ಗರಿಷ್ಠ ಸುರಕ್ಷತೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ 2023ರ ನಿಸ್ಸಾನ್ ಮಾಗ್ನೈಟ್
ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ನಿಸ್ಸಾನ್ ತನ್ನ ಜನಪ್ರಿಯ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿ ಮಾಗ್ನೈಟ್ ಅನ್ನು ಹೊಸ ನವೀಕರಣದೊಂದಿಗೆ 2023ರ ಮಾಡೆಲ್ ಆಗಿ ಪರಿಚಯಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ನಿಸ್ಸಾನ್ ಮಾಗ್ನೈಟ್ ಅತ್ಯಾಧುನಿಕ ಫೀಚರ್ಸ್ ಮತ್ತು ಬಜೆಟ್ ಬೆಲೆಯೊಂದಿಗೆ ಉತ್ತಮ ಬೇಡಿಕೆ ಕಾಯ್ದುಕೊಂಡಿದೆ.
2023ರ ನಿಸ್ಸಾನ್ ಮಾಗ್ನೈಟ್ ಎಸ್‍ಯುವಿಯು ಮಾರಾಟವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಕಂಪನಿಯು ಮಾದರಿಗೆ ಹಲವಾರು ಹೊಸ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಿದೆ. ಹೊಸ ನವೀಕರಣದ ಭಾಗವಾಗಿ, ನಿಸ್ಸಾನ್ ಮ್ಯಾಗ್ನೈಟ್ ಈಗ ಟೈರ್ ಪ್ರೆಶರ್ ಮಾನಿಟರ್, ಹಿಲ್ ಸ್ಟಾರ್ಟ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್ ಮತ್ತು ವೆಹಿಕಲ್ ಡೈನಾಮಿಕ್ ಕಂಟ್ರೋಲ್‌ನಂತಹ ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ನಿಸ್ಸಾನ್ ಕಂಪನಿಯು 2023ರ ಮಾಗ್ನೈಟ್ ಎಸ್‍ಯುವಿಯ ಬೆಲೆಯನ್ನು ರೂ.20,500 ಗಳಷ್ಟು ಹೆಚ್ಚಿಸಿದೆ.

2023ರ ನಿಸ್ಸಾನ್ ಮಾಗ್ನೈಟ್ ಎಸ್‍ಯುವಿಯು ಟಾಪ್-ಆಫ್-ಲೈನ್ ರೂಪಾಂತರ XV PRE ಈಗ ಹೊಸ ಸುರಕ್ಷತಾ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತದೆ. ಇನ್ನು ಈ ಎಸ್‍ಯುವಿಯ ಟಾಪ್-ಎಂಡ್ ಮಾಡೆಲ್ ಈಗ ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು, 360-ಡಿಗ್ರಿ ಕ್ಯಾಮೆರಾಗಳು, ಆಂಟಿ-ಥೆಫ್ಟ್ ಅಲಾರ್ಮ್‌ಗಳು, ಸ್ಪೀಡ್-ಸೆನ್ಸಿಂಗ್ ಡೋರ್ ಲಾಕ್‌ಗಳು, ಇಂಪ್ಯಾಕ್ಟ್-ಡಿಟೆಕ್ಟಿಂಗ್ ಲಾಕ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಆಯ್ಕೆಗಳನ್ನು ಒದಗಿಸುತ್ತದೆ. ಉಳಿದಂತೆ ಈ ಹೊಸ ನಿಸ್ಸಾನ್ ಮಾಗ್ನೈಟ್ ಎಸ್‍ಯುವಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.
ಗ್ರಾಹಕರ ಬೇಡಿಕೆಯೆಂತೆ ಮ್ಯಾಗ್ನೈಟ್ ಕಾರು ಹಲವು ರೂಪಂತರಗಳಲ್ಲಿ ಮಾರಾಟಗೊಳ್ಳುತ್ತಿದೆ. ಈ ಮ್ಯಾಗ್ನೈಟ್ ಕಾರಿನಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 1.0 ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಆರ್‌ಎಓ 1.0 ಲೀಟರ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಜೋಡಣೆ ಮಾಡಲಾಗಿದೆ. 1.0 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 70 ಬಿಎಚ್‌ಪಿ ಪವರ್ ಮತ್ತು 96 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನು ನಿಸ್ಸಾನ್ ಮಾಗ್ನೈಟ್ ಎಸ್‍ಯುವಿಯಲ್ಲಿ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಕ್ಸ್-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 100 ಬಿಎಚ್‌ಪಿ ಪವರ್ ಮತ್ತು 160-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಕಾರು ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಆವೃತ್ತಿಗಳಿಂತಲೂ ಕಡಿಮೆ ಬೆಲೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ. ಇನ್ನು ಭಾರತದಲ್ಲಿ ನಿಸ್ಸಾನ್ ಪ್ರಯಾಣವು ಯಾವಾಗಲೂ ಹೋರಾಟಗಳಿಂದ ತುಂಬಿದೆ.
ನಿಸ್ಸಾನ್ ಸರಣಿಯಲ್ಲಿರುವ ಮಾರಾಟದ ಅಂಕಿಅಂಶಗಳಿಗೆ ಬಂದಾಗ ಅವರ ಪ್ರತಿಸ್ಪರ್ಧಿಗಳ ಎದುರು ಹಿಂದೆ ಇದೆ. ಪ್ರಸ್ತುತ ನಿಸ್ಸಾನ್ ಮೋಟಾರ್ ಇಂಡಿಯಾ ಸ್ವಲ್ಪಮಟ್ಟಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಒಮ್ಮೆ ನಿಸ್ಸಾನ್ ಸ್ಥಗಿತದ ಅಂಚಿನಲ್ಲಿತ್ತು, ಆದರೆ ಮ್ಯಾಗ್ನೈಟ್ ಕಾರಿನ ಬಿಡುಗಡೆಯ ಬಳಿಕ ಸ್ಥಿರವಾಗಿದೆ. ಮ್ಯಾಗ್ನೈಟ್ ಅನ್ನು ಭಾರತದಲ್ಲಿ ನಿಸ್ಸಾನ್ ಅಸ್ತಿತ್ವವನ್ನು ಉಳಿಸಿದ ವಾಹನ ಎಂದು ಉದ್ಯಮ ತಜ್ಞರು ಶ್ಲಾಘಿಸುತ್ತಾರೆ. ಇನ್ನು ನಿಸ್ಸಾನ್ ಇಂಡಿಯಾ ಇಂದು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ತನ್ನ ಮೂರು ಜಾಗತಿಕ ಎಸ್‍ಯುವಿಗಳನ್ನು ಪ್ರದರ್ಶಿಸಿದ್ದರು.
ನಿಸ್ಸಾನ್ ಎಕ್ಸ್-ಟ್ರಯಲ್, ನಿಸ್ಸಾನ್ ಕಶ್ಕೈ ಮತ್ತು ನಿಸ್ಸಾನ್ ಜೂಕ್ ಎಂಬ ಎಸ್‍ಯುವಿಗಳಾಗಿವೆ. ಭವಿಷ್ಯದ ಕಾರ್ಯಸಾಧ್ಯತೆಗಾಗಿ ಭಾರತದಲ್ಲಿ ನಿಸ್ಸಾನ್ ಎಕ್ಸ್-ಟ್ರಯಲ್ ಮತ್ತು ನಿಸ್ಸಾನ್ ಕಶ್ಕೈ ಎಸ್‍ಯುವಿಗಳನ್ನು ಪರೀಕ್ಷಿಸಲು ಪ್ರಾರಂಭಿಸುತ್ತದೆ ಎಂದು ಕಾರು ತಯಾರಕರು ದೃಢಪಡಿಸಿದ್ದಾರೆ. ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಉತ್ತಮ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡ ನಂತರ ಹೊಸ ಕಾರಿನ ಬೇಡಿಕೆ ಮತ್ತಷ್ಟು ಹೆಚ್ಚಳವಾಗಿದೆ. ಇನ್ನು ಮ್ಯಾಗ್ನೈಟ್ ಕಾರು ಮಾದರಿಯನ್ನು ನಿಸ್ಸಾನ್ ಕಂಪನಿಯು ಭಾರತದಲ್ಲಿ ನಿರ್ಮಾಣ ಮಾಡಿ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ರಫ್ತು ಕೈಗೊಳ್ಳುತ್ತಿದೆ.
ನಿಸ್ಸಾನ್ ಮ್ಯಾಗ್ನೈಟ್ RED ಆವೃತ್ತಿಯು ವ್ಯಾಪಕವಾಗಿ ಜನಪ್ರಿಯವಾಗಿರುವ ಮ್ಯಾಗ್ನೈಟ್ XV ರೂಪಾಂತರವನ್ನು ಆಧರಿಸಿದೆ. ಅಲ್ಲದೆ, ಮ್ಯಾಗ್ನೈಟ್ XV MT RED ಆವೃತ್ತಿ, ಮ್ಯಾಗ್ನೈಟ್ ಟರ್ಬೊ XV MT RED ಆವೃತ್ತಿ ಮತ್ತು ಮ್ಯಾಗ್ನೈಟ್ ಟರ್ಬೊ XV CVT RED ಆವೃತ್ತಿಯು ಪ್ರಸ್ತುತ ಲಭ್ಯವಿದೆ. ಇನ್ನು ಈ ನಿಸ್ಸಾನ್ ಮಾಗ್ನೈಟ್ ಎಸ್‍ಯುವಿಯು ಓನಿಕ್ಸ್ ಬ್ಲ್ಯಾಕ್ ಮತ್ತು ಸ್ಟಾರ್ಮ್ ವೈಟ್ ಮ್ಯಾಗ್ನೈಟ್ ರೆಡ್ ಎಡಿಷನ್‌ಗೆ ಎರಡು ಮೊನೊಟೋನ್ ಬಣ್ಣ ಆಯ್ಕೆಗಳಾಗಿವೆ.


Click it and Unblock the Notifications








