚಂದ್ರಯಾನ ಮಿಷನ್ ಅನ್ನು ಕಡಿಮೆ ವೆಚ್ಚದಲ್ಲಿ ಪೂರ್ಣಗೊಳಿಸಿದ್ದೇವೆ ಏನಂತೀರಿ? ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

motorized-bed-steering-wheel-pedals-attached-to-couch-viral-video

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

Article Published On: Tuesday, November 28, 2023, 13:15 [IST]
English summary
Motorized bed steering wheel pedals attached to couch viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+